ಯಾಜಕಕಾಂಡ 9 : 1 (KNV)
ಎಂಟನೆಯ ದಿನದಲ್ಲಿ ಆದದ್ದೇನಂದರೆ, ಮೋಶೆಯು ಆರೋನನನ್ನೂ ಅವನ ಕುಮಾರರನ್ನೂ ಇಸ್ರಾಯೇಲಿನ ಹಿರಿಯರನ್ನೂ ಕರೆ ದನು;
ಯಾಜಕಕಾಂಡ 9 : 2 (KNV)
ಅವನು ಆರೋನನಿಗೆ ಹೇಳಿದ್ದೇನಂದರೆ--ಪಾಪದ ಬಲಿಗಾಗಿ ಒಂದು ಎಳೆಯ ಕರುವನ್ನೂ ದಹನ ಬಲಿಗಾಗಿ ದೋಷವಿಲ್ಲದ ಟಗರನ್ನೂ ನೀನು ತೆಗೆದು ಕೊಂಡು ಅವುಗಳನ್ನು ಕರ್ತನ ಸನ್ನಿಧಿಯಲ್ಲಿ ಸಮರ್ಪಿಸು.
ಯಾಜಕಕಾಂಡ 9 : 3 (KNV)
ನೀನು ಇಸ್ರಾಯೇಲ್‌ ಮಕ್ಕಳಿಗೆ ಹೇಳಬೇಕಾದದ್ದೇ ನಂದರೆ--ಪಾಪದ ಬಲಿಗಾಗಿ ಮೇಕೆಗಳಲ್ಲಿ ಮರಿ ಯನ್ನೂ ದಹನಬಲಿಗಾಗಿ ದೋಷವಿಲ್ಲದ ಒಂದು ವರ್ಷದ ಕರುವನ್ನೂ ಒಂದು ವರ್ಷದ ಕುರಿಮರಿ ಯನ್ನೂ ತೆಗೆದುಕೊಳ್ಳಬೇಕು.
ಯಾಜಕಕಾಂಡ 9 : 4 (KNV)
ಕರ್ತನ ಮುಂದೆ ಯಜ್ಞಕ್ಕೆ ಸಮಾಧಾನ ಬಲಿಗಳಿಗಾಗಿ ಹೋರಿಯನ್ನೂ ಟಗರನ್ನೂ ಸಹ ತೆಗೆದುಕೊಳ್ಳಬೇಕು; ಆಹಾರದ ಅರ್ಪಣೆಯು ಎಣ್ಣೆಯೊಂದಿಗೆ ಬೆರೆತಿರಬೇಕು; ಈ ದಿನವೇ ಕರ್ತನು ನಿಮಗೆ ಕಾಣಿಸಿಕೊಳ್ಳುವನು.
ಯಾಜಕಕಾಂಡ 9 : 5 (KNV)
ಮೋಶೆಯು ಆಜ್ಞಾಪಿಸಿದವುಗಳನ್ನು ಅವರು ಸಭೆಯ ಗುಡಾರದ ಮುಂದೆ ತಂದರು; ಸಭೆಯೆಲ್ಲವೂ ಹತ್ತಿರ ಬಂದು ಕರ್ತನ ಮುಂದೆ ನಿಂತಿತು.
ಯಾಜಕಕಾಂಡ 9 : 6 (KNV)
ಆಗ ಮೋಶೆಯು--ಕರ್ತನು ಆಜ್ಞಾಪಿಸಿದ್ದು ಇದೇ, ನೀವು ಇದನ್ನು ಮಾಡಿರಿ; ಕರ್ತನ ಮಹಿಮೆಯು ನಿಮಗೆ ಕಾಣಿಸಿಕೊಳ್ಳುವದು ಅಂದನು.
ಯಾಜಕಕಾಂಡ 9 : 7 (KNV)
ಮೋಶೆಯು ಆರೋನನಿಗೆ--ಯಜ್ಞವೇದಿಯ ಹತ್ತಿರಕ್ಕೆ ಹೋಗಿ ಕರ್ತನು ಆಜ್ಞಾಪಿಸಿದಂತೆಯೇ ನಿನ್ನ ಪಾಪದಬಲಿಯನ್ನೂ ದಹನಬಲಿಯನ್ನೂ ಅರ್ಪಿಸಿ, ನಿನಗಾಗಿಯೂ ಜನರಿಗಾಗಿಯೂ ಪ್ರಾಯಶ್ಚಿತ್ತವನ್ನು ಮಾಡು; ಜನರ ಸಮರ್ಪಣೆಗಳನ್ನು ಸಮರ್ಪಿಸಿ ಅವರಿ ಗಾಗಿಯೂ ಪ್ರಾಯಶ್ಚಿತ್ತವನ್ನು ಮಾಡು ಅಂದನು.
ಯಾಜಕಕಾಂಡ 9 : 8 (KNV)
ಆದದರಿಂದ ಆರೋನನು ಯಜ್ಞವೇದಿಯ ಕಡೆಗೆ ಹೋಗಿ ತನಗಾಗಿ ಪಾಪದ ಬಲಿಯ ಕರುವನ್ನು ವಧಿಸಿದನು.
ಯಾಜಕಕಾಂಡ 9 : 9 (KNV)
ಆಗ ಆರೋನನ ಕುಮಾರರು ಅವನ ಬಳಿಗೆ ರಕ್ತವನ್ನು ತಂದರು; ಅವನು ಆ ರಕ್ತದಲ್ಲಿ ತನ್ನ ಬೆರಳನ್ನು ಅದ್ದಿ ಅದನ್ನು ಯಜ್ಞವೇದಿಯ ಕೊಂಬು ಗಳಿಗೆ ಹಚ್ಚಿದನು; ಉಳಿದ ರಕ್ತವನ್ನು ಯಜ್ಞವೇದಿಯ ಅಡಿಯಲ್ಲಿ ಹೊಯ್ದನು.
ಯಾಜಕಕಾಂಡ 9 : 10 (KNV)
ಆದರೆ ಪಾಪದ ಬಲಿಯ ಕೊಬ್ಬು, ಮೂತ್ರಜನಕಾಂಗಗಳು ಕಲಿಜದ ಮೇಲಿನ ಪೊರೆ ಇವುಗಳನ್ನು ಕರ್ತನು ಮೋಶೆಗೆ ಆಜ್ಞಾಪಿಸಿ ದ್ದಂತೆಯೇ ಅವನು ಯಜ್ಞವೇದಿಯ ಮೇಲೆ ಸುಟ್ಟನು.
ಯಾಜಕಕಾಂಡ 9 : 11 (KNV)
ಮಾಂಸವನ್ನೂ ಚರ್ಮವನ್ನೂ ಅವನು ಪಾಳೆಯದ ಹೊರಗೆ ಬೆಂಕಿಯಿಂದ ಸುಟ್ಟನು.
ಯಾಜಕಕಾಂಡ 9 : 12 (KNV)
ಅವನು ದಹನ ಬಲಿಯನ್ನು ವಧಿಸಿದಾಗ ಆರೋನನ ಕುಮಾರರು ಅವನಿಗೆ ರಕ್ತವನ್ನು ತಂದು ಕೊಟ್ಟರು, ಅದನ್ನು ಅವನು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಿದನು.
ಯಾಜಕಕಾಂಡ 9 : 13 (KNV)
ಅವರು ಅವನಿಗೆ ದಹನಬಲಿಯನ್ನೂ ಅವುಗಳ ತುಂಡುಗಳೊಂದಿಗೆ ತಲೆಯನ್ನೂ ತಂದುಕೊಡಲು ಅವನು ಅವುಗಳನ್ನು ಯಜ್ಞವೇದಿಯ ಮೇಲೆ ಸುಟ್ಟನು.
ಯಾಜಕಕಾಂಡ 9 : 14 (KNV)
ಅವನು ಕರುಳುಗಳನ್ನೂ ಕಾಲುಗಳನ್ನೂ ತೊಳೆದು ಅವುಗಳನ್ನು ಯಜ್ಞವೇದಿಯ ಮೇಲಿನ ದಹನಬಲಿಯ ಮೇಲೆ ಸುಟ್ಟನು.
ಯಾಜಕಕಾಂಡ 9 : 15 (KNV)
ಅವನು ಜನರ ಬಲಿಯನ್ನು ತಂದು, ಮೇಕೆಯನ್ನು ತೆಗೆದುಕೊಂಡು, ಜನರಿಗಾಗಿ ಪಾಪ ಬಲಿಯಾಗಿರು ವದನ್ನು ವಧಿಸಿ, ಮೊದಲನೆಯದರ ಹಾಗೆ ಪಾಪಕ್ಕಾಗಿ ಅದನ್ನು ಸಮರ್ಪಿಸಿದನು.
ಯಾಜಕಕಾಂಡ 9 : 16 (KNV)
ಅವನು ದಹನಬಲಿ ಯನ್ನು ತಂದು ಕ್ರಮದ ಪ್ರಕಾರವೇ ಅದನ್ನು ಸಮರ್ಪಿಸಿದನು.
ಯಾಜಕಕಾಂಡ 9 : 17 (KNV)
ಅವನು ಆಹಾರ ಸಮರ್ಪಣೆ ಯನ್ನು ತಂದು ಅದರಲ್ಲಿ ಒಂದು ಹಿಡಿ ತೆಗೆದುಕೊಂಡು ಯಜ್ಞವೇದಿಯ ಮೇಲೆ ಬೆಳಗಿನ ದಹನಬಲಿಯ ಪಕ್ಕದಲ್ಲಿ ಅದನ್ನು ಸುಟ್ಟನು.
ಯಾಜಕಕಾಂಡ 9 : 18 (KNV)
ಅವನು ಜನರಿಗಾಗಿ ಹೋರಿಯನ್ನೂ ಟಗರನ್ನೂ ಸಮಾಧಾನ ಬಲಿಗಳ ಯಜ್ಞಕ್ಕಾಗಿ ವಧಿಸಿದನು; ಆರೋನನ ಕುಮಾರರು ರಕ್ತವನ್ನು ಅವನ ಬಳಿಗೆ ತರಲು ಅವನು ಅದನ್ನು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಿದನು.
ಯಾಜಕಕಾಂಡ 9 : 19 (KNV)
ಹೋರಿ ಟಗರಿನ ಕೊಬ್ಬನ್ನೂ ಹಿಂಭಾಗವನ್ನೂ ಕರುಳುಗಳನ್ನು ಮುಚ್ಚುವ ಮೂತ್ರಜನಕಾಂಗಗಳನ್ನೂ ಕಲಿಜದ ಮೇಲಿರುವ ಪೊರೆಯನ್ನೂ
ಯಾಜಕಕಾಂಡ 9 : 20 (KNV)
ಅವರು ಎದೆ ಭಾಗಗಳ ಮೇಲೆ ಕೊಬ್ಬನ್ನು ಇಟ್ಟಾಗ ಅವನು ಯಜ್ಞ ವೇದಿಯ ಮೇಲೆ ಸುಟ್ಟನು.
ಯಾಜಕಕಾಂಡ 9 : 21 (KNV)
ಮೋಶೆಯು ಆಜ್ಞಾಪಿಸಿ ದಂತೆ ಆರೋನನು ಎದೆಯ ಭಾಗಗಳನ್ನು ಬಲಭುಜ ವನ್ನು ಆಡಿಸಿ ಕರ್ತನ ಮುಂದೆ ಸಮರ್ಪಣೆಗಾಗಿ ಆಡಿಸಿದನು.
ಯಾಜಕಕಾಂಡ 9 : 22 (KNV)
ಆರೋನನು ಜನರ ಕಡೆಗೆ ತನ್ನ ಕೈಗಳನ್ನು ಎತ್ತಿ ಅವರನ್ನು ಆಶೀರ್ವದಿಸಿ ಪಾಪದ ಬಲಿಯನ್ನೂ ದಹನಬಲಿಯನ್ನೂ ಸಮಾಧಾನದ ಬಲಿಗಳನ್ನೂ ಸಮರ್ಪಿಸಿದ ಮೇಲೆ ಇಳಿದು ಬಂದನು.
ಯಾಜಕಕಾಂಡ 9 : 23 (KNV)
ಮೋಶೆಯೂ ಆರೋನನೂ ಸಭೆಯ ಗುಡಾರದ ಒಳಗೆ ಹೋಗಿ ಹೊರಗೆ ಬಂದು ಜನರನ್ನು ಆಶೀರ್ವ ದಿಸಿದರು; ಆಗ ಕರ್ತನ ಮಹಿಮೆಯು ಜನರೆಲ್ಲರಿಗೂ ಕಾಣಿಸಿತು.ಆಗ ಅಲ್ಲಿ ಕರ್ತನ ಸನ್ನಿಧಿಯಿಂದ ಬೆಂಕಿಯು ಬಂದು ಯಜ್ಞವೇದಿಯ ಮೇಲಿದ್ದ ದಹನ ಬಲಿಯನ್ನೂ ಕೊಬ್ಬನ್ನೂ ದಹಿಸಿಬಿಟ್ಟಿತು. ಜನರೆಲ್ಲರೂ ಇದನ್ನು ನೋಡಿ ಆರ್ಭಟಿಸಿ ಅಡ್ಡಬಿದ್ದರು.
ಯಾಜಕಕಾಂಡ 9 : 24 (KNV)
ಆಗ ಅಲ್ಲಿ ಕರ್ತನ ಸನ್ನಿಧಿಯಿಂದ ಬೆಂಕಿಯು ಬಂದು ಯಜ್ಞವೇದಿಯ ಮೇಲಿದ್ದ ದಹನ ಬಲಿಯನ್ನೂ ಕೊಬ್ಬನ್ನೂ ದಹಿಸಿಬಿಟ್ಟಿತು. ಜನರೆಲ್ಲರೂ ಇದನ್ನು ನೋಡಿ ಆರ್ಭಟಿಸಿ ಅಡ್ಡಬಿದ್ದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24

BG:

Opacity:

Color:


Size:


Font: