ನ್ಯಾಯಸ್ಥಾಪಕರು 12 : 1 (KNV)
ಎಫ್ರಾಯಾಮಿನ ಜನರು ಕೂಡಿಕೊಂಡು ಉತ್ತರಕ್ಕೆ ಹೋಗಿ ಯೆಪ್ತಾಹನಿಗೆ--ನೀನು ಅಮ್ಮೋನನ ಮಕ್ಕಳ ಮೇಲೆ ಯುದ್ಧಮಾಡುವದಕ್ಕೆ ಹೋದಾಗ ನಮ್ಮನ್ನು ಯಾಕೆ ನಿನ್ನ ಸಂಗಡ ಹೋಗಲು ಕರೇಕಳುಹಿಸಲಿಲ್ಲ? ನಾವು ನಿನ್ನನ್ನೂ ನಿನ್ನ ಮನೆಯನ್ನೂ ಬೆಂಕಿಯಿಂದ ಸುಟ್ಟು ಬಿಡುವೆವು ಅಂದರು.
ನ್ಯಾಯಸ್ಥಾಪಕರು 12 : 2 (KNV)
ಯೆಪ್ತಾ ಹನು ಅವರಿಗೆ--ನನಗೂ ನಮ್ಮ ಜನಕ್ಕೂ ಅಮ್ಮೋನನ ಮಕ್ಕಳ ಸಂಗಡ ದೊಡ್ಡ ವ್ಯಾಜ್ಯವಿರುವಾಗ ನಾನು ನಿಮ್ಮನ್ನು ಕರೆದೆನು; ಆದರೆ ನೀವು ನನ್ನನ್ನು ಅವರ ಕೈಯಿಂದ ಬಿಡಿಸಿ ರಕ್ಷಿಸಲಿಲ್ಲ.
ನ್ಯಾಯಸ್ಥಾಪಕರು 12 : 3 (KNV)
ನೀವು ನನ್ನನ್ನು ರಕ್ಷಿಸುವದಿ ಲ್ಲವೆಂದು ನಾನು ಕಂಡು ನನ್ನ ಪ್ರಾಣವನ್ನು ಕೈಯಲ್ಲಿ ಹಿಡುಕೊಂಡು ಅಮ್ಮೋನನ ಮಕ್ಕಳಿಗೆ ವಿರೋಧವಾಗಿ ಹೋದೆನು; ಕರ್ತನು ಅವರನ್ನು ನನ್ನ ಕೈಯಲ್ಲಿ ಒಪ್ಪಿಸಿ ಕೊಟ್ಟನು. ನೀವು ನನ್ನ ಸಂಗಡ ಯುದ್ಧಮಾಡುವದಕ್ಕೆ ಈಹೊತ್ತು ನನಗೆ ವಿರೋಧವಾಗಿ ಯಾಕೆ ಬಂದಿರಿ ಅಂದನು.
ನ್ಯಾಯಸ್ಥಾಪಕರು 12 : 4 (KNV)
ಆಗ ಯೆಪ್ತಾಹನು ಗಿಲ್ಯಾದ್ ಜನರೆಲ್ಲರನ್ನು ಕೂಡಿಸಿ ಎಫ್ರಾಯಾಮ್ಯರ ಸಂಗಡ ಯುದ್ಧ ಮಾಡಿ ದನು. ಗಿಲ್ಯಾದ್ಯರಾದ ನೀವು ಎಫ್ರಾಯಾಮ್ ಮನಸ್ಸೆ ಯವರೊಳಗಿಂದ ತಪ್ಪಿಸಿಕೊಂಡ ಎಫ್ರಾಯಾಮ್ಯರು ಎಂದು ಎಫ್ರಾಯಾಮ್ಯರು ಹೇಳಿದ್ದರಿಂದ ಗಿಲ್ಯಾದ್ಯರು ಎಫ್ರಾಯಾಮ್ಯರನ್ನು ಹೊಡೆದರು.
ನ್ಯಾಯಸ್ಥಾಪಕರು 12 : 5 (KNV)
ಗಿಲ್ಯಾದ್ಯರು ಎಫ್ರಾಯಾಮ್ಯರ ಮುಂದುಗಡೆ ಇರುವ ಯೊರ್ದನಿನ ರೇವುಗಳನ್ನು ಹಿಡಿದರು. ಆಗ ಏನಾಯಿತಂದರೆ--ಎಫ್ರಾಯಾಮ್ಯರಲ್ಲಿ ತಪ್ಪಿಸಿಕೊಂಡ ಯಾವನಾದರೂ ಬಂದು--ದಾಟುತ್ತೇನೆ ಎಂದು ಹೇಳಿದರೆ; ಗಿಲ್ಯಾ ದ್ಯರು--ನೀನು ಎಫ್ರಾಯಾಮ್ಯನೋ? ಎಂದು ಅವ ನನ್ನು ಕೇಳಿದಾಗ ಅವನು--ಅಲ್ಲ ಅಂದರೆ ಅವನಿಗೆ ನೀವು--ಷಿಬ್ಬೋಲೆತ್ ಅನ್ನಬೇಕು ಅಂದರು.
ನ್ಯಾಯಸ್ಥಾಪಕರು 12 : 6 (KNV)
ಆಗ ಅವನು ಹಾಗೆ ಹೇಳಲಾರದೆ ಸಿಬ್ಬೋಲೆತ್ ಅನ್ನುವನು. ಆಗ ಅವನನ್ನು ಹಿಡಿದು ಯೊರ್ದನಿನ ರೇವುಗಳ ಬಳಿಯಲ್ಲಿ ಕೊಂದುಹಾಕಿದರು. ಹೀಗೆ ಆ ಕಾಲದಲ್ಲಿ ಎಫ್ರಾಯಾಮ್ಯರೊಳಗೆ ನಾಲ್ವತ್ತೆರಡು ಸಾವಿರ ಜನರು ಸತ್ತುಹೋದರು.
ನ್ಯಾಯಸ್ಥಾಪಕರು 12 : 7 (KNV)
ಯೆಪ್ತಾಹನು ಇಸ್ರಾಯೇಲ್ಯರಿಗೆ ಆರು ವರುಷ ನ್ಯಾಯತೀರಿಸಿದನು. ಗಿಲ್ಯಾದ್ಯನಾದ ಯೆಪ್ತಾಹನು ಸತ್ತು ಗಿಲ್ಯಾದ್ ಪಟ್ಟಣಗಳ ಒಂದರಲ್ಲಿ ಹೂಣಲ್ಪಟ್ಟನು.
ನ್ಯಾಯಸ್ಥಾಪಕರು 12 : 8 (KNV)
ಅವನ ತರುವಾಯ ಬೇತ್ಲೆಹೇಮಿನವನಾದ ಇಬ್ಚಾ ನನು ಇಸ್ರಾಯೇಲಿಗೆ ನ್ಯಾಯತೀರಿಸಿದನು.
ನ್ಯಾಯಸ್ಥಾಪಕರು 12 : 9 (KNV)
ಅವನಿಗೆ ಮೂವತ್ತು ಮಂದಿ ಕುಮಾರರೂ ಮೂವತ್ತು ಮಂದಿ ಕುಮಾರ್ತೆಯರೂ ಇದ್ದರು. ಕುಮಾರ್ತೆಯರನ್ನು ಹೊರಗೆ ಮದುವೆಮಾಡಿಕೊಟ್ಟನು; ಹೊರಗಿ ನಿಂದ ಮೂವತ್ತು ಮಂದಿ ಕುಮಾರ್ತೆಯರನ್ನು ತನ್ನ ಕುಮಾರರಿಗೆ ತಕ್ಕೊಂಡನು. ಅವನು ಇಸ್ರಾಯೇಲ್ಯರಿಗೆ ಏಳು ವರುಷ ನ್ಯಾಯತೀರಿಸಿದನು.
ನ್ಯಾಯಸ್ಥಾಪಕರು 12 : 10 (KNV)
ಇಬ್ಚಾನನು ಸತ್ತು ಬೇತ್ಲೆಹೇಮಿನಲ್ಲಿ ಹೂಣಲ್ಪಟ್ಟನು.
ನ್ಯಾಯಸ್ಥಾಪಕರು 12 : 11 (KNV)
ಅವನ ತರುವಾಯ ಜೆಬುಲೂನ್ಯನಾದ ಏಲೋ ನನು ಇಸ್ರಾಯೇಲ್ಯರಿಗೆ ನ್ಯಾಯತೀರಿಸಿದನು; ಅವನು ಹತ್ತು ವರುಷಗಳು ಇಸ್ರಾಯೇಲ್ಯರಿಗೆ ನ್ಯಾಯ ತೀರಿಸಿದನು.
ನ್ಯಾಯಸ್ಥಾಪಕರು 12 : 12 (KNV)
ಜೆಬುಲೂನ್ಯನಾದ ಏಲೋನನು ಸತ್ತು ಜೆಬುಲೂನ್ ದೇಶವಾದ ಅಯ್ಯಾಲೋನಿನಲ್ಲಿ ಹೂಣಲ್ಪಟ್ಟನು.
ನ್ಯಾಯಸ್ಥಾಪಕರು 12 : 13 (KNV)
ಅವನ ತರುವಾಯ ಪಿರಾತೋನಿನವನೂ ಹಿಲ್ಲೇ ಲನ ಮಗನೂ ಆದ ಅಬ್ದೋನನು ಇಸ್ರಾಯೇಲ್ಯರಿಗೆ ನ್ಯಾಯತೀರಿಸಿದನು.
ನ್ಯಾಯಸ್ಥಾಪಕರು 12 : 14 (KNV)
ಅವನಿಗೆ ಎಪ್ಪತ್ತು ಕತ್ತೇಮರಿ ಗಳ ಮೇಲೆ ಏರುವ ನಾಲ್ವತ್ತು ಮಂದಿ ಕುಮಾರರೂ ಮೂವತ್ತು ಮಂದಿ ಮೊಮ್ಮಕ್ಕಳೂ ಇದ್ದರು. ಅವನು ಇಸ್ರಾಯೇಲ್ಯರಿಗೆ ಎಂಟು ವರುಷ ನ್ಯಾಯತೀರಿಸಿ ದನು.
ನ್ಯಾಯಸ್ಥಾಪಕರು 12 : 15 (KNV)
ಪಿರಾತೋನಿಯವನಾದ ಹಿಲ್ಲೇಲನ ಮಗ ನಾದ ಅಬ್ದೋನನು ಸತ್ತು ಎಫ್ರಾಯಾಮ್ ದೇಶ ದಲ್ಲಿ ಅಮಾಲೇಕ್ಯರ ಬೆಟ್ಟದಲ್ಲಿರುವ ಪಿರಾತೋನಿನಲ್ಲಿ ಹೂಣಲ್ಪಟ್ಟನು.

1 2 3 4 5 6 7 8 9 10 11 12 13 14 15