ಯೆಶಾಯ 64 : 1 (KNV)
ಆಹಾ, ನೀನು ಆಕಾಶಗಳನ್ನು ಹರಿದು ಬಿಟ್ಟು, ಇಳಿದು ಬಂದಿದ್ದರೆ ಎಷ್ಟೋ ಚೆನ್ನಾ ಗಿತ್ತು! ಬಾ! ಬೆಟ್ಟಗಳು ನಿನ್ನ ಸಮ್ಮುಖದಲ್ಲಿ ಕರಗಲಿ! ಜನಾಂಗಗಳು ನಿನ್ನ ಸಮ್ಮುಖದಲ್ಲಿ ನಡುಗುವ ಹಾಗೆ,
ಯೆಶಾಯ 64 : 2 (KNV)
ಬೆಂಕಿ ಕಟ್ಟಿಗೆಯನ್ನು ಹೊತ್ತಿಸುವಂತೆಯೂ ಬೆಂಕಿ ನೀರನ್ನು ಉಕ್ಕಿಸುವಂತೆಯೂ ನಿನ್ನ ಹೆಸರು ನಿನ್ನ ವೈರಿಗಳಿಗೆ ತಿಳಿಯುವಂತೆಯೂ ಮಾಡು!
ಯೆಶಾಯ 64 : 3 (KNV)
ನಾವು ಎದುರು ನೋಡದೆ ಇದ್ದ ಭಯಂಕರವಾದವುಗಳನ್ನು ನೀನು ಮಾಡಿದಾಗ ಇಳಿದು ಬಂದಿ; ಬೆಟ್ಟಗಳು ನಿನ್ನ ಪ್ರಸನ್ನತೆಯಿಂದ ಕರಗಿಹೋದವು.
ಯೆಶಾಯ 64 : 4 (KNV)
ದೇವರೇ, ನಿನಗೋಸ್ಕರ ಕಾದುಕೊಳ್ಳುವವನಿಗೆ ನೀನು ಮಾಡು ವದನ್ನು, ಲೋಕದ ಉತ್ಪತ್ತಿಗೆ ಮುಂಚೆ ನಿನ್ನ ಹೊರ ತಾಗಿ ಯಾರೂ ಕೇಳಲಿಲ್ಲ ಇಲ್ಲವೆ ಯಾರ ಕಿವಿ ಯಲ್ಲಿಯೂ ಬೀಳಲಿಲ್ಲ, ಯಾರ ಕಣ್ಣು ನೋಡಲಿಲ್ಲ.
ಯೆಶಾಯ 64 : 5 (KNV)
ಸಂತೋಷಪಟ್ಟು ನೀತಿಯನ್ನು ಕೈಕೊಳ್ಳುವವನನ್ನೂ ನಿನ್ನ ಮಾರ್ಗಗಳಲ್ಲಿ ನಿನ್ನನ್ನು ಜ್ಞಾಪಕಮಾಡುವವ ನನ್ನೂ ನೀನು ಎದುರುಗೊಳ್ಳುತ್ತೀ; ಇಗೋ, ನೀನು ರೌದ್ರನಾಗಿರುವಿ, ಯಾಕಂದರೆ ನಾವು ರಕ್ಷಿಸಲ್ಪಡದ ಹಾಗೆ ಪಾಪದಲ್ಲಿ ಮುಂದುವರಿದೆವು.
ಯೆಶಾಯ 64 : 6 (KNV)
ನಾವೆಲ್ಲರೂ ಅಶುದ್ದವಾದದ್ದರ ಹಾಗೆ ಇದ್ದೇವೆ; ನಮ್ಮ ನೀತಿ ಕಾರ್ಯಗಳು ಮೈಲಿಗೆ ವಸ್ತ್ರದ ಹಾಗಿವೆ; ನಾವೆಲ್ಲರೂ ಎಲೆಯ ಹಾಗೆ ಬಾಡುತ್ತೇವೆ; ನಮ್ಮ ಅಕ್ರಮಗಳು ಗಾಳಿಯಂತೆ ನಮ್ಮನ್ನು ಎತ್ತಿಕೊಂಡು ಹೋಗಿವೆ.
ಯೆಶಾಯ 64 : 7 (KNV)
ನಿನ್ನ ಹೆಸರನ್ನು ಕರೆಯುವವನೂ ನಿನ್ನನ್ನು ಹಿಡು ಕೊಳ್ಳುವದಕ್ಕೆ ತನ್ನನ್ನು ಪ್ರೇರಿಸಿಕೊಳ್ಳುವವನು ಒಬ್ಬನೂ ಇಲ್ಲ; ನಿನ್ನ ಮುಖವನ್ನು ನಮಗೆ ಮರೆಮಾಡಿದ್ದೀ; ನಮ್ಮ ಅಕ್ರಮಗಳಿಗಾಗಿ ನಮ್ಮನ್ನು ದಹಿಸಿಬಿಟ್ಟಿದ್ದೀ.
ಯೆಶಾಯ 64 : 8 (KNV)
ಆದರೆ ಈಗ ಓ ಕರ್ತನೇ, ನಮ್ಮ ತಂದೆಯು ನೀನೇ; ನಾವು ಮಣ್ಣು, ನೀನು ನಮ್ಮ ಕುಂಬಾರನು; ನಾವೆ ಲ್ಲರೂ ನಿನ್ನ ಕೈಕೆಲಸವೇ.
ಯೆಶಾಯ 64 : 9 (KNV)
ಓ ಕರ್ತನೇ, ಅತ್ಯಧಿಕ ವಾಗಿ ರೌದ್ರನಾಗಬೇಡ; ಎಂದೆಂದಿಗೂ ಅಕ್ರಮ ವನ್ನು ಜ್ಞಾಪಕಮಾಡಬೇಡ; ಇಗೋ, ನೋಡು, ನಾವು ಬೇಡುತ್ತೇವೆ ದೃಷ್ಟಿಯಿಡು; ನಾವೆಲ್ಲರೂ ನಿನ್ನ ಜನರೇ.
ಯೆಶಾಯ 64 : 10 (KNV)
ನಿನ್ನ ಪರಿಶುದ್ಧ ಪಟ್ಟಣಗಳು ಅಡವಿ ಯಾದವು; ಚೀಯೋನು ಅಡವಿಯಾಯಿತು; ಯೆರೂ ಸಲೇಮು ಹಾಳಾಯಿತು.
ಯೆಶಾಯ 64 : 11 (KNV)
ನಮ್ಮ ತಂದೆಗಳು ನಿನ್ನನ್ನು ಕೊಂಡಾಡಿದ ನಮ್ಮ ಪರಿಶುದ್ಧ ಮತ್ತು ಸುಂದರ ವಾದ ಮನೆ ಬೆಂಕಿಯಿಂದ ಸುಟ್ಟುಹೋಯಿತು; ನಮ್ಮ ಸೊಗಸಾದವುಗಳೆಲ್ಲಾ ನಾಶವಾದವು.
ಯೆಶಾಯ 64 : 12 (KNV)
ಇವು ಹೀಗಿರಲಾಗಿ ಕರ್ತನೇ, ನಿನ್ನನ್ನು ಬಿಗಿಹಿಡುಕೊಳ್ಳು ತ್ತೀಯೋ? ಮೌನವಾಗಿದ್ದು ನಮ್ಮನ್ನು ಅತ್ಯಧಿಕವಾಗಿ ಕುಗ್ಗಿಸುವಿಯೋ?

1 2 3 4 5 6 7 8 9 10 11 12