ಯೆಶಾಯ 52 : 1 (KNV)
ಓ ಚೀಯೋನೇ, ಎಚ್ಚರವಾಗು, ಎಚ್ಚರವಾಗು, ನಿನ್ನ ಬಲವನ್ನು ಹೊಂದಿಕೋ, ಓ ಯೆರೂಸಲೇಮೇ, ಪರಿಶುದ್ಧ ಪಟ್ಟಣವೇ, ನಿನ್ನ ಸೌಂದರ್ಯವಾದ ಉಡುಪುಗಳನ್ನು ಧರಿಸಿಕೋ; ಯಾಕಂದರೆ ಇಂದಿನಿಂದ ಸುನ್ನತಿಯಿಲ್ಲದವರೂ ಅಶುದ್ಧರೂ ನಿನ್ನೊಳಗೆ ಬರುವದಿಲ್ಲ.
ಯೆಶಾಯ 52 : 2 (KNV)
ಓ ಯೆರೂಸ ಲೇಮೇ, ಧೂಳನ್ನು ಝಾಡಿಸಿಕೋ; ಎದ್ದು ಕೂತು ಕೋ, ಓ ಸೆರೆಯಾದ ಚೀಯೋನ್ ಕುಮಾರಿಯೇ, ನಿನ್ನ ಕುತ್ತಿಗೆಯ ಪಾಶಗಳನ್ನು ಬಿಚ್ಚಿಕೋ.
ಯೆಶಾಯ 52 : 3 (KNV)
ಕರ್ತನು ಹೀಗನ್ನುತ್ತಾನೆ--ನಿಮ್ಮನ್ನು ನೀವೇ ನಿಷ್ಫಲವಾಗಿ ಮಾಡಿಕೊಂಡಿರಿ; ಹಣವಿಲ್ಲದೇ ನೀವು ವಿಮೋಚಿಸಲ್ಪಡುವಿರಿ.
ಯೆಶಾಯ 52 : 4 (KNV)
ಕರ್ತನಾದ ದೇವರು ಹೀಗ ನ್ನುತ್ತಾನೆ, ನನ್ನ ಜನರು ಪೂರ್ವದಲ್ಲಿ ಇಳುಕೊಳ್ಳುವ ದಕ್ಕೆ ಐಗುಪ್ತಕ್ಕೆ ಹೋದರು; ಅಶ್ಶೂರಿನವರು ಕಾರಣ ವಿಲ್ಲದೆ ಅವರನ್ನು ಹಿಂಸಿಸಿದರು.
ಯೆಶಾಯ 52 : 5 (KNV)
ಹಾಗಾದರೆ ಈಗ ಕರ್ತನು ಹೇಳುವದೇನಂದರೆ ನನಗೆ ಇಲ್ಲಿ ಏನಿದೆ? ನನ್ನ ಜನರು ಏನೂ ಇಲ್ಲದೆ ಒಯ್ಯಲ್ಪಟ್ಟಿದ್ದಾರಲ್ಲಾ; ಆಳುವವರು ಅವರನ್ನು ಗೋಳಾಡಿಸುತ್ತಾರಲ್ಲಾ ಮತ್ತು ನನ್ನ ಹೆಸರು ಪ್ರತಿದಿನವೂ ಎಡೆಬಿಡದೇ ದೂಷಣೆಗೆ ಗುರಿಯಾಗಿದೆ ಎಂದು ಕರ್ತನು ಹೇಳುತ್ತಾನೆ.
ಯೆಶಾಯ 52 : 6 (KNV)
ಆದದರಿಂದ ನನ್ನ ಜನರು ನನ್ನ ಹೆಸರನ್ನು ತಿಳಿದುಕೊಳ್ಳುವರು; ಹೀಗೆ ಆ ದಿನದಲ್ಲಿ ಮಾತನಾಡಿದಾತನು ನಾನೇ, ಇಗೋ, ಅದು ನಾನೇ ಎಂದು ಅವರು ಗ್ರಹಿಸುವರು.
ಯೆಶಾಯ 52 : 7 (KNV)
ಒಳ್ಳೆಯ ಶುಭಸಮಾಚಾರವನ್ನು ತರುವವನ, ರಕ್ಷಣೆಯನ್ನು ಪ್ರಕಟಿಸುವವನ, ಚೀಯೋನಿಗೆ ನಿನ್ನ ದೇವರು ದೊರೆತನ ಮಾಡುತ್ತಾನೆ ಎಂದು ಹೇಳಿ, ಶುಭಸಮಾಚಾರವನ್ನು ತಂದು, ಸಮಾಧಾನವನ್ನು ಪ್ರಕಟಿಸಿ ಹೇಳುವಾತನ ಪಾದಗಳು ಪರ್ವತಗಳ ಮೇಲೆ ಎಷ್ಟೋ ಅಂದವಾಗಿವೆ!
ಯೆಶಾಯ 52 : 8 (KNV)
ನಿನ್ನ ಕಾವಲುಗಾರರು ಸ್ವರವನ್ನೆತ್ತುವರು; ಆ ಸ್ವರದೊಂದಿಗೆ ಒಟ್ಟಾಗಿ ಅವರು ಹಾಡುವರು; ಕರ್ತನು ಚೀಯೋನನ್ನು ತಿರಿಗಿ ತರು ವಾಗ ಅವರು ಕಣ್ಣಲ್ಲಿ ಕಣ್ಣು ಇಟ್ಟು ನೋಡುವರು.
ಯೆಶಾಯ 52 : 9 (KNV)
ಯೆರೂಸಲೇಮಿನ ಹಾಳಾದ ಸ್ಥಳಗಳೇ, ಆನಂದ ಧ್ವನಿಗೈಯಿರಿ ಒಟ್ಟಾಗಿ ಹಾಡಿರಿ; ಯಾಕಂದರೆ ಕರ್ತನು ತನ್ನ ಪ್ರಜೆಗಳನ್ನು ಆದರಿಸಿದ್ದಾನೆ, ಆತನು ಯೆರೂಸ ಲೇಮನ್ನು ವಿಮೋಚಿಸಿದ್ದಾನೆ.
ಯೆಶಾಯ 52 : 10 (KNV)
ಕರ್ತನು ತನ್ನ ಪರಿ ಶುದ್ಧವಾದ ಬಾಹುವನ್ನು ಸಕಲ ಜನಾಂಗಗಳ ಕಣ್ಣು ಗಳಿಗೆ ತೋರಮಾಡಿದ್ದಾನೆ. ಭೂಮಿಯ ಅಂತ್ಯದವ ರೆಲ್ಲಾ ನಮ್ಮ ದೇವರ ರಕ್ಷಣೆಯನ್ನು ನೋಡುವರು.
ಯೆಶಾಯ 52 : 11 (KNV)
ಹೊರಡಿರಿ, ಹೊರಡಿರಿ, ಅಲ್ಲಿಂದ ಹೊರಗೆ ಹೋಗಿರಿ, ಅಶುದ್ಧವಾದದ್ದನ್ನು ಮುಟ್ಟಬೇಡಿರಿ; ಅವಳ ಮಧ್ಯದಿಂದ ಹೊರಗೆ ಹೋಗಿರಿ; ಕರ್ತನ ಪಾತ್ರೆಗ ಳನ್ನು ಹೊರುವವರೇ, ನೀವು ಶುದ್ಧರಾಗಿರ್ರಿ.
ಯೆಶಾಯ 52 : 12 (KNV)
ನೀವು ತ್ವರೆಯಾಗಿ ಹೋಗುವದಿಲ್ಲ; ಇಲ್ಲವೆ ಹಾರುವದ ರಿಂದಲೂ ಹೋಗುವದಿಲ್ಲ; ಯಾಕಂದರೆ ಕರ್ತನೇ ನಿಮ್ಮ ಮುಂದೆ ಹೋಗುವನು; ಇಸ್ರಾಯೇಲಿನ ದೇವರು ನಿಮ್ಮ ಬಹುಮಾನವಾಗಿರುವನು.
ಯೆಶಾಯ 52 : 13 (KNV)
ಇಗೋ, ನನ್ನ ಸೇವಕನು ವಿವೇಕಿಯಾಗಿಕಾರ್ಯ ವನ್ನು ಸಾಧಿಸಿ ಅವನು ಉನ್ನತನಾಗಿ ಮೇಲಕ್ಕೇರಿ ಮಹೋನ್ನತನಾಗಿರುವನು.
ಯೆಶಾಯ 52 : 14 (KNV)
ಅವನ ಮುಖವು ಮನುಷ್ಯರಿಗಿಂತಲೂ ಅವನ ಆಕಾರವು ನರಪುತ್ರರಿ ಗಿಂತಲೂ ಕುರೂಪವಾಗಿರುವದನ್ನು ನೋಡಿ ಹೇಗೆ ಆಶ್ಚರ್ಯಪಟ್ಟರೋ
ಯೆಶಾಯ 52 : 15 (KNV)
ಹಾಗೆಯೇ ಅನೇಕ ಜನಾಂಗ ಗಳನ್ನು ಆತನು ಚಮಕಿತ ಮಾಡುವನು; ಅರಸರು ಆತನ ನಿಮಿತ್ತ ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳು ವರು; ಯಾಕಂದರೆ ಅವರಿಗೆ ತಿಳಿಸಲ್ಪಡದೇ ಇರುವ ದನ್ನು ಅವರು ನೋಡುವರು; ಕೇಳದೇ ಇರುವದನ್ನು ಗ್ರಹಿಸುವರು.
❮
❯