ಯೆಹೋಶುವ 7 : 1 (KNV)
ಯೆಹೂದ ಗೋತ್ರದ ಜೆರಹನ ಮಗನಾದ ಜಬ್ದೀಯ ಮಗನಾದ ಕರ್ವಿಾಯ ಮಗನಾದ ಆಕಾನನು ಶಾಪಕ್ಕೀಡಾದದ್ದರಲ್ಲಿ ಕೆಲವನ್ನು ತೆಗೆದುಕೊಂಡನು. ಈ ಕಾರಣದಿಂದ ಇಸ್ರಾಯೇಲ್‌ ಮಕ್ಕಳು ಶಾಪಕ್ಕೀಡಾದವರಲ್ಲಿ ಅಪರಾಧಿಗಳಾದರು. ಆದದರಿಂದ ಕರ್ತನ ಕೋಪವು ಇಸ್ರಾಯೇಲ್‌ ಮಕ್ಕಳ ಮೇಲೆ ಉರಿಯಹತ್ತಿತ್ತು.
ಯೆಹೋಶುವ 7 : 2 (KNV)
ಆಗ ಯೆಹೋಶುವನು ಅವರಿಗೆ--ನೀವು ದೇಶ ವನ್ನು ಪಾಳತಿ ನೋಡಿ ಬನ್ನಿರಿ ಎಂದು ಹೇಳಿ ಯೆರಿಕೋ ವಿನಿಂದ ಮನುಷ್ಯರನ್ನು ಬೇತೇಲಿಗೆ ಪೂರ್ವಕಡೆಯಾದ ಬೇತಾವೆನಿನ ಬಳಿಯಲ್ಲಿರುವ ಆಯಿಗೆ ಕಳುಹಿಸಿದನು. ಆಗ ಅವರು ಹೋಗಿ ಆಯಿಯನ್ನು ಪಾಳತಿನೋಡಿ
ಯೆಹೋಶುವ 7 : 3 (KNV)
ಯೆಹೋಶುವನ ಬಳಿಗೆ ತಿರಿಗಿ ಬಂದು ಅವನಿಗೆ--ಜನರೆಲ್ಲರೂ ಏರಿಹೋಗದೆ ಇರಲಿ; ಆಯಿಯನ್ನು ಹೊಡೆಯುವದಕ್ಕೆ ಎರಡು ಅಥವಾ ಮೂರು ಸಾವಿರ ಜನರು ಮಾತ್ರವೇ ಹೋಗಲಿ; ಅಲ್ಲಿಗೆ ಹೋಗುವ ಜನರೆಲ್ಲರನ್ನೂ ದಣಿಸಬೇಡ; ಯಾಕಂದರೆ ಸ್ವಲ್ಪ ಜನರು ಮಾತ್ರ ಇದ್ದಾರೆ ಅಂದರು.
ಯೆಹೋಶುವ 7 : 4 (KNV)
ಹಾಗೆಯೇ ಜನರಲ್ಲಿ ಹೆಚ್ಚು ಕಡಿಮೆ ಮೂರುಸಾವಿರ ಮಂದಿ ಅಲ್ಲಿಗೆ ಹೋದರು; ಆದರೆ ಅವರು ಆಯಿಯ ಮನುಷ್ಯರ ಮುಂದೆ ಓಡಿಹೋದರು.
ಯೆಹೋಶುವ 7 : 5 (KNV)
ಆಯಿ ಮನುಷ್ಯರು ಇವರಲ್ಲಿ ಹೆಚ್ಚು ಕಡಿಮೆ ಮೂವತ್ತಾರು ಮಂದಿಯನ್ನು ಹೊಡೆದು ಹಾಕಿದರು. ಬಾಗಲಿನಿಂದ ಪ್ರಾರಂಭಿಸಿ ಷೆಬಾರಿಮಿನ ವರೆಗೂ ಅವರನ್ನು ಹಿಂದಟ್ಟಿ ಇಳಿದು ಹೋಗುವ ವರೆಗೂ ಅವರನ್ನು ಹೊಡೆದರು. ಆದದ ರಿಂದ ಜನರ ಹೃದಯವು ಕರಗಿ ನೀರಿನಂತಾಯಿತು.
ಯೆಹೋಶುವ 7 : 6 (KNV)
ಆಗ ಯೆಹೋಶುವನು ತನ್ನ ವಸ್ತ್ರಗಳನ್ನು ಹರಿದುಕೊಂಡು ತಾನೂ ಇಸ್ರಾಯೇಲಿನ ಹಿರಿಯರೂ ತಮ್ಮ ತಲೆಗಳ ಮೇಲೆ ಧೂಳನ್ನು ಹಾಕಿಕೊಂಡು ಸಾಯಂಕಾಲದ ವರೆಗೆ ಕರ್ತನ ಮಂಜೂಷದ ಮುಂದೆ ನೆಲದಮೇಲೆ ಬೋರಲು ಬಿದ್ದರು.
ಯೆಹೋಶುವ 7 : 7 (KNV)
ಇದಲ್ಲದೆ ಯೆಹೋಶುವನು--ಅಯ್ಯೋ, ಓ ಕರ್ತನಾದ ದೇವರೇ, ನಮ್ಮನ್ನು ನಾಶಮಾಡುವ ಹಾಗೆ ಅಮೋರಿ ಯರ ಕೈಯಲ್ಲಿ ಒಪ್ಪಿಸಿ ಕೊಡುವದಕ್ಕಾಗಿ ನೀನು ಈ ಜನರು ಯೊರ್ದನನ್ನು ದಾಟಮಾಡಿದ್ದೇನು? ನಮಗೆ ಇಷ್ಟೇ ಸಾಕೆಂದು ನಾವು ಯೊರ್ದನಿನ ಆಚೆಯಲ್ಲಿ ಇದ್ದರೆ ಒಳ್ಳೇದಾಗಿತ್ತು.
ಯೆಹೋಶುವ 7 : 8 (KNV)
ಓ ಕರ್ತನೇ, ಈಗ ನಾನೇನು ಹೇಳಲಿ? ಇಸ್ರಾಯೇಲ್ಯರು ತಮ್ಮ ಶತ್ರುಗಳಿಗೆ ಬೆನ್ನು ತಿರುಗಿಸಿದ್ದಾರಲ್ಲಾ.
ಯೆಹೋಶುವ 7 : 9 (KNV)
ಯಾಕಂದರೆ ಕಾನಾನ್ಯರೂ ದೇಶ ವಾಸಿಗಳೆಲ್ಲರೂ ಇದನ್ನು ಕೇಳಿ ನಮ್ಮ ಸುತ್ತಲೂ ಸುತ್ತಿ ಕೊಂಡು ನಮ್ಮ ಹೆಸರನ್ನು ಭೂಮಿಯಿಂದ ತೆಗೆದು ಬಿಡುವರು; ಆಗ ನಿನ್ನ ಮಹತ್ತಾದ ಹೆಸರಿಗೆ ಏನು ಮಾಡುವಿ ಅಂದನು.
ಯೆಹೋಶುವ 7 : 10 (KNV)
ಆಗ ಕರ್ತನು ಯೆಹೋಶುವನಿಗೆ--ನೀನು ಎದ್ದೇಳು; ನೀನು ಈ ಪ್ರಕಾರ ಬೋರಲು ಬಿದ್ದಿರುವ ದೇನು?
ಯೆಹೋಶುವ 7 : 11 (KNV)
ಇಸ್ರಾಯೇಲ್ಯರು ಪಾಪಮಾಡಿ ನಾನು ನಿಮಗೆ ಆಜ್ಞಾಪಿಸಿದ ನನ್ನ ಒಡಂಬಡಿಕೆಯನ್ನು ವಿಾರಿದರು; ಅವರು ವಂಚನೆಮಾಡಿ ಶಾಪಕ್ಕೀಡಾದ ದ್ದರಲ್ಲಿ ಕಳವುಮಾಡಿ ತೆಗೆದುಕೊಂಡು ಅದನ್ನು ತಮ್ಮ ಸಾಮಾನುಗಳಲ್ಲಿ ಬಚ್ಚಿಟ್ಟುಕೊಂಡಿದ್ದಾರೆ.
ಯೆಹೋಶುವ 7 : 12 (KNV)
ಆದದ ರಿಂದ ಇಸ್ರಾಯೇಲ್‌ ಮಕ್ಕಳು ತಮ್ಮ ಶತ್ರುಗಳ ಮುಂದೆ ನಿಲ್ಲಲಾರದೆ ತಮ್ಮ ಶತ್ರುಗಳಿಗೆ ಬೆನ್ನುಕೊಟ್ಟರು. ಯಾಕಂದರೆ ಅವರು ಶಾಪಕ್ಕೀಡಾದರು. ನೀವು ಶಾಪ ಕ್ಕೀಡಾದದ್ದನ್ನು ನಿಮ್ಮ ಮಧ್ಯದಲ್ಲಿಂದ ನಾಶಮಾಡದೆ ಇದ್ದರೆ ಇನ್ನು ಮೇಲೆ ನಾನು ನಿಮ್ಮ ಸಂಗಡ ಇರುವದಿಲ್ಲ.
ಯೆಹೋಶುವ 7 : 13 (KNV)
ನೀನು ಎದ್ದು ಜನರನ್ನು ಪರಿಶುದ್ಧ ಮಾಡಿ ಹೇಳ ಬೇಕಾದದ್ದೇನಂದರೆ--ನಾಳೆಗೆ ನಿಮ್ಮನ್ನು ಪರಿಶುದ್ಧ ಮಾಡಿಕೊಳ್ಳಿರಿ; ಇಸ್ರಾಯೇಲೇ, ನಿನ್ನ ಮಧ್ಯದಲ್ಲಿ ಶಾಪಕ್ಕೆ ಕಾರಣವಾದದ್ದು ಉಂಟು; ಅದನ್ನು ನಿಮ್ಮಲ್ಲಿಂದ ತೆಗೆದುಹಾಕುವ ಪರಿಯಂತರ ನೀನು ನಿನ್ನ ಶತ್ರುಗಳ ಮುಂದೆ ನಿಲ್ಲಲಾರಿರಿ ಎಂದು ಇಸ್ರಾಯೇಲ್‌ ಕರ್ತನಾದ ದೇವರು ಹೇಳುತ್ತಾನೆ.
ಯೆಹೋಶುವ 7 : 14 (KNV)
ಆದದರಿಂದ ಹೊತ್ತಾರೆಯಲ್ಲಿ ನಿಮ್ಮ ಗೋತ್ರಗಳ ಪ್ರಕಾರವೇ ಸೇರಿ ಬನ್ನಿರಿ. ಆಗ ಕರ್ತನು ಹಿಡಿಯುವ ಗೋತ್ರವು ಕುಟುಂಬದ ಪ್ರಕಾರ ವಾಗಿಯೂ ಕರ್ತನು ಹಿಡಿಯುವ ಕುಟುಂಬವು ಮನೆ ಮನೆಯಾಗಿಯೂ ಕರ್ತನು ಹಿಡಿಯುವ ಮನೆಯಲ್ಲಿ ಒಬ್ಬೊಬ್ಬರಾಗಿಯೂ ಸೇರಲಿ.
ಯೆಹೋಶುವ 7 : 15 (KNV)
ಆಗ ಶಾಪಕ್ಕೀಡಾದ ದ್ದನ್ನು ತೆಗೆದುಕೊಂಡವನೆಂದು ಹಿಡಿಯಲ್ಪಡುವವನು ಕರ್ತನ ಒಡಂಬಡಿಕೆಯನ್ನು ವಿಾರಿ ಇಸ್ರಾಯೇಲಿ ನಲ್ಲಿ ಬುದ್ಧಿಹೀನವಾದ ಕಾರ್ಯವನ್ನು ಮಾಡಿದ್ದರಿಂದ ಅವನೂ ಅವನಲ್ಲಿರುವ ಸಮಸ್ತವೂ ಬೆಂಕಿಯಿಂದ ಸುಡಲ್ಪಡಬೇಕು ಅಂದನು.
ಯೆಹೋಶುವ 7 : 16 (KNV)
ಹೀಗೆಯೇ ಯೆಹೋಶುವನು ಬೆಳಿಗ್ಗೆ ಎದ್ದು ಇಸ್ರಾಯೇಲನ್ನು ಗೋತ್ರಗೋತ್ರವಾಗಿ ಕರೆದಾಗ ಯೂದ ಗೋತ್ರವು ಹಿಡಿಯಲ್ಪಟ್ಟಿತು.
ಯೆಹೋಶುವ 7 : 17 (KNV)
ಅವನು ಯೂದನ ಕುಟುಂಬವನ್ನು ಕರೆದಾಗ ಜೆರಹನ ಗೋತ್ರವು ಹಿಡಿಯಲ್ಪಟ್ಟಿತು. ಜೆರಹನ ಗೋತ್ರವನ್ನು ಹೆಸರು ಹೆಸರಾಗಿ ಕರೆದಾಗ ಜಬ್ದೀಯು ಹಿಡಿಯಲ್ಪಟ್ಟನು.
ಯೆಹೋಶುವ 7 : 18 (KNV)
ಅವನ ಮನೆಯವರನ್ನು ಅವನು ಹೆಸರುಹೆಸರಾಗಿ ಕರೆದಾಗ ಯೂದನ ಗೋತ್ರದ ಜೆರಹನ ಮಗನಾದ ಜಬ್ದೀಯ ಮಗನಾದ ಕರ್ವಿಾಯ ಮಗನಾದ ಆಕಾನನು ಹಿಡಿಯಲ್ಪಟ್ಟನು.
ಯೆಹೋಶುವ 7 : 19 (KNV)
ಆಗ ಯೆಹೋಶುವನು ಆಕಾನನಿಗೆ--ನನ್ನ ಮಗನೇ, ನೀನು ಈಗ ಇಸ್ರಾ ಯೇಲಿನ ದೇವರಾದ ಕರ್ತನನ್ನು ಘನಪಡಿಸಿ ಆತನಿಗೆ ಅರಿಕೆಮಾಡು; ಏನು ಮಾಡಿದಿಯೋ ಅದನ್ನು ನನಗೆ ತಿಳಿಸು; ನನಗೆ ಮರೆಮಾಡಬೇಡ ಅಂದನು.
ಯೆಹೋಶುವ 7 : 20 (KNV)
ಆಗ ಆಕಾನನು ಯೆಹೋಶುವನಿಗೆ ಪ್ರತ್ಯುತ್ತರವಾಗಿ--ನಿಜವಾಗಿ ನಾನು ಇಸ್ರಾಯೇಲ್‌ ದೇವರಾದ ಕರ್ತನಿಗೆ ವಿರೋಧವಾಗಿ ಪಾಪಮಾಡಿ ಇಂತಿಂಥವುಗಳನ್ನು ಮಾಡಿದ್ದೇನೆ.
ಯೆಹೋಶುವ 7 : 21 (KNV)
ಏನಂದರೆ, ನಾನು ಕೊಳ್ಳೆಯಲ್ಲಿ ಬಾಬೆಲಿನ ಒಂದು ಒಳ್ಳೇ ನಿಲುವಂಗಿಯನ್ನೂ ಇನ್ನೂರು ಬೆಳ್ಳಿ ಶೇಕೆಲುಗಳನ್ನೂ ಐವತ್ತು ಶೇಕೆಲ್‌ ತೂಕವಾದ ಒಂದು ಬಂಗಾರದ ಗಟ್ಟಿಯನ್ನೂ ಕಂಡು ಅವುಗಳನ್ನು ಆಶಿಸಿ ತೆಗೆದುಕೊಂಡೆನು; ಇಗೋ, ಅವುಗಳನ್ನು ನನ್ನ ಗುಡಾರದ ಮಧ್ಯದಲ್ಲಿ ನೆಲದೊಳಗೆ ಬಚ್ಚಿಟ್ಟಿದ್ದೇನೆ; ಬೆಳ್ಳಿಯೂ ಅದರ ಕೆಳಗೆ ಇದೆ ಅಂದನು.
ಯೆಹೋಶುವ 7 : 22 (KNV)
ಆಗ ಯೆಹೋಶುವನು ದೂತರನ್ನು ಕಳುಹಿಸಿದನು; ಅವರು ಡೇರೆಗಳಿಗೆ ಓಡಿದರು; ಇಗೋ, ಡೇರೆಯಲ್ಲಿ ಅವು ಬಚ್ಚಿಡಲ್ಪಟ್ಟಿದ್ದವು; ಬೆಳ್ಳಿಯು ಅದರ ಕೆಳಗೆ ಇತ್ತು.
ಯೆಹೋಶುವ 7 : 23 (KNV)
ಅವರು ಅವುಗಳನ್ನು ಡೇರೆಯ ಮಧ್ಯದಿಂದ ತೆಗೆದುಕೊಂಡು ಯೆಹೋಶುವನ ಬಳಿಗೂ ಸಮಸ್ತ ಇಸ್ರಾಯೇಲ್‌ ಮಕ್ಕಳ ಬಳಿಗೂ ತಂದು ಕರ್ತನ ಮುಂದೆ ಇಟ್ಟರು.
ಯೆಹೋಶುವ 7 : 24 (KNV)
ಆಗ ಯೆಹೋಶುವನೂ ಅವ ನೊಂದಿಗೆ ಇಸ್ರಾಯೇಲ್ಯರೆಲ್ಲರೂ ಜೆರಹನ ಮಗನಾದ ಆಕಾನನನ್ನೂ ಆ ಬೆಳ್ಳಿಯನ್ನೂ ವಸ್ತ್ರವನ್ನೂ ಬಂಗಾರದ ಗಟ್ಟಿಯನ್ನೂ ಅವನ ಕುಮಾರರನ್ನೂ ಕುಮಾರ್ತೆಯ ರನ್ನೂ ಅವನ ಎತ್ತುಗಳನ್ನೂ ಕತ್ತೆಗಳನ್ನೂ ಕುರಿಗಳನ್ನೂ ಅವನ ಡೇರೆಯನ್ನೂ ಅವನಿಗಿದ್ದ ಸಮಸ್ತವನ್ನೂ ತೆಗೆದುಕೊಂಡು ಆಕೋರಿನ ತಗ್ಗಿಗೆ ತಂದರು.
ಯೆಹೋಶುವ 7 : 25 (KNV)
ಆಗ ಯೆಹೋಶುವನು ಅವನಿಗೆ--ನೀನು ನಮ್ಮನ್ನು ತೊಂದರೆ ಪಡಿಸಿದ್ದೇನು? ಇಂದು ಕರ್ತನು ನಿನ್ನನ್ನು ತೊಂದರೆ ಪಡಿಸುವನು ಅಂದನು. ಆಗ ಇಸ್ರಾಯೇಲ್ಯ ರೆಲ್ಲರೂ ಅವನ ಮೇಲೆ ಕಲ್ಲೆಸೆದರು. ತರುವಾಯ ಬೆಂಕಿಯಿಂದ ಅವರನ್ನು ಸುಟ್ಟುಬಿಟ್ಟುಅವರ ಮೇಲೆ ಕಲ್ಲು ಕುಪ್ಪೆ ಕೂಡಿಸಿದರು. ಅದು ಈ ದಿನದ ವರೆಗೂ ಇದೆ. ಆಗ ಕರ್ತನು ತನ್ನ ಕೋಪದ ಉರಿಯನ್ನು ಬಿಟ್ಟು ತಿರುಗಿದನು; ಆದದರಿಂದ ಆ ಸ್ಥಳವು ಈ ವರೆಗೂ ಆಕೋರಿನ ತಗ್ಗೆಂದು ಕರೆಯಲ್ಪಡುವದು.
ಯೆಹೋಶುವ 7 : 26 (KNV)
ಅವರ ಮೇಲೆ ಕಲ್ಲು ಕುಪ್ಪೆ ಕೂಡಿಸಿದರು. ಅದು ಈ ದಿನದ ವರೆಗೂ ಇದೆ. ಆಗ ಕರ್ತನು ತನ್ನ ಕೋಪದ ಉರಿಯನ್ನು ಬಿಟ್ಟು ತಿರುಗಿದನು; ಆದದರಿಂದ ಆ ಸ್ಥಳವು ಈ ವರೆಗೂ ಆಕೋರಿನ ತಗ್ಗೆಂದು ಕರೆಯಲ್ಪಡುವದು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26

BG:

Opacity:

Color:


Size:


Font: