ಯಾಜಕಕಾಂಡ 18 : 1 (KNV)
ತರುವಾಯ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
ಯಾಜಕಕಾಂಡ 18 : 2 (KNV)
ನೀನು ಇಸ್ರಾಯೇಲ್‌ ಮಕ್ಕಳೊಂದಿಗೆ ಮಾತನಾಡಿ ಹೀಗೆ ಹೇಳಬೇಕು--ನಿಮ್ಮ ದೇವರಾಗಿರುವ ಕರ್ತನು ನಾನೇ.
ಯಾಜಕಕಾಂಡ 18 : 3 (KNV)
ನೀವು ವಾಸವಾಗಿದ್ದ ಐಗುಪ್ತದೇಶದ ಕೃತ್ಯಗಳಂತೆ ಮಾಡಬಾರದು; ನಾನು ನಿಮ್ಮನ್ನು ತರುವದಕ್ಕಿರುವ ಕಾನಾನ್‌ದೇಶದ ಕೃತ್ಯಗಳಂತೆ ನೀವು ಮಾಡಬಾರದು ಇಲ್ಲವೆ ನೀವು ಅವರ ನಿಯಮಗಳಿಗನುಸಾರವೂ ನಡೆ ಯಬಾರದು.
ಯಾಜಕಕಾಂಡ 18 : 4 (KNV)
ನೀವು ನನ್ನ ನಿರ್ಣಯಗಳನ್ನು ಕೈಕೊಂಡು ಅವುಗಳಲ್ಲಿ ನಡೆಯುವ ಹಾಗೆ ನನ್ನ ಕಟ್ಟಳೆಗಳಂತೆ ನಡೆಯಬೇಕು; ನಿಮ್ಮ ದೇವರಾಗಿರುವ ಕರ್ತನು ನಾನೇ.
ಯಾಜಕಕಾಂಡ 18 : 5 (KNV)
ಆದದರಿಂದ ನೀವು ನನ್ನ ನಿಯಮಗಳನ್ನೂ ನಿರ್ಣಯಗಳನ್ನೂ ಕೈಕೊಳ್ಳಿರಿ. ಒಬ್ಬನು ಅವುಗಳನ್ನು ಮಾಡಿದರೆ ಅವನು ಅವುಗಳಲ್ಲಿ ಜೀವಿಸುವನು; ನಾನೇ ಕರ್ತನು.
ಯಾಜಕಕಾಂಡ 18 : 6 (KNV)
ನಿಮ್ಮಲ್ಲಿ ಯಾವನಾದರೂ ತನ್ನ ಹತ್ತಿರ ಸಂಬಂಧಿಯ ಬೆತ್ತಲೆತನವನ್ನು ಬಯಲು ಮಾಡುವದಕ್ಕೆ ಅವಳ ಸವಿಾಪಕ್ಕೆ ಹೋಗಬಾರದು; ನಾನೇ ಕರ್ತನು.
ಯಾಜಕಕಾಂಡ 18 : 7 (KNV)
ನಿನ್ನ ತಂದೆತಾಯಿಯ ಬೆತ್ತಲೆತನವನ್ನಾಗಲಿ ನೀನು ಕಾಣಿಸು ವಂತೆ ಮಾಡಬಾರದು; ಆಕೆಯು ನಿನ್ನ ತಾಯಿಯಾಗಿ ದ್ದಾಳೆ; ನೀನು ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು.
ಯಾಜಕಕಾಂಡ 18 : 8 (KNV)
ನಿನ್ನ ತಂದೆಯ ಹೆಂಡತಿಯ ಬೆತ್ತಲೆ ತನವನ್ನು ನೀನು ಕಾಣುವಂತೆ ಮಾಡಬಾರದು; ಅದು ನಿನ್ನ ತಂದೆಯ ಬೆತ್ತಲೆತನ.
ಯಾಜಕಕಾಂಡ 18 : 9 (KNV)
ನಿನ್ನ ಸಹೋದರಿಯ ಇಲ್ಲವೆ ನಿನ್ನ ತಂದೆಯ ಮಗಳ, ಅಂದರೆ ಅವಳು ಮನೆಯಲ್ಲಿ ಹುಟ್ಟಿದವಳಾಗಿರಲಿ ಹೊರಗೆ ಹುಟ್ಟಿದ ವಳಾಗಿರಲಿ ಅವರ ಬೆತ್ತಲೆತನವನ್ನು ಕಾಣುವಂತೆ ನೀನು ಮಾಡಬಾರದು.
ಯಾಜಕಕಾಂಡ 18 : 10 (KNV)
ನಿನ್ನ ಮಗನ ಮಗಳ ಇಲ್ಲವೆ ನಿನ್ನ ಮಗಳ ಮಗಳ ಬೆತ್ತಲೆತನವನ್ನು ನೀನು ಕಾಣುವಂತೆ ಮಾಡಬಾರದು.
ಯಾಜಕಕಾಂಡ 18 : 11 (KNV)
ಅವನ ಬೆತ್ತಲೆತನವು ನಿನ್ನ ಸ್ವಂತ ಬೆತ್ತಲೆತನವಾಗಿದೆ. ನಿನ್ನ ತಂದೆಗೆ ಹುಟ್ಟಿ ದಂಥ ನಿನ್ನ ತಂದೆಯ ಮಗಳು ನಿನಗೆ ಸಹೋದರಿ ಯಾಗಿರುವದರಿಂದ ನೀನು ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು.
ಯಾಜಕಕಾಂಡ 18 : 12 (KNV)
ನಿನ್ನ ತಂದೆಯ ಸಹೋದರಿಯ ಬೆತ್ತಲೆತನವನ್ನು ನೀನು ಕಾಣುವಂತೆ ಮಾಡಬಾರದು; ಅವಳು ನಿನ್ನ ತಂದೆಗೆ ಹತ್ತಿರ ಸಂಬಂಧಿ ಯಾಗಿದ್ದಾಳೆ.
ಯಾಜಕಕಾಂಡ 18 : 13 (KNV)
ನಿನ್ನ ತಾಯಿಯ ಸಹೋದರಿಯ ಬೆತ್ತಲೆತನವನ್ನು ನೀನು ಕಾಣುವಂತೆ ಮಾಡಬಾರದು; ಅವಳು ನಿನ್ನ ತಾಯಿಗೆ ಹತ್ತಿರದ ಸಂಬಂಧಿಯಾಗಿ ದ್ದಾಳೆ.
ಯಾಜಕಕಾಂಡ 18 : 14 (KNV)
ನೀನು ನಿನ್ನ ತಂದೆಯ ಸಹೋದರನ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು. ನೀನು ಅವನ ಹೆಂಡತಿಯ ಬಳಿಗೆ ಹೋಗಬಾರದು; ಅವಳು ನಿನಗೆ ದೊಡ್ಡ ತಾಯಿ (ಚಿಕ್ಕತಾಯಿ).
ಯಾಜಕಕಾಂಡ 18 : 15 (KNV)
ನಿನ್ನ ಸೊಸೆಯ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು; ಅವಳು ನಿನ್ನ ಮಗನ ಹೆಂಡತಿ; ನೀನು ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು.
ಯಾಜಕಕಾಂಡ 18 : 16 (KNV)
ನೀನು ನಿನ್ನ ಸಹೋ ದರನ ಹೆಂಡತಿಯ ಬೆತ್ತಲೆತನವನ್ನು ಕಾಣುವಂತೆ ಮಾಡ ಬಾರದು; ಅದು ನಿನ್ನ ಸಹೋದರನ ಬೆತ್ತಲೆತನ.
ಯಾಜಕಕಾಂಡ 18 : 17 (KNV)
ನೀನು ಒಬ್ಬ ಸ್ತ್ರೀಯ ಮತ್ತು ಅವಳ ಮಗಳ ಬೆತ್ತಲೆ ತನವನ್ನು ಕಾಣುವಂತೆ ಮಾಡಬಾರದು ಇಲ್ಲವೆ ಅವಳ ಮಗನ ಮಗಳ ಅಥವಾ ಮಗಳ ಮಗಳ ಬೆತ್ತಲೆತನ ವನ್ನು ಕಾಣುವಂತೆ ಮಾಡಬಾರದು. ಅವರು ಅವಳ ಹತ್ತಿರದ ಸಂಬಂಧಿಯಾಗಿದ್ದಾರೆ. ಅದು ದುಷ್ಟತನ ವಾಗಿದೆ.
ಯಾಜಕಕಾಂಡ 18 : 18 (KNV)
ಇಲ್ಲವೆ ಅವಳಿಗೆ ವೈರಿಯಾಗುವ ಹಾಗೆ ಅವಳ ಸಹೋದರಿಯನ್ನು ಹೆಂಡತಿಯಾಗಿ ತೆಗೆದು ಕೊಳ್ಳಬೇಡ. ಒಬ್ಬಳು ಜೀವದಿಂದ ಇರುವಾಗ ಮತ್ತೊ ಬ್ಬಳ ಬೆತ್ತಲೆತನವನ್ನು ಕಾಣುವಂತೆ ಮಾಡಬೇಡ.
ಯಾಜಕಕಾಂಡ 18 : 19 (KNV)
ಇದು ಮಾತ್ರವಲ್ಲದೆ ಒಬ್ಬಳು ತನ್ನ ಅಶುದ್ಧತ್ವದ ನಿಮಿತ್ತವಾಗಿ ಪ್ರತ್ಯೇಕಿಸಲ್ಪಟ್ಟಾಗ ನೀನು ಆ ಸ್ತ್ರೀಯ ಬೆತ್ತಲೆತನವನ್ನು ನೋಡುವಂತೆ ಅವಳ ಹತ್ತಿರ ಹೋಗ ಬೇಡ.
ಯಾಜಕಕಾಂಡ 18 : 20 (KNV)
ಇದಲ್ಲದೆ ಅವಳಿಂದ ನಿನ್ನನ್ನು ಹೊಲೆಮಾಡಿ ಕೊಳ್ಳದಂತೆ ನಿನ್ನ ನೆರೆಯವನ ಹೆಂಡತಿಯೊಂದಿಗೆ ನೀನು ಸಂಗಮಿಸಬೇಡ.
ಯಾಜಕಕಾಂಡ 18 : 21 (KNV)
ನಿನ್ನ ದೇವರ ಹೆಸರನ್ನು ಅಶುದ್ಧಪಡಿಸುವಂತೆ ನಿನ್ನ ಸಂತಾನವನ್ನು ಮೋಲೆಕನಿಗೆ ಬೆಂಕಿಯ ಮೂಲಕ ಅರ್ಪಿಸಬಾರದು; ನಾನೇ ಕರ್ತನು.
ಯಾಜಕಕಾಂಡ 18 : 22 (KNV)
ಸ್ತ್ರೀಯೊಂದಿಗೆ ಮಲಗಿಕೊಳ್ಳುವಂತೆ ಪುರು ಷನೊಂದಿಗೆ ಮಲಗಬಾರದು; ಅದು ಅಸಹ್ಯವಾದದ್ದು.
ಯಾಜಕಕಾಂಡ 18 : 23 (KNV)
ಇದಲ್ಲದೆ ಪಶುವಿನೊಂದಿಗೆ ನೀನು ಮಲಗಿ ನಿನ್ನನ್ನು ಹೊಲೆಮಾಡಿಕೊಳ್ಳಬಾರದು; ಯಾವ ಸ್ತ್ರೀಯೂ ಅದರಿಂದ ಸಂಗಮಿಸಿಕೊಳ್ಳುವದಕ್ಕೆ ಪಶುವಿನ ಮುಂದೆ ನಿಲ್ಲಬಾರದು; ಅದು ಗಲಿಬಿಲಿಯಾದದ್ದು.
ಯಾಜಕಕಾಂಡ 18 : 24 (KNV)
ನೀವು ಈ ಯಾವ ವಿಷಯಗಳಲ್ಲಿಯೂ ನಿಮ್ಮನ್ನು ಹೊಲೆ ಮಾಡಿಕೊಳ್ಳಬಾರದು. ನಿಮ್ಮ ಮುಂದೆ ನಾನು ಹೊರಡಿಸಿಬಿಟ್ಟ ಜನಾಂಗಗಳು ಇವೆಲ್ಲವುಗಳಲ್ಲಿ ಹೊಲೆಯಾಗಿವೆ.
ಯಾಜಕಕಾಂಡ 18 : 25 (KNV)
ದೇಶವೂ ಹೊಲೆಯಾಗಿದೆ. ಆದದರಿಂದ ಅದರ ಮೇಲಿರುವ ಅಕ್ರಮವನ್ನು ನಾನು ದಂಡಿಸುವೆನು, ಆಗ ದೇಶವು ತಾನೇ ತನ್ನೊಳಗಿನ ನಿವಾಸಿಗಳನ್ನು ಕಾರಿಬಿಡುವದು.
ಯಾಜಕಕಾಂಡ 18 : 26 (KNV)
ಆದದರಿಂದ ನೀವು ನನ್ನ ನಿಯಮಗಳನ್ನು ನಿರ್ಣಯಗಳನ್ನು ಕೈಕೊಳ್ಳಬೇಕು. ನಿಮ್ಮ ದೇಶದವರಲ್ಲಿ ಯಾವನೇ ಆಗಲಿ ಇಲ್ಲವೆ ನಿಮ್ಮೊಳಗೆ ಪ್ರವಾಸಿಯಾಗಿದ್ದ ಪರಕೀಯನಾಗಲಿ ಈ ಅಸಹ್ಯವಾದವುಗಳಲ್ಲಿ ಒಂದನ್ನಾದರೂ ಮಾಡ ಬಾರದು.
ಯಾಜಕಕಾಂಡ 18 : 27 (KNV)
(ನಿಮ್ಮೆದುರಿನಲ್ಲಿದ್ದ ಆ ದೇಶದವರು ಈ ಎಲ್ಲ ಅಸಹ್ಯವಾದವುಗಳನ್ನು ಮಾಡಿದರು, ಮತ್ತು ದೇಶವೂ ಹೊಲೆಯಾಯಿತು;)
ಯಾಜಕಕಾಂಡ 18 : 28 (KNV)
ನೀವೂ ಅದನ್ನು ಅಶುದ್ಧಮಾಡಿದರೆ ಅದು ನಿಮ್ಮ ಮುಂದಿದ್ದ ಜನಾಂಗಗಳವರನ್ನು ಕಾರಿದಂತೆ ನಿಮ್ಮನ್ನೂ ಕಾರುವದು.
ಯಾಜಕಕಾಂಡ 18 : 29 (KNV)
ಯಾವನಾದರೂ ಈ ಅಸಹ್ಯವಾದವುಗಳಲ್ಲಿ ಯಾವ ದನ್ನಾದರೂ ಮಾಡಿದರೆ ಅವುಗಳನ್ನು ಮಾಡುವ ಮನುಷ್ಯರನ್ನು ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.ಆದದರಿಂದ ನಿಮಗಿಂತ ಮೊದಲಿನವರು ಮಾಡಿದಂತೆ ಅಸಹ್ಯವಾದ ಆಚರಣೆ ಗಳಲ್ಲಿ ಒಂದನ್ನಾದರೂ ನೀವು ಮಾಡದಂತೆ ಮತ್ತು ಅವುಗಳಲ್ಲಿ ನಿಮ್ಮನ್ನು ಹೊಲೆಮಾಡಿಕೊಳ್ಳದಂತೆ ನೀವು ನನ್ನ ಕಟ್ಟಳೆಗಳನ್ನು ಕೈಕೊಳ್ಳಬೇಕು; ನಿಮ್ಮ ದೇವರಾಗಿರುವ ಕರ್ತನು ನಾನೇ.
ಯಾಜಕಕಾಂಡ 18 : 30 (KNV)
ಆದದರಿಂದ ನಿಮಗಿಂತ ಮೊದಲಿನವರು ಮಾಡಿದಂತೆ ಅಸಹ್ಯವಾದ ಆಚರಣೆ ಗಳಲ್ಲಿ ಒಂದನ್ನಾದರೂ ನೀವು ಮಾಡದಂತೆ ಮತ್ತು ಅವುಗಳಲ್ಲಿ ನಿಮ್ಮನ್ನು ಹೊಲೆಮಾಡಿಕೊಳ್ಳದಂತೆ ನೀವು ನನ್ನ ಕಟ್ಟಳೆಗಳನ್ನು ಕೈಕೊಳ್ಳಬೇಕು; ನಿಮ್ಮ ದೇವರಾಗಿರುವ ಕರ್ತನು ನಾನೇ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30

BG:

Opacity:

Color:


Size:


Font: