ಮತ್ತಾಯನು 25 : 1 (KNV)
ಇದಲ್ಲದೆ ಪರಲೋಕ ರಾಜ್ಯವು ತಮ್ಮ ದೀಪಗಳನ್ನು ತಕ್ಕೊಂಡು ಮದಲಿಂಗ ನನ್ನು ಎದುರುಗೊಳ್ಳುವದಕ್ಕಾಗಿ ಹೊರಟುಹೋದ ಹತ್ತುಮಂದಿ ಕನ್ಯೆಯರಿಗೆ ಹೋಲಿಕೆಯಾಗಿರುವದು.
ಮತ್ತಾಯನು 25 : 2 (KNV)
ಅವರಲ್ಲಿ ಐದುಮಂದಿ ಬುದ್ಧಿವಂತೆಯರೂ ಐದು ಮಂದಿ ಬುದ್ಧಿಹೀನರೂ ಇದ್ದರು.
ಮತ್ತಾಯನು 25 : 3 (KNV)
ಬುದ್ಧಿಹೀನರು ತಮ್ಮ ದೀಪಗಳನ್ನು ತಕ್ಕೊಂಡು ತಮ್ಮೊಂದಿಗೆ ಎಣ್ಣೆಯನ್ನು ತಕ್ಕೊಳ್ಳಲಿಲ್ಲ,
ಮತ್ತಾಯನು 25 : 4 (KNV)
ಬುದ್ದಿವಂತೆಯರು ತಮ್ಮ ದೀಪಗಳೊ ಂದಿಗೆ ಪಾತ್ರೆಯಲ್ಲಿ ಎಣ್ಣೆಯನ್ನೂ ತಕ್ಕೊಂಡರು.
ಮತ್ತಾಯನು 25 : 5 (KNV)
ಮದಲಿಂಗನು ತಡಮಾಡಿದಾಗ ಅವರೆಲ್ಲರೂ ತೂಕಡಿಸಿ ನಿದ್ರಿಸಿದರು.
ಮತ್ತಾಯನು 25 : 6 (KNV)
ಮಧ್ಯರಾತ್ರಿಯಲ್ಲಿ--ಇಗೋ, ಮದಲಿಂಗನು ಬರುತ್ತಾನೆ; ಅವನನ್ನು ಎದುರುಗೊಳ್ಳುವದಕ್ಕಾಗಿ ಹೊರಡಿರಿ ಎಂಬ ಕೂಗಾ ಯಿತು.
ಮತ್ತಾಯನು 25 : 7 (KNV)
ಆಗ ಆ ಕನ್ಯೆಯರೆಲ್ಲರೂ ಎದ್ದು ತಮ್ಮ ದೀಪಗಳನ್ನು ಸರಿಪಡಿಸಿಕೊಂಡರು;
ಮತ್ತಾಯನು 25 : 8 (KNV)
ಬುದ್ಧಿಹೀನರು ಬುದ್ಧಿವಂತೆಯರಿಗೆ-- ನಿಮ್ಮ ಎಣ್ಣೆಯಲ್ಲಿ ನಮಗೆ ಕೊಡಿರಿ; ಯಾಕಂದರೆ ನಮ್ಮ ದೀಪಗಳು ಆರಿಹೋಗಿವೆ ಅಂದರು.
ಮತ್ತಾಯನು 25 : 9 (KNV)
ಆದರೆ ಬುದ್ಧಿವಂತೆಯರು ಪ್ರತ್ಯುತ್ತರ ವಾಗಿ--ಹಾಗಲ್ಲ, ಅದು ನಮಗೂ ನಿಮಗೂ ಸಾಲದೆ ಹೋದೀತು; ಆದದರಿಂದ ನೀವು ಮಾರು ವವರ ಬಳಿಗೆ ಹೋಗಿ ನಿಮಗೋಸ್ಕರ ಕೊಂಡು ಕೊಳ್ಳಿರಿ ಅಂದರು.
ಮತ್ತಾಯನು 25 : 10 (KNV)
ಅವರು ಕೊಂಡುಕೊಳ್ಳುವದಕ್ಕೆ ಹೋದಾಗ ಮದಲಿಂಗನು ಬಂದನು. ಆಗ ಸಿದ್ಧವಾಗಿ ದ್ದವರು ಮದುವೆಗೆ ಆತನೊಂದಿಗೆ ಒಳಕ್ಕೆ ಹೊದರು; ತರುವಾಯ ಬಾಗಲು ಮುಚ್ಚಲಾಯಿತು.
ಮತ್ತಾಯನು 25 : 11 (KNV)
ಇದಾದ ಮೇಲೆ ಆ ಬೇರೆ ಕನ್ಯೆಯರು ಸಹ ಬಂದು--ಕರ್ತನೇ, ಕರ್ತನೇ, ನಮಗೆ ಬಾಗಲನ್ನು ತೆರೆ ಅಂದರು.
ಮತ್ತಾಯನು 25 : 12 (KNV)
ಆದರೆ ಅವನು ಪ್ರತ್ಯುತ್ತರವಾಗಿ--ನಿಮ್ಮನ್ನು ಅರಿ ಯೆನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
ಮತ್ತಾಯನು 25 : 13 (KNV)
ಆದದರಿಂದ ಎಚ್ಚರವಾಗಿರ್ರಿ; ಯಾಕಂದರೆ ಮನುಷ್ಯಕುಮಾರನು ಬರುವ ದಿನ ವನ್ನಾಗಲೀ ಗಳಿಗೆಯನ್ನಾಗಲೀ ನೀವು ಅರಿಯದವರಾ ಗಿದ್ದೀರಿ ಅಂದನು.
ಮತ್ತಾಯನು 25 : 14 (KNV)
ಯಾಕಂದರೆ ಪರಲೋಕರಾಜ್ಯವು ದೂರ ದೇಶಕ್ಕೆ ಪ್ರಯಾಣಮಾಡುವ ಒಬ್ಬ ಮನುಷ್ಯನು ತನ್ನ ಸ್ವಂತ ಸೇವಕರನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿದಂತೆ ಇದೆ.
ಮತ್ತಾಯನು 25 : 15 (KNV)
ಅವನು ಒಬ್ಬನಿಗೆ ಐದು ತಲಾಂತುಗಳನ್ನು ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು, ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ಕೊಟ್ಟು ತಕ್ಷಣವೇ ಪ್ರಯಾಣ ಮಾಡಿದನು.
ಮತ್ತಾಯನು 25 : 16 (KNV)
ತರುವಾಯ ಐದು ತಲಾಂತುಗಳನ್ನು ಹೊಂದಿದ ವನು ಹೋಗಿ ಅವುಗಳಿಂದ ವ್ಯಾಪಾರಮಾಡಿ ಬೇರೆ ಐದು ತಲಾಂತುಗಳನ್ನು ಸಂಪಾದಿಸಿದನು.
ಮತ್ತಾಯನು 25 : 17 (KNV)
ಅದೇ ಪ್ರಕಾರ ಎರಡು ಹೊಂದಿದವನು ಸಹ ಬೇರೆ ಎರಡನ್ನು ಸಂಪಾದಿಸಿದನು.
ಮತ್ತಾಯನು 25 : 18 (KNV)
ಆದರೆ ಒಂದು ತಲಾಂತು ಹೊಂದಿದವನು ಹೋಗಿ ಭೂಮಿಯನ್ನು ಅಗೆದು ತನ್ನ ಯಜಮಾನನ ಹಣವನ್ನು ಬಚ್ಚಿಟ್ಟನು.
ಮತ್ತಾಯನು 25 : 19 (KNV)
ಬಹುಕಾಲವಾದ ಮೇಲೆ ಆ ಸೇವಕರ ಯಜ ಮಾನನು ಬಂದು ಅವರಿಂದ ಲೆಕ್ಕಾ ತೆಗೆದುಕೊಂಡನು.
ಮತ್ತಾಯನು 25 : 20 (KNV)
ಆಗ ಐದು ತಲಾಂತುಗಳನ್ನು ಹೊಂದಿದ್ದವನು ಬಂದು ಬೇರೆ ಐದು ತಲಾಂತುಗಳನ್ನು ತಂದು--ಒಡೆಯನೇ, ನೀನು ನನಗೆ ಐದು ತಲಾಂತುಗಳನ್ನು ಒಪ್ಪಿಸಿದಿ; ಇಗೋ, ಅವುಗಳಲ್ಲದೆ ಬೇರೆ ಐದು ತಲಾಂತುಗಳನ್ನು ನಾನು ಸಂಪಾದಿಸಿದ್ದೇನೆ ಅಂದನು.
ಮತ್ತಾಯನು 25 : 21 (KNV)
ಆಗ ಅವನ ಯಜಮಾನನು ಅವನಿಗೆ--ನಂಬಿಗಸ್ತನಾದ ಒಳ್ಳೇ ಸೇವಕನೇ, ಒಳ್ಳೇದನ್ನು ಮಾಡಿದ್ದೀ. ಸ್ವಲ್ಪವಾದವುಗಳಲ್ಲಿ ನೀನು ನಂಬಿಗಸ್ತ ನಾದದ್ದರಿಂದ ನಾನು ನಿನ್ನನ್ನು ಬಹಳವಾದವುಗಳ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು; ನೀನು ನಿನ್ನ ಯಜಮಾನನ ಸಂತೋಷದಲ್ಲಿ ಪ್ರವೇಶಿಸು ಅಂದನು.
ಮತ್ತಾಯನು 25 : 22 (KNV)
ಎರಡು ತಲಾಂತುಗಳನ್ನು ಹೊಂದಿದ್ದವನು ಸಹ ಬಂದು--ಒಡೆಯನೇ, ನೀನು ನನಗೆ ಎರಡು ತಲಾಂತುಗಳನ್ನು ಒಪ್ಪಿಸಿದಿ; ಇಗೋ, ಅವುಗಳಲ್ಲದೆ ಇನ್ನೂ ಎರಡು ತಲಾಂತುಗಳನ್ನು ನಾನು ಸಂಪಾದಿಸಿ ದ್ದೇನೆ ಅಂದನು.
ಮತ್ತಾಯನು 25 : 23 (KNV)
ಆಗ ಅವನ ಯಜಮಾನನು ಅವನಿಗೆ--ನಂಬಿಗಸ್ತನಾದ ಒಳ್ಳೇ ಸೇವಕನೇ, ಒಳ್ಳೇ ದನ್ನು ಮಾಡಿದ್ದೀ; ಸ್ವಲ್ಪವಾದವುಗಳಲ್ಲಿ ನೀನು ನಂಬಿಗ ಸ್ತನಾದದ್ದರಿಂದ ನಾನು ನಿನ್ನನ್ನು ಬಹಳವಾದವುಗಳ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು; ನೀನು ನಿನ್ನ ಯಜಮಾನನ ಸಂತೋಷದಲ್ಲಿ ಪ್ರವೇಶಿಸು ಅಂದನು.
ಮತ್ತಾಯನು 25 : 24 (KNV)
ಆಗ ಒಂದು ತಲಾಂತು ಹೊಂದಿದ್ದ ವನು ಬಂದು--ಒಡೆಯನೇ, ನೀನು ಬಿತ್ತದಿರುವಲ್ಲಿ ಕೊಯ್ಯುವವನೂ ತೂರದಿರುವಲ್ಲಿ ಕೂಡಿಸುವವನೂ ಆಗಿರುವ ಕಠಿಣ ಮನುಷ್ಯನೆಂದು ನಾನು ಬಲ್ಲೆನು;
ಮತ್ತಾಯನು 25 : 25 (KNV)
ಅದಕ್ಕೆ ನಾನು ಭಯಪಟ್ಟು ಹೋಗಿ ನಿನ್ನ ತಲಾಂತನ್ನು ಭೂಮಿಯಲ್ಲಿ ಬಚ್ಚಿಟ್ಟೆನು. ಇಗೋ, ನಿನ್ನದು ನಿನಗೆ ಸಲ್ಲಿದೆ ಅಂದನು.
ಮತ್ತಾಯನು 25 : 26 (KNV)
ಅದಕ್ಕೆ ಅವನ ಯಜ ಮಾನನು ಪ್ರತ್ಯುತ್ತರವಾಗಿ--ಮೈಗಳ್ಳನಾದ ಕೆಟ್ಟ ಸೇವಕನೇ, ನಾನು ಬಿತ್ತದಿರುವಲ್ಲಿ ಕೊಯ್ಯುವವನೆ ಂತಲೂ ತೂರದಿರುವಲ್ಲಿ ಕೂಡಿಸುವವನೆಂತಲೂ ನೀನು ತಿಳಿದಿದ್ದೀಯಲ್ಲಾ.
ಮತ್ತಾಯನು 25 : 27 (KNV)
ಹಾಗಾದರೆ ನೀನು ನನ್ನ ಹಣವನ್ನು ಬಡ್ಡಿಗಾಗಿ ಕೊಡತಕ್ಕದ್ದಾಗಿತ್ತು; ನಾನು ಬಂದಾಗ ನನ್ನ ಸ್ವಂತದ್ದನ್ನು ಬಡ್ಡಿ ಸಹಿತವಾಗಿ ಹೊಂದಿ ಕೊಳ್ಳುತ್ತಿದ್ದೆನು.
ಮತ್ತಾಯನು 25 : 28 (KNV)
ಆ ತಲಾಂತನ್ನು ತೆಗೆದುಕೊಂಡು ಹತ್ತು ತಲಾಂತುಗಳುಳ್ಳವನಿಗೆ ಕೊಡಿರಿ.
ಮತ್ತಾಯನು 25 : 29 (KNV)
ಇದ್ದ ಪ್ರತಿ ಯೊಬ್ಬನಿಗೆ ಕೊಡಲ್ಪಡುವದು ಮತ್ತು ಅವನಿಗೆ ಸಮೃದ್ಧಿ ಯಾಗುವದು; ಇಲ್ಲದವನ ಕಡೆಯಿಂದ ಅವನಿಗೆ ಇದ್ದದ್ದೂ ತೆಗೆಯಲ್ಪಡುವದು.
ಮತ್ತಾಯನು 25 : 30 (KNV)
ಮತ್ತು ನಿಷ್ಪ್ರಯೋ ಜಕನಾದ ಈ ಸೇವಕನನ್ನು ನೀವು ಹೊರಗೆ ಕತ್ತಲೆಯಲ್ಲಿ ಹಾಕಿರಿ; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು ಅಂದನು.
ಮತ್ತಾಯನು 25 : 31 (KNV)
ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಎಲ್ಲಾ ಪರಿಶುದ್ಧ ದೂತರೊಂದಿಗೆ ಬರುವಾಗ ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವನು;
ಮತ್ತಾಯನು 25 : 32 (KNV)
ಮತ್ತು ಆತನ ಮುಂದೆ ಎಲ್ಲಾ ಜನಾಂಗಗಳವರು ಕೂಡಿಸಲ್ಪ ಡುವರು; ಆಗ ಕುರುಬನು ತನ್ನ ಕುರಿಗಳನ್ನು ಆಡುಗ ಳಿಂದ ಪ್ರತ್ಯೇಕಿಸುವಂತೆಯೇ ಆತನು ಅವರನ್ನು ಪ್ರತ್ಯೇ ಕಿಸುವನು;
ಮತ್ತಾಯನು 25 : 33 (KNV)
ಆತನು ಕುರಿಗಳನ್ನು ತನ್ನ ಬಲಗಡೆ ಯಲ್ಲಿಯೂ ಆಡುಗಳನ್ನು ತನ್ನ ಎಡಗಡೆಯಲ್ಲಿಯೂ ನಿಲ್ಲಿಸುವನು.
ಮತ್ತಾಯನು 25 : 34 (KNV)
ಆಗ ಅರಸನು ತನ್ನ ಬಲಗಡೆಯಲ್ಲಿ ರುವವರಿಗೆ--ನನ್ನ ತಂದೆಯಿಂದ ಆಶೀರ್ವಾದ ಹೊಂದಿದವರೇ, ನೀವು ಬನ್ನಿರಿ; ಭೂಲೋಕಕ್ಕೆ ಅಸ್ತಿ ವಾರ ಹಾಕಿದಂದಿನಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಬಾಧ್ಯವಾಗಿ ಹೊಂದಿರಿ;
ಮತ್ತಾಯನು 25 : 35 (KNV)
ಯಾಕಂದರೆ ನಾನು ಹಸಿದಿದ್ದೆನು, ನೀವು ನನಗೆ ಊಟವನ್ನು ಕೊಟ್ಟಿರಿ; ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವದಕ್ಕೆ ಕೊಟ್ಟಿರಿ; ನಾನು ಪರದೇಶಿಯಾಗಿ ದ್ದೆನು, ನೀವು ನನ್ನನ್ನು ಒಳಕ್ಕೆ ಸೇರಿಸಿಕೊಂಡಿರಿ;
ಮತ್ತಾಯನು 25 : 36 (KNV)
ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡಿಸಿ ದಿರಿ; ನಾನು ಅಸ್ವಸ್ಥನಾಗಿದ್ದೆನು; ನೀವು ನನ್ನನ್ನು ಸಂಧಿಸಿ ದಿರಿ; ನಾನು ಸೆರೆಯಲ್ಲಿದ್ದೆನು, ನೀವು ನನ್ನ ಬಳಿಗೆ ಬಂದಿರಿ ಎಂದು ಹೇಳುವನು.
ಮತ್ತಾಯನು 25 : 37 (KNV)
ಆಗ ಆ ನೀತಿವಂತರು ಪ್ರತ್ಯುತ್ತರವಾಗಿ ಆತನಿಗೆ--ಕರ್ತನೇ, ಯಾವಾಗ ನೀನು ಹಸಿದದ್ದನ್ನು ನೋಡಿ ನಾವು ನಿನಗೆ ಉಣಿಸಿ ದೆವು? ಇಲ್ಲವೆ ಬಾಯಾರಿದ್ದಾಗ ನಿನಗೆ ಕುಡಿಯುವದಕ್ಕೆ ಕೊಟ್ಟೆವು? ಯಾವಾಗ
ಮತ್ತಾಯನು 25 : 38 (KNV)
ನೀನು ಪರದೇಶಿಯಾ ಗಿರುವದನ್ನು ನಾವು ನೋಡಿ ನಿನ್ನನ್ನು ಒಳಕ್ಕೆ ಸೇರಿಸಿ ಕೊಂಡೆವು? ಇಲ್ಲವೆ ಬಟ್ಟೆಯಿಲ್ಲದಿರುವಾಗ ನಿನಗೆ ಉಡಿಸಿದೆವು?
ಮತ್ತಾಯನು 25 : 39 (KNV)
ಯಾವಾಗ ನೀನು ಅಸ್ವಸ್ಥನಾಗಿ ಇಲ್ಲವೆ ಸೆರೆಯಲ್ಲಿದ್ದಾಗ ನಾವು ನಿನ್ನನ್ನು ನೋಡಿ ನಿನ್ನ ಬಳಿಗೆ ಬಂದೆವು ಎಂದು ಹೇಳುವರು.
ಮತ್ತಾಯನು 25 : 40 (KNV)
ಅದಕ್ಕೆ ಅರಸನು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ನೀವು ಈ ನನ್ನ ಸಹೋದರ ರಲ್ಲಿ ಅತ್ಯಲ್ಪನಾದವನೊಬ್ಬನಿಗೆ ಮಾಡಿದ್ದು ನನಗೂ ಮಾಡಿದಂತಾಯಿತು ಅಂದನು.
ಮತ್ತಾಯನು 25 : 41 (KNV)
ಆತನು ಎಡಗಡೆ ಯಲ್ಲಿರುವವರಿಗೆ--ಶಾಪಗ್ರಸ್ತರೇ, ನೀವು ನನ್ನಿಂದ ತೊಲಗಿ ಸೈತಾನನಿಗೂ ಅವನ ದೂತರಿಗೂ ಸಿದ್ಧ ಮಾಡಲ್ಪಟ್ಟ ನಿತ್ಯ ಬೆಂಕಿಯೊಳಗೆ ಹೋಗಿರಿ.
ಮತ್ತಾಯನು 25 : 42 (KNV)
ನಾನು ಹಸಿದವನಾಗಿದ್ದೆನು, ನೀವು ನನಗೆ ಊಟಕ್ಕೆ ಕೊಡಲಿಲ್ಲ; ನಾನು ಬಾಯಾರಿದವನಾಗಿದ್ದೆನು, ನೀವು ನನಗೆ ಕುಡಿ ಯುವದಕ್ಕೆ ಕೊಡಲಿಲ್ಲ.
ಮತ್ತಾಯನು 25 : 43 (KNV)
ನಾನು ಪರದೇಶಿಯಾಗಿ ದ್ದೆನು, ನೀವು ನನ್ನನ್ನು ಒಳಗೆ ಸೇರಿಸಿಕೊಳ್ಳಲಿಲ್ಲ; ಬಟ್ಟೆಯಿಲ್ಲದವನಾಗಿದ್ದಾಗ ನೀವು ನನಗೆ ಉಡಿಸಲಿಲ್ಲ; ಅಸ್ವಸ್ಥನಾಗಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಸಂಧಿಸಲಿಲ್ಲ ಎಂದು ಹೇಳುವನು.
ಮತ್ತಾಯನು 25 : 44 (KNV)
ಆಗ ಅವರು ಸಹ ಪ್ರತ್ಯುತ್ತರವಾಗಿ ಆತನಿಗೆ--ಕರ್ತನೇ, ನೀನು ಯಾವಾಗ ಹಸಿದದ್ದನ್ನೂ ಬಾಯರಿದ್ದನ್ನೂ ಪರದೇಶಿ ಯಾದದ್ದನ್ನೂ ಬಟ್ಟೆಯಿಲ್ಲದವನಾಗಿದ್ದದ್ದನ್ನೂ ಅಸ್ವಸ್ಥ ನಾಗಿದ್ದದ್ದನ್ನೂ ಸೆರೆಯಲ್ಲಿದ್ದದ್ದನ್ನೂ ನಾವು ನೋಡಿ ನಿನಗೆ ಉಪಚಾರ ಮಾಡಲಿಲ್ಲ ಎಂದು ಹೇಳುವರು.
ಮತ್ತಾಯನು 25 : 45 (KNV)
ಆಗ ಆತನು ಅವರಿಗೆ ಪ್ರತ್ಯುತ್ತರವಾಗಿ--ನಾನು ನಿಮಗೆ ನಿಜವಾಗಿ ಹೇಳುವದೇನಂದರೆ, ನೀವು ಇವ ರಲ್ಲಿ ಅತ್ಯಲ್ಪನಾದವನೊಬ್ಬನಿಗೆ ಮಾಡದೆ ಹೋದ ದರಿಂದ ನನಗೂ ಮಾಡಲಿಲ್ಲ ಎಂದು ಹೇಳುವನು.
ಮತ್ತಾಯನು 25 : 46 (KNV)
ಇವರು ನಿತ್ಯವಾದ ಶಿಕ್ಷೆಗೆ ಹೋಗುವರು; ಆದರೆ ನೀತಿವಂತರು ನಿತ್ಯಜೀವಕ್ಕೆ ಹೋಗುವರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46

BG:

Opacity:

Color:


Size:


Font: