ಯೆರೆಮಿಯ 20 : 1 (KNV)
ಯೆರೆವಿಾಯನು ಈ ಮಾತುಗಳನ್ನು ಪ್ರವಾದಿಸಲಾಗಿ ಕರ್ತನ ಆಲಯದಲ್ಲಿ ಮುಖ್ಯ ಅಧಿಕಾರಿಯಾಗಿದ್ದ ಯಾಜಕನಾದ ಇಮ್ಮೇರನ ಮಗನಾದ ಪಷ್ಹೂರನು ಕೇಳಿದನು.
ಯೆರೆಮಿಯ 20 : 2 (KNV)
ಆಗ ಪಷ್ಹೂರನು ಪ್ರವಾದಿಯಾದ ಯೆರೆವಿಾಯನನ್ನು ಹೊಡೆದು ಅವನನ್ನು ಕರ್ತನ ಆಲಯದ ಬಳಿಯಲ್ಲಿದ್ದ ಬೆನ್ಯಾವಿಾ ನನ ಮೇಲ್ಭಾಗಲಲ್ಲಿದ್ದ ಕೋಳದಲ್ಲಿ ಹಾಕಿಸಿದನು.
ಯೆರೆಮಿಯ 20 : 3 (KNV)
ಮರುದಿನದಲ್ಲಿ ಆದದ್ದೇನಂದರೆ, ಪಷ್ಹೂರನು ಯೆರೆವಿಾಯನನ್ನು ಕೋಳದಿಂದ ಬಿಡಿಸಿದನು. ಆಗ ಯೆರೆವಿಾಯನು ಅವನಿಗೆ--ಕರ್ತನು ನಿನಗೆ ಇನ್ನು ಪಷ್ಹೂರನೆಂಬ ಹೆಸರಿನಿಂದಲ್ಲ, ಮಾಗೋರ್ ಮಿಸ್ಸಾ ಬೀಬ್ನೆಂದು ಕರೆಯುತ್ತಾನೆಂದು ಹೇಳಿದನು.
ಯೆರೆಮಿಯ 20 : 4 (KNV)
ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನಿನ್ನನ್ನು ನಿನ್ನ ಸ್ನೇಹಿತರೆಲ್ಲರೂ ದಿಗಿಲುಪಡುವಂತೆ ಮಾಡುತ್ತೇನೆ; ಅವರು ತಮ್ಮ ಶತ್ರುಗಳ ಕತ್ತಿಯಿಂದ ಬೀಳುವರು; ನಿನ್ನ ಕಣ್ಣುಗಳು ಅದನ್ನು ನೋಡುವವು; ಯೆಹೂದವನ್ನೆಲ್ಲಾ ನಾನು ಬಾಬೆಲಿನ ಅರಸನ ಕೈಗೆ ಒಪ್ಪಿಸುವೆನು; ಅವನು ಅವರನ್ನು ಬಾಬೆಲಿಗೆ ಒಯ್ದು ಕತ್ತಿಯಿಂದ ಕೊಲ್ಲುವನು.
ಯೆರೆಮಿಯ 20 : 5 (KNV)
ಇದಲ್ಲದೆ ಈ ಪಟ್ಟಣದ ಎಲ್ಲಾ ಸಂಪತ್ತನ್ನೂ ಅದರ ಎಲ್ಲಾ ಕಷ್ಟಾರ್ಜಿತವನ್ನೂ ಅದರ ಎಲ್ಲಾ ಅಮೂಲ್ಯವಾದವುಗಳನ್ನೂ ಯೆಹೂ ದದ ಅರಸರ ಎಲ್ಲಾ ಭಂಡಾರಗಳನ್ನೂ ಒಪ್ಪಿಸುವೆನು; ಶತ್ರುಗಳ ಕೈಗೆ ಅವರನ್ನು ಒಪ್ಪಿಸುವೆನು. ಅವರು ಅವುಗಳನ್ನು ಸುಲುಕೊಂಡು ತಕ್ಕೊಂಡು ಬಾಬೆಲಿಗೆ ಒಯ್ಯುವರು.
ಯೆರೆಮಿಯ 20 : 6 (KNV)
ಪಷ್ಹೂರನೇ, ನೀನೂ ನಿನ್ನ ಮನೆಯ ನಿವಾಸಿಗಳೆಲ್ಲರೂ ಸೆರೆಗೆ ಹೋಗುವಿರಿ; ಬಾಬೆಲಿಗೆ ಹೋಗಿ ಅಲ್ಲಿಯೇ ಸಾಯುವಿ, ಅಲ್ಲಿಯೇ ಹೂಣಿಡ ಲ್ಪಡುವಿ; ನಿನಗೂ ನಿನ್ನಿಂದ ಸುಳ್ಳು ಪ್ರವಾದನೆ ಕೇಳಿದ ನಿನ್ನ ಸ್ನೇಹಿತರೆಲ್ಲರಿಗೂ ಹಾಗೆಯೇ ಆಗುವದು.
ಯೆರೆಮಿಯ 20 : 7 (KNV)
ಓ ಕರ್ತನೇ, ನೀನು ನನ್ನನ್ನು ವಂಚಿಸಿದಿ; ನಾನು ವಂಚಿಸಲ್ಪಟ್ಟೆನು. ನೀನು ನನಗಿಂತ ಬಲಿಷ್ಠನಾಗಿದ್ದು ಜಯಿಸಿದಿ; ನಾನು ಪ್ರತಿದಿನ ಪರಿಹಾಸ್ಯಕ್ಕೆ ಗುರಿ ಯಾಗಿದ್ದೇನೆ; ಪ್ರತಿಯೊಬ್ಬನು ನನ್ನನ್ನು ಹಾಸ್ಯಮಾಡು ತ್ತಾನೆ.
ಯೆರೆಮಿಯ 20 : 8 (KNV)
ನಾನು ಮಾತನಾಡುವನಾದದ್ದರಿಂದ ಗಟ್ಟಿಯಾಗಿ ಕೂಗುತ್ತೇನೆ; ಬಲಾತ್ಕಾರವೂ ಕೊಳ್ಳೆಯೂ ಎಂದು ಕೂಗುತ್ತೇನೆ ಕರ್ತನ ವಾಕ್ಯವು ನನಗೆ ಪ್ರತಿದಿನ ಪರಿಹಾಸ್ಯಕ್ಕೂ ಗೇಲಿಗೂ ಆಯಿತು.
ಯೆರೆಮಿಯ 20 : 9 (KNV)
ಆಗ ನಾನು ಆತನನ್ನು ಕುರಿತು ಏನೂ ಹೇಳುವದಿಲ್ಲ, ಇಲ್ಲವೆ ಆತನ ಹೆಸರಿನಲ್ಲಿ ಇನ್ನು ಮಾತನಾಡುವದೇ ಇಲ್ಲ ಎಂದು ಅಂದುಕೊಂಡೆನು; ಆದರೆ ಆತನ ವಾಕ್ಯವು ನನ್ನ ಎಲುಬುಗಳಲ್ಲಿ ಮುಚ್ಚಲ್ಪಟ್ಟಿರುವ ಸುಡುವ ಬೆಂಕಿಯ ಹಾಗೆ ನನ್ನ ಹೃದಯದಲ್ಲಿ ಇತ್ತು; ಬಿಗಿಹಿಡಿದು ದಣಿ ದೆನು. ನನ್ನಿಂದ ಆಗದೆ ಹೋಯಿತು.
ಯೆರೆಮಿಯ 20 : 10 (KNV)
ಅನೇಕರ ಚಾಡಿಯನ್ನು ಕೇಳಿದೆನು; ಸುತ್ತಲೂ ಭಯವದೆ--ತಿಳಿಸಿರಿ, ಆಗ ಅದನ್ನು ನಾವು ತಿಳಿಸುತ್ತೇವೆ ಎಂದು ಅನ್ನುತ್ತಾರೆ; ನನ್ನ ಆಪ್ತರೆಲ್ಲರೂ ನಾನು ಕುಂಟುವದನ್ನು ನೋಡಿಕೊಳ್ಳುತ್ತಾ--ಒಂದು ವೇಳೆ ಅವನು ಮೋಸ ಗೊಂಡಾನು; ಆಗ ನಾವು ಅವನನ್ನು ಗೆದ್ದು ಅವನಲ್ಲಿ ಮುಯ್ಯಿ ತೀರಿಸಿಕೊಳ್ಳುವೆವು ಅನ್ನುತ್ತಾರೆ.
ಯೆರೆಮಿಯ 20 : 11 (KNV)
ಆದರೆ ಕರ್ತನು ಭಯಂಕರವಾದ ಪರಾಕ್ರಮಶಾಲಿಯ ಹಾಗೆ ನನ್ನ ಸಂಗಡ ಇದ್ದಾನೆ; ಆದದರಿಂದ ನನ್ನನ್ನು ಹಿಂಸಿಸು ವವರು ಎಡವುವರು, ಗೆಲ್ಲುವದಿಲ್ಲ; ಅನುಕೂಲ ವಾಗದೆ ಇದ್ದದರಿಂದ ಅವರು ಬಹಳ ನಾಚಿಕೆಪಡುವರು; ಅವರ ಗಲಿಬಿಲಿಯು ನಿತ್ಯವಾಗಿರುವದು. ಅದು ಮರೆತು ಹೋಗಲ್ಪಡುವದಿಲ್ಲ.
ಯೆರೆಮಿಯ 20 : 12 (KNV)
ಓ ಸೈನ್ಯಗಳ ಕರ್ತನೇ, ನೀತಿ ವಂತರನ್ನು ಶೋಧಿಸುವಾತನೇ, ಅಂತರಿಂದ್ರಿಯಗ ಳನ್ನೂ ಹೃದಯವನ್ನೂ ನೋಡುವಾತನೇ, ನೀನು ಅವರಿಗೆ ಪ್ರತಿದಂಡನೆ ಮಾಡುವದನ್ನು ನಾನು ನೋಡು ವಂತೆ ಮಾಡು. ನಿನಗೆ ನನ್ನ ವ್ಯಾಜ್ಯವನ್ನು ತಿಳಿಯ ಮಾಡಿದ್ದೇನೆ.
ಯೆರೆಮಿಯ 20 : 13 (KNV)
ಕರ್ತನಿಗೆ ಹಾಡಿರಿ; ಕರ್ತನನ್ನು ಸ್ತುತಿ ಸಿರಿ; ಆತನು ಬಡವನ ಪ್ರಾಣವನ್ನು ಕೇಡು ಮಾಡುವ ವರ ಕೈಯಿಂದ ತಪ್ಪಿಸಿದ್ದಾನೆ.
ಯೆರೆಮಿಯ 20 : 14 (KNV)
ನಾನು ಹುಟ್ಟಿದ ದಿನವು ಶಪಿಸಲ್ಪಡಲಿ, ನನ್ನ ತಾಯಿ ನನ್ನನ್ನು ಹೆತ್ತ ದಿನವು ಆಶೀರ್ವದಿಸಲ್ಪಡದಿರಲಿ.
ಯೆರೆಮಿಯ 20 : 15 (KNV)
ನನ್ನ ತಂದೆಗೆ--ನಿನಗೆ ಗಂಡು ಕೂಸು ಹುಟ್ಟಿದೆ ಎಂಬ ಸಮಾಚಾರವನ್ನು ಹೇಳಿ ಬಹಳ ಸಂತೋಷ ಉಂಟು ಮಾಡಿದವನು ಶಪಿಸಲ್ಪಡಲಿ!
ಯೆರೆಮಿಯ 20 : 16 (KNV)
ಕರ್ತನು ಪಶ್ಚಾತ್ತಾಪಪಡದೆ ಕೆಡವಿಬಿಟ್ಟ ಪಟ್ಟಣಗಳ ಗತಿಯು ಅವನಿಗೆ ಬರಲಿ; ಅವನು ಬೆಳಿಗ್ಗೆ ಕೂಗನ್ನೂ ಮಧ್ಯಾಹ್ನ ದಲ್ಲಿ ಆರ್ಭಟವನ್ನೂ ಕೇಳಲಿ
ಯೆರೆಮಿಯ 20 : 17 (KNV)
ನಾನು ಗರ್ಭಬಿಟ್ಟಾ ಗಲೇ ಆತನು ನನ್ನನ್ನು ಕೊಲ್ಲದೆ ಹೋದದ್ದರಿಂದ ಇಲ್ಲವೆ ನನ್ನ ತಾಯಿ ನನಗೆ ಸಮಾಧಿಯಾಗಿದ್ದು ಅವಳ ಗರ್ಭವು ನಿತ್ಯವಾಗಿ ಬಸುರಾಗಿಯೇ ಇದ್ದರೆ ಒಳ್ಳೇದಾ ಗಿತ್ತು.
ಯೆರೆಮಿಯ 20 : 18 (KNV)
ನಾನು ಕಷ್ಟವನ್ನೂ ಚಿಂತೆಯನ್ನೂ ನೋಡುವ ದಕ್ಕೂ ನನ್ನ ದಿನಗಳು ನಾಚಿಕೆಯಲ್ಲಿ ಕಳೆದುಹೋಗು ವದಕ್ಕೂ ಗರ್ಭದಿಂದ ಹೊರಗೆ ಬಂದದ್ದು ಯಾಕೆ?

1 2 3 4 5 6 7 8 9 10 11 12 13 14 15 16 17 18

BG:

Opacity:

Color:


Size:


Font: