ಪ್ರಲಾಪಗಳು 1 : 1 (KNV)
ಜನಭರಿತವಾಗಿದ್ದ ನಗರಿಯು ಹೇಗೆ ಒಂಟಿಯಾಗಿ ಕೂತುಕೊಂಡಿದ್ದಾಳೆ! ಅವಳು ಹೇಗೆ ವಿಧವೆಯಾದಳು! ಜನಾಂಗಗಳಲ್ಲಿ ಶ್ರೇಷ್ಠಳಾದವಳೂ ಸಂಸ್ಥಾನಗಳಲ್ಲಿ ರಾಜಕುಮಾರಿಯಾಗಿದ್ದವಳೂ ಹೇಗೆ ಕಪ್ಪವನ್ನು ಕೊಡುವಂಥವಳಾದಳು!
ಪ್ರಲಾಪಗಳು 1 : 2 (KNV)
ಅವಳು ರಾತ್ರಿಯಲ್ಲಿ ಯಾತನೆಗೊಂಡು ಅಳುತ್ತಾಳೆ. ಆಕೆಯ ಕಣ್ಣೀರು ಕೆನ್ನೆಗಳ ಮೇಲಿದೆ; ಎಲ್ಲಾ ಪ್ರಿಯರಲ್ಲಿ ಆಕೆಯನ್ನು ಆದರಿಸುವವನು ಒಬ್ಬನೂ ಇಲ್ಲ. ಆಕೆಯ ಸ್ನೇಹಿತರೆಲ್ಲರೂ ವಂಚನೆಮಾಡಿ ಶತ್ರುಗಳಾದರು.
ಪ್ರಲಾಪಗಳು 1 : 3 (KNV)
ಯೆಹೂದವು ಸಂಕಟದ ನಿಮಿತ್ತವೂ ಘೋರವಾದ ದಾಸ್ಯದ ನಿಮಿತ್ತವೂ ಸೆರೆಯಾಗಿ ಹೋಯಿತು; ಆಕೆಯು ಅನ್ಯಜನಾಂಗಗಳೊಳಗೆ ವಾಸಮಾಡುವವಳಾಗಿ ವಿಶ್ರಾಂತಿಯನ್ನು ಕಾಣಳು; ಅವಳನ್ನು ಹಿಂಸಿಸುವವ ರೆಲ್ಲರೂ ಅವಳನ್ನು ಇಕ್ಕಟ್ಟಿನ ಮಧ್ಯದಲ್ಲಿ ಸಿಕ್ಕಿಸಿರುತ್ತಾರೆ.
ಪ್ರಲಾಪಗಳು 1 : 4 (KNV)
ಚೀಯೋನಿನ ಮಾರ್ಗಗಳು ದುಃಖಿಸುತ್ತವೆ, ಯಾಕಂದರೆ ಪವಿತ್ರ ಹಬ್ಬಗಳಿಗೆ ಯಾರೂ ಬರಲಿಲ್ಲ; ಆಕೆಯ ಎಲ್ಲಾ ಬಾಗಿಲುಗಳು ಹಾಳುಬಿದ್ದಿವೆ. ಯಾಜಕರು ನಿಟ್ಟುಸಿರಿಡುತ್ತಾರೆ, ಕನ್ಯೆಯರು ಸಂಕಟಪಡುತ್ತಾರೆ. ಆಕೆಯು ವ್ಯಥೆಯಲ್ಲಿದ್ದಾಳೆ.
ಪ್ರಲಾಪಗಳು 1 : 5 (KNV)
ಆಕೆಯ ವೈರಿಗಳು ಪ್ರಮುಖರಾದರು, ಶತ್ರುಗಳು ಅಭಿವೃದ್ಧಿಯಾಗಿ ದ್ದಾರೆ; ಅನೇಕ ಅಪರಾಧಗಳ ನಿಮಿತ್ತ ಕರ್ತನು ಆಕೆಯನ್ನು ಸಂಕಟಪಡಿಸಿದ್ದಾನೆ. ಆಕೆಯ ಮಕ್ಕಳು ಶತ್ರು ವಿನ ಮುಂದೆ ಸೆರೆಗೆ ಹೋಗಿದ್ದಾರೆ.
ಪ್ರಲಾಪಗಳು 1 : 6 (KNV)
ಚೀಯೋನಿನ ಮಗಳ ಎಲ್ಲಾ ಸೌಂದರ್ಯವು ಅವಳನ್ನು ಬಿಟ್ಟು ಹೋಯಿತು. ಅವಳ ಪ್ರಧಾನರು ಮೇವು ಕಾಣದ ಜಿಂಕೆಗಳ ಹಾಗಾದರು. ಅವರು ಹಿಂದಟ್ಟುವವನ ಮುಂದೆ ತ್ರಾಣವಿಲ್ಲದವರ ಹಾಗೆ ಹೋದರು.
ಪ್ರಲಾಪಗಳು 1 : 7 (KNV)
ಯೆರೂಸಲೇಮು ಕಷ್ಟ ಮತ್ತು ಸಂಕಟದಲ್ಲಿದ್ದಾಗ ಪೂರ್ವದಿನಗಳಲ್ಲಿ ತನಗಿದ್ದ ರಮ್ಯವಾದವುಗಳೆಲ್ಲವನ್ನು ಜ್ಞಾಪಕಮಾಡಿಕೊಂಡಿದ್ದಾಳೆ. ಆಕೆಯ ಜನರು ಶತ್ರುವಿನ ಕೈಯಲ್ಲಿ ಬಿದ್ದಾಗ ಯಾವನೂ ಸಹಾಯಮಾಡಲಿಲ್ಲ. ವೈರಿಗಳು ಅವಳನ್ನು ನೋಡಿ ಅವಳ ಸಬ್ಬತ್ತುಗಳ ವಿಷಯದಲ್ಲಿ ಅಪಹಾಸ್ಯಮಾಡಿದರು.
ಪ್ರಲಾಪಗಳು 1 : 8 (KNV)
ಯೆರೂಸ ಲೇಮು ಘೋರವಾಗಿ ಪಾಪಮಾಡಿದೆ; ಆದದರಿಂದ ಅವಳು ತೆಗೆದುಹಾಕಲ್ಪಟ್ಟಿದ್ದಾಳೆ; ಅವಳನ್ನು ಸನ್ಮಾನಿಸಿ ದವರೆಲ್ಲರೂ ಅವಳನ್ನು ಹೀನೈಸುತ್ತಾರೆ; ಅವರು ಅವಳ ಬೆತ್ತಲೆತನವನ್ನು ನೋಡಿದ್ದಾರೆ; ಹೌದು, ಅವಳು ನಿಟ್ಟುಸಿರಿಟ್ಟು ಹಿಂದಕ್ಕೆ ತಿರುಗುತ್ತಾಳೆ.
ಪ್ರಲಾಪಗಳು 1 : 9 (KNV)
ಅವಳ ನೆರಿಗೆಯು ಅಶುದ್ಧವಾಗಿದೆ; ಅವಳು ತನ್ನ ಅಂತ್ಯವನ್ನು ಜ್ಞಾಪಕ ಮಾಡಿಕೊಳ್ಳುವದಿಲ್ಲ; ಆದುದರಿಂದ ಅವಳು ಆಶ್ಚರ್ಯ ಕರವಾಗಿ ಇಳಿದು ಬಂದಳು; ಅವಳನ್ನು ಆದರಿಸುವವರು ಯಾರೂ ಇಲ್ಲ. ಓ ಕರ್ತನೇ, ನನ್ನ ಸಂಕಟವನ್ನು ನೋಡು, ಶತ್ರುವು ತನ್ನನ್ನು ತಾನೇ ಹೆಚ್ಚಿಸಿಕೊಂಡಿದ್ದಾನೆ.
ಪ್ರಲಾಪಗಳು 1 : 10 (KNV)
ವೈರಿಯು ಆಕೆಯ ಎಲ್ಲಾ ರಮ್ಯವಾದ ವಸ್ತುಗಳ ಮೇಲೆ ತನ್ನ ಕೈ ಚಾಚಿದ್ದಾನೆ. ನಿನ್ನ ಸಭೆಯಲ್ಲಿ ಸೇರ ಬಾರದೆಂದು ನೀನು ಆಜ್ಞಾಪಿಸಿದ ಅನ್ಯ ಜನಾಂಗಗಳು ತನ್ನ ಪರಿಶುದ್ಧ ಸ್ಥಳದಲ್ಲಿ ಸೇರಿರುವದನ್ನು ನೋಡಿದ್ದಾಳೆ.
ಪ್ರಲಾಪಗಳು 1 : 11 (KNV)
ಅವಳ ಜನರೆಲ್ಲಾ ನಿಟ್ಟುಸಿರು ಬಿಡುತ್ತಾರೆ. ಅವರು ರೊಟ್ಟಿಯನ್ನು ಹುಡುಕುತ್ತಾರೆ. ಅವರು ಪ್ರಾಣವನ್ನು ಉಳಿಸಿಕೊಳ್ಳಲು ತಮ್ಮ ರಮ್ಯವಾದವುಗಳನ್ನು ಆಹಾರ ಕ್ಕಾಗಿ ಕೊಟ್ಟಿದ್ದಾರೆ. ಓ ಕರ್ತನೇ, ನೋಡು, ಲಕ್ಷಿಸು; ನಾನು ಭ್ರಷ್ಠಳಾದೆನು.
ಪ್ರಲಾಪಗಳು 1 : 12 (KNV)
ಹಾದು ಹೋಗುವ ವರೆಲ್ಲರೇ, ಇದು ನಿಮಗೆ ಏನೂ ಅಲ್ಲವೋ? ಇಗೋ, ಕರ್ತನ ಕೋಪ ಉರಿಯುವ ದಿನದಲ್ಲಿ ನನ್ನನ್ನು ಸಂಕಟಪಡಿಸಿದ ನನ್ನ ದುಃಖದ ಹಾಗೆ ಬೇರೆ ಯಾವ ದುಃಖವಾದರೂ ಇದ್ದರೆ ನೋಡಿರಿ.
ಪ್ರಲಾಪಗಳು 1 : 13 (KNV)
ಆತನು ಮೇಲಿನಿಂದ ನನ್ನ ಎಲುಬುಗಳಿಗೆ ಬೆಂಕಿಯನ್ನು ಕಳುಹಿಸಿ ದ್ದಾನೆ, ಅದು ಅವುಗಳನ್ನು ವಶಪಡಿಸಿಕೊಂಡಿದೆ; ನನ್ನ ಪಾದದ ಮೇಲೆ ಒಂದು ಬಲೆಯನ್ನು ಬೀಸಿ ನನ್ನನ್ನು ಹಿಂದಕ್ಕೆ ತಿರುಗಿಸಿದ್ದಾನೆ; ನನ್ನನ್ನು ದಿನವೆಲ್ಲಾ ಹಾಳಾಗಿಯೂ ಮೂರ್ಛೆ ಹೋಗುವಂತೆಯೂ ಮಾಡಿದ್ದಾನೆ.
ಪ್ರಲಾಪಗಳು 1 : 14 (KNV)
ನನ್ನ ಅಕ್ರಮಗಳ ನೊಗವು ಆತನ ಕೈಯಿಂದ ಕಟ್ಟಲ್ಪಟ್ಟಿದೆ; ಅವು ಹೆಣೆಯಲ್ಪಟ್ಟಿವೆ; ನನ್ನ ಕುತ್ತಿಗೆಯನ್ನು ಸುತ್ತಿಕೊಂಡಿವೆ; ಮೇಲೆ ಬರುತ್ತವೆ. ಆತನು ನನ್ನ ಶಕ್ತಿಯು ಕುಗ್ಗುವ ಹಾಗೆ ಮಾಡಿದನು, ಕರ್ತನು ನನ್ನನ್ನು ಅವರ ಕೈಗಳಿಗೆ ಒಪ್ಪಿಸಿ ಅವರಿಂದ ನಾನು ಎದ್ದೇಳಲು ಶಕ್ತನಾಗದಂತೆ ಮಾಡಿದ್ದಾನೆ.
ಪ್ರಲಾಪಗಳು 1 : 15 (KNV)
ಕರ್ತನು ನನ್ನ ಎದುರಿನಲ್ಲಿ ನನ್ನ ಪರಾಕ್ರಮಶಾಲಿಗಳನ್ನೆಲ್ಲಾ ಕಾಲಿನ ಕೆಳಗೆ ತುಳಿದುಬಿಟ್ಟಿದ್ದಾನೆ; ಆತನು ನನ್ನ ಯೌವನಸ್ಥರನ್ನು ಜಜ್ಜಲು ನನಗೆ ವಿರುದ್ಧವಾಗಿ ಸಭೆಯನ್ನು ಕರೆದಿದ್ದಾನೆ; ಕರ್ತನು ಯೆಹೂದದ ಮಗಳಾದ ಕನ್ಯೆಯನ್ನು ದ್ರಾಕ್ಷೆಯ ತೊಟ್ಟಿಯಂತೆ ತುಳಿದಿದ್ದಾನೆ.
ಪ್ರಲಾಪಗಳು 1 : 16 (KNV)
ಇವುಗಳ ನಿಮಿತ್ತ ನಾನು ಅಳುತ್ತೇನೆ; ಕಣ್ಣೀರು ಧಾರೆಧಾರೆಯಾಗಿ ಸುರಿಯುವದು, ನನ್ನನ್ನು ಆದರಿಸುವಾತನೂ ನನ್ನ ಪ್ರಾಣವನ್ನು ಬದುಕಿಸುವ ಆದರಿಕನೂ ನನ್ನಿಂದ ದೂರವಾಗಿದ್ದಾನೆ; ನನ್ನ ಮಕ್ಕಳು ಹಾಳಾಗಿದ್ದಾರೆ, ನನ್ನ ಶತ್ರುವು ಗೆದ್ದಿದ್ದಾನೆ.
ಪ್ರಲಾಪಗಳು 1 : 17 (KNV)
ಚೀಯೋನ್ ತನ್ನ ಕೈಗಳನ್ನು ಚಾಚುತ್ತಾಳೆ; ಅಲ್ಲಿ ಅವಳನ್ನು ಆದರಿಸುವವನು ಒಬ್ಬನೂ ಇಲ್ಲ; ಯಾಕೋಬಿಗೆ ಸಂಬಂಧಿಸಿದ ಅವನ ವೈರಿಗಳು ಅವನ ಸುತ್ತಲೂ ಇರಬೇಕೆಂದು ಕರ್ತನು ಆಜ್ಞಾಪಿಸಿದ್ದಾನೆ. ಯೆರೂಸಲೇಮು ಅವರ ಮದ್ಯದಲ್ಲಿ ಮುಟ್ಟಾದ ಹೆಂಗಸಿನ ಹಾಗೆ ಇದೆ.
ಪ್ರಲಾಪಗಳು 1 : 18 (KNV)
ಕರ್ತನು ನೀತಿವಂತನು, ನಾನು ಆತನ ಆಜ್ಞೆಗೆ ವಿರುದ್ಧವಾಗಿ ತಿರುಗಿಬಿದ್ದಿದ್ದೇನೆ; ಎಲ್ಲಾ ಜನರೇ, ಕೇಳಿರಿ, ನಾನು ನಿಮ್ಮನ್ನು ಕೇಳಿ ಕೊಳ್ಳುತ್ತೇನೆ; ನನ್ನ ದುಃಖವನ್ನು ನೋಡಿರಿ, ನನ್ನ ಕನ್ಯೆಯರೂ ನನ್ನ ಯೌವನಸ್ಥರೂ ಸೆರೆಗೆ ಹೋಗಿದ್ದಾರೆ.
ಪ್ರಲಾಪಗಳು 1 : 19 (KNV)
ನಾನು ನನ್ನ ಪ್ರಿಯರನ್ನು ಕರೆದೆನು, ಆದರೆ ಅವರು ನನ್ನನ್ನು ಮೋಸಗೊಳಿಸಿದರು; ನನ್ನ ಯಾಜಕರೂ ಹಿರಿ ಯರೂ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವದಕ್ಕೆ ರೊಟ್ಟಿ ಯನ್ನು ಹುಡುಕುತ್ತಾ ನಗರದಲ್ಲಿ ಸತ್ತುಹೋದರು.
ಪ್ರಲಾಪಗಳು 1 : 20 (KNV)
ಓ ಕರ್ತನೇ, ನೋಡು; ನಾನು ಇಕ್ಕಟ್ಟಿನಲ್ಲಿದ್ದೇನೆ. ನನ್ನ ಕರುಳುಗಳು ನನ್ನ ಹೃದಯವು ಮಗಚಿಕೊಂಡಿದೆ. ನಾನು ಘೋರವಾಗಿ ತಿರುಗಿಬಿದ್ದಿದ್ದೇನೆ. ಹೊರಗೆ ಕತ್ತಿ ಯಿಂದ ಸಂಹಾರ, ಮನೆಯೊಳಗೆ ಮರಣ.
ಪ್ರಲಾಪಗಳು 1 : 21 (KNV)
ನಾನು ನಿಟ್ಟುಸಿರಿಡುವದನ್ನು ಅವರು ಕೇಳಿದರೂ ನನ್ನನ್ನು ಆದರಿ ಸಲು ಯಾರೂ ಅಲ್ಲಿರಲಿಲ್ಲ; ನನ್ನ ಶತ್ರುಗಳೆಲ್ಲಾ ನನ್ನ ಕಷ್ಟದ ವಿಷಯವನ್ನು ಕೇಳಿದರು; ನೀನು ಹಾಗೆ ಮಾಡಿದೆಯೆಂದು ಅವರು ಸಂತೋಷಪಟ್ಟರು. ನೀನು ತಿಳಿಸಿದ ಆ ದಿನವು ಬರಲು ಅವರು ನನ್ನ ಹಾಗೆಯೇ ಆಗುವರು.
ಪ್ರಲಾಪಗಳು 1 : 22 (KNV)
ಅವರ ಕೆಡುಕೆಲ್ಲಾ ನಿನ್ನ ಮುಂದೆ ಬರಲಿ; ನನ್ನ ಎಲ್ಲಾ ದ್ರೋಹಗಳ ನಿಮಿತ್ತ ನೀನು ನನಗೆ ಮಾಡಿದ ಪ್ರಕಾರವೇ ಅವರಿಗೆ ಮಾಡು; ನನ್ನ ನಿಟ್ಟು ಸಿರುಗಳು ಅನೇಕವಾಗಿವೆ; ನನ್ನ ಹೃದಯವು ಕುಂದಿದೆ.
❮
❯