ಯೋಹಾನನು 2 : 1 (KNV)
ಮೂರನೆಯ ದಿನದಲ್ಲಿ ಗಲಿಲಾಯದ ಕಾನಾದಲ್ಲಿ ಒಂದು ಮದುವೆ ಆಯಿತು. ಅಲ್ಲಿ ಯೇಸುವಿನ ತಾಯಿಯು ಇದ್ದಳು.
ಯೋಹಾನನು 2 : 2 (KNV)
ಇದಲ್ಲದೆ ಯೇಸುವನ್ನೂ ಆತನ ಶಿಷ್ಯರನ್ನೂ ಮದುವೆಗೆ ಕರೆದಿ ದ್ದರು.
ಯೋಹಾನನು 2 : 3 (KNV)
ಆಗ ಅವರಿಗೆ ದ್ರಾಕ್ಷಾರಸವು ಸಾಲದೆ ಹೋದ ದ್ದರಿಂದ ಯೇಸುವಿನ ತಾಯಿಯು ಆತನಿಗೆ--ಅವರಿಗೆ ದ್ರಾಕ್ಷಾರಸವು ಇಲ್ಲ ಅಂದಳು.
ಯೋಹಾನನು 2 : 4 (KNV)
ಯೇಸು ಆಕೆಗೆ-- ಸ್ತ್ರೀಯೇ, ನನ್ನ ಗೊಡವೆ ನಿನಗೆ ಯಾಕೆ? ನನ್ನ ಗಳಿಗೆ ಯು ಇನ್ನೂ ಬಂದಿಲ್ಲ ಅಂದನು.
ಯೋಹಾನನು 2 : 5 (KNV)
ಆತನ ತಾಯಿಯು ಸೇವಕರಿಗೆ--ಆತನು ನಿಮಗೆ ಏನು ಹೇಳುತ್ತಾನೋ ಅದನ್ನು ಮಾಡಿರಿ ಅಂದಳು.
ಯೋಹಾನನು 2 : 6 (KNV)
ಯೆಹೂದ್ಯರ ಶುದ್ಧೀ ಕರಣದ ಪ್ರಕಾರ ಅಲ್ಲಿ ಪ್ರತಿಯೊಂದು ಎರಡು ಇಲ್ಲವೆ ಮೂರು ಕೊಳಗ ನೀರು ಹಿಡಿಯುವಷ್ಟು ಆರು ಕಲ್ಲಿನ ಬಾನೆಗಳು ಇದ್ದವು.
ಯೋಹಾನನು 2 : 7 (KNV)
ಯೇಸು ಅವರಿಗೆ--ಆ ಬಾನೆ ಗಳಲ್ಲಿ ನೀರು ತುಂಬಿರಿ ಅಂದನು. ಅವರು ಅವುಗಳನ್ನು ಕಂಠದವರೆಗೆ ತುಂಬಿದ್ದರು.
ಯೋಹಾನನು 2 : 8 (KNV)
ಆತನು ಅವರಿಗೆ--ಈಗ ಇದನ್ನು ತೋಡಿಕೊಂಡು ಹೋಗಿ ಔತಣದ ಪಾರುಪತ್ಯಗಾರನಿಗೆ ಕೊಡಿರಿ ಎಂದು ಹೇಳಲು ಅವರು ತಕ್ಕೊಂಡು ಹೋಗಿ ಕೊಟ್ಟರು.
ಯೋಹಾನನು 2 : 9 (KNV)
ಔತಣದ ಪಾರುಪತ್ಯ ಗಾರನು ದ್ರಾಕ್ಷಾರಸವಾದ ನೀರನ್ನು ರುಚಿ ನೋಡಿದಾಗ ಅದು ಎಲ್ಲಿಂದ ಬಂತೆಂದು ತಿಳಿಯದವನಾಗಿ (ನೀರನ್ನು ತೋಡಿಕೊಂಡ ಸೇವಕರಿಗೆ ತಿಳಿದಿತ್ತು) ಮದಲಿಂಗನನ್ನು ಕರೆದು
ಯೋಹಾನನು 2 : 10 (KNV)
ಅವನಿಗೆ--ಪ್ರತಿ ಮನುಷ್ಯನು ಮೊದಲು ಒಳ್ಳೇ ದ್ರಾಕ್ಷಾರಸವನ್ನು ಕೊಟ್ಟು ಜನರು ಚೆನ್ನಾಗಿ ಕುಡಿದ ಮೇಲೆ ಕನಿಷ್ಠವಾದದ್ದನ್ನು ಕೊಡುತ್ತಾನೆ; ಆದರೆ ನೀನು ಇದು ವರೆಗೆ ಒಳ್ಳೇ ದ್ರಾಕ್ಷಾರಸವನ್ನು ಇಟ್ಟು ಕೊಂಡಿದ್ದೀ ಅಂದನು.
ಯೋಹಾನನು 2 : 11 (KNV)
ಯೇಸು ಈ ಮೊದಲನೆಯ ಅದ್ಭುತ ಕಾರ್ಯವನ್ನು ಗಲಿಲಾಯದ ಕಾನಾದಲ್ಲಿ ಮಾಡಿ ತನ್ನ ಮಹಿಮೆಯನ್ನು ತೋರ್ಪಡಿಸಿದನು; ಮತ್ತು ಆತನ ಶಿಷ್ಯರು ಆತನ ಮೇಲೆ ನಂಬಿಕೆ ಇಟ್ಟರು.
ಯೋಹಾನನು 2 : 12 (KNV)
ಇದಾದ ಮೇಲೆ ಆತನೂ ಆತನ ತಾಯಿಯೂ ಆತನ ಸಹೋದರರೂ ಆತನ ಶಿಷ್ಯರೂ ಕಪೆರ್ನೌಮಿಗೆ ಹೋಗಿ ಅಲ್ಲಿ ಕೆಲವು ದಿವಸ ಇದ್ದರು.
ಯೋಹಾನನು 2 : 13 (KNV)
ಯೆಹೂದ್ಯರ ಪಸ್ಕವು ಹತ್ತಿರವಾದಾಗ ಯೇಸು ಯೆರೂಸಲೇಮಿಗೆ ಹೋಗಿ
ಯೋಹಾನನು 2 : 14 (KNV)
ದೇವಾಲಯದಲ್ಲಿ ಎತ್ತು ಕುರಿ ಪಾರಿವಾಳ ಇವುಗಳನ್ನು ಮಾರುವವ ರನ್ನೂ ಹಣ ಬದಲಾಯಿಸುವವರು ಕೂತಿರುವದನೂ ಕಂಡನು;
ಯೋಹಾನನು 2 : 15 (KNV)
ಆಗ ಆತನು ಸಣ್ಣ ಹಗ್ಗಗಳಿಂದ ಕೊರಡೆ ಮಾಡಿ ಕುರಿ ಎತ್ತು ಸಹಿತ ಎಲ್ಲರನ್ನೂ ದೇವಾಲಯದ ಹೊರಕ್ಕೆ ಅಟ್ಟಿ ಚಿನಿವಾರರ ಹಣವನ್ನು ಚೆಲ್ಲಿ ಮೇಜು ಗಳನ್ನು ಕೆಡವಿದನು.
ಯೋಹಾನನು 2 : 16 (KNV)
ಆತನು ಪಾರಿವಾಳ ಮಾರುವ ವರಿಗೆ--ಇವುಗಳನ್ನು ಇಲ್ಲಿಂದ ತಕ್ಕೊಂಡು ಹೋಗಿರಿ; ನನ್ನ ತಂದೆಯ ಮನೆಯನ್ನು ವ್ಯಾಪಾರದ ಮನೆಯ ನ್ನಾಗಿ ಮಾಡಬೇಡಿರಿ ಅಂದನು.
ಯೋಹಾನನು 2 : 17 (KNV)
ಆಗ ಆತನ ಶಿಷ್ಯರು--ನಿನ್ನ ಆಲಯದ ಆಸಕ್ತಿಯು ನನ್ನನ್ನು ದಹಿಸಿ ಬಿಟ್ಟಿದೆ ಎಂದು ಬರೆದಿರುವದನ್ನು ಜ್ಞಾಪಕಮಾಡಿ ಕೊಂಡರು.
ಯೋಹಾನನು 2 : 18 (KNV)
ಆಗ ಯೆಹೂದ್ಯರು ಆತನಿಗೆ--ನೀನು ಇವುಗಳನ್ನು ಮಾಡುವದಕ್ಕೆ ಯಾವ ಸೂಚಕಕಾರ್ಯ ವನ್ನು ನಮಗೆ ತೋರಿಸುತ್ತೀ ಎಂದು ಕೇಳಿದರು.
ಯೋಹಾನನು 2 : 19 (KNV)
ಯೇಸು ಪ್ರತ್ಯುತ್ತರವಾಗಿ ಅವರಿಗೆ--ಈ ದೇವಾಲ ಯವನ್ನು ಕೆಡವಿದರೆ ನಾನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆನು ಅಂದನು.
ಯೋಹಾನನು 2 : 20 (KNV)
ಅದಕ್ಕೆ ಯೆಹೂದ್ಯರು-- ಈ ದೇವಾಲಯವನ್ನು ಕಟ್ಟುವದಕ್ಕೆ ನಾಲ್ವತ್ತಾರು ವರುಷಗಳು ಹಿಡಿದವು; ನೀನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವಿಯೋ ಅಂದರು.
ಯೋಹಾನನು 2 : 21 (KNV)
ಆದರೆ ಆತನು ತನ್ನ ದೇಹವೆಂಬ ಆಲಯವನ್ನು ಕುರಿತು ಹೇಳಿದನು.
ಯೋಹಾನನು 2 : 22 (KNV)
ಆದದರಿಂದ ಆತನು ಸತ್ತವರೊಳಗಿಂದ ಎದ್ದಮೇಲೆ ಆತನ ಶಿಷ್ಯರು ತಮಗೆ ಹೇಳಿದ ಈ ಮಾತನ್ನು ನೆನಪು ಮಾಡಿಕೊಂಡು ಬರಹವನ್ನೂ ಯೇಸು ತಮಗೆ ಹೇಳಿದ್ದನ್ನೂ ನಂಬಿದರು.
ಯೋಹಾನನು 2 : 23 (KNV)
ಆತನು ಪಸ್ಕಹಬ್ಬದ ದಿನದಲ್ಲಿ ಯೆರೂಸಲೇಮಿ ನಲ್ಲಿದ್ದಾಗ ಆತನು ಮಾಡಿದ ಅದ್ಭುತ ಕಾರ್ಯಗಳನ್ನು ಅನೇಕರು ನೋಡಿ ಆತನ ಹೆಸರಿನಲ್ಲಿ ನಂಬಿಕೆ ಇಟ್ಟರು.
ಯೋಹಾನನು 2 : 24 (KNV)
ಆದರೆ ಯೇಸು ತನ್ನನ್ನು ಅವರಿಗೆ ವಶಪಡಿಸಿ ಕೊಳ್ಳಲಿಲ್ಲ; ಯಾಕಂದರೆ ಆತನು ಎಲ್ಲರನ್ನೂ ಅರಿತ ವನಾಗಿದ್ದನು.
ಯೋಹಾನನು 2 : 25 (KNV)
ಆತನು ಮನುಷ್ಯರ ಅಂತರಂಗವನ್ನು ತಿಳಿದವನಾದ ಕಾರಣ ಯಾರೂ ಯಾವ ಮನುಷ್ಯನ ವಿಷಯದಲ್ಲಿಯೂ ಆತನಿಗೆ ಸಾಕ್ಷಿಕೊಡಬೇಕಾದ ಅವಶ್ಯವಿರಲಿಲ್ಲ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25