ಮತ್ತಾಯನು 22 : 1 (KNV)
ಯೇಸು ತಿರಿಗಿ ಸಾಮ್ಯ ರೂಪವಾಗಿ ಅವರ ಕೂಡ ಮಾತನಾಡುತ್ತಾ--
ಮತ್ತಾಯನು 22 : 2 (KNV)
ಪರಲೋಕ ರಾಜ್ಯವು ತನ್ನ ಮಗನ ಮದುವೆ ಮಾಡಿದ ಒಬ್ಬಾನೊಬ್ಬ ಅರಸನಿಗೆ ಹೋಲಿಕೆಯಾಗಿದೆ.
ಮತ್ತಾಯನು 22 : 3 (KNV)
ಅವನು ಮದುವೆಗೆ ಬರ ಹೇಳಿದವರನ್ನು ಕರೆಯು ವದಕ್ಕೆ ತನ್ನ ಸೇವಕರನ್ನು ಕಳುಹಿಸಿದನು; ಆದರೆ ಅವರು ಬರಲೊಲ್ಲದೆ ಇದ್ದರು.
ಮತ್ತಾಯನು 22 : 4 (KNV)
ಅವನು ತಿರಿಗಿ ಬೇರೆ ಸೇವಕರನ್ನು ಕಳುಹಿಸಿ ಅವರಿಗೆ--ಇಗೋ, ನಾನು ಔತಣವನ್ನು ಸಿದ್ಧಮಾಡಿದ್ದೇನೆ, ನನ್ನ ಎತ್ತುಗಳೂ ಕೊಬ್ಬಿದ ಪಶುಗಳೂ ಕೊಯ್ಯಲ್ಪಟ್ಟಿವೆ ಮತ್ತು ಎಲ್ಲವು ಗಳು ಸಿದ್ಧವಾಗಿವೆ; ಮದುವೆಗೆ ಬನ್ನಿರಿ ಎಂದು ಕರೆಯಲ್ಪಟ್ಟವರಿಗೆ ಹೇಳಿರಿ ಅಂದನು.
ಮತ್ತಾಯನು 22 : 5 (KNV)
ಕರೆಯಲ್ಪಟ್ಟವರು ಅದನ್ನು ಅಲಕ್ಷ್ಯಮಾಡಿ ಒಬ್ಬನು ತನ್ನ ಹೊಲಕ್ಕೂ ಇನ್ನೊಬ್ಬನು ತನ್ನ ವ್ಯಾಪಾರಕ್ಕೂ ಹೊರಟುಹೋದರು.
ಮತ್ತಾಯನು 22 : 6 (KNV)
ಉಳಿದವರು ಅವನ ಸೇವಕರನ್ನು ಹಿಡಿದು ಅವಮಾನ ಪಡಿಸಿ ಅವರನ್ನು ಕೊಂದುಹಾಕಿದರು.
ಮತ್ತಾಯನು 22 : 7 (KNV)
ಆದರೆ ಅರಸನು ಅದನ್ನು ಕೇಳಿ ಕೋಪೋದ್ರೇಕವುಳ್ಳವನಾಗಿ ತನ್ನ ಸೈನ್ಯಗಳನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹ ರಿಸಿ ಅವರ ಪಟ್ಟಣವನ್ನು ಸುಟ್ಟುಬಿಟ್ಟನು.
ಮತ್ತಾಯನು 22 : 8 (KNV)
ತರುವಾಯ ಅವನು ತನ್ನ ಸೇವಕರಿಗೆ--ಮದುವೆಯು ಸಿದ್ಧವಾಗಿದೆ ಸರಿ, ಆದರೆ ಕರೆಯಲ್ಪಟ್ಟವರು ಯೋಗ್ಯರಾಗಿರಲಿಲ್ಲ.
ಮತ್ತಾಯನು 22 : 9 (KNV)
ಆದದರಿಂದ ನೀವು ಹೆದ್ದಾರಿಗಳಿಗೆ ಹೊರಟುಹೋಗಿ ಕಂಡವರನ್ನೆಲ್ಲಾ ಮದುವೆಗೆ ಕರೆಯಿರಿ ಅಂದನು.
ಮತ್ತಾಯನು 22 : 10 (KNV)
ಆಗ ಆ ಸೇವಕರು ಹೆದ್ದಾರಿಗಳಿಗೆ ಹೋಗಿ ತಾವು ಕಂಡವರ ನ್ನೆಲ್ಲಾ ಅಂದರೆ ಕೆಟ್ಟವರನ್ನೂ ಒಳ್ಳೆಯವರನ್ನೂ ಒಟ್ಟು ಗೂಡಿಸಿದರು; ಹೀಗೆ ಮದುವೆಗೆ ಅತಿಥಿಗಳು ತುಂಬಿ ಕೊಂಡರು.
ಮತ್ತಾಯನು 22 : 11 (KNV)
ತರುವಾಯ ಅರಸನು ಅತಿಥಿಗಳನ್ನು ನೋಡುವದಕ್ಕಾಗಿ ಒಳಗೆ ಬಂದು ಮದುವೆಯ ಉಡು ಪಿಲ್ಲದೆ ಇದ್ದ ಒಬ್ಬ ಮನುಷ್ಯನನ್ನು ಅಲ್ಲಿ ಕಂಡನು.
ಮತ್ತಾಯನು 22 : 12 (KNV)
ಅವನು ಆ ಮನುಷ್ಯನಿಗೆ--ಸ್ನೇಹಿತನೇ, ಮದುವೆಯ ಉಡುಪಿಲ್ಲದೆ ನೀನು ಒಳಗೆ ಹೇಗೆ ಬಂದಿ ಎಂದು ಕೇಳಲು ಅವನು ಸುಮ್ಮನಿದ್ದನು.
ಮತ್ತಾಯನು 22 : 13 (KNV)
ತರುವಾಯ ಅರಸನು ಸೇವಕರಿಗೆ--ಅವನ ಕೈ ಕಾಲುಗಳನ್ನು ಕಟ್ಟಿ ತಕ್ಕೊಂಡು ಹೋಗಿ ಹೊರಗೆ ಕತ್ತಲೆಯಲ್ಲಿ ಹಾಕಿರಿ; ಅಲ್ಲಿ ಗೋಳಾಟವೂ ಹಲ್ಲುಕಡಿಯೋಣವೂ ಇರುವವು.
ಮತ್ತಾಯನು 22 : 14 (KNV)
ಯಾಕಂದರೆ ಕರೆಯಲ್ಪಟ್ಟವರು ಅನೇಕರು; ಆದರೆ ಆಯಲ್ಪಟ್ಟವರು ಸ್ವಲ್ಪ ಜನ ಅಂದನು.
ಮತ್ತಾಯನು 22 : 15 (KNV)
ಆಗ ಫರಿಸಾಯರು ಹೊರಟುಹೋಗಿ ಆತನನ್ನು ಮಾತಿನಲ್ಲಿ ಹೇಗೆ ಸಿಕ್ಕಿಸಬೇಕೆಂದು ಆಲೋಚನೆ ಮಾಡಿಕೊಂಡರು.
ಮತ್ತಾಯನು 22 : 16 (KNV)
ಮತ್ತು ತಮ್ಮ ಶಿಷ್ಯರನ್ನು ಹೆರೋದಿಯರೊಂದಿಗೆ ಆತನ ಬಳಿಗೆ ಕಳುಹಿಸಿ--ಬೋಧಕನೇ, ನೀನು ಸತ್ಯವಂತನು ಮತ್ತು ದೇವರ ಮಾರ್ಗವನ್ನು ಸತ್ಯದಲ್ಲಿ ಬೋಧಿಸುವಾತನು; ಇದಲ್ಲದೆ ನೀನು ಯಾರನ್ನೂ ಲಕ್ಷ್ಯಮಾಡುವಾತನಲ್ಲ; ಯಾಕಂದರೆ ನೀನು ಮುಖದಾಕ್ಷಿಣ್ಯ ಮಾಡುವದಿಲ್ಲ ಎಂದು
ಮತ್ತಾಯನು 22 : 17 (KNV)
ಆದದರಿಂದ-- ಕೈಸರನಿಗೆ ಕಪ್ಪವನ್ನು ಕೊಡುವದು ನ್ಯಾಯವೋ ನ್ಯಾಯವಲ್ಲವೋ? ನಿನಗೆ ಹೇಗೆ ತೋರುತ್ತದೆ? ನಮಗೆ ಹೇಳು ಅಂದರು.
ಮತ್ತಾಯನು 22 : 18 (KNV)
ಯೇಸು ಅವರ ಕೆಟ್ಟತನವನ್ನು ತಿಳಿದು ಕೊಂಡವನಾಗಿ--ಕಪಟಿಗಳೇ, ನೀವು ನನ್ನನ್ನು ಯಾಕೆ ಶೋಧಿಸುತ್ತೀರಿ?
ಮತ್ತಾಯನು 22 : 19 (KNV)
ತೆರಿಗೆಯ ನಾಣ್ಯವನ್ನು ನನಗೆ ತೋರಿಸಿರಿ ಅಂದನು. ಆಗ ಅವರು ಒಂದು ಪಾವಲಿ ಯನ್ನು ತಂದುಕೊಟ್ಟರು.
ಮತ್ತಾಯನು 22 : 20 (KNV)
ಆತನು ಅವರಿಗೆ--ಈ ರೂಪವೂ ಮೇಲ್ಬರಹವೂ ಯಾರದು ಎಂದು ಕೇಳಿ ದನು.
ಮತ್ತಾಯನು 22 : 21 (KNV)
ಅದಕ್ಕೆ ಅವರು ಆತನಿಗೆ--ಕೈಸರನದು ಅಂದರು. ಆಗ ಆತನು ಅವರಿಗೆ-ಕೈಸರನದವುಗಳನ್ನು ಕೈಸರನಿಗೆ ಕೊಡಿರಿ; ದೇವರವುಗಳನ್ನು ದೇವರಿಗೆ ಕೊಡಿರಿ ಅಂದನು.
ಮತ್ತಾಯನು 22 : 22 (KNV)
ಇವುಗಳನ್ನು ಅವರು ಕೇಳಿದಾಗ ಆಶ್ಚರ್ಯಪಟ್ಟರು; ಮತ್ತು ಆತನನ್ನು ಬಿಟ್ಟು ಹೊರಟುಹೋದರು.
ಮತ್ತಾಯನು 22 : 23 (KNV)
ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಅದೇ ದಿನದಲ್ಲಿ ಆತನ ಬಳಿಗೆ ಬಂದು--
ಮತ್ತಾಯನು 22 : 24 (KNV)
ಬೋಧ ಕನೇ, ಒಬ್ಬ ಮನುಷ್ಯನು ಮಕ್ಕಳಿಲ್ಲದೆ ಸತ್ತರೆ ಅವನ ಸಹೋದರನು ಅವನ ಹೆಂಡತಿಯನ್ನು ಮದುವೆಯಾಗಿ ತನ್ನ ಸಹೋದರನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ಹೇಳಿದ್ದಾನೆ.
ಮತ್ತಾಯನು 22 : 25 (KNV)
ಹೀಗಿರಲಾಗಿ ನಮ್ಮ ಕೂಡ ಏಳು ಮಂದಿ ಸಹೋದರರಿದ್ದರು; ಮೊದಲನೆ ಯವನು ಮದುವೆ ಮಾಡಿಕೊಂಡು ಸತ್ತನು; ಮತ್ತು ಸಂತಾನವಿಲ್ಲದ ಕಾರಣ ತನ್ನ ಹೆಂಡತಿಯನ್ನು ತನ್ನ ಸಹೋದರನಿಗೆ ಬಿಟ್ಟನು.
ಮತ್ತಾಯನು 22 : 26 (KNV)
ಅದರಂತೆಯೇ ಎರಡ ನೆಯವನು ಮತ್ತು ಮೂರನೆಯವನು ಹೀಗೆ ಏಳನೆಯ ವನವರೆಗೂ ಮಾಡಿದರು.
ಮತ್ತಾಯನು 22 : 27 (KNV)
ಕಡೆಯದಾಗಿ ಆ ಸ್ತ್ರೀಯೂ ಸತ್ತಳು.
ಮತ್ತಾಯನು 22 : 28 (KNV)
ಆದದರಿಂದ ಪುನರುತ್ಥಾನದಲ್ಲಿ ಆ ಏಳು ಮಂದಿಯಲ್ಲಿ ಆಕೆಯು ಯಾರಿಗೆ ಹೆಂಡತಿ ಯಾಗಿರುವಳು? ಯಾಕಂದರೆ ಅವರೆಲ್ಲರೂ ಆಕೆಯನ್ನು ಮದುವೆಮಾಡಿಕೊಂಡಿದ್ದರಲ್ಲಾ ಎಂದು ಕೇಳಿದರು.
ಮತ್ತಾಯನು 22 : 29 (KNV)
ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ನೀವು ಬರಹಗಳನ್ನಾಗಲೀ ದೇವರ ಶಕ್ತಿಯನ್ನಾಗಲೀ ತಿಳಿಯದೆ ತಪ್ಪುವವರಾಗಿದ್ದೀರಿ.
ಮತ್ತಾಯನು 22 : 30 (KNV)
ಯಾಕಂದರೆ ಪುನರುತ್ಥಾನದಲ್ಲಿ ಅವರು ಮದುವೆಯಾಗುವದಿಲ್ಲ ಮತ್ತು ಮದುವೆ ಮಾಡಿಕೊಡುವದೂ ಇಲ್ಲ; ಆದರೆ ಅವರು ಪರಲೋಕ ದಲ್ಲಿರುವ ದೇವದೂತರಂತೆ ಇರುತ್ತಾರೆ.
ಮತ್ತಾಯನು 22 : 31 (KNV)
ಆದರೆ ಸತ್ತವರ ಪುನರುತ್ಥಾನದ ವಿಷಯವಾಗಿ--
ಮತ್ತಾಯನು 22 : 32 (KNV)
ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು ಎಂದು ದೇವರು ನಿಮಗೆ ಹೇಳಿದ್ದನ್ನು ನೀವು ಓದಲಿಲ್ಲವೋ? ದೇವರು ಜೀವಿಸುವವರಿಗೇ ದೇವರಾಗಿದ್ದಾನೆ, ಸತ್ತವರಿಗಲ್ಲ ಎಂದು ಹೇಳಿದನು.
ಮತ್ತಾಯನು 22 : 33 (KNV)
ಜನ ಸಮೂಹದವರು ಇದನ್ನು ಕೇಳಿ ಆತನ ಬೋಧನೆಗೆ ವಿಸ್ಮಯಗೊಂಡರು.
ಮತ್ತಾಯನು 22 : 34 (KNV)
ಆದರೆ ಆತನು ಸದ್ದುಕಾಯರ ಬಾಯನ್ನು ಮುಚ್ಚಿದನೆಂದು ಫರಿಸಾಯರು ಕೇಳಿರಿ ಅಲ್ಲಿಗೆ ಕೂಡಿಬಂದರು.
ಮತ್ತಾಯನು 22 : 35 (KNV)
ಅವರಲ್ಲಿ ನ್ಯಾಯಶಾಸ್ತ್ರಿಯಾಗಿದ್ದ ಒಬ್ಬನು ಆತನನ್ನು ಶೋಧಿಸುವದಕ್ಕಾಗಿ--
ಮತ್ತಾಯನು 22 : 36 (KNV)
ಬೋಧಕ ನೇ, ನ್ಯಾಯ ಪ್ರಮಾಣದಲ್ಲಿ ದೊಡ್ಡ ಆಜ್ಞೆ ಯಾವದು ಎಂದು ಆತನನ್ನು ಪ್ರಶ್ನಿಸಿದನು.
ಮತ್ತಾಯನು 22 : 37 (KNV)
ಯೇಸು ಅವ ನಿಗೆ--ನೀನು ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣ ದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು.
ಮತ್ತಾಯನು 22 : 38 (KNV)
ಈ ಆಜ್ಞೆಯು ಮೊದಲನೆಯದೂ ದೊಡ್ಡದೂ ಆಗಿದೆ. ಅದರಂತೆ--
ಮತ್ತಾಯನು 22 : 39 (KNV)
ನೀನು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕೆಂಬದು ಎರಡನೆಯದು.
ಮತ್ತಾಯನು 22 : 40 (KNV)
ನ್ಯಾಯ ಪ್ರಮಾಣವೆಲ್ಲವೂ ಪ್ರವಾದನೆಗಳೂ ಈ ಎರಡು ಆಜ್ಞೆಗಳ ಮೇಲೆ ಆಧಾರಗೊಂಡಿವೆ ಅಂದನು.
ಮತ್ತಾಯನು 22 : 41 (KNV)
ಫರಿಸಾಯರು ಕೂಡಿ ಬಂದಿರುವಾಗ ಯೇಸು ಅವರಿಗೆ--
ಮತ್ತಾಯನು 22 : 42 (KNV)
ಕ್ರಿಸ್ತನ ವಿಷಯ ವಾಗಿ ನೀವು ಏನು ನೆನಸುತ್ತೀರಿ? ಆತನು ಯಾರ ಮಗನು ಎಂದು ಕೇಳಿದ್ದಕ್ಕೆ ಅವರು ಆತನಿಗೆ--ದಾವೀದನಕುಮಾರನು ಅಂದರು.
ಮತ್ತಾಯನು 22 : 43 (KNV)
ಆತನು ಅವ ರಿಗೆ--ಹಾಗಾದರೆ ದಾವೀದನು ಆತ್ಮದಲ್ಲಿ ಆತನಿಗೆ ಕರ್ತನೆಂದು ಕರೆದು--ಕರ್ತನು ನನ್ನ ಕರ್ತನಿಗೆ--
ಮತ್ತಾಯನು 22 : 44 (KNV)
ನಾನು ನಿನ್ನ ವಿರೋಧಿಗಳನ್ನು ಪಾದಪೀಠವಾಗಿ ಮಾಡುವ ವರೆಗೆ ನನ್ನ ಬಲಗಡೆಯಲ್ಲಿ ಕೂತು ಕೊಂಡಿರು ಎಂದು ಹೇಳಿದನಲ್ಲಾ.
ಮತ್ತಾಯನು 22 : 45 (KNV)
ದಾವೀದನು ಆತನನ್ನು ಕರ್ತನೆಂದು ಕರೆಯುವದಾದರೆ ಆತನು ದಾವೀದನ ಮಗನಾಗುವದು ಹೇಗೆ ಎಂದು ಕೇಳಿದನು.
ಮತ್ತಾಯನು 22 : 46 (KNV)
ಅದಕ್ಕೆ ಯಾರೂ ಒಂದು ಮಾತನ್ನು ಸಹ ಆತನಿಗೆ ಉತ್ತರ ಕೊಡಲಾರದೆ ಹೋದರು. ಇದಲ್ಲದೆ ಆ ದಿನದಿಂದ ಯಾವ ಪ್ರಶ್ನೆಗಳನ್ನಾದರೂ ಆತನನ್ನು ಕೇಳುವದಕ್ಕೆ ಯಾರಿಗೂ ಧೈರ್ಯಬರಲಿಲ್ಲ.
❮
❯