ಮತ್ತಾಯನು 18 : 1 (KNV)
ಅದೇ ಸಮಯದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು--ಪರಲೋಕ ರಾಜ್ಯದಲ್ಲಿ ಅತಿ ದೊಡ್ಡವನು ಯಾರು ಎಂದು ಕೇಳಿದರು.
ಮತ್ತಾಯನು 18 : 2 (KNV)
ಆಗ ಯೇಸು ಒಂದು ಚಿಕ್ಕ ಮಗುವನ್ನು ತನ್ನ ಬಳಿಗೆ ಕರೆದು ಅವನನ್ನು ಅವರ ಮಧ್ಯದಲ್ಲಿ ನಿಲ್ಲಿಸಿ--
ಮತ್ತಾಯನು 18 : 3 (KNV)
ನೀವು ತಿರುಗಿ ಕೊಂಡು ಚಿಕ್ಕ ಮಕ್ಕಳಂತೆ ಆಗದೆಹೋದರೆ ಪರಲೋಕ ರಾಜ್ಯದೊಳಗೆ ಪ್ರವೇಶಿಸುವದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
ಮತ್ತಾಯನು 18 : 4 (KNV)
ಆದದರಿಂದ ಯಾವನು ಈ ಚಿಕ್ಕ ಮಗುವಿನಂತೆ ತನ್ನನ್ನು ತಾನು ತಗ್ಗಿಸಿಕೊಳ್ಳುವನೋ ಅವನೇ ಪರಲೋಕರಾಜ್ಯದಲ್ಲಿ ಅತಿ ದೊಡ್ಡವನಾಗಿರುವನು.
ಮತ್ತಾಯನು 18 : 5 (KNV)
ಮತ್ತು ಯಾವನಾದರೂ ಇಂಥ ಚಿಕ್ಕ ಮಗುವನ್ನು ನನ್ನ ಹೆಸರಿನಲ್ಲಿ ಅಂಗೀಕರಿಸಿ ಕೊಂಡರೆ ನನ್ನನ್ನು ಅಂಗೀಕರಿಸಿಕೊಳ್ಳುತ್ತಾನೆ.
ಮತ್ತಾಯನು 18 : 6 (KNV)
ಆದರೆ ನನ್ನಲ್ಲಿ ವಿಶ್ವಾಸವಿಡುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವ ನಾದರೂ ಅಭ್ಯಂತರವಾದರೆ ಅವನ ಕೊರಳಿಗೆ ಬೀಸುವ ಕಲ್ಲನ್ನು ನೇತು ಹಾಕಿ ಅವನನ್ನು ಸಮುದ್ರದ ಆಳದಲ್ಲಿ ಮುಳುಗಿಸಿಬಿಡುವದು ಅವನಿಗೆ ಒಳ್ಳೇದು.
ಮತ್ತಾಯನು 18 : 7 (KNV)
ತೊಡಕುಗಳ ನಿಮಿತ್ತವಾಗಿ ಲೋಕಕ್ಕೆ ಅಯ್ಯೋ! ಯಾಕಂದರೆ ತೊಡಕುಗಳು ಬಂದೇ ಬರುವವು; ಆದರೆ ಯಾವ ಮನುಷ್ಯನಿಂದ ತೊಡಕು ಬರುವದೋ ಅವನಿಗೆ ಅಯ್ಯೋ!
ಮತ್ತಾಯನು 18 : 8 (KNV)
ಆದದರಿಂದ ನಿನ್ನ ಕೈಯಾಗಲೀ ಕಾಲಾಗಲೀ ನಿನ್ನನ್ನು ಅಭ್ಯಂತರಪಡಿಸಿದರೆ ಅವುಗಳನ್ನು ಕಡಿದು ನಿನ್ನಿಂದ ಬಿಸಾಡಿಬಿಡು; ನೀನು ಎರಡು ಕೈಯುಳ್ಳವನಾಗಿ ಇಲ್ಲವೆ ಎರಡು ಕಾಲುಳ್ಳವನಾಗಿ ನಿತ್ಯವಾದ ಬೆಂಕಿಗೆ ಹಾಕಲ್ಪಡುವದಕ್ಕಿಂತ ಕುಂಟ ನಾಗಿ ಇಲ್ಲವೆ ಊನನಾಗಿ ಜೀವದಲ್ಲಿ ಪ್ರವೇಶಿಸುವದು ನಿನಗೆ ಒಳ್ಳೇದು.
ಮತ್ತಾಯನು 18 : 9 (KNV)
ನಿನ್ನ ಕಣ್ಣು ನಿನ್ನನ್ನು ಅಭ್ಯಂತರ ಪಡಿಸಿದರೆ ಅದನ್ನು ಕಿತ್ತು ನಿನ್ನಿಂದ ಬಿಸಾಡಿಬಿಡು; ನೀನು ಎರಡು ಕಣ್ಣುಳ್ಳವನಾಗಿ ನರಕದ ಬೆಂಕಿಯಲ್ಲಿ ಹಾಕಲ್ಪಡುವದಕ್ಕಿಂತ ಒಂದು ಕಣ್ಣುಳ್ಳವನಾಗಿ ಜೀವದಲ್ಲಿ ಪ್ರವೇಶಿಸುವದು ನಿನಗೆ ಒಳ್ಳೇದು.
ಮತ್ತಾಯನು 18 : 10 (KNV)
ಚಿಕ್ಕವರಲ್ಲಿ ಒಬ್ಬನನ್ನಾದರೂ ನೀವು ತಾತ್ಸಾರ ಮಾಡದಂತೆ ನೋಡಿಕೊಳ್ಳಿರಿ; ಯಾಕಂದರೆ ನಾನು ನಿಮಗೆ ಹೇಳುವದೇನಂದರೆ--ಪರಲೋಕದಲ್ಲಿ ಅವರ ದೂತರು ಪರಲೋಕದಲ್ಲಿರುವ ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಾರೆ.
ಮತ್ತಾಯನು 18 : 11 (KNV)
ಯಾಕಂದರೆ ಮನುಷ್ಯಕುಮಾರನು ಕಳೆದುಹೋದ ದ್ದನ್ನು ರಕ್ಷಿಸುವದಕ್ಕಾಗಿ ಬಂದನು.
ಮತ್ತಾಯನು 18 : 12 (KNV)
ನೀವು ಹೇಗೆ ಯೋಚಿಸುತ್ತೀರಿ? ಒಬ್ಬ ಮನುಷ್ಯ ನಿಗೆ ನೂರು ಕುರಿಗಳಿರಲಾಗಿ ಅವುಗಳಲ್ಲಿ ಒಂದು ತಪ್ಪಿಸಿಕೊಂಡು ಹೋದರೆ ಅವನು ತೊಂಭತ್ತೊಂಭತ್ತನ್ನು ಬಿಟ್ಟು ಬೆಟ್ಟಗಳಿಗೆ ಹೊರಟುಹೋಗಿ ತಪ್ಪಿಸಿಕೊಂಡ ದ್ದನ್ನು ಹುಡುಕುವದಿಲ್ಲವೇ?
ಮತ್ತಾಯನು 18 : 13 (KNV)
ನಾನು ನಿಮಗೆ ನಿಜವಾಗಿ ಹೇಳುವದೇನಂದರೆ--ಅವನು ಅದನ್ನು ಕಂಡುಕೊಂಡರೆ ತಪ್ಪಿಸಿಕೊಳ್ಳದೆ ಇದ್ದ ತೊಂಭತ್ತೊಂಭತ್ತು ಕುರಿಗಳಿಗಿಂತ ಆದರ ವಿಷಯದಲ್ಲಿ ಹೆಚ್ಚು ಸಂತೋಷ ಪಡುತ್ತಾನೆ.
ಮತ್ತಾಯನು 18 : 14 (KNV)
ಅದರಂತೆಯೇ ಈ ಚಿಕ್ಕವರಲ್ಲಿ ಒಬ್ಬನಾದರೂ ನಾಶವಾಗುವದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.
ಮತ್ತಾಯನು 18 : 15 (KNV)
ಇದಲ್ಲದೆ ನಿನ್ನ ಸಹೋದರನು ನಿನಗೆ ವಿರೋಧ ವಾಗಿ ತಪ್ಪು ಮಾಡಿದರೆ ನೀನೂ ಅವನೂ ಮಾತ್ರ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು; ಅವನು ನಿನ್ನ ಮಾತನ್ನು ಕೇಳಿದರೆ ನೀನು ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ.
ಮತ್ತಾಯನು 18 : 16 (KNV)
ಆದರೆ ಅವನು ನಿನ್ನ ಮಾತನ್ನು ಕೇಳದೆಹೋದರೆ ನಿನ್ನೊಂದಿಗೆ ಒಬ್ಬನನ್ನು ಅಥವಾ ಇಬ್ಬರನ್ನು ಕರಕೊಂಡು ಹೋಗು; ಹೀಗೆ ಇಬ್ಬರ ಇಲ್ಲವೆ ಮೂವರ ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಸ್ಥಾಪಿಸಲ್ಪಡುವದು.
ಮತ್ತಾಯನು 18 : 17 (KNV)
ಅವನು ಅವರ ಮಾತುಗಳನ್ನೂ ಕೇಳುವದಕ್ಕೆ ಅಲಕ್ಷ್ಯಮಾಡಿದರೆ ಅದನ್ನು ಸಭೆಗೆ ತಿಳಿಸು. ಆದರೆ ಅವನು ಸಭೆಯ ಮಾತನ್ನೂ ಅಲಕ್ಷ್ಯಮಾಡಿದರೆ ಅವನು ನಿನಗೆ ಅನ್ಯನಂತೆಯೂ ಸುಂಕದವನಂತೆಯೂ ಇರಲಿ.
ಮತ್ತಾಯನು 18 : 18 (KNV)
ನಾನು ನಿಮಗೆ ನಿಜವಾಗಿ ಹೇಳುವದೇನಂ ದರೆ--ನೀವು ಭೂಮಿಯ ಮೇಲೆ ಯಾವದನ್ನು ಕಟ್ಟುತ್ತೀರೋ ಅದು ಪರಲೋಕದಲ್ಲಿಯೂ ಕಟ್ಟಲ್ಪಡು ವದು. ಮತ್ತು ನೀವು ಭೂಮಿಯ ಮೇಲೆ ಯಾವದನ್ನು ಬಿಚ್ಚುತ್ತೀರೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪ ಡುವದು.
ಮತ್ತಾಯನು 18 : 19 (KNV)
ನಾನು ನಿಮಗೆ ತಿರಿಗಿ ಹೇಳುವದೇನಂದರೆ --ನಿಮ್ಮಲ್ಲಿ ಇಬ್ಬರು ತಾವು ಬೇಡಿಕೊಳ್ಳುವ ಯಾವ ವಿಷಯಕ್ಕಾದರೂ ಭೂಮಿಯ ಮೇಲೆ ಸಮ್ಮತಿಸಿದರೆ ಅದು ಪರಲೋಕದಲ್ಲಿರುವ ನನ್ನ ತಂದೆಯಿಂದ ಅವರಿಗೆ ಆಗುವದು.
ಮತ್ತಾಯನು 18 : 20 (KNV)
ಯಾಕಂದರೆ ಇಬ್ಬರಾಗಲೀ ಮೂವರಾಗಲೀ ನನ್ನ ಹೆಸರಿನಲ್ಲಿ ಎಲ್ಲಿ ಕೂಡಿಬರುತ್ತಾರೋ ಅವರ ಮಧ್ಯ ದಲ್ಲಿ ನಾನು ಇದ್ದೇನೆ ಅಂದನು.
ಮತ್ತಾಯನು 18 : 21 (KNV)
ತರುವಾಯ ಪೇತ್ರನು ಆತನ ಬಳಿಗೆ ಬಂದು--ಕರ್ತನೇ, ನನ್ನ ಸಹೋದರನು ನನಗೆ ವಿರೋಧ ವಾಗಿ ಪಾಪಮಾಡಿದರೆ ನಾನು ಎಷ್ಟು ಸಾರಿ ಅವನಿಗೆ ಕ್ಷಮಿಸಬೇಕು? ಏಳು ಸಾರಿಯೋ ಎಂದು ಕೇಳಿದನು.
ಮತ್ತಾಯನು 18 : 22 (KNV)
ಯೇಸು ಅವನಿಗೆ--ಏಳು ಸಾರಿಯಲ್ಲ, ಆದರೆ ಏಳೆಪ್ಪತ್ತು ಸಾರಿ ಎಂದು ನಾನು ನಿನಗೆ ಹೇಳುತ್ತೇನೆ;
ಮತ್ತಾಯನು 18 : 23 (KNV)
ಆದದರಿಂದ ಪರಲೋಕ ರಾಜ್ಯವು ತನ್ನ ಸೇವಕರಿಂದ ಲೆಕ್ಕವನ್ನು ತಕ್ಕೊಳ್ಳಬೇಕೆಂದಿದ್ದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ.
ಮತ್ತಾಯನು 18 : 24 (KNV)
ಅವನು ಲೆಕ್ಕವನ್ನು ತಕ್ಕೊಳ್ಳಲು ಪ್ರಾರಂಭಿಸಿದಾಗ ಹತ್ತು ಸಾವಿರ ತಲಾಂತುಗಳನ್ನು ಸಾಲ ಕೊಡಬೇಕಾದವನನ್ನು ಅವನ ಬಳಿಗೆ ತಂದರು.
ಮತ್ತಾಯನು 18 : 25 (KNV)
ಆದರೆ ಕೊಡುವದಕ್ಕೆ ಅವನಿಗೆ ಏನೂ ಇಲ್ಲದ್ದರಿಂದ ಅವನನ್ನೂ ಅವನ ಹೆಂಡತಿಯನ್ನೂ ಮಕ್ಕಳನ್ನೂ ಅವನಿಗಿದ್ದದ್ದೆಲ್ಲವನ್ನೂ ಮಾರಿ ಸಾಲ ತೀರಿಸಬೇಕೆಂದು ಅವನ ಯಜಮಾನನು ಅಪ್ಪಣೆ ಕೊಟ್ಟನು.
ಮತ್ತಾಯನು 18 : 26 (KNV)
ಆಗ ಆ ಸೇವಕನು ನೆಲಕ್ಕೆ ಬಿದ್ದು ಅವನನ್ನು ವಂದಿಸಿ--ಧಣಿಯೇ, ನನ್ನನ್ನು ತಾಳಿಕೋ; ನಾನು ಎಲ್ಲವನ್ನು ನಿನಗೆ ಸಲ್ಲಿಸುವೆನು ಎಂದು ಹೇಳಿದನು.
ಮತ್ತಾಯನು 18 : 27 (KNV)
ಆ ಸೇವಕನ ಧಣಿಯು ಅವನ ಮೇಲೆ ಕನಿಕರಪಟ್ಟು ಅವನನ್ನು ಬಿಡಿಸಿ ಅವನ ಸಾಲವನ್ನೆಲ್ಲಾ ಬಿಟ್ಟು ಬಿಟ್ಟನು.
ಮತ್ತಾಯನು 18 : 28 (KNV)
ಆದರೆ ಅದೇ ಸೇವಕನು ಹೊರಗೆ ಹೋಗಿ ತನಗೆ ನೂರು ದೇನಾರುಗಳನ್ನು ಸಾಲ ಕೊಡಬೇಕಾಗಿದ್ದ ತನ್ನ ಜೊತೆ ಸೇವಕರಲ್ಲಿ ಒಬ್ಬನನ್ನು ಕಂಡು ಅವನನ್ನು ಹಿಡಿದು ಕುತ್ತಿಗೆ ಹಿಸುಕಿ--ನನ್ನ ಸಾಲವನ್ನು ತೀರಿಸು ಅಂದನು.
ಮತ್ತಾಯನು 18 : 29 (KNV)
ಆಗ ಅವನ ಜೊತೇ ಸೇವಕನು ಅವನ ಪಾದಕ್ಕೆ ಬಿದ್ದು ಅವನಿಗೆ--ನನ್ನನ್ನು ತಾಳಿಕೋ; ನಾನು ನಿನ್ನದನ್ನೆಲ್ಲಾ ತೀರಿಸುತ್ತೇನೆ ಎಂದು ಅವನನ್ನು ಬೇಡಿಕೊಂಡನು.
ಮತ್ತಾಯನು 18 : 30 (KNV)
ಅವನು ಅದಕ್ಕೆ ಒಪ್ಪದೆ ಹೊರಟುಹೋಗಿ ತನ್ನ ಸಾಲವನ್ನು ತೀರಿಸುವ ವರೆಗೆ ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು.
ಮತ್ತಾಯನು 18 : 31 (KNV)
ಹೀಗೆ ಅವನ ಜೊತೆ ಸೇವಕರು ನಡೆದದ್ದನ್ನು ನೋಡಿ ಬಹಳ ವ್ಯಥೆಪಟ್ಟು ಹೋಗಿ ತಮ್ಮ ಧಣಿಗೆ ನಡೆದದ್ದೆಲ್ಲವನ್ನು ತಿಳಿಯಪಡಿಸಿದರು.
ಮತ್ತಾಯನು 18 : 32 (KNV)
ಆಗ ಅವನ ಧಣಿಯು ಅವನನ್ನು ತನ್ನ ಬಳಿಗೆ ಕರೆದು ಅವನಿಗೆ--ಓ ದುಷ್ಟ ಸೇವಕನೇ, ನೀನು ನನ್ನನ್ನು ಬೇಡಿಕೊಂಡದ್ದರಿಂದ ನಾನು ನಿನ್ನ ಸಾಲವನ್ನೆಲಾ ಮನ್ನಿಸಿದೆನು.
ಮತ್ತಾಯನು 18 : 33 (KNV)
ನಾನು ನಿನ್ನ ಮೇಲೆ ಕರುಣೆ ತೋರಿಸಿದಂತೆಯೇ ನೀನು ಸಹ ನಿನ್ನ ಜೊತೇ ಸೇವಕನ ಮೇಲೆ ಕರುಣೆಯನ್ನು ತೋರಿಸಬೇಕಾಗಿ ತ್ತಲ್ಲವೇ ಎಂದು ಹೇಳಿದನು.
ಮತ್ತಾಯನು 18 : 34 (KNV)
ಅವನ ಧಣಿಯು ಕೋಪಗೊಂಡು ತನಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುವ ತನಕ ಅವನನ್ನು ಸಂಕಟಪಡಿಸುವವರಿಗೆ ಒಪ್ಪಿಸಿದನು.
ಮತ್ತಾಯನು 18 : 35 (KNV)
ಅದರಂತೆಯೇ ನಿಮ್ಮಲ್ಲಿ ಪ್ರತಿಯೊ ಬ್ಬನು ಹೃದಯಪೂರ್ವಕವಾಗಿ ತನ್ನ ಸಹೋದರನ ತಪ್ಪುಗಳನ್ನು ಕ್ಷಮಿಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು ಅಂದನು.
❮
❯