ಮಾರ್ಕನು 1 : 1 (KNV)
ದೇವಕುಮಾರನಾದ ಯೇಸು ಕ್ರಿಸ್ತನ ವಿಷಯವಾಗಿರುವ ಸುವಾರ್ತೆಯ ಪ್ರಾರಂಭವು.
ಮಾರ್ಕನು 1 : 2 (KNV)
ಪ್ರವಾದನೆಗಳಲ್ಲಿ ಬರೆಯಲ್ಪಟ್ಟ ಪ್ರಕಾರ--ಇಗೋ, ನಿನ್ನ ಮಾರ್ಗವನ್ನು ಸಿದ್ಧಮಾಡುವ ನನ್ನ ದೂತನನ್ನು ನಿನ್ನ ಮುಂದೆ ನಾನು ಕಳುಹಿಸುತ್ತೇನೆ.
ಮಾರ್ಕನು 1 : 3 (KNV)
ಕರ್ತನ ಮಾರ್ಗವನ್ನು ನೀವು ಸಿದ್ಧಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆಮಾಡಿರಿ ಎಂದು ಅಡವಿಯಲ್ಲಿ ಕೂಗುವ ಒಬ್ಬನ ಶಬ್ದವದೆ ಎಂಬದು.
ಮಾರ್ಕನು 1 : 4 (KNV)
ಯೋಹಾನನು ಅಡವಿಯಲ್ಲಿ ಬಾಪ್ತಿಸ್ಮ ಮಾಡಿಸುತ್ತಾ ಪಾಪಗಳ ಪರಿ ಹಾರಕ್ಕಾಗಿ ಮಾನಸಾಂತರದ ಬಾಪ್ತಿಸ್ಮವನ್ನು ಸಾರಿದನು.
ಮಾರ್ಕನು 1 : 5 (KNV)
ಆಗ ಯೂದಾಯ ದೇಶವೆಲ್ಲವೂ ಯೆರೂಸಲೇಮಿ ನವರೂ ಅವನ ಬಳಿಗೆ ಹೊರಟು ಹೋಗಿ ತಮ್ಮ ಪಾಪಗಳನ್ನು ಅರಿಕೆ ಮಾಡುತ್ತಾ ಯೊರ್ದನ್‌ ನದಿಯಲ್ಲಿ ಎಲ್ಲರೂ ಅವನಿಂದ ಬಾಪ್ತಿಸ್ಮ ಮಾಡಿಸಿ ಕೊಂಡರು.
ಮಾರ್ಕನು 1 : 6 (KNV)
ಯೋಹಾನನು ಒಂಟೇ ಕೂದಲಿನ ಉಡುಪನ್ನು ಧರಿಸಿಕೊಂಡು ತನ್ನ ನಡುವಿಗೆ ಚರ್ಮದ ನಡುಕಟ್ಟನ್ನು ಕಟ್ಟಿಕೊಂಡವನಾಗಿದ್ದು ಮಿಡಿತೆಗಳನ್ನೂ ಕಾಡುಜೇನನ್ನೂ ತಿನ್ನುತ್ತಿದ್ದನು.
ಮಾರ್ಕನು 1 : 7 (KNV)
ಮತ್ತು ಅವನು--ನನಗಿಂತ ಶಕ್ತನಾಗಿರುವಾತನು ನನ್ನ ಹಿಂದೆ ಬರುತ್ತಾನೆ; ನಾನು ಬೊಗ್ಗಿಕೊಂಡು ಆತನ ಕೆರಗಳ ಬಾರನ್ನು ಬಿಚ್ಚುವದಕ್ಕೂ ಯೋಗ್ಯನಲ್ಲ;
ಮಾರ್ಕನು 1 : 8 (KNV)
ನಾನು ನಿಮಗೆ ನೀರಿನಿಂದ ಬಾಪ್ತಿಸ್ಮ ಮಾಡಿಸಿದ್ದು ನಿಜವೇ. ಆತನಾ ದರೋ ನಿಮಗೆ ಪವಿತ್ರಾತ್ಮನಿಂದ ಬಾಪ್ತಿಸ್ಮ ಮಾಡಿಸು ವನು ಎಂದು ಸಾರಿ ಹೇಳುತ್ತಿದ್ದನು.
ಮಾರ್ಕನು 1 : 9 (KNV)
ಆ ದಿವಸಗಳಲ್ಲಿ ಆದದ್ದೇನಂದರೆ, ಯೇಸು ಗಲಿಲಾಯದ ನಜರೇತಿನಿಂದ ಬಂದು ಯೊರ್ದನಿನಲ್ಲಿ ಯೋಹಾನನಿಂದ ಬಾಪ್ತಿಸ್ಮಮಾಡಿಸಿಕೊಂಡನು.
ಮಾರ್ಕನು 1 : 10 (KNV)
ಆತನು ನೀರಿನೊಳಗಿಂದ ಮೇಲಕ್ಕೆ ಬಂದ ಕೂಡಲೆ ಆಕಾಶಗಳು ತೆರೆದಿರುವದನ್ನೂ ಆತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿದು ಬರುವದನ್ನೂ ಯೋಹಾನನು ಕಂಡನು.
ಮಾರ್ಕನು 1 : 11 (KNV)
ಆಗ--ನಾನು ಬಹಳವಾಗಿ ಮೆಚ್ಚಿಕೊಂಡಿರುವ ಪ್ರಿಯನಾದ ನನ್ನ ಮಗನು ನೀನೇ ಎಂಬ ಧ್ವನಿಯು ಪರಲೋಕ ದಿಂದ ಬಂದಿತು.
ಮಾರ್ಕನು 1 : 12 (KNV)
ತಕ್ಷಣವೇ ಆತ್ಮನು ಆತನನ್ನು ಅಡವಿಯೊಳಕ್ಕೆ ನಡಿಸಿದನು.
ಮಾರ್ಕನು 1 : 13 (KNV)
ಆತನು ನಾಲ್ವತ್ತು ದಿವಸ ಅಡವಿ ಯಲ್ಲಿ ಸೈತಾನನಿಂದ ಶೋಧಿಸಲ್ಪಡುತ್ತಾ ಕಾಡು ಮೃಗ ಗಳೊಂದಿಗೆ ಇದ್ದನು; ಮತ್ತು ದೂತರು ಆತನನ್ನು ಉಪಚರಿಸಿದರು.
ಮಾರ್ಕನು 1 : 14 (KNV)
ಯೋಹಾನನು ಸೆರೆಯಲ್ಲಿ ಹಾಕಲ್ಪಟ್ಟ ತರು ವಾಯ ಯೇಸು ಗಲಿಲಾಯಕ್ಕೆ ಬಂದು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ--
ಮಾರ್ಕನು 1 : 15 (KNV)
ಕಾಲವು ಪರಿಪೂರ್ಣವಾಯಿತು. ದೇವರ ರಾಜ್ಯವು ಸವಿಾಪ ವಾಗಿದೆ; ನೀವು ಮಾನಸಾಂತರಪಟ್ಟು ಸುವಾರ್ತೆ ಯನ್ನು ನಂಬಿರಿ ಅಂದನು.
ಮಾರ್ಕನು 1 : 16 (KNV)
ಆತನು ಗಲಿಲಾಯ ಸಮುದ್ರದ ಬಳಿಯಲ್ಲಿ ತಿರುಗಾಡುತ್ತಿರುವಾಗ ಸೀಮೋನನೂ ಅವನ ಸಹೋ ದರನಾದ ಅಂದ್ರೆಯನೂ ಸಮುದ್ರದಲ್ಲಿ ಬಲೆ ಬೀಸುತ್ತಿರುವದನ್ನು ಆತನು ಕಂಡನು; ಯಾಕಂದರೆ ಅವರು ಬೆಸ್ತರಾಗಿದ್ದರು.
ಮಾರ್ಕನು 1 : 17 (KNV)
ಯೇಸು ಅವರಿಗೆ--ನೀವು ನನ್ನ ಹಿಂದೆ ಬನ್ನಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರಾಗುವಂತೆ ನಾನು ನಿಮ್ಮನ್ನು ಮಾಡುವೆನು ಅಂದನು.
ಮಾರ್ಕನು 1 : 18 (KNV)
ತಕ್ಷಣವೇ ಅವರು ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದ್ದರು.
ಮಾರ್ಕನು 1 : 19 (KNV)
ಆತನು ಅಲ್ಲಿಂದ ಸ್ವಲ್ಪ ಮುಂದಕ್ಕೆ ಹೋದಾಗ ಜೆಬೆದಾಯನ ಮಗನಾದ ಯಾಕೋಬನೂ ಅವನ ಸಹೋದರನಾದ ಯೋಹಾನನೂ ದೋಣಿಯಲ್ಲಿ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದದ್ದನ್ನು ಕಂಡನು.
ಮಾರ್ಕನು 1 : 20 (KNV)
ಕೂಡಲೆ ಆತನು ಅವರನ್ನು ಕರೆದನು; ಅವರು ತಮ್ಮ ತಂದೆಯಾದ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿ ಯಲ್ಲಿ ಬಿಟ್ಟು ಆತನ ಹಿಂದೆ ಹೋದರು.
ಮಾರ್ಕನು 1 : 21 (KNV)
ಆಗ ಅವರು ಕಪೆರ್ನೌಮಿಗೆ ಹೋದರು; ಕೂಡಲೆ ಆತನು ಸಬ್ಬತ್‌ ದಿನದಲ್ಲಿ ಸಭಾಮಂದಿರ ದೊಳಗೆ ಪ್ರವೇಶಿಸಿ ಬೋಧಿಸಿದನು.
ಮಾರ್ಕನು 1 : 22 (KNV)
ಅವರು ಆತನ ಬೋಧನೆಗೆ ಆಶ್ಚರ್ಯಪಟ್ಟರು; ಯಾಕಂದರೆ ಆತನು ಶಾಸ್ತ್ರಿಗಳಂತೆ ಅಲ್ಲ, ಅಧಿಕಾರವಿದ್ದವನಂತೆ ಅವರಿಗೆ ಬೋಧಿಸಿದನು.
ಮಾರ್ಕನು 1 : 23 (KNV)
ಆಗ ಅವರ ಸಭಾಮಂದಿ ರದಲ್ಲಿ ಅಶುದ್ಧಾತ್ಮವಿದ್ದ ಒಬ್ಬ ಮನುಷ್ಯನಿದ್ದನು.
ಮಾರ್ಕನು 1 : 24 (KNV)
ಅವನು--ನಮ್ಮನ್ನು ಬಿಟ್ಟುಬಿಡು; ನಜರೇತಿನ ಯೇಸುವೇ, ನಮ್ಮಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡುವದಕ್ಕಾಗಿ ನೀನು ಬಂದೆಯಾ? ನೀನು ಯಾರೆಂದು ನಾನು ಬಲ್ಲೆನು; ನೀನು ದೇವರ ಪರಿಶುದ್ಧನೇ ಎಂದು ಕೂಗಿ ಹೇಳಿದನು.
ಮಾರ್ಕನು 1 : 25 (KNV)
ಆಗ ಯೇಸು ಅವನನ್ನು ಗದರಿಸಿ--ಸುಮ್ಮನಿರು, ಅವನೊಳ ಗಿಂದ ಹೊರಗೆ ಬಾ ಅಂದನು.
ಮಾರ್ಕನು 1 : 26 (KNV)
ಆಗ ಅಶುದ್ಧಾತ್ಮವು ಅವನನ್ನು ಒದ್ದಾಡಿಸಿದ ಮೇಲೆ ಮಹಾಶಬ್ದದಿಂದ ಕೂಗಿ ಅವನೊಳಗಿಂದ ಹೊರಗೆ ಬಂದಿತು.
ಮಾರ್ಕನು 1 : 27 (KNV)
ಅದಕ್ಕೆ ಅವರೆಲ್ಲರೂ--ಇದು ಏನಾಗಿರಬಹುದು? ಈ ಹೊಸ ಬೋಧನೆ ಯಾವದು? ಯಾಕಂದರೆ ಆತನು ಅಶುದ್ಧಾತ್ಮಗಳಿಗೂ ಅಧಿಕಾರದಿಂದ ಅಪ್ಪಣೆಕೊಡು ತ್ತಾನೆ; ಅವು ಆತನಿಗೆ ವಿಧೇಯವಾಗುತ್ತವಲ್ಲಾ ಎಂದು ತಮ್ಮಲ್ಲಿ ತಾವೇ ಪ್ರಶ್ನಿಸಿಕೊಳ್ಳುವಷ್ಟು ವಿಸ್ಮಯಗೊಂಡರು.
ಮಾರ್ಕನು 1 : 28 (KNV)
ಕೂಡಲೆ ಆತನ ಕೀರ್ತಿಯು ಗಲಿಲಾಯದ ಸುತ್ತಮುತ್ತಲಿನ ಎಲ್ಲಾ ಪ್ರದೇಶದಲ್ಲಿ ಹಬ್ಬಿತು.
ಮಾರ್ಕನು 1 : 29 (KNV)
ಅವನು ಸಭಾಮಂದಿರದಿಂದ ಹೊರಗೆ ಬಂದ ಕೂಡಲೆ ಯಾಕೋಬ ಯೋಹಾನರ ಸಂಗಡ ಸೀಮೋನ ಅಂದ್ರೆಯರ ಮನೆಯೊಳಕ್ಕೆ ಅವರು ಪ್ರವೇಶಿಸಿದರು.
ಮಾರ್ಕನು 1 : 30 (KNV)
ಆದರೆ ಸೀಮೋನನ ಹೆಂಡತಿಯ ತಾಯಿಯು ಜ್ವರದಿಂದ ಮಲಗಿಕೊಂಡಿದ್ದಳು; ಕೂಡಲೆ ಅವರು ಆಕೆಯ ವಿಷಯವಾಗಿ ಆತನಿಗೆ ತಿಳಿಸಿದರು.
ಮಾರ್ಕನು 1 : 31 (KNV)
ಆತನು ಬಂದು ಆಕೆಯ ಕೈಯನ್ನು ಹಿಡಿದು ಅವಳನ್ನು ಮೇಲಕ್ಕೆ ಎತ್ತಿದನು; ಕೂಡಲೆ ಜ್ವರವು ಆಕೆಯನ್ನು ಬಿಟ್ಟು ಹೋಯಿತು; ಆಕೆಯು ಅವರಿಗೆ ಉಪಚಾರ ಮಾಡಿದಳು.
ಮಾರ್ಕನು 1 : 32 (KNV)
ಸಂಜೆಯಲ್ಲಿ ಸೂರ್ಯನು ಮುಣುಗಿದ್ದಾಗ ಅವರು ಅಸ್ವಸ್ಥತೆಯುಳ್ಳವರೆಲ್ಲರನ್ನೂ ದೆವ್ವ ಹಿಡಿದವರನ್ನೂ ಆತನ ಬಳಿಗೆ ತಂದರು.
ಮಾರ್ಕನು 1 : 33 (KNV)
ಆಗ ಪಟ್ಟಣವೆಲ್ಲಾ ಬಾಗಲ ಬಳಿಯಲ್ಲಿ ಒಟ್ಟಾಗಿ ಕೂಡಿಬಂದಿತು.
ಮಾರ್ಕನು 1 : 34 (KNV)
ಇದಲ್ಲದೆ ವಿಧವಿಧವಾದ ರೋಗ ಗಳಿಂದ ಅಸ್ವಸ್ಥರಾಗಿದ್ದ ಅನೇಕರನ್ನು ಆತನು ಸ್ವಸ್ಥಮಾಡಿ ಬಹಳ ದೆವ್ವಗಳನ್ನು ಬಿಡಿಸಿದನು; ಮತ್ತು ದೆವ್ವಗಳು ಆತನನ್ನು ಅರಿತಿದ್ದದರಿಂದ ಆತನು ಅವುಗಳಿಗೆ ಮಾತನಾಡಗೊಡಿಸಲಿಲ್ಲ.
ಮಾರ್ಕನು 1 : 35 (KNV)
ಮುಂಜಾನೆ ಹೊತ್ತು ಮೂಡುವದಕ್ಕಿಂತ ಬಹಳ ಮುಂಚಿತವಾಗಿ ಆತನು ಎದ್ದು ಹೊರಗೆ ನಿರ್ಜನ ವಾದ ಸ್ಥಳಕ್ಕೆ ಹೊರಟುಹೋಗಿ ಅಲ್ಲಿ ಪ್ರಾರ್ಥನೆ ಮಾಡಿದನು.
ಮಾರ್ಕನು 1 : 36 (KNV)
ಸೀಮೋನನೂ ಅವನ ಸಂಗಡ ಇದ್ದವರೂ ಆತನ ಹಿಂದೆ ಹೋದರು.
ಮಾರ್ಕನು 1 : 37 (KNV)
ಅವರು ಆತನನ್ನು ಕಂಡುಕೊಂಡಾಗ ಆತನಿಗೆ--ಎಲ್ಲರೂ ನಿನ್ನನ್ನು ಹುಡುಕುತ್ತಾರೆ ಅಂದದ್ದಕ್ಕೆ
ಮಾರ್ಕನು 1 : 38 (KNV)
ಆತನು ಅವರಿಗೆ--ನಾವು ಮುಂದಿನ ಊರುಗಳಿಗೆ ಹೋಗೋಣ; ಯಾಕಂದರೆ ನಾನು ಅಲ್ಲಿಯೂ ಸಾರಬೇಕಾಗಿದೆ; ಇದಕ್ಕಾಗಿಯೇ ನಾನು ಹೊರಟು ಬಂದಿದ್ದೇನೆ ಎಂದು ಹೇಳಿದನು.
ಮಾರ್ಕನು 1 : 39 (KNV)
ಮತ್ತು ಆತನು ಗಲಿಲಾಯದಲ್ಲೆಲ್ಲಾ ಅವರ ಸಭಾಮಂದಿರಗಳಲ್ಲಿ ಸಾರಿ ದೆವ್ವಗಳನ್ನು ಬಿಡಿಸಿದನು.
ಮಾರ್ಕನು 1 : 40 (KNV)
ಆಗ ಒಬ್ಬ ಕುಷ್ಠರೋಗಿಯು ಆತನ ಬಳಿಗೆ ಬಂದು ಆತನ ಮುಂದೆ ಮೊಣಕಾಲೂರಿ ಆತನಿಗೆ -- ನಿನಗೆ ಮನಸ್ಸಿದ್ದರೆ ನೀನು ನನ್ನನ್ನು ಶುದ್ಧ ಮಾಡಬಲ್ಲೆ ಎಂದು ಬೇಡಿಕೊಂಡನು.
ಮಾರ್ಕನು 1 : 41 (KNV)
ಆಗ ಯೇಸು ಕನಿಕರಪಟ್ಟು ತನ್ನ ಕೈನೀಡಿ ಅವನನ್ನು ಮುಟ್ಟಿ ಅವನಿಗೆ--ನನಗೆ ಮನಸ್ಸುಂಟು; ನೀನು ಶುದ್ಧನಾಗು ಎಂದು ಹೇಳಿದನು.
ಮಾರ್ಕನು 1 : 42 (KNV)
ಹೀಗೆ ಆತನು ಹೇಳಿದ ಕೂಡಲೆ ಆ ಕುಷ್ಠವು ತಕ್ಷಣವೇ ಅವನಿಂದ ಹೊರಟುಹೋಗಿ ಅವನು ಶುದ್ಧನಾದನು.
ಮಾರ್ಕನು 1 : 43 (KNV)
ಆತನು ಅವನಿಗೆ ನೇರವಾಗಿ ಆಜ್ಞಾಪಿಸಿ ಕೂಡಲೆ ಕಳುಹಿಸಿದನು;
ಮಾರ್ಕನು 1 : 44 (KNV)
ಅವನಿಗೆ ಹೇಳಿದ್ದೇನಂದರೆ--ಯಾವ ಮನುಷ್ಯನಿಗೂ ಏನೂ ಹೇಳಬೇಡ ನೋಡು; ಆದರೆ ನೀನು ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿಕೊಂಡು ಅವರಿಗೆ ಸಾಕ್ಷಿಯಾಗಿರುವಂತೆ ನಿನ್ನ ಶುದ್ಧಿಗಾಗಿ ಮೋಶೆಯು ಆಜ್ಞಾಪಿಸಿದವುಗಳನ್ನು ಅರ್ಪಿಸು ಅಂದನು.ಆದರೆ ಅವನು ಹೊರಟು ಹೋಗಿ ಅದನ್ನು ಬಹಳವಾಗಿ ಪ್ರಕಟಿಸಿ ಎಲ್ಲಾ ಕಡೆಗೂ ಆ ವಿಷಯವನ್ನು ಹಬ್ಬಿಸುವದಕ್ಕೆ ಪ್ರಾರಂಭಿಸಿದ್ದರಿಂದ ಯೇಸು ಇನ್ನು ಬಹಿರಂಗವಾಗಿ ಪಟ್ಟಣದೊಳಕ್ಕೆ ಪ್ರವೇಶಿಸಲಾರದೆ ಆತನು ಹೊರಗೆ ಅಡವಿಯ ಸ್ಥಳಗಳಲ್ಲಿ ಇದ್ದನು; ಆಗ ಪ್ರತಿಯೊಂದು ಕಡೆಯಿ ಂದಲೂ ಜನರು ಆತನ ಬಳಿಗೆ ಬ
ಮಾರ್ಕನು 1 : 45 (KNV)
ಆದರೆ ಅವನು ಹೊರಟು ಹೋಗಿ ಅದನ್ನು ಬಹಳವಾಗಿ ಪ್ರಕಟಿಸಿ ಎಲ್ಲಾ ಕಡೆಗೂ ಆ ವಿಷಯವನ್ನು ಹಬ್ಬಿಸುವದಕ್ಕೆ ಪ್ರಾರಂಭಿಸಿದ್ದರಿಂದ ಯೇಸು ಇನ್ನು ಬಹಿರಂಗವಾಗಿ ಪಟ್ಟಣದೊಳಕ್ಕೆ ಪ್ರವೇಶಿಸಲಾರದೆ ಆತನು ಹೊರಗೆ ಅಡವಿಯ ಸ್ಥಳಗಳಲ್ಲಿ ಇದ್ದನು; ಆಗ ಪ್ರತಿಯೊಂದು ಕಡೆಯಿ ಂದಲೂ ಜನರು ಆತನ ಬಳಿಗೆ ಬ

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45

BG:

Opacity:

Color:


Size:


Font: