ನ್ಯಾಯಸ್ಥಾಪಕರು 17 : 1 (KNV)
ಆದರೆ ಎಫ್ರಾಯಾಮ್ ಬೆಟ್ಟದಲ್ಲಿ ವಿಾಕಎಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು.
ನ್ಯಾಯಸ್ಥಾಪಕರು 17 : 2 (KNV)
ಅವನು ತನ್ನ ತಾಯಿಗೆ--ನಿನ್ನ ಬಳಿಯಿಂದ ಸಾವಿರದ ನೂರು ರೂಪಾಯಿಗಳಷ್ಟು ಬೆಳ್ಳಿಯು ತೆಗೆಯಲ್ಪಟ್ಟಾಗ ನೀನು ಆ ಬೆಳ್ಳಿಯನ್ನು ಕುರಿತು ಶಪಿಸಿ ನನ್ನ ಕಿವಿಗಳಲ್ಲಿ ಮಾತನಾಡಿದಿಯಲ್ಲಾ? ಇಗೋ, ಆ ಬೆಳ್ಳಿಯು ನನ್ನ ಬಳಿಯಲ್ಲಿ ಅದೆ; ನಾನು ಅದನ್ನು ತಕ್ಕೊಂಡೆನು ಅಂದನು. ಅದಕ್ಕೆ ಅವನ ತಾಯಿ--ನನ್ನ ಮಗನೇ, ನೀನು ಕರ್ತನಿಂದ ಆಶೀರ್ವದಿಸಲ್ಪಡುವಿ ಅಂದಳು.
ನ್ಯಾಯಸ್ಥಾಪಕರು 17 : 3 (KNV)
ಅವನು ಆ ಸಾವಿರದ ನೂರು ರೂಪಾಯಿಗಳಷ್ಟು ಬೆಳ್ಳಿಯನ್ನು ತನ್ನ ತಾಯಿಗೆ ತಿರಿಗಿ ಕೊಟ್ಟಾಗ ಅವನ ತಾಯಿ--ನನ್ನ ಮಗನ ನಿಮಿತ್ತ ಕೆತ್ತಿದ ವಿಗ್ರಹವನ್ನೂ ಎರಕದ ವಿಗ್ರಹವನ್ನೂ ಮಾಡುವದಕ್ಕೆ ನಾನು ನನ್ನ ಕೈಯಲ್ಲಿದ್ದ ಈ ಬೆಳ್ಳಿಯನ್ನು ಕರ್ತನಿಗೆ ಸಂಪೂರ್ಣವಾಗಿ ಪ್ರತಿಷ್ಠಿಸಿದೆನು; ಆದದರಿಂದ ನಾನು ಅದನ್ನು ನಿನಗೆ ತಿರಿಗಿ ಕೊಡುವೆನು ಅಂದಳು.
ನ್ಯಾಯಸ್ಥಾಪಕರು 17 : 4 (KNV)
ಆದರೆ ಅವನು ಆ ಹಣವನ್ನು ತನ್ನ ತಾಯಿಗೆ ತಿರಿಗಿ ಕೊಟ್ಟನು. ಆಗ ಅವನ ತಾಯಿ ಇನ್ನೂರು ಬೆಳ್ಳಿಯ ನಾಣ್ಯಗಳನ್ನು ತಕ್ಕೊಂಡು ಅಕ್ಕಸಾಲಿಗನ ಕೈಯಲ್ಲಿ ಕೊಟ್ಟಳು. ಅವನು ಅವುಗಳಿಂದ ಕೆತ್ತಿದ ವಿಗ್ರಹವನ್ನೂ ಎರಕದ ವಿಗ್ರಹ ವನ್ನೂ ಮಾಡಿದನು. ಅವು ವಿಾಕನ ಮನೆಯಲ್ಲಿದ್ದವು.
ನ್ಯಾಯಸ್ಥಾಪಕರು 17 : 5 (KNV)
ಈ ವಿಾಕ ಎಂಬ ಮನುಷ್ಯನಿಗೆ ದೇವರುಗಳ ಮನೆ ಇದ್ದದರಿಂದ ಅವನು ಒಂದು ಏಫೋದನ್ನೂ ಪ್ರತಿಮೆಗಳನ್ನೂ ಮಾಡಿ ತನ್ನ ಕುಮಾರರಲ್ಲಿ ಒಬ್ಬನನ್ನು ಪ್ರತಿಷ್ಠೆಮಾಡಿದನು. ಅವನು ಇವನಿಗೆ ಯಾಜಕ ನಾದನು.
ನ್ಯಾಯಸ್ಥಾಪಕರು 17 : 6 (KNV)
ಆ ದಿವಸಗಳೊಳಗೆ ಇಸ್ರಾಯೇಲಿನಲ್ಲಿ ಅರಸನಿರಲಿಲ್ಲ; ಅವನವನು ತನ್ನ ದೃಷ್ಟಿಗೆ ಸರಿಯಾಗಿ ತೋರಿದ್ದನ್ನು ಮಾಡಿದನು.
ನ್ಯಾಯಸ್ಥಾಪಕರು 17 : 7 (KNV)
ಯೆಹೂದದ ಗೋತ್ರಕ್ಕೆ ಸೇರಿದ ಬೇತ್ಲೆಹೇಮಿನ ಲೇವಿಯನಾದಂಥ ಒಬ್ಬ ಯೌವನಸ್ಥನಿದ್ದನು. ಅವನು ಅಲ್ಲಿ ಪ್ರವಾಸಿಯಾಗಿದ್ದನು.
ನ್ಯಾಯಸ್ಥಾಪಕರು 17 : 8 (KNV)
ಆ ಮನುಷ್ಯನು ಸಿಕ್ಕುವ ಸ್ಥಳದಲ್ಲಿ ಪ್ರವಾಸಿಯಾಗುವದಕ್ಕೆ ಯೆಹೂದದ ಬೇತ್ಲೆಹೇಮ್ ಪಟ್ಟಣವನ್ನು ಬಿಟ್ಟುಹೋದನು; ಪ್ರಯಾಣಮಾಡುವಾಗ ಎಫ್ರಾಯಾಮ್ ಬೆಟ್ಟದ ಲ್ಲಿರುವ ವಿಾಕನ ಮನೆಯ ಬಳಿಗೆ ಬಂದನು.
ನ್ಯಾಯಸ್ಥಾಪಕರು 17 : 9 (KNV)
ಆಗ ವಿಾಕನು ಅವನಿಗೆ--ನೀನು ಎಲ್ಲಿಂದ ಬಂದಿ ಅಂದನು. ಇವನು ಅವನಿಗೆ--ನಾನು ಯೆಹೂದದ ಬೇತ್ಲೆಹೇಮಿ ನವನಾದ ಲೇವಿಯನು: ನಾನು ಸಿಕ್ಕುವ ಸ್ಥಳದಲ್ಲಿ ಪ್ರವಾಸಿಯಾಗಬೇಕೆಂದು ಹೋಗುತ್ತೇನೆ ಅಂದನು.
ನ್ಯಾಯಸ್ಥಾಪಕರು 17 : 10 (KNV)
ವಿಾಕನು ಅವನಿಗೆ--ನೀನು ನನ್ನ ಬಳಿಯಲ್ಲಿ ವಾಸಮಾಡಿ ನನಗೆ ತಂದೆಯಾಗಿಯೂ ಯಾಜಕನಾ ಗಿಯೂ ಇರು; ನಾನು ನಿನಗೆ ವರುಷಕ್ಕೆ ಹತ್ತು ಬೆಳ್ಳಿಯ ನಾಣ್ಯಗಳನ್ನೂ ಒಂದು ದುಸ್ತು ವಸ್ತ್ರಗಳನ್ನೂ ಆಹಾರ ವನ್ನೂ ಕೊಡುವೆನು ಅಂದನು. ಹಾಗೆಯೇ ಲೇವಿಯನು ಹೋದನು. ಲೇವಿಯು ಆ ಮನುಷ್ಯನ ಬಳಿಯಲ್ಲಿ ವಾಸವಾಗಿರುವದಕ್ಕೆ ಸಮ್ಮತಿಪಟ್ಟನು.
ನ್ಯಾಯಸ್ಥಾಪಕರು 17 : 11 (KNV)
ಆ ಯೌವ ನಸ್ಥನು ಅವನಿಗೆ ಅವನ ಕುಮಾರರಲ್ಲಿ ಒಬ್ಬನ ಹಾಗೆ ಇದ್ದನು.
ನ್ಯಾಯಸ್ಥಾಪಕರು 17 : 12 (KNV)
ವಿಾಕನು ಲೇವಿಯನನ್ನು ಪ್ರತಿಷ್ಠೆಮಾಡಿ ದನು; ಆ ಯೌವನಸ್ಥನು ಅವನಿಗೆ ಯಾಜಕನಾದನು; ಅವನು ವಿಾಕನ ಮನೆಯಲ್ಲಿ ಇದ್ದನು.
ನ್ಯಾಯಸ್ಥಾಪಕರು 17 : 13 (KNV)
ಆಗ ವಿಾಕನು--ನನಗೆ ಒಬ್ಬ ಲೇವಿಯನು ಯಾಜಕನಾಗಿ ರುವದರಿಂದ ಕರ್ತನು ನನಗೆ ಒಳ್ಳೇದನ್ನು ಮಾಡು ವನೆಂದು ಈಗ ತಿಳಿಯುತ್ತೇನೆ ಅಂದುಕೊಂಡನು.

1 2 3 4 5 6 7 8 9 10 11 12 13

BG:

Opacity:

Color:


Size:


Font: