ಯೆಶಾಯ 49 : 1 (KNV)
ಓ ದ್ವೀಪ ನಿವಾಸಿಗಳೇ, ನನ್ನ ಮಾತನ್ನು ಕೇಳಿರಿ. ದೂರದ ಜನಗಳೇ, ಕಿವಿಗೊಡಿರಿ! ನಾನು ಗರ್ಭದಲ್ಲಿದ್ದಾಗಲೇ ಕರ್ತನು ನನ್ನನ್ನು ಕರೆ ದನು. ತಾಯಿಯ ಉದರದಲ್ಲಿದ್ದಂದಿನಿಂದಲೂ ನನ್ನ ಹೆಸರನ್ನು ಹೇಳುತ್ತಿದ್ದಾನೆ.
ಯೆಶಾಯ 49 : 2 (KNV)
ಆತನು ನನ್ನ ಬಾಯನ್ನು ಹರಿತವಾದ ಖಡ್ಗವನ್ನಾಗಿ ಮಾಡಿ, ತನ್ನ ಕೈ ನೆರಳಿನಲ್ಲಿ ನನ್ನನ್ನು ಮರೆಯಾಗಿಟ್ಟಿದ್ದಾನೆ; ಆತನು ನುಣುಪಾದ ಬಾಣವನ್ನಾಗಿ ನನ್ನನ್ನು ರೂಪಿಸಿ ತನ್ನ ಬತ್ತಳಿಕೆಯಲ್ಲಿ ಮುಚ್ಚಿಟ್ಟಿದ್ದಾನೆ.
ಯೆಶಾಯ 49 : 3 (KNV)
ಆತನು ನನಗೆ--ನೀನು ನನ್ನ ಸೇವಕನು, ನಾನು ಮಹಿಮೆ ಹೊಂದಬೇಕಾದ ಇಸ್ರಾಯೇಲೂ ಆಗಿದ್ದೀ ಎಂದು ಹೇಳಿದನು.
ಯೆಶಾಯ 49 : 4 (KNV)
ಅದಕ್ಕೆ ನಾನು--ನಾನು ಪಡುವ ಪ್ರಯಾಸವು ವ್ಯರ್ಥ, ನನ್ನ ಶಕ್ತಿಯನ್ನೆಲ್ಲಾ ನಿಷ್ಪ್ರಯೋಜನವಾಗಿಯೂ ವ್ಯರ್ಥವಾ ಗಿಯೂ ಕಳಕೊಂಡೆನೆಂದು ಹೇಳಿದೆನು. ಆದರೂ ನಿಶ್ಚಯವಾಗಿ ನನ್ನ ನ್ಯಾಯವು ಕರ್ತನ ಬಳಿಯಲ್ಲಿಯೂ ನನ್ನ ಪ್ರತಿಫಲವು ನನ್ನ ದೇವರಲ್ಲಿಯೂ ಉಂಟು.
ಯೆಶಾಯ 49 : 5 (KNV)
ಯಾಕೋಬನ್ನು ತನ್ನ ಕಡೆಗೆ ತಿರಿಗಿ ಸೇರಿಸಿಕೊಳ್ಳ ಬೇಕೆಂತಲೂ ಇಸ್ರಾಯೇಲು ತನ್ನ ಕಡೆಗೆ ಕೂಡಿಕೊಳ್ಳು ವಂತೆಯೂ ಆತನು ಗರ್ಭದಲ್ಲಿಯೇ ನನ್ನನ್ನು ತನ್ನ ಸೇವಕನನ್ನಾಗಿ ರೂಪಿಸಿದನು. ಆದರೂ ನಾನು ಕರ್ತನ ದೃಷ್ಟಿಯಲ್ಲಿ ಗೌರವವುಳ್ಳವನಾಗಿರುವೆನು; ನನ್ನ ದೇವರೇ ನನಗೆ ಬಲವಾಗಿರುವನು.
ಯೆಶಾಯ 49 : 6 (KNV)
ಆತನೇ ಈಗ ಹೀಗನ್ನುತ್ತಾನೆ--ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬನ ಕುಲಗಳನ್ನು ಉನ್ನತಪಡಿ ಸುವದೂ ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರಿಗಿ ಬರಮಾಡುವದೂ ಅಲ್ಪ ಕಾರ್ಯವೇ; ನನ್ನ ರಕ್ಷಣೆಯು ಲೋಕದ ಕಟ್ಟಕಡೆಯ ವರೆಗೆ ವ್ಯಾಪಿಸುವಂತೆ ನಿನ್ನನ್ನು ಅನ್ಯಜನಾಂಗಗಳಿಗೆ ಬೆಳಕನ್ನಾಗಿ ದಯಪಾಲಿಸುವೆನು.
ಯೆಶಾಯ 49 : 7 (KNV)
ಮನುಷ್ಯನಿಂದ ತಿರಸ್ಕರಿಸಲ್ಪಟ್ಟವನು ಜನಾಂಗಕ್ಕೆ ಅಸ ಹ್ಯನೂ ಅಧಿಕಾರಿಗಳ ಸೇವಕನಿಗೆ ಇಸ್ರಾಯೇಲಿನ ವಿಮೋಚಕನೂ ಮತ್ತು ಅವನ ಪರಿಶುದ್ಧನಾದ ಕರ್ತನೂ ಹೀಗೆ ಹೇಳುತ್ತಾನೆ, ಕರ್ತನ ನಂಬಿಗಸ್ತಿ ಕೆಯನ್ನೂ ನಿನ್ನನ್ನು ಆದುಕೊಂಡ ಇಸ್ರಾಯೇಲಿನ ಪರಿಶುದ್ಧನನ್ನೂ ನೋಡಿ ಅರಸರು ಏಳುತ್ತಾರೆ; ಅಧಿ ಪತಿಗಳು ಸಹ ಆರಾಧಿಸುವರು.
ಯೆಶಾಯ 49 : 8 (KNV)
ಕರ್ತನು ಹೀಗ ನ್ನುತ್ತಾನೆ--ಪ್ರಸನ್ನತೆಯ ಕಾಲದಲ್ಲಿ ನಿನಗೆ ಸದುತ್ತರ ವನ್ನು ದಯಪಾಲಿಸಿದ್ದೇನೆ; ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯ ಮಾಡಿದ್ದೇನೆ, ನಾನು ನಿನ್ನನ್ನು ಕಾಪಾಡಿ ಭೂಮಿಯನ್ನು ಸ್ಥಾಪಿಸುವದಕ್ಕೂ ಹಾಳಾಗಿರುವ ಸ್ವಾಸ್ತ್ಯ ಗಳನ್ನು ಬಾಧ್ಯವಾಗಿ ಹೊಂದುವಂತೆಯೂ ಜನರ ಒಡಂಬಡಿಕೆಗಾಗಿ ನಿನಗೆ ಕೊಡುವೆನು.
ಯೆಶಾಯ 49 : 9 (KNV)
ನೀನು ಬಂದಿ ಸಲ್ಪಟ್ಟವರಿಗೆ--ಹೊರಗೆ ಹೋಗಿರಿ, ಕತ್ತಲೆಯಲ್ಲಿರು ವವರಿಗೆ--ನಿಮ್ಮನ್ನು ತೋರ್ಪಡಿಸಿಕೊಳ್ಳಿರಿ ಎಂದು ಹೇಳಬಹುದು. ಅವರು ದಾರಿಗಳಲ್ಲಿ ಮೇಯಿಸುವರು, ಅವರ ಎಲ್ಲಾ ಎತ್ತರವಾದ ಪ್ರದೇಶಗಳು ಕೂಡ ಅವ ರಿಗೆ ಹುಲ್ಲುಗಾವಲಾಗಿರುವವು.
ಯೆಶಾಯ 49 : 10 (KNV)
ಅವರಿಗೆ ಹಸಿವೆ ಯಾಗಲಿ ಬಾಯಾರಿಕೆಯಾಗಲಿ ಇರವು. ಇಲ್ಲವೆ ಝಳವೂ ಬಿಸಿಲೂ ಬಡಿಯವು; ಯಾಕಂದರೆ ಅವ ರನ್ನು ಕರುಣಿಸುವಾತನು ಅವರನ್ನು ನಡೆಸುತ್ತಾ ನೀರು ಕ್ಕುವ ಒರತೆಗಳ ಬಳಿಗೆ ತರುವನು.
ಯೆಶಾಯ 49 : 11 (KNV)
ನನ್ನ ಬೆಟ್ಟ ಗಳನ್ನೆಲ್ಲಾ ಸಮದಾರಿಯನ್ನಾಗಿ ಮಾಡಿ ನನ್ನ ರಾಜ ಮಾರ್ಗಗಳನ್ನು ಉನ್ನತಪಡಿಸುವೆನು.
ಯೆಶಾಯ 49 : 12 (KNV)
ಇಗೋ, ಇವರು ದೂರದಿಂದ ಬರುತ್ತಾರೆ. ಇಗೋ, ಇವರು ಬಡಗಣದಿಂದ ಮತ್ತು ಪಡುವಣದಿಂದ, ಇವರು ಸೀನೀಮ್ ದೇಶದಿಂದ ಬರುತ್ತಿದ್ದಾರೆ.
ಯೆಶಾಯ 49 : 13 (KNV)
ಆಕಾಶವೇ, ಹರ್ಷಿಸು; ಭೂಮಿಯೇ, ಉಲ್ಲಾಸಪಡು! ಪರ್ವತ ಗಳೇ ಹರ್ಷಧ್ವನಿಗೈಯಿರಿ. ಯಾಕಂದರೆ ಕರ್ತನು ತನ್ನ ಜನರನ್ನು ಆದರಿಸಿ, ಶ್ರಮೆಪಟ್ಟ ತನ್ನವರನ್ನು ಕರುಣಿಸುವನು.
ಯೆಶಾಯ 49 : 14 (KNV)
ಆದರೆ ಚೀಯೋನು--ಕರ್ತನು ನನ್ನನ್ನು ತಳ್ಳಿ ಬಿಟ್ಟಿದ್ದಾನೆ ಮತ್ತು ನನ್ನ ಕರ್ತನು ನನ್ನನ್ನು ಮರೆತು ಬಿಟ್ಟಿದ್ದಾನಲ್ಲಾ ಎಂದು ಅಂದುಕೊಂಡಳು.
ಯೆಶಾಯ 49 : 15 (KNV)
ತನ್ನ ಗರ್ಭದ ಮಗನ ಮೇಲೆ ಕರುಣಿಸದೆ ಒಬ್ಬ ಹೆಂಗಸು ತನ್ನ ಮೊಲೇ ಕೂಸನ್ನು ಮರೆತಾಳೇ? ಹೌದು, ಅವಳು ಮರೆಯಬಹುದು, ಆದರೂ ನಾನು ನಿನ್ನನ್ನು ಮರೆ ಯುವದಿಲ್ಲ.
ಯೆಶಾಯ 49 : 16 (KNV)
ಇಗೋ, ನಾನು ನನ್ನ ಅಂಗೈಗಳಲ್ಲಿ ನಿನ್ನನ್ನು ಕೆತ್ತಿಕೊಂಡಿದ್ದೇನೆ; ನಿನ್ನ ಗೋಡೆಗಳು ಸದಾ ನನ್ನ ಕಣ್ಣೆದುರಿನಲ್ಲಿವೆ.
ಯೆಶಾಯ 49 : 17 (KNV)
ನಿನ್ನ ಮಕ್ಕಳು ತ್ವರೆಪಡುವರು; ನಿನ್ನನ್ನು ಕೆಡವಿ ಹಾಳುಮಾಡಿದವರು ನಿನ್ನೊಳಗಿಂದ ಹೊರಟುಹೋಗುವರು.
ಯೆಶಾಯ 49 : 18 (KNV)
ನಿನ್ನ ಕಣ್ಣುಗಳನ್ನು ಎತ್ತಿ ಸುತ್ತಲೂ ನೋಡು. ಇಗೋ, ಇವರೆಲ್ಲರೂ ಕೂಡಿ ಕೊಂಡು ನಿನ್ನ ಬಳಿಗೆ ಬರುತ್ತಿದ್ದಾರೆ. ಕರ್ತನು ಹೇಳುವದೇನಂದರೆ--ನನ್ನ ಜೀವದಾಣೆ, ನಿಶ್ಚಯವಾಗಿ ನೀನು ಅವರನ್ನೆಲ್ಲಾ ಆಭರಣಗಳಂತೆ ಧರಿಸಿಕೊಳ್ಳುವಿ ಮತ್ತು ನೀನು ಅವರನ್ನು ಮದಲಗಿತ್ತಿಯಂತೆ ಕಟ್ಟಿ ಕೊಳ್ಳುವಿ.
ಯೆಶಾಯ 49 : 19 (KNV)
ನಿನ್ನ ಹಾಳಾದ ಸ್ಥಳಗಳೂ ನಿನ್ನ ಏಕಾಂತ ಸ್ಥಳಗಳೂ ಕೆಡವಲ್ಪಟ್ಟ ನಿನ್ನ ದೇಶವೂ ಈಗ ನಿವಾಸಿ ಗಳಿಗೆ ಇಕ್ಕಟ್ಟಾಗುವವು; ನಿನ್ನನ್ನು ನುಂಗಿದವರು ದೂರ ವಾಗುವರು.
ಯೆಶಾಯ 49 : 20 (KNV)
ನೀನು ಕಳಕೊಂಡ ಮಕ್ಕಳ ಸ್ಥಳವು ನನಗೆ ಇಕ್ಕಟ್ಟಾಯಿತು; ನಾನು ವಾಸಿಸುವದಕ್ಕೆ ಸ್ಥಳ ಕೊಡು ಎಂದು ಹೇಳುವರು.
ಯೆಶಾಯ 49 : 21 (KNV)
ಆಗ ನೀನು ನನ ಗೋಸ್ಕರ ಇವರನ್ನು ಯಾರು ನನ್ನಲ್ಲಿ ಪಡೆದರು? ನಾನೋ, ಮಕ್ಕಳನ್ನು ಕಳೆದುಕೊಂಡವಳು, ಏಕಾಂತ ವಾಗಿ ಸೆರೆಯಲ್ಲಿದ್ದು ಹೊರಗೆ ಹಾಕಲ್ಪಟ್ಟವಳ ಹಾಗೆ ಇದ್ದೆನು. ಇವರನ್ನು ಸಾಕಿದವರು ಯಾರು? ಅವರೆ ಲ್ಲಿದ್ದರು ಎಂದು ಅಂದುಕೊಳ್ಳುವಿ.
ಯೆಶಾಯ 49 : 22 (KNV)
ಕರ್ತನಾದ ದೇವರು ಇಂತೆನ್ನುತ್ತಾನೆ--ಇಗೋ, ನಾನು ಅನ್ಯಜನಗಳ ಕಡೆಗೆ ಕೈ ಎತ್ತಿ ಜನರಿಗೆ ನನ್ನ ಧ್ವಜವನ್ನು ಎತ್ತುವೆನು; ಅವರು ನಿನ್ನ ಕುಮಾರರನ್ನು ಕೈಹಿಡಿದು ತರುವರು; ನಿನ್ನ ಕುಮಾರ್ತೆಯರನ್ನು ತಮ್ಮ ಹೆಗಲಮೇಲೆ ತರುವರು.
ಯೆಶಾಯ 49 : 23 (KNV)
ಅರಸುಗಳು ನಿನಗೆ ಸಾಕು ತಂದೆಗಳು, ಅವರ ರಾಣಿಯರು ನಿನಗೆ ದಾದಿಗಳಾ ಗುವರು; ಅವರು ಭೂಮಿಯ ಕಡೆಗೆ ತಮ್ಮ ಮುಖ ವನ್ನು ಬಾಗಿಸಿ, ಅಡ್ಡಬಿದ್ದು ನಿನ್ನ ಪಾದದ ಧೂಳನ್ನು ನೆಕ್ಕುವರು; ಆಗ ನಾನೇ ಕರ್ತನೆಂದು ನೀನು ತಿಳು ಕೊಳ್ಳುವಿ; ನನ್ನನ್ನು ನಿರೀಕ್ಷಿಸಿಕೊಂಡಿರುವವರು ನಾಚಿ ಕೆಗೆ ಈಡಾಗರು.
ಯೆಶಾಯ 49 : 24 (KNV)
ಶೂರನ ಕೈಯೊಳಗಿಂದ ಕೊಳ್ಳೆಯನ್ನು ತೆಗೆದು ಕೊಳ್ಳಬಹುದೋ? ಇಲ್ಲವೆ ನ್ಯಾಯವಾಗಿ ಸೆರೆಯವ ರನ್ನು ಬಿಡಿಸಬಹುದೋ?
ಯೆಶಾಯ 49 : 25 (KNV)
ಆದರೆ ಕರ್ತನು ಹೀಗ ನ್ನುತ್ತಾನೆ--ಶೂರನ ಸೆರೆಯವರು ತೆಗೆಯಲ್ಪಡುವರು; ಭಯಂಕರವಾದ ಕೊಳ್ಳೆಯು ಬಿಡಿಸಲ್ಪಡುವದು; ನಿನ್ನೊ ಡನೆ ಹೋರಾಡುವವನ ಸಂಗಡ ನಾನೇ ಹೋರಾಡಿ ನಿನ್ನ ಮಕ್ಕಳನ್ನು ನಾನು ರಕ್ಷಿಸುವೆನು.
ಯೆಶಾಯ 49 : 26 (KNV)
ನಿನ್ನ ಹಿಂಸಕರಿಗೆ ಅವರ ಮಾಂಸವನ್ನೇ ಅವರಿಗೆ ತಿನ್ನಿಸುವೆನು ಮತ್ತು ಸಿಹಿಯಾದ ದ್ರಾಕ್ಷಾರಸವನ್ನು ಕುಡಿಯುವಂತೆ ಅವರು ತಮ್ಮ ಸ್ವಂತ ರಕ್ತವನ್ನೇ ಕುಡಿಯುವರು. ಆಗ ಕರ್ತನಾದ ನಾನೇ ನಿನ್ನ ರಕ್ಷಕನೂ ನಿನ್ನ ವಿಮೋಚಕನೂ ಯಾಕೋಬ್ಯರ ಶೂರನೂ ಎಂದು ನರಜನ್ಮದವರೆ ಲ್ಲರಿಗೂ ಗೊತ್ತಾಗುವದು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26

BG:

Opacity:

Color:


Size:


Font: