ನ್ಯಾಯಸ್ಥಾಪಕರು 10 : 1 (KNV)
ಅಬೀಮೆಲೆಕನ ತರುವಾಯ ಇಸ್ಸಾಕಾರನ ಕುಲದ ದೋದೋವಿನ ಮಗನಾದ ಪೂವನ ಮಗನಾದ ತೋಲನು ಇಸ್ರಾಯೇಲ್ಯರನ್ನು ರಕ್ಷಿಸುವದಕ್ಕೆ ಎದ್ದನು. ಅವನು ಎಫ್ರಾಯಾಮ್ ಬೆಟ್ಟದ ಸೀಮೆಯ ಶಾವಿಾರದಲ್ಲಿ ವಾಸಮಾಡಿದನು.
ನ್ಯಾಯಸ್ಥಾಪಕರು 10 : 2 (KNV)
ಇಸ್ರಾಯೇಲಿಗೆ ಇಪ್ಪತ್ತುಮೂರು ವರುಷ ನ್ಯಾಯ ತೀರಿಸಿದ ತರುವಾಯ ಅವನು ಸತ್ತು ಶಾವಿಾರಲ್ಲಿ ಹೂಣಲ್ಪಟ್ಟನು.
ನ್ಯಾಯಸ್ಥಾಪಕರು 10 : 3 (KNV)
ಅವನ ತರುವಾಯ ಗಿಲ್ಯಾದ್ಯನಾದ ಯಾಯಾರನು ಎದ್ದು ಇಸ್ರಾಯೇಲ್ಯರಿಗೆ ಇಪ್ಪತ್ತೆರಡು ವರುಷ ನ್ಯಾಯತೀರಿಸಿದನು.
ನ್ಯಾಯಸ್ಥಾಪಕರು 10 : 4 (KNV)
ಅವನಿಗೆ ಮೂವತ್ತು ಕತ್ತೇಮರಿಗಳ ಮೇಲೆ ಏರುವ ಮೂವತ್ತು ಮಂದಿ ಕುಮಾರರು ಇದ್ದರು. ಇವರಿಗೆ ಗಿಲ್ಯಾದ್ ದೇಶದಲ್ಲಿ ಮೂವತ್ತು ಪಟ್ಟಣಗಳಿದ್ದವು; ಅವುಗಳಿಗೆ ಈ ದಿನದ ವರೆಗೂ ಹವೋತ್ಯಾಯಾರೆಂಬ ಹೆಸರಿದೆ.
ನ್ಯಾಯಸ್ಥಾಪಕರು 10 : 5 (KNV)
ಯಾಯಾ ರನು ಸತ್ತು ಕಾಮೋನಿನಲ್ಲಿ ಹೂಣಲ್ಪಟ್ಟನು.
ನ್ಯಾಯಸ್ಥಾಪಕರು 10 : 6 (KNV)
ಆದರೆ ಇಸ್ರಾಯೇಲ್ ಮಕ್ಕಳು ತಿರಿಗಿ ಕರ್ತನ ಮುಂದೆ ಕೆಟ್ಟತನಮಾಡಿ ಬಾಳನನ್ನೂ ಅಷ್ಟೋರೆತನ್ನೂ ಸಿರಿಯಾ ದೇಶದ ದೇವರುಗಳನ್ನೂ ಚೀದೋನಿನ ದೇವರುಗಳನ್ನೂ ಮೋವಾಬಿನ ದೇವರುಗಳನ್ನೂ ಅಮ್ಮೋನನ ಮಕ್ಕಳ ದೇವರುಗಳನ್ನೂ ಫಿಲಿಷ್ಟಿಯರ ದೇವರುಗಳನ್ನೂ ಸೇವಿಸುವವರಾಗಿ ಕರ್ತನನ್ನು ಸೇವಿ ಸದೆ ಆತನನ್ನು ಬಿಟ್ಟು ಹೋದರು.
ನ್ಯಾಯಸ್ಥಾಪಕರು 10 : 7 (KNV)
ಆಗ ಕರ್ತನು ಇಸ್ರಾಯೇಲಿಗೆ ವಿರೋಧವಾಗಿ ಕೋಪಗೊಂಡು ಅವ ರನ್ನು ಫಿಲಿಷ್ಟಿಯರ ಕೈಗೂ ಅಮ್ಮೋನನ ಮಕ್ಕಳ ಕೈಗೂ ಮಾರಿಬಿಟ್ಟನು.
ನ್ಯಾಯಸ್ಥಾಪಕರು 10 : 8 (KNV)
ಆ ವರುಷ ಮೊದಲುಗೊಂಡ ಅವರು ಹದಿನೆಂಟು ವರುಷ ಯೊರ್ದನಿಗೆ ಆಚೆ ಗಿಲ್ಯಾದಿನಲ್ಲಿ ಅಮೋರಿಯರ ದೇಶದಲ್ಲಿರುವ ಇಸ್ರಾಯೇಲ್ ಮಕ್ಕಳ ನ್ನೆಲ್ಲಾ ಬಾಧಿಸಿ ಕುಂದಿಸಿದರು.
ನ್ಯಾಯಸ್ಥಾಪಕರು 10 : 9 (KNV)
ಇದಲ್ಲದೆ ಅಮ್ಮೋನನ ಮಕ್ಕಳು ಯೆಹೂದನಿಗೆ ಬೆನ್ಯಾವಿಾನರಿಗೆ ವಿರೋಧವಾ ಗಿಯೂ ಎಫ್ರಾಯಾಮ್ ಮನೆಗೆ ವಿರೋಧವಾಗಿಯೂ ಯುದ್ಧಮಾಡುವದಕ್ಕೆ ಯೊರ್ದನನ್ನು ದಾಟಿ ಬಂದರು. ಹೀಗೆ ಇಸ್ರಾಯೇಲಿಗೆ ಬಹುಸಂಕಟವಾಯಿತು.
ನ್ಯಾಯಸ್ಥಾಪಕರು 10 : 10 (KNV)
ಆಗ ಇಸ್ರಾಯೇಲ್ ಮಕ್ಕಳು ಕರ್ತನಿಗೆ ಕೂಗಿ--ನಮ್ಮ ದೇವರನ್ನು ಬಿಟ್ಟು ಬಾಳನನ್ನು ಸೇವಿಸಿದ್ದರಿಂದ ನಾವು ನಿನಗೆ ವಿರೋಧವಾಗಿ ಪಾಪ ಮಾಡಿದೆವು ಅಂದರು.
ನ್ಯಾಯಸ್ಥಾಪಕರು 10 : 11 (KNV)
ಕರ್ತನು ಇಸ್ರಾಯೇಲ್ ಮಕ್ಕಳಿಗೆ--ನಾನು ನಿಮ್ಮನ್ನು ಐಗುಪ್ತ್ಯರ ಕೈಯೊಳಗಿಂದಲೂ ಅಮೋರಿಯರ ಕೈಯೊ ಳಗಿಂದಲೂ ಅಮ್ಮೋನನ ಮಕ್ಕಳ ಕೈಯೊಳಗಿಂದಲೂ ಫಿಲಿಷ್ಟಿಯರ ಕೈಯೊಳಗಿಂದಲೂ ತಪ್ಪಿಸಿಬಿಡಲಿಲ್ಲವೋ?
ನ್ಯಾಯಸ್ಥಾಪಕರು 10 : 12 (KNV)
ಇದಲ್ಲದೆ ಚೀದೋನ್ಯರೂ ಅಮಾಲೇಕ್ಯರೂ ಮಾವೋನ್ಯರೂ ನಿಮ್ಮನ್ನು ಬಾಧೆಪಡಿಸುವಾಗ ನೀವು ನನಗೆ ಕೂಗಿದ್ದರಿಂದ ನಾನು ನಿಮ್ಮನ್ನು ಅವರ ಕೈಗೆ ತಪ್ಪಿಸಿ ರಕ್ಷಿಸಿದೆನು.
ನ್ಯಾಯಸ್ಥಾಪಕರು 10 : 13 (KNV)
ಆದರೂ ನೀವು ನನ್ನನ್ನು ಬಿಟ್ಟು ಅನ್ಯದೇವರುಗಳನ್ನು ಸೇವಿಸಿದಿರಿ; ಆದಕಾರಣ ನಾನು ನಿಮ್ಮನ್ನು ಇನ್ನು ಮುಂದೆ ಬಿಡಿಸುವದಿಲ್ಲ.
ನ್ಯಾಯಸ್ಥಾಪಕರು 10 : 14 (KNV)
ನೀವು ಹೋಗಿ ನಿಮಗೆ ನೀವೇ ಆರಿಸಿಕೊಂಡ ದೇವರುಗಳಿಗೆ ಕೂಗಿರಿ; ಅವರು ನಿಮ್ಮ ಸಂಕಟದ ಕಾಲದಲ್ಲಿ ನಿಮ್ಮನ್ನು ರಕ್ಷಿಸಲಿ ಅಂದನು.
ನ್ಯಾಯಸ್ಥಾಪಕರು 10 : 15 (KNV)
ಇಸ್ರಾಯೇಲ್ ಮಕ್ಕಳು ಕರ್ತ ನಿಗೆ--ನಾವು ಪಾಪಮಾಡಿದೆವು; ನೀನು ನಿನ್ನ ಕಣ್ಣು ಗಳಿಗೆ ಒಳ್ಳೇದಾಗಿ ತೋರುವದೆಲ್ಲಾ ನಮಗೆ ಮಾಡು. ಆದರೆ ಈಹೊತ್ತು ನಮ್ಮನ್ನು ರಕ್ಷಿಸು ಎಂದು ಬೇಡಿ ಕೊಂಡರು.
ನ್ಯಾಯಸ್ಥಾಪಕರು 10 : 16 (KNV)
ಅವರು ಅನ್ಯದೇವರುಗಳನ್ನು ತಮ್ಮ ಮಧ್ಯದಲ್ಲಿಂದ ತೊರೆದುಬಿಟ್ಟು ಕರ್ತನನ್ನು ಸೇವಿಸಿ ದರು. ಆಗ ಆತನ ಮನಸ್ಸು ಇಸ್ರಾಯೇಲಿನ ಕಷ್ಟ ಕ್ಕೋಸ್ಕರ ನೊಂದುಕೊಂಡಿತು.
ನ್ಯಾಯಸ್ಥಾಪಕರು 10 : 17 (KNV)
ಅಮ್ಮೋನನ ಮಕ್ಕಳು ಏಕವಾಗಿ ಕೂಡಿಕೊಂಡು ಗಿಲ್ಯಾದಿನಲ್ಲಿ ದಂಡಿಳಿದರು. ಆದರೆ ಇಸ್ರಾಯೇಲ್ ಮಕ್ಕಳು ಏಕವಾಗಿ ಕೂಡಿ ಮಿಚ್ಪೆಯಲ್ಲಿ ದಂಡಿಳಿದರು.
ನ್ಯಾಯಸ್ಥಾಪಕರು 10 : 18 (KNV)
ಆಗ ಗಿಲ್ಯಾದಿನ ಜನರೂ ಪ್ರಧಾನರೂ ಒಬ್ಬರಿ ಗೊಬ್ಬರು--ಯಾವನು ಅಮ್ಮೋನನ ಮಕ್ಕಳ ಮೇಲೆ ಯುದ್ಧಮಾಡಲಾರಂಭಿಸುವನೋ ಅವನು ಗಿಲ್ಯಾದಿನ ನಿವಾಸಿಗಳಿಗೆಲ್ಲಾ ನಾಯಕನಾಗಿರುವನು ಎಂದು ಮಾತ ನಾಡಿಕೊಂಡರು.

1 2 3 4 5 6 7 8 9 10 11 12 13 14 15 16 17 18

BG:

Opacity:

Color:


Size:


Font: