ಯೋವೇಲ 2 : 1 (KNV)
ನೀವು ಚೀಯೋನಿನಲ್ಲಿ ಕೊಂಬುಊದಿರಿ, ನನ್ನ ಪರಿಶುದ್ಧ ಪರ್ವತದಲ್ಲಿ ಆರ್ಭಟಿಸಿರಿ; ದೇಶದ ನಿವಾಸಿಗಳೆಲ್ಲರೂ ನಡುಗಲಿ; ಯಾಕಂದರೆ ಕರ್ತನ ದಿನವು ಬರುತ್ತದೆ; ಅದು ಸವಿಾಪ ವಾಗಿದೆ.
ಯೋವೇಲ 2 : 2 (KNV)
ಕತ್ತಲೆಯೂ ಮೊಬ್ಬೂ ಉಳ್ಳ ದಿವಸವೂ; ಮೇಘವೂ ಕಾರ್ಗತ್ತಲೂ ಉಳ್ಳ ದಿವಸ ವೂ; ಬೆಟ್ಟಗಳ ಮೇಲೆ ಹಾಸಿರುವ ಉದಯದ ಹಾಗಿದೆ. ದೊಡ್ಡ ಬಲವಾದ ಜನವು; ಅದರ ಹಾಗೆ ಎಂದೂ ಇದ್ದದ್ದಿಲ್ಲ; ಅದರ ತರುವಾಯ ತಲತಲಾಂತರಗಳ ವರುಷಗಳ ವರೆಗೆ ಇನ್ನು ಇರುವದೇ ಇಲ್ಲ.
ಯೋವೇಲ 2 : 3 (KNV)
ಅವರ ಮುಂದೆ ಬೆಂಕಿ ದಹಿಸುತ್ತದೆ; ಅವರ ಹಿಂದೆ ಜ್ವಾಲೆ ಸುಡುತ್ತದೆ; ಅವರ ಮುಂದೆ ದೇಶವು ಏದೆನ್ ತೋಟದ ಹಾಗಿದೆ; ಅವರ ಹಿಂದೆ ಹಾಳಾದ ಕಾಡು; ಹೌದು, ಅವುಗಳಿಗೆ ಯಾವದೂ ತಪ್ಪಿಸಿಕೊಳ್ಳಲಾರದು.
ಯೋವೇಲ 2 : 4 (KNV)
ಅವರ ಆಕಾರವು ಕುದುರೆಗಳ ಆಕಾರದ ಹಾಗಿದೆ; ಸವಾರರ ಹಾಗೆಯೇ ಓಡುತ್ತಾರೆ.
ಯೋವೇಲ 2 : 5 (KNV)
ಪರ್ವತಾಗ್ರಗಳಲ್ಲಿ ರಥಗಳ ಶಬ್ದದಂತೆ ಹಾರುತ್ತಾರೆ; ಕೂಳೆಯನ್ನು ದಹಿಸುವ ಬೆಂಕಿಯ ಜ್ವಾಲೆಯ ಶಬ್ದದ ಹಾಗೆಯೂ ಯುದ್ಧಕ್ಕೆ ಸಿದ್ಧವಾದ ಬಲವುಳ್ಳ ಜನರ ಹಾಗೆಯೂ
ಯೋವೇಲ 2 : 6 (KNV)
ಅವರ ಮುಂದೆ ಜನರು ಬಹಳವಾಗಿ ನೊಂದುಕೊಳ್ಳುತ್ತಾರೆ. ಎಲ್ಲಾ ಮುಖಗಳು ಕಳೆಗುಂದುತ್ತವೆ.
ಯೋವೇಲ 2 : 7 (KNV)
ಶೂರರ ಹಾಗೆ ಓಡುತ್ತಾರೆ; ಯುದ್ಧ ಶಾಲಿಗಳ ಹಾಗೆ ಗೋಡೆ ಏರುತ್ತಾರೆ; ಒಬ್ಬೊಬ್ಬನು ತನ್ನ ತನ್ನ ಮಾರ್ಗದಲ್ಲಿ ಹೋಗುತ್ತಾನೆ; ತಮ್ಮ ಹಾದಿ ಗಳನ್ನು ಬದಲು ಮಾಡುವದಿಲ್ಲ.
ಯೋವೇಲ 2 : 8 (KNV)
ಒಬ್ಬನು ಇನ್ನೊಬ್ಬ ನನ್ನು ನೂಕುವದಿಲ್ಲ; ಅವರಲ್ಲಿ ಪ್ರತಿಯೊಬ್ಬನು ತನ್ನ ತನ್ನ ದಾರಿಯಲ್ಲಿ ಹೋಗುತ್ತಾನೆ; ಆಯುಧಗಳಲ್ಲಿ ಬಿದ್ದರೂ ಗಾಯವಾಗುವದಿಲ್ಲ.
ಯೋವೇಲ 2 : 9 (KNV)
ಪಟ್ಟಣದಲ್ಲಿ ಅತ್ತಿತ್ತ ತಿರುಗಾಡುತ್ತಾರೆ; ಗೋಡೆಯ ಮೇಲೆ ಓಡುತ್ತಾರೆ; ಮನೆಗಳ ಮೇಲೆ ಹತ್ತುತ್ತಾರೆ; ಕಳ್ಳನ ಹಾಗೆ ಕಿಟಕಿಗಳಿಂದ ಪ್ರವೇಶಿಸುತ್ತಾರೆ.
ಯೋವೇಲ 2 : 10 (KNV)
ಅವರ ಮುಂದೆ ಭೂಮಿಯು ನಡುಗುತ್ತದೆ; ಆಕಾಶಗಳು ಅದುರುತ್ತವೆ; ಸೂರ್ಯ ಚಂದ್ರರು ಕಪ್ಪಾಗುತ್ತವೆ; ನಕ್ಷತ್ರಗಳು ತಮ್ಮ ಪ್ರಕಾಶವನ್ನು ಮರೆ ಮಾಡುತ್ತವೆ.
ಯೋವೇಲ 2 : 11 (KNV)
ಕರ್ತನು ತನ್ನ ಸೈನ್ಯದ ಮುಂದೆ ತನ್ನ ಶಬ್ದವನ್ನು ಮಾಡುತ್ತಾನೆ; ಆತನ ದಂಡು ಬಹು ದೊಡ್ಡದಾಗಿದೆ; ಹೌದು, ಬಲವಾದ ದ್ದಾಗಿದ್ದು ಆತನ ವಾಕ್ಯವನ್ನು ನಡಿಸುತ್ತದೆ; ಕರ್ತನ ದಿನವು ದೊಡ್ಡದು, ಮಹಾ ಭಯಂಕರವಾದದ್ದು, ಅದನ್ನು ತಾಳಿಕೊಳ್ಳುವವನ್ಯಾರು?
ಯೋವೇಲ 2 : 12 (KNV)
ಹೀಗಿರುವದರಿಂದ ಈಗ ಕರ್ತನು ಅನ್ನುವದೇ ನಂದರೆ--ಪೂರ್ಣ ಹೃದಯದಿಂದಲೂ ಉಪವಾಸ ದಿಂದಲೂ ಅಳುವಿಕೆಯಿಂದಲೂ ಗೋಳಾಟದಿಂದ ಲೂ ನನ್ನ ಕಡೆಗೆ ತಿರುಗಿಕೊಳ್ಳಿರಿ.
ಯೋವೇಲ 2 : 13 (KNV)
ನಿಮ್ಮ ಬಟ್ಟೆಗಳನ್ನಲ್ಲ, ನಿಮ್ಮ ಹೃದಯವನ್ನು ಹರಕೊಂಡು ನಿಮ್ಮ ದೇವರಾದ ಕರ್ತನ ಕಡೆಗೆ ತಿರುಗಿಕೊಳ್ಳಿರಿ; ಆತನು ದಯೆ ಕರುಣೆ ದೀರ್ಘಶಾಂತಿ ಮಹಾ ಕೃಪೆಯೂ ಉಳ್ಳವನಾಗಿ ಕೇಡಿಗೆ ಪಶ್ಚಾತ್ತಾಪಪಡುತ್ತಾನೆ.
ಯೋವೇಲ 2 : 14 (KNV)
ಆತನು ತಿರುಗಿಕೊಂಡು ಪಶ್ಚಾತ್ತಾಪಪಟ್ಟು ತನ್ನ ಹಿಂದೆ ಆಶೀರ್ವಾದವನ್ನು ಅಂದರೆ ನಿಮ್ಮ ದೇವರಾದ ಕರ್ತನಿಗಾಗಿ ಆಹಾರ ದರ್ಪಣೆಯನ್ನೂ ಪಾನದರ್ಪಣೆಯನ್ನೂ ಉಳಿಸುವ ನೇನೋ ಯಾರು ಬಲ್ಲರು?
ಯೋವೇಲ 2 : 15 (KNV)
ಚೀಯೋನಿನಲ್ಲಿ ಕೊಂಬು ಊದಿರಿ; ಉಪವಾಸವನ್ನು ಪರಿಶುದ್ಧ ಮಾಡಿರಿ; ಪವಿತ್ರ ಸಂಘವನ್ನು ಕರೆಯಿರಿ.
ಯೋವೇಲ 2 : 16 (KNV)
ಜನರನ್ನು ಕೂಡಿಸಿರಿ, ಸಭೆಯನ್ನು ಪರಿಶುದ್ಧಮಾಡಿರಿ; ಹಿರಿಯರನ್ನು ಒಟ್ಟುಗೂಡಿಸಿರಿ, ಮಕ್ಕಳನ್ನೂ ಮೊಲೆ ಕೂಸುಗಳನ್ನೂ ಕೂಡಿಸಿರಿ; ಮದುಮಗನು ತನ್ನ ಕೊಠಡಿಯೊಳ ಗಿಂದಲೂ ಮದುಮಗಳು ತನ್ನ ಅರೆಯೊಳಗಿಂದಲೂ ಹೊರಡಲಿ.
ಯೋವೇಲ 2 : 17 (KNV)
ಕರ್ತನ ಸೇವಕರಾದ ಯಾಜಕರು ಅಂಗಳಕ್ಕೂ ಬಲಿಪೀಠಕ್ಕೂ ನಡುವೆ ಅತ್ತು ಹೀಗೆ ಹೇಳಲಿ--ಓ ಕರ್ತನೇ, ನಿನ್ನ ಜನರನ್ನು ಕನಿಕರಿಸು, ಜನಾಂಗಗಳು ಅವರ ಮೇಲೆ ಆಳುವ ಹಾಗೆ ನಿನ್ನ ಬಾಧ್ಯತೆಯನ್ನು ನಿಂದೆಗೆ ಒಪ್ಪಿಸಬೇಡ; ಅವರ ದೇವರು ಎಲ್ಲಿ ಎಂದು ಅವರು ಜನಗಳಲ್ಲಿ ಯಾಕೆ ಹೇಳಬೇಕು?
ಯೋವೇಲ 2 : 18 (KNV)
ಆಗ ಕರ್ತನು ತನ್ನ ದೇಶಕ್ಕೋಸ್ಕರ ರೋಷ ಗೊಂಡು ತನ್ನ ಜನರನ್ನು ಕನಿಕರಿಸುವನು.
ಯೋವೇಲ 2 : 19 (KNV)
ಹೌದು, ಕರ್ತನು ಉತ್ತರ ಕೊಟ್ಟು ತನ್ನ ಜನರಿಗೆ ಹೇಳುವದೇ ನಂದರೆ--ಇಗೋ, ನಾನು ನಿಮಗೆ ಧಾನ್ಯವನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಸಾಕಾಗುವಷ್ಟು ಕಳು ಹಿಸಿ ನಿಮ್ಮನ್ನು ಇನ್ನು ಮೇಲೆ ಜನಾಂಗಗಳಲ್ಲಿ ನಿಂದಿತ ರಾಗಿ ಇಡುವದಿಲ್ಲ.
ಯೋವೇಲ 2 : 20 (KNV)
ಆದರೆ ಉತ್ತರ ದಿಕ್ಕಿನ ಸೈನ್ಯವನ್ನು ನಿಮಗೆ ದೂರಮಾಡಿ ಅವನನ್ನು ಒಣ ಭೂಮಿಗೂ ಅರಣ್ಯಕ್ಕೂ ಅವನ ಮುಂಭಾಗವನ್ನು ಪೂರ್ವದ ಸಮುದ್ರಕ್ಕೂ ಅವನ ಹಿಂಭಾಗವನ್ನು ಪಶ್ಚಿಮ ಸಮು ದ್ರಕ್ಕೂ ಓಡಿಸಿ ಬಿಡುವೆನು; ಅವನ ದುರ್ವಾಸನೆಯು ಏರುವದು; ಅವನ ನಾತವು ಏರುವದು; ಅವನು ದೊಡ್ಡದಾದವುಗಳನ್ನು ಮಾಡಿದ್ದಾನೆ.
ಯೋವೇಲ 2 : 21 (KNV)
ಓ ದೇಶವೇ, ಭಯಪಡಬೇಡ, ಉಲ್ಲಾಸಿಸಿ ಸಂತೋಷವಾಗಿರು; ಕರ್ತನು ಮಹತ್ತಾದವುಗಳನ್ನು ಮಾಡುತ್ತಾನೆ.
ಯೋವೇಲ 2 : 22 (KNV)
ಹೊಲದ ಮೃಗಗಳೇ, ಭಯಪಡಬೇಡಿರಿ; ಅಡ ವಿಯ ಮೇವಿನ ಸ್ಥಳಗಳು ಮೊಳೆಯುತ್ತವೆ; ಮರಗಳು ತಮ್ಮ ಫಲವನ್ನು ಫಲಿಸುತ್ತವೆ; ಅಂಜೂರದ ಗಿಡವೂ ದ್ರಾಕ್ಷೇ ಬಳ್ಳಿಯೂ ತಮ್ಮ ಫಲವನ್ನು ಕೊಡುತ್ತವೆ.
ಯೋವೇಲ 2 : 23 (KNV)
ಹಾಗಾದರೆ ಚೀಯೋನಿನ ಮಕ್ಕಳೇ, ನಿಮ್ಮ ದೇವ ರಾದ ಕರ್ತನಲ್ಲಿ ಉಲ್ಲಾಸಿಸಿ, ಸಂತೋಷವಾಗಿರ್ರಿ; ನಿಮಗೆ ಮುಂಗಾರು ಮಳೆಯನ್ನು ಸರಿಯಾಗಿ ಕೊಡು ತ್ತಾನೆ; ಮುಂಗಾರು ಹಿಂಗಾರು ಮಳೆಗಳನ್ನು ಮುಂಚಿನ ಹಾಗೆ ನಿಮಗೆ ಸುರಿಸುತ್ತಾನೆ.
ಯೋವೇಲ 2 : 24 (KNV)
ಕಣಗಳು ಧಾನ್ಯದಿಂದ ತುಂಬುವವು; ತೊಟ್ಟಿಗಳು ದ್ರಾಕ್ಷಾರಸದಿಂದಲೂ ಎಣ್ಣೆಯಿಂದಲೂ ತುಂಬಿ ತುಳುಕುವವು.
ಯೋವೇಲ 2 : 25 (KNV)
ನಾನು ನಿಮ್ಮಲ್ಲಿ ಕಳುಹಿಸದಂಥ, ನನ್ನ ದೊಡ್ಡ ಸೈನ್ಯವಾದ ಹುಳವೂ ಕಂಬಳಿ ಹುಳವೂ ಒಳಗೆ ನಾಶಮಾಡುವ ಹುಳವೂ ಮಿಡತೆಗಳೂ ತಿಂದ ವರುಷಗಳಿಗೆ ಬದಲಾಗಿ ನಿಮಗೆ ಕೊಡುವೆನು.
ಯೋವೇಲ 2 : 26 (KNV)
ಸಮೃದ್ಧಿಯಾಗಿ ಉಂಡು, ತೃಪ್ತಿಪಟ್ಟು ನಿಮ್ಮಲ್ಲಿ ಅದ್ಭುತದಿಂದ ನಡಿಸಿದ ನಿಮ್ಮ ದೇವರಾದ ಕರ್ತನ ಹೆಸರನ್ನು ಸ್ತುತಿಸುವಿರಿ; ನನ್ನ ಜನರು ಎಂದೆಂದಿಗೂ ನಾಚಿಕೆಪಡರು.
ಯೋವೇಲ 2 : 27 (KNV)
ನಾನು ಇಸ್ರಾಯೇಲಿನ ಮಧ್ಯದಲ್ಲಿ ಇದ್ದೇನೆಂದೂ ಮತ್ತೊಬ್ಬ ನಲ್ಲ, ನಾನೇ ನಿಮ್ಮ ದೇವರಾದ ಕರ್ತನಾಗಿದ್ದೇನೆಂದೂ ನೀವು ತಿಳುಕೊಳ್ಳುವಿರಿ; ನನ್ನ ಜನರು ಎಂದೆಂದಿಗೂ ನಾಚಿಕೆಪಡರು.
ಯೋವೇಲ 2 : 28 (KNV)
ಆಮೇಲೆ ಆಗುವದೇನಂದರೆ--ಎಲ್ಲಾ ಶರೀರಗಳ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ಆಗ ನಿಮ್ಮ ಕುಮಾರರೂ ಕುಮಾರ್ತೆಯರೂ ಪ್ರವಾದಿ ಸುವರು; ನಿಮ್ಮ ವೃದ್ಧರು ಕನಸುಗಳನ್ನು ಕಾಣುವರು; ನಿಮ್ಮ ಯೌವನಸ್ಥರು ದರ್ಶನಗಳನ್ನು ನೋಡುವರು.
ಯೋವೇಲ 2 : 29 (KNV)
ದಾಸರ ಮೇಲೆಯೂ ದಾಸಿಯರ ಮೇಲೆಯೂ ಆ ದಿವಸಗಳಲ್ಲಿ ನನ್ನ ಆತ್ಮವನ್ನು ಸುರಿಸುವೆನು.
ಯೋವೇಲ 2 : 30 (KNV)
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಅದ್ಭುತಗಳನ್ನೂ ರಕ್ತವನ್ನೂ ಬೆಂಕಿಯನ್ನೂ ಹೊಗೆಯ ಸ್ತಂಭಗಳನ್ನೂ ತೋರಿಸುವೆನು.
ಯೋವೇಲ 2 : 31 (KNV)
ಕರ್ತನ ದೊಡ್ಡ ಭಯಂಕರವಾದ ದಿನವು ಬರುವದಕ್ಕಿಂತ ಮುಂಚೆ, ಸೂರ್ಯನು ಕತ್ತಲೆಗೂ ಚಂದ್ರನು ರಕ್ತಕ್ಕೂ ಮಾರ್ಪಡುವವು.
ಯೋವೇಲ 2 : 32 (KNV)
ಆಗುವದೇನಂದರೆ--ಕರ್ತನ ಹೆಸರನ್ನು ಹೇಳಿ ಕೊಳ್ಳುವವರೆಲ್ಲರೂ ರಕ್ಷಿಸಲ್ಪಡುವರು; ಚೀಯೋನ್ ಪರ್ವತದಲ್ಲಿಯೂ ಯೆರೂಸಲೇಮಿನಲ್ಲಿಯೂ ಕರ್ತನು ಕರೆಯುವ ಉಳಿದವರಲ್ಲಿಯೂ ಕರ್ತನು ಹೇಳಿದ ಪ್ರಕಾರ ಬಿಡುಗಡೆಯು ಇರುವದು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32