ಮತ್ತಾಯನು 20 : 1 (KNV)
ತನ್ನ ದ್ರಾಕ್ಷೇ ತೋಟಕ್ಕೆ ಕೂಲಿಯಾಳು ಗಳನ್ನು ಕರೆಯುವದಕ್ಕಾಗಿ ಬೆಳಿಗ್ಗೆ ಹೊರಟ ಮನೇ ಯಜಮಾನನಿಗೆ ಪರಲೋಕರಾಜ್ಯವು ಹೋಲಿ ಕೆಯಾಗಿದೆ.
ಮತ್ತಾಯನು 20 : 2 (KNV)
ಅವನು ದಿನಕ್ಕೆ ಒಂದು ಪಾವಲಿಯಂತೆ (ಪೆನ್ನಿ) ಕೂಲಿಯಾಳುಗಳೊಂದಿಗೆ ಒಪ್ಪಂದ ಮಾಡಿ ಕೊಂಡು ತನ್ನ ದ್ರಾಕ್ಷೇತೋಟಕ್ಕೆ ಅವರನ್ನು ಕಳುಹಿಸಿ ಕೊಟ್ಟನು.
ಮತ್ತಾಯನು 20 : 3 (KNV)
ಮತ್ತು ಅವನು ಸುಮಾರು ಮೂರನೆಯ ತಾಸಿನಲ್ಲಿ ಹೊರಗೆಹೋಗಿ ಇನ್ನು ಕೆಲವರು ಸಂತೆಯ ಸ್ಥಳದಲ್ಲಿ ಕೆಲಸವಿಲ್ಲದೆ ನಿಂತಿರುವದನ್ನು ಕಂಡು
ಮತ್ತಾಯನು 20 : 4 (KNV)
ಅವರಿಗೆ--ನೀವು ಸಹ ದ್ರಾಕ್ಷೇ ತೋಟಕ್ಕೆ ಹೋಗಿರಿ; ಸರಿಯಾದ ಕೂಲಿಯನ್ನು ನಾನು ನಿಮಗೆ ಕೊಡುವೆನು ಎಂದು ಹೇಳಿದನು. ಆಗ ಅವರು ಹೊರಟು ಹೋದರು.
ಮತ್ತಾಯನು 20 : 5 (KNV)
ಅವನು ಸುಮಾರು ಆರನೆಯ ಮತ್ತು ಒಂಭತ್ತನೆಯ ತಾಸಿನಲ್ಲಿ ತಿರಿಗಿ ಹೋಗಿ ಹಾಗೆಯೇ ಮಾಡಿದನು.
ಮತ್ತಾಯನು 20 : 6 (KNV)
ತರುವಾಯ ಸುಮಾರು ಹನ್ನೊಂದ ನೆಯ ತಾಸಿನಲ್ಲಿ ಅವನು ಹೊರಗೆಹೋಗಿ ಬೇರೆ ಕೆಲವರು ಕೆಲಸವಿಲ್ಲದೆ ನಿಂತಿರುವದನ್ನು ಕಂಡು ಅವರಿಗೆ--ನೀವು ದಿನವೆಲ್ಲಾ ಇಲ್ಲಿ ಕೆಲಸವಿಲ್ಲದೆ ನಿಂತಿರುವದೇಕೆ ಎಂದು ಕೇಳಿದನು.
ಮತ್ತಾಯನು 20 : 7 (KNV)
ಅವರು ಅವನಿಗೆ--ಯಾಕಂದರೆ ಯಾರೂ ನಮ್ಮನ್ನು ಕೂಲಿಗೆ ಕರೆಯಲಿಲ್ಲ ಅಂದರು. ಆಗ ಅವನು ಅವರಿಗೆ--ನೀವು ಸಹ ದ್ರಾಕ್ಷೇತೋಟಕ್ಕೆ ಹೋಗಿರಿ ಮತ್ತು ಸರಿಯಾದದ್ದನ್ನು ನೀವು ಹೊಂದುವಿರಿ ಎಂದು ಹೇಳಿ ದನು.
ಮತ್ತಾಯನು 20 : 8 (KNV)
ಹೀಗೆ ಸಾಯಂಕಾಲವಾದಾಗ ದ್ರಾಕ್ಷೇತೋಟ ದ ಯಜಮಾನನು ತನ್ನ ಮನೇವಾರ್ತೆಯವನಿಗೆ-- ಕೂಲಿಯಾಳುಗಳನ್ನು ಕರೆದು ಕೊನೆಯವನಿಂದ ಪ್ರಾರಂಭಿಸಿ ಮೊದಲನೆಯವನ ವರೆಗೆ ಕೂಲಿಯನ್ನು ಕೊಡು ಎಂದು ಹೇಳಿದನು.
ಮತ್ತಾಯನು 20 : 9 (KNV)
ಸುಮಾರು ಹನ್ನೊಂದನೆ ಯ ತಾಸಿನಲ್ಲಿ ಕರೆಯಲ್ಪಟ್ಟವರಾದ ಪ್ರತಿಯೊಬ್ಬನು ಒಂದೊಂದು ಪಾವಲಿಯನ್ನು ಹೊಂದಿದನು.
ಮತ್ತಾಯನು 20 : 10 (KNV)
ಆದರೆ ಮೊದಲು ಬಂದವರು ತಮಗೆ ಹೆಚ್ಚು ದೊರೆಯುವ ದೆಂದು ನೆನಸಿದರು. ಆದರೂ ಅವರಲ್ಲಿ ಪ್ರತಿಯೊಬ್ಬನು ಅದೇ ರೀತಿಯಲ್ಲಿ ಒಂದೊಂದು ಪಾವಲಿಯನ್ನು ಹೊಂದಿದನು.
ಮತ್ತಾಯನು 20 : 11 (KNV)
ಅವರು ಅದನ್ನು ಹೊಂದಿದಾಗ ಮನೇ ಯಜಮಾನನಿಗೆ ವಿರೋಧವಾಗಿ ಗುಣು ಗುಟ್ಟುತ್ತಾ--
ಮತ್ತಾಯನು 20 : 12 (KNV)
ಕಡೆಯವರಾದ ಇವರು ಒಂದೇ ತಾಸು ಕೆಲಸ ಮಾಡಿದ್ದಾರೆ; ಆದರೆ ದಿನವೆಲ್ಲಾ ಬಿಸಿಲಿನಲ್ಲಿ ಭಾರ ಹೊತ್ತು ಕೆಲಸ ಮಾಡಿದ ನಮಗೆ ನೀನು ಅವರನ್ನು ಸಮಮಾಡಿದ್ದೀ ಅಂದರು.
ಮತ್ತಾಯನು 20 : 13 (KNV)
ಆದರೆ ಅವನು ಅವರಲ್ಲಿ ಒಬ್ಬನಿಗೆ ಪ್ರತ್ಯುತ್ತರವಾಗಿ--ಸ್ನೇಹಿ ತನೇ, ನಾನು ನಿನಗೆ ಅನ್ಯಾಯ ಮಾಡಲಿಲ್ಲ; ಒಂದು ಪಾವಲಿಗೆ ನೀನು ನನ್ನೊಂದಿಗೆ ಒಪ್ಪಂದ ಮಾಡಿಕೊಳ್ಳ ಲಿಲ್ಲವೇ?
ಮತ್ತಾಯನು 20 : 14 (KNV)
ನಿನ್ನದನ್ನು ತಕ್ಕೊಂಡು ಹೋಗು; ನಿನಗೆ ನಾನು ಕೊಟ್ಟಂತೆಯೇ ಈ ಕಡೆಯವನಿಗೂ ಕೊಡುವೆನು.
ಮತ್ತಾಯನು 20 : 15 (KNV)
ನನ್ನ ಸ್ವಂತದ್ದನ್ನು ನನ್ನ ಇಷ್ಟಬಂದಂತೆ ಮಾಡುವದು ನನಗೆ ನ್ಯಾಯವಲ್ಲವೋ? ನಾನು ಒಳ್ಳೆಯವನಾದ ದರಿಂದ ನಿನ್ನ ಕಣ್ಣು ಕೆಟ್ಟದ್ದಾಗಿದೆಯೋ ಅಂದನು.
ಮತ್ತಾಯನು 20 : 16 (KNV)
ಹೀಗೆ ಕಡೆಯವರು ಮೊದಲನೆಯವರಾಗುವರು; ಮೊದಲನೆಯವರು ಕಡೆಯವರಾಗುವರು. ಯಾಕಂದರೆ ಕರೆಯಲ್ಪಟ್ಟವರು ಅನೇಕರು; ಆದರೆ ಆಯಲ್ಪಟ್ಟವರು ಸ್ವಲ್ಪ ಜನ ಎಂದು ಹೇಳಿದನು.
ಮತ್ತಾಯನು 20 : 17 (KNV)
ತರುವಾಯ ಯೇಸು ಯೆರೂಸಲೇಮಿಗೆ ಹೋಗುತ್ತಿರುವಾಗ ಹನ್ನೆರಡು ಮಂದಿ ಶಿಷ್ಯರನ್ನು ದಾರಿಯಲ್ಲಿ ವಿಂಗಡವಾಗಿ ಕರೆದು ಅವರಿಗೆ--
ಮತ್ತಾಯನು 20 : 18 (KNV)
ಇಗೋ, ನಾವು ಯೆರೂಸಲೇಮಿಗೆ ಹೋಗುತ್ತೇವೆ. ಅಲ್ಲಿ ಮನುಷ್ಯ ಕುಮಾರನು ಪ್ರಧಾನ ಯಾಜಕರಿಗೂ ಶಾಸ್ತ್ರಿಗಳಿಗೂ ಒಪ್ಪಿಸಲ್ಪಡುವನು; ಅವರು ಆತನಿಗೆ ಮರಣ ದಂಡನೆಯನ್ನು ವಿಧಿಸುವರು.
ಮತ್ತಾಯನು 20 : 19 (KNV)
ಇದಲ್ಲದೆ ಆತನನ್ನು ಹಾಸ್ಯ ಮಾಡು ವದಕ್ಕೂ ಕೊರಡೆಗಳಿಂದ ಹೊಡೆಯುವದಕ್ಕೂ ಶಿಲುಬೆಗೆ ಹಾಕುವದಕ್ಕೂ ಆತನನ್ನು ಅನ್ಯಜನರಿಗೆ ಒಪ್ಪಿಸಿಕೊಡುವರು; ಮತ್ತು ಮೂರನೆಯ ದಿನದಲ್ಲಿ ಆತನು ತಿರಿಗಿ ಎದ್ದು ಬರುವನು ಎಂದು ಹೇಳಿದನು.
ಮತ್ತಾಯನು 20 : 20 (KNV)
ತರುವಾಯ ಜೆಬೆದಾಯನ ಮಕ್ಕಳ ತಾಯಿಯು ತನ್ನ ಕುಮಾರರೊಂದಿಗೆ ಆತನ ಬಳಿಗೆ ಬಂದು ಆತ ನನ್ನು ಆರಾಧಿಸುತ್ತಾ ಆತನನ್ನು ಏನೋ ಬೇಡಿಕೊಳ್ಳ ಬೇಕೆಂದು ಅಪೇಕ್ಷಿಸಿದಳು.
ಮತ್ತಾಯನು 20 : 21 (KNV)
ಆತನು ಆಕೆಗೆ--ನೀನು ಏನು ಅಪೇಕ್ಷಿಸುತ್ತೀ ಎಂದು ಕೇಳಲು ಆಕೆಯು ಆತನಿಗೆ -- ನಿನ್ನ ರಾಜ್ಯದಲ್ಲಿ ಈ ನನ್ನ ಇಬ್ಬರು ಕುಮಾರರು ಒಬ್ಬನು ನಿನ್ನ ಬಲಗಡೆಯಲ್ಲೂ ಇನ್ನೊಬ್ಬನು ನಿನ್ನ ಎಡಗಡೆಯಲ್ಲೂ ಕೂತುಕೊಳ್ಳುವಂತೆ ಅನುಗ್ರಹಿಸ ಬೇಕು ಎಂದು ಬೇಡಿಕೊಂಡಳು.
ಮತ್ತಾಯನು 20 : 22 (KNV)
ಆದರೆ ಯೇಸು ಪ್ರತ್ಯುತ್ತರವಾಗಿ -- ನೀವು ಬೇಡಿಕೊಳ್ಳುವದೇನೆಂದು ನಿಮಗೆ ತಿಳಿಯದು. ನಾನು ಕುಡಿಯುವದಕ್ಕಿರುವ ಪಾತ್ರೆಯಲ್ಲಿ ಕುಡಿಯಲು ನಿಮ್ಮಿಂದಾದೀತೇ? ಮತ್ತು ನಾನು ಹೊಂದುವ ಬಾಪ್ತಿಸ್ಮವನ್ನು ನೀವು ಹೊಂದು ವಿರೋ ಎಂದು ಕೇಳಿದಾಗ ಅವರು ಆತನಿಗೆ--ನಮ್ಮಿಂದ ಆಗುವದು ಎಂದು ಹೇಳಿದ
ಮತ್ತಾಯನು 20 : 23 (KNV)
ಮತ್ತು ಆತನು ಅವರಿಗೆ--ನನ್ನ ಪಾತ್ರೆಯಲ್ಲಿ ನೀವು ಕುಡಿಯು ವದು ಮತ್ತು ನಾನು ಹೊಂದುವ ಬಾಪ್ತಿಸ್ಮವನ್ನು ನೀವು ಹೊಂದುವದು ನಿಜ; ಆದರೆ ನನ್ನ ಬಲಗಡೆಯಲ್ಲಾ ಗಲೀ ಎಡಗಡೆಯಲ್ಲಾಗಲೀ ಕೂತುಕೊಳ್ಳುವಂತೆ ಅನುಗ್ರಹಿಸುವದು ನನ್ನದಲ್ಲ; ಆದರೆ ನನ್ನ ತಂದೆಯಿಂದ ಯಾರಿಗೋಸ್ಕರ ಅದು ಸಿ
ಮತ್ತಾಯನು 20 : 24 (KNV)
ಬೇರೆ ಹತ್ತು ಮಂದಿಯು ಅದನ್ನು ಕೇಳಿ ಆ ಇಬ್ಬರು ಸಹೋದ ರರಿಗೆ ವಿರೋಧವಾಗಿ ಕೋಪಗೊಂಡರು.
ಮತ್ತಾಯನು 20 : 25 (KNV)
ಆದರೆ ಯೇಸು ಅವರನ್ನು ತನ್ನ ಹತ್ತಿರಕ್ಕೆ ಕರೆದು--ಅನ್ಯ ಜನಾಂಗಗಳ ಅಧಿಪತಿಗಳು ಅವರ ಮೇಲೆ ದೊರೆತನ ಮಾಡುವರೆಂದೂ ದೊಡ್ಡವರು ಅವರ ಮೇಲೆ ಅಧಿಕಾರವನ್ನು ನಡಿಸುವರೆಂದೂ ನಿಮಗೆ ತಿಳಿದಿದೆ. ಆದರೆ ನಿಮ್ಮಲ್ಲಿ ಅದು ಹಾಗಿರಬಾರದು.
ಮತ್ತಾಯನು 20 : 26 (KNV)
ನಿಮ್ಮಲ್ಲಿ ದೊಡ್ಡವನಾಗಿರಬೇಕೆಂದಿರುವವನು ನಿಮ್ಮ ಸೇವಕನಾಗಿ ರಲಿ
ಮತ್ತಾಯನು 20 : 27 (KNV)
ನಿಮ್ಮಲ್ಲಿ ಯಾವನಾದರೂ ಪ್ರಮುಖನಾಗಬೇಕೆ ಂದಿದ್ದರೆ ಅವನು ನಿಮ್ಮ ಆಳಾಗಿರಲಿ.
ಮತ್ತಾಯನು 20 : 28 (KNV)
ಮನುಷ್ಯ ಕುಮಾರನು ಸಹ ಸೇವೆ ಮಾಡಿಸಿಕೊಳ್ಳುವದಕ್ಕಾಗಿ ಅಲ್ಲ, ಸೇವೆ ಮಾಡುವದಕ್ಕಾಗಿಯೂ ಅನೇಕರಿಗಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕಾಗಿಯೂ ಬಂದನು ಎಂದು ಹೇಳಿದನು.
ಮತ್ತಾಯನು 20 : 29 (KNV)
ಅವರು ಯೆರಿಕೋವಿನಿಂದ ಹೊರಟು ಹೋಗುತ್ತಿರುವಾಗ ಜನರು ದೊಡ್ಡ ಸಮೂಹವಾಗಿ ಆತನನ್ನು ಹಿಂಬಾಲಿಸಿದರು.
ಮತ್ತಾಯನು 20 : 30 (KNV)
ಆಗ ಇಗೋ, ಯೇಸು ಹಾದುಹೋಗುತ್ತಿದ್ದಾನೆಂದು ದಾರಿಯ ಮಗ್ಗುಲಲ್ಲಿ ಕೂತಿದ್ದ ಇಬ್ಬರು ಕುರುಡರು ಕೇಳಿ--ಓ ಕರ್ತನೇ, ದಾವೀದನಕುಮಾರನೇ, ನಮ್ಮ ಮೇಲೆ ಕರುಣೆಯಿಡು ಎಂದು ಕೂಗಿ ಹೇಳಿದರು.
ಮತ್ತಾಯನು 20 : 31 (KNV)
ಆದರೆ ಅವರು ಸುಮ್ಮನಿ ರುವಂತೆ ಜನರ ಸಮೂಹವು ಅವರನ್ನು ಗದರಿಸಿದರು. ಆದಾಗ್ಯೂ ಅವರು--ಓ ಕರ್ತನೇ, ದಾವೀದನಕುಮಾ ರನೇ, ನಮ್ಮ ಮೇಲೆ ಕರುಣೆ ಯಿಡು ಎಂದು ಮತ್ತಷ್ಟು ಹೆಚ್ಚಾಗಿ ಕೂಗಿಕೊಂಡರು.
ಮತ್ತಾಯನು 20 : 32 (KNV)
ಆಗ ಯೇಸು ನಿಂತು ಅವರನ್ನು ಕರೆದು--ನಾನು ನಿಮಗೆ ಏನು ಮಾಡ ಬೇಕೆಂದು ನೀವು ಅಪೇಕ್ಷಿಸುತ್ತೀರಿ ಎಂದು ಕೇಳಿದನು.
ಮತ್ತಾಯನು 20 : 33 (KNV)
ಅವರು ಆತನಿಗೆ--ಕರ್ತನೇ, ನಮ್ಮ ಕಣ್ಣುಗಳು ತೆರೆಯಲ್ಪಡಬೇಕು ಅಂದರು.
ಮತ್ತಾಯನು 20 : 34 (KNV)
ಯೇಸು ಅವರ ಮೇಲೆ ಕನಿಕರಪಟ್ಟು ಅವರ ಕಣ್ಣುಗಳನ್ನು ಮುಟ್ಟಿದನು; ಕೂಡಲೆ ಅವರ ಕಣ್ಣುಗಳು ದೃಷ್ಟಿಹೊಂದಿದವು; ಮತ್ತು ಅವರು ಆತನನ್ನು ಹಿಂಬಾಲಿಸಿದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34

BG:

Opacity:

Color:


Size:


Font: