ಪ್ರಲಾಪಗಳು 5 : 1 (KNV)
ಓ ಕರ್ತನೇ, ನನ್ನ ಮೇಲೆ ಬಂದ ದುರ್ಗತಿಯನ್ನು ಜ್ಞಾಪಕಮಾಡಿಕೋ ಪರಿಗಣಿಸು, ನಮ್ಮ ನಿಂದೆಯನ್ನು ನೋಡು.
ಪ್ರಲಾಪಗಳು 5 : 2 (KNV)
ನಮ್ಮ ಸ್ವಾಸ್ತ್ಯವು ಅಪರಿಚಿತರಿಗೂ ನಮ್ಮ ಮನೆಗಳು ಅನ್ಯರಿಗೂ ವಶ ವಾದವು.
ಪ್ರಲಾಪಗಳು 5 : 3 (KNV)
ನಾವು ಅನಾಥರು ತಂದೆ ಇಲ್ಲದವರು, ನಮ್ಮ ತಾಯಿಂದಿರು ವಿಧವೆಯರು.
ಪ್ರಲಾಪಗಳು 5 : 4 (KNV)
ನಾವು ನಮ್ಮ ನೀರನ್ನು ಹಣ ಕೊಟ್ಟು ಕುಡಿದಿದ್ದೇವೆ, ನಮ್ಮ ಸೌದೆಯು ನಮಗೆ ಮಾರಲ್ಪಟ್ಟಿದೆ.
ಪ್ರಲಾಪಗಳು 5 : 5 (KNV)
ನಮ್ಮ ಕುತ್ತಿಗೆಗಳು ಹಿಂಸೆಗೊಳ ಗಾದವು; ನಾವು ವಿಶ್ರಾಂತಿಯಿಲ್ಲದೆ ಕಷ್ಟಪಡುತ್ತೇವೆ.
ಪ್ರಲಾಪಗಳು 5 : 6 (KNV)
ರೊಟ್ಟಿಯಿಂದ ತೃಪ್ತಿಪಡುವದಕ್ಕಾಗಿ ನಮ್ಮ ಕೈಯನ್ನು ಐಗುಪ್ತ್ಯರಿಗೂ ಅಶ್ಶೂರ್ಯರಿಗೂ ಕೊಟ್ಟಿದ್ದೇವೆ.
ಪ್ರಲಾಪಗಳು 5 : 7 (KNV)
ನಮ್ಮ ತಂದೆಗಳು ಪಾಪ ಮಾಡಿ ಇಲ್ಲದೆ ಹೋದರು; ನಾವು ಅವರ ಅಕ್ರಮಗಳನ್ನು ಹೊರುತ್ತೇವೆ.
ಪ್ರಲಾಪಗಳು 5 : 8 (KNV)
ಆಳುಗಳು ನಮ್ಮ ಮೇಲೆ ಆಳಿದ್ದಾರೆ; ಯಾರೂ ಅವರ ಕೈಯಿಂದ ನಮ್ಮನ್ನು ತಪ್ಪಿಸುವದಿಲ್ಲ.
ಪ್ರಲಾಪಗಳು 5 : 9 (KNV)
ಅಡವಿ ಕತ್ತಿಯ ನಿಮಿತ್ತ ಪ್ರಾಣ ಸಂಕಟದಿಂದ ನಮಗೆ ರೊಟ್ಟಿ ಸಿಕ್ಕಿದೆ.
ಪ್ರಲಾಪಗಳು 5 : 10 (KNV)
ಭಯಂಕರವಾದ ಕ್ಷಾಮದಿಂದ ನಮ್ಮ ಚರ್ಮ ಒಲೆಯ ಹಾಗೆ ಕಪ್ಪಾಗಿದೆ.
ಪ್ರಲಾಪಗಳು 5 : 11 (KNV)
ಅವರು ಚೀಯೋನಿನಲ್ಲಿ ಹೆಂಗಸರನ್ನೂ ಯೆಹೂದದ ನಗರಗಳಲ್ಲಿ ಕನ್ಯೆಯರನ್ನೂ ಕೆಡಿಸಿದರು.
ಪ್ರಲಾಪಗಳು 5 : 12 (KNV)
ಪ್ರಭುಗಳು ಅವರ ಕೈಯಿಂದ ಗಲ್ಲಿಗೇರಿಸಲ್ಪಟ್ಟರು; ಹಿರಿಯರ ಮುಖಗಳು ಗೌರವಿ ಸಲ್ಪಡಲಿಲ್ಲ.
ಪ್ರಲಾಪಗಳು 5 : 13 (KNV)
ಅವರು ಯೌವನಸ್ಥರನ್ನು ಅರೆಯು ವದಕ್ಕೆ ತೆಗೆದುಕೊಂಡರು; ಮಕ್ಕಳು ಕಟ್ಟಿಗೆಯ ಕೆಳಗೆ ಬಿದ್ದರು.
ಪ್ರಲಾಪಗಳು 5 : 14 (KNV)
ಹಿರಿಯರು ಬಾಗಿಲನ್ನು ಪ್ರವೇಶಿಸುವದೂ ಯೌವನಸ್ಥರು ಸಂಗೀತವನ್ನು ಹಾಡುವದೂ ನಿಂತು ಹೋಯಿತು.
ಪ್ರಲಾಪಗಳು 5 : 15 (KNV)
ನಮ್ಮ ಹೃದಯದ ಸಂತೋಷವು ನಿಂತುಹೋಯಿತು; ನಮ್ಮ ನಾಟ್ಯವು ದುಃಖದ ಕಡೆಗೆ ತಿರುಗಿತು.
ಪ್ರಲಾಪಗಳು 5 : 16 (KNV)
ಕಿರೀಟವು ನಮ್ಮ ತಲೆಯ ಮೇಲಿಂದ ಬಿದ್ದು ಹೋಯಿತು; ನಮಗೆ ಅಯ್ಯೋ, ನಾವು ಪಾಪಮಾಡಿದ್ದೇವೆ.
ಪ್ರಲಾಪಗಳು 5 : 17 (KNV)
ಇದಕ್ಕಾಗಿ ನಮ್ಮ ಹೃದಯವು ದುರ್ಬಲವಾಗಿದೆ; ಇವುಗಳಿಂದ ನಮ್ಮ ಕಣ್ಣುಗಳು ಮೊಬ್ಬಾಗಿವೆ.
ಪ್ರಲಾಪಗಳು 5 : 18 (KNV)
ಚೀಯೋನ್ ಪರ್ವತವು ಹಾಳಾಗಿರು ವದರಿಂದಲೇ ನರಿಗಳು ಅವುಗಳ ಮೇಲೆ ತಿರುಗಾಡು ವವು.
ಪ್ರಲಾಪಗಳು 5 : 19 (KNV)
ಓ ಕರ್ತನೇ, ನೀನು ಎಂದೆಂದಿಗೂ ಇರುತ್ತೀ. ನಿನ್ನ ಸಿಂಹಾಸನವು ತಲತಲಾಂತರಗಳ ವರೆಗೂ ಇರು ವದು.
ಪ್ರಲಾಪಗಳು 5 : 20 (KNV)
ಆದಕಾರಣ ನೀನು ನಮ್ಮನ್ನು ಮರೆಯು ವದೇಕೆ? ಯಾಕೆ ನಮ್ಮನ್ನು ಇಷ್ಟು ಕಾಲ ಕೈಬಿಟ್ಟಿದ್ದೀ?
ಪ್ರಲಾಪಗಳು 5 : 21 (KNV)
ಕರ್ತನೇ, ನಮ್ಮನ್ನು ನಿನ್ನ ಕಡೆಗೆ ತಿರುಗಿಸು; ಆಗ ನಾವು ತಿರುಗಿಕೊಳ್ಳುವೆವು, ಹಳೆಯ ದಿನಗಳ ಹಾಗೆ ನಮ್ಮ ದಿನಗಳನ್ನು ನೂತನಮಾಡು.
ಪ್ರಲಾಪಗಳು 5 : 22 (KNV)
ಆದರೆ ನಮ್ಮನ್ನು ಪೂರ್ಣವಾಗಿ ತಳ್ಳಿಬಿಟ್ಟಿರುವಿ; ನಮಗೆ ವಿರುದ್ಧವಾಗಿ ನೀನು ಬಹಳ ಕೋಪಗೊಂಡಿರುವಿ.

1 2 3 4 5 6 7 8 9 10 11 12 13 14 15 16 17 18 19 20 21 22