ಲೂಕನು 21 : 1 (KNV)
ಇದಲ್ಲದೆ ಐಶ್ವರ್ಯವಂತರು ತಮ್ಮ ಕಾಣಿಕೆಗಳನ್ನು ಬೊಕ್ಕಸದಲ್ಲಿ ಹಾಕುವದನ್ನು ಆತನು ಕಣ್ಣೆತ್ತಿ ನೋಡಿದನು.
ಲೂಕನು 21 : 2 (KNV)
ಒಬ್ಬ ಬಡ ವಿಧವೆಯು ಸಹ ಎರಡು ಕಾಸುಗಳನ್ನು ಅದರಲ್ಲಿ ಹಾಕುವದನ್ನು ಆತನು ನೋಡಿದನು.
ಲೂಕನು 21 : 3 (KNV)
ಆತನು--ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಈ ಬಡ ವಿಧವೆಯು ಅವರೆಲ್ಲರಿಗಿಂತಲೂ ಹೆಚ್ಚು ಹಾಕಿದ್ದಾಳೆ;
ಲೂಕನು 21 : 4 (KNV)
ಯಾಕಂದರೆ ಇವರೆಲ್ಲರೂ ತಮಗಿರುವ ಸಮೃದ್ಧಿಯಲ್ಲಿ ದೇವರಿಗೆ ಕಾಣಿಕೆಗಳನ್ನು ಹಾಕಿದ್ದಾರೆ; ಆದರೆ ಈಕೆಯು ತನ್ನ ಬಡತನದಲ್ಲಿ ತನ್ನ ಜೀವನಕ್ಕೆ ಇದ್ದದ್ದನ್ನೆಲ್ಲಾ ಹಾಕಿದ್ದಾಳೆ ಅಂದನು.
ಲೂಕನು 21 : 5 (KNV)
ತರುವಾಯ ಕೆಲವರು ದೇವಾಲಯದ ವಿಷಯ ವಾಗಿ ಅದು ಎಂಥಾ ಒಳ್ಳೇ ಕಲ್ಲುಗಳಿಂದಲೂ ದಾನಗ ಳಿಂದಲೂ ಅಲಂಕೃತವಾಗಿದೆ ಎಂದು ಮಾತನಾಡು ತ್ತಿರುವಾಗ ಆತನು--
ಲೂಕನು 21 : 6 (KNV)
ನೀವು ನೋಡುತ್ತಿರುವ ಇವುಗ ಳಾದರೋ ಕೆಡವಲ್ಪಟ್ಟು ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಬಿಡಲ್ಪಡದ ದಿವಸಗಳು ಬರುವವು ಅಂದನು.
ಲೂಕನು 21 : 7 (KNV)
ಆಗ ಅವರು ಆತನಿಗೆ--ಬೋಧಕನೇ, ಇವುಗಳು ಯಾವಾಗ ಆಗುವವು? ಇವುಗಳು ಸಂಭವಿ ಸುವದಕ್ಕಿರುವಾಗ ಯಾವ ಸೂಚನೆ ಇರುವದು ಎಂದು ಕೇಳಿದರು.
ಲೂಕನು 21 : 8 (KNV)
ಅದಕ್ಕೆ ಆತನು--ನೀವು ಮೋಸ ಹೋಗ ದಂತೆ ಎಚ್ಚರಿಕೆ ತಂದುಕೊಳ್ಳಿರಿ; ಯಾಕಂದರೆ ಅನೇಕರು ನನ್ನ ಹೆಸರಿನಲ್ಲಿ ಬಂದು--ನಾನೇ ಕ್ರಿಸ್ತನು ಎಂದು ಹೇಳುವರು; ಸಮಯವು ಸವಿಾಪಿಸಿದೆ, ಆದಕಾರಣ ನೀವು ಅವರ ಹಿಂದೆ ಹೋಗಬೇಡಿರಿ.
ಲೂಕನು 21 : 9 (KNV)
ನೀವು ಯುದ್ಧಗಳ ಮತ್ತು ಕಲಹಗಳ ವಿಷಯವಾಗಿ ಕೇಳುವಾಗ ದಿಗಿಲುಪಡಬೇಡಿರಿ; ಯಾಕಂದರೆ ಇವುಗಳು ಮೊದಲು ಆಗುವದು ಅಗತ್ಯ; ಆದರೂ ಕೂಡಲೆ ಅಂತ್ಯ ಬರುವದಿಲ್ಲ ಅಂದನು.
ಲೂಕನು 21 : 10 (KNV)
ಆತನು ಅವರಿಗೆ--ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳು ವವು.
ಲೂಕನು 21 : 11 (KNV)
ಬೇರೆ ಬೇರೆ ಸ್ಥಳಗಳಲ್ಲಿ ಮಹಾಭೂಕಂಪಗಳೂ ಬರಗಳೂ ವ್ಯಾಧಿಗಳೂ ಇರುವವು; ಭಯಹುಟ್ಟಿ ಸುವ ದೃಶ್ಯಗಳೂ ಮಹಾಸೂಚನೆಗಳೂ ಆಕಾಶದಿಂದ ಆಗುವವು.
ಲೂಕನು 21 : 12 (KNV)
ಆದರೆ ಇವೆಲ್ಲವುಗಳಿಗಿಂತ ಮೊದಲು ಅವರು ನಿಮ್ಮನ್ನು ಹಿಡಿದು ಹಿಂಸಿಸಿ ಸಭಾಮಂದಿರ ಗಳಿಗೂ ಸೆರೆಮನೆಗಳಿಗೂ ಒಪ್ಪಿಸಿ ನನ್ನ ಹೆಸರಿನ ನಿಮಿತ್ತ ಅರಸುಗಳ ಮತ್ತು ಅಧಿಕಾರಿಗಳ ಮುಂದೆ ನಿಮ್ಮನ್ನು ತರುವರು.
ಲೂಕನು 21 : 13 (KNV)
ಇದು ಸಾಕ್ಷಿಗೋಸ್ಕರ ನಿಮಗೆ ಪರಿಣಮಿ ಸುವದು.
ಲೂಕನು 21 : 14 (KNV)
ಹೀಗಿರುವದರಿಂದ ನೀವು ಏನು ಉತ್ತರ ಕೊಡಬೇಕೆಂದು ಮುಂದಾಗಿ ಯೋಚಿಸಬಾರದೆಂದು ನಿಮ್ಮ ಹೃದಯಗಳಲ್ಲಿ ನಿಶ್ಚಯಮಾಡಿಕೊಳ್ಳಿರಿ.
ಲೂಕನು 21 : 15 (KNV)
ಯಾಕ ಂದರೆ ನಿಮ್ಮ ವಿರೋಧಿಗಳೆಲ್ಲರೂ ಪ್ರತಿವಾದ ಮಾಡ ದಂಥ ಇಲ್ಲವೆ ವಿರೋಧಿಸದಂಥ ಬಾಯನ್ನೂ ಜ್ಞಾನ ವನ್ನೂ ನಾನು ನಿಮಗೆ ಕೊಡುವೆನು.
ಲೂಕನು 21 : 16 (KNV)
ಆದರೆ ತಂದೆ ತಾಯಿಗಳೂ ಸಹೋದರರೂ ಬಂಧುಗಳೂ ಸ್ನೇಹಿ ತರೂ ನಿಮ್ಮನ್ನು ಹಿಡಿದುಕೊಡುವರು; ನಿಮ್ಮಲ್ಲಿ ಕೆಲವ ರನ್ನು ಕೊಲ್ಲಿಸುವರು.
ಲೂಕನು 21 : 17 (KNV)
ನನ್ನ ಹೆಸರಿನ ನಿಮಿತ್ತವಾಗಿ ನಿಮ್ಮನ್ನು ಎಲ್ಲರೂ ದ್ವೇಷಿಸುವರು.
ಲೂಕನು 21 : 18 (KNV)
ಆದರೆ ನಿಮ್ಮ ತಲೆಯ ಒಂದು ಕೂದಲಾದರೂ ನಾಶವಾಗುವದಿಲ್ಲ.
ಲೂಕನು 21 : 19 (KNV)
ನೀವು ನಿಮ್ಮ ಸಹನೆಯಿಂದ ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುತ್ತೀರಿ.
ಲೂಕನು 21 : 20 (KNV)
ಆದರೆ ಸೈನ್ಯಗಳು ಯೆರೂಸಲೇ ಮನ್ನು ಮುತ್ತಿಗೆ ಹಾಕುವದನ್ನು ನೀವು ನೋಡುವಾಗ ಅದು ಹಾಳಾಗುವ ಕಾಲವು ಸವಿಾಪಿಸಿದೆ ಎಂದು ತಿಳಿದುಕೊಳ್ಳಿರಿ.
ಲೂಕನು 21 : 21 (KNV)
ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ; ಅದರ ಮಧ್ಯದಲ್ಲಿ ರುವವರು ಹೊರಟುಹೋಗಲಿ; ಇದಲ್ಲದೆ ಹಳ್ಳಿಗಳಲ್ಲಿ ಇರುವವರು ಅವುಗಳಲ್ಲಿ ಪ್ರವೇಶಿಸದೆ ಇರಲಿ.
ಲೂಕನು 21 : 22 (KNV)
ಬರೆದಿರುವವುಗಳೆಲ್ಲವೂ ನೆರವೇರುವಂತೆ ಇವು ಮುಯ್ಯಿತೀರಿಸುವ ದಿವಸಗಳಾಗಿವೆ.
ಲೂಕನು 21 : 23 (KNV)
ಆದರೆ ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಮೊಲೆ ಕುಡಿಸುವ ವರಿಗೂ ಅಯ್ಯೊ! ಯಾಕಂದರೆ ದೇಶದಲ್ಲಿ ಮಹಾ ವಿಪತ್ತೂ ಈ ಜನರ ಮೇಲೆ ಕೋಪವೂ ಆಗ ಇರು ವದು.
ಲೂಕನು 21 : 24 (KNV)
ಇದಲ್ಲದೆ ಅವರು ಕತ್ತಿಯ ಬಾಯಿಗೆ ಬೀಳುವರು. ಸೆರೆಯಾಗಿ ಎಲ್ಲಾ ಜನಾಂಗಗಳಲ್ಲಿ ಒಯ್ಯ ಲ್ಪಡುವರು;ಅನ್ಯಜನಗಳ ಕಾಲಗಳು ಪರಿಪೂರ್ಣ ವಾಗುವ ವರೆಗೆ ಯೆರೂಸಲೇಮು ಅನ್ಯಜನಗಳಿಂದ ತುಳಿದಾಡಲ್ಪಡುವದು.
ಲೂಕನು 21 : 25 (KNV)
ಸೂರ್ಯ ಚಂದ್ರ ಮತ್ತು ನಕ್ಷತ್ರಗಳಲ್ಲಿ ಸೂಚನೆಗಳು ತೋರುವವು; ಇದಲ್ಲದೆ ಭೂಮಿಯ ಮೇಲಿರುವ ಜನಾಂಗಗಳಿಗೆ ಕಳವಳದಿಂದ ಸಂಕಟ ಉಂಟಾಗುವದು; ಸಮುದ್ರದ ಮತ್ತು ತೆರೆಗಳ ಘೋಷಣೆಯ ನಿಮಿತ್ತವಾಗಿ ಕಳವಳವಾಗುವದು.
ಲೂಕನು 21 : 26 (KNV)
ಆಕಾಶದ ಶಕ್ತಿಗಳು ಕದಲಿಸಲ್ಪಡುವದರಿಂದ ಮನುಷ್ಯರು ಭಯಹಿಡಿದವರಾಗಿ ಲೋಕಕ್ಕೆ ಏನು ಸಂಭವಿಸುವದೋ ಎಂದು ಎದುರುನೋಡುತ್ತಾ ಪ್ರಾಣಹೋದಂತಾಗುವರು.
ಲೂಕನು 21 : 27 (KNV)
ಆಗ ಮನುಷ್ಯಕು ಮಾರನು ಬಲದಿಂದಲೂ ಮಹಾ ಮಹಿಮೆ ಯಿಂದಲೂ ಕೂಡಿದವನಾಗಿ ಮೇಘದಲ್ಲಿ ಬರುವದನ್ನು ಅವರು ಕಾಣುವರು;
ಲೂಕನು 21 : 28 (KNV)
ಆದರೆ ಈ ಸಂಗತಿಗಳು ಸಂಭವಿಸುವದಕ್ಕೆ ಪ್ರಾರಂಭಿಸಿದಾಗ ಮೇಲಕ್ಕೆ ನೋಡಿರಿ; ನಿಮ್ಮ ತಲೆಗಳನ್ನು ಎತ್ತಿರಿ; ಯಾಕಂದರೆ ನಿಮ್ಮ ವಿಮೋಚನೆಯು ಸವಿಾಪವಾಗಿದೆ ಅಂದನು.
ಲೂಕನು 21 : 29 (KNV)
ಆತನು ಅವರಿಗೆ ಒಂದು ಸಾಮ್ಯಕೊಟ್ಟು ಹೇಳಿದ್ದೇ ನಂದರೆ--ಅಂಜೂರದ ಮರವನ್ನು ಮತ್ತು ಎಲ್ಲಾ ಮರಗಳನ್ನು ನೋಡಿರಿ;
ಲೂಕನು 21 : 30 (KNV)
ಅವು ಚಿಗುರಿದಾಗ ನೀವು ನೋಡಿ ಬೇಸಿಗೆಯು ಹತ್ತಿರವಾಯಿತೆಂದು ನೀವೇ ನೀವಾಗಿ ತಿಳಿದುಕೊಳ್ಳುವಿರಿ.
ಲೂಕನು 21 : 31 (KNV)
ಅದೇ ಪ್ರಕಾರ ಇವೆಲ್ಲವುಗಳು ಸಂಭವಿಸುವದನ್ನು ನೀವು ನೋಡುವಾಗ ದೇವರ ರಾಜ್ಯವು ಹತ್ತಿರವಾಯಿತೆಂದು ತಿಳಿದುಕೊಳ್ಳಿರಿ.
ಲೂಕನು 21 : 32 (KNV)
ಎಲ್ಲವುಗಳು ನೆರವೇರುವ ವರೆಗೆ ಈ ಸಂತತಿಯು ಅಳಿದು ಹೋಗುವದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
ಲೂಕನು 21 : 33 (KNV)
ಆಕಾಶವೂ ಭೂಮಿಯೂ ಅಳಿದು ಹೋಗುವವು; ಆದರೆ ನನ್ನ ಮಾತುಗಳು ಅಳಿದು ಹೋಗುವದೇ ಇಲ್ಲ.
ಲೂಕನು 21 : 34 (KNV)
ಆದರೆ ನಿಮ್ಮ ಮೇಲೆ ಆ ದಿವಸವು ಫಕ್ಕನೆ ಬಾರದಂತೆ ನೀವು ಅತಿ ಭೋಜನದಿಂದಲೂ ಅಮಲಿನಿಂದಲೂ ಈ ಜೀವನದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗದಂತೆ ನಿಮ್ಮ ವಿಷಯದಲಿ ಜಾಗರೂಕರಾಗಿರ್ರಿ.
ಲೂಕನು 21 : 35 (KNV)
ಯಾಕಂದರೆ ಅದು ಭೂಮಿಯ ಮೇಲೆ ವಾಸವಾಗಿರುವವರೆಲ್ಲರ ಮೇಲೆ ಉರ್ಲಿನಂತೆ ಬರುವದು.
ಲೂಕನು 21 : 36 (KNV)
ಆದಕಾರಣ ಸಂಭವಿಸುವದಕ್ಕಿರುವ ಇವೆಲ್ಲವುಗಳಿಂದ ನೀವು ತಪ್ಪಿಸಿಕೊಳ್ಳುವದಕ್ಕೆ ಯೋಗ್ಯರೆಂದು ಎಣಿಸಲ್ಪಡು ವಂತೆಯೂ ಮನುಷ್ಯಕುಮಾರನ ಮುಂದೆ ನಿಂತು ಕೊಳ್ಳುವಂತೆಯೂ ಎಚ್ಚರವಾಗಿದ್ದು ಯಾವಾಗಲೂ ಪ್ರಾರ್ಥಿಸುತ್ತಾ ಇರ್ರಿ ಅಂದನು.
ಲೂಕನು 21 : 37 (KNV)
ಆತನು ಹಗಲಿನಲ್ಲಿ ದೇವಾಲಯದೊಳಗೆ ಬೋಧಿಸುತ್ತಾ ಇದ್ದು ರಾತ್ರಿಯಲ್ಲಿ ಹೊರಗೆ ಹೋಗಿ ಎಣ್ಣೇ ಮರಗಳ ಗುಡ್ಡವೆಂದು ಕರೆಯಲ್ಪಟ್ಟ ಗುಡ್ಡ ದಲ್ಲಿ ವಾಸಿಸುತ್ತಿದ್ದನು.
ಲೂಕನು 21 : 38 (KNV)
ಜನರೆಲ್ಲರೂ ಬೆಳಗಿನ ಜಾವದಲ್ಲಿ ಆತನ ಬಳಿಗೆ ದೇವಾಲಯದಲ್ಲಿ ಆತನ ಉಪದೇಶವನ್ನು ಕೇಳುವದಕ್ಕಾಗಿ ಬರುತ್ತಿದ್ದರು.
❮
❯