ಯೆಶಾಯ 40 : 1 (KNV)
ನೀವು ನನ್ನ ಜನರನ್ನು ಸಂತೈಸಿರಿ, ಸಂತೈಸಿರಿ ಎಂದು ನಿಮ್ಮ ದೇವರು ಹೇಳುತ್ತಾನೆ.
ಯೆಶಾಯ 40 : 2 (KNV)
ಯೆರೂಸಲೇಮಿನ ಸಂಗಡ ನೀವು ಹೃದಯಾಂಗಮ ವಾಗಿ ಮಾತಾಡಿರಿ; ಅದರ ಯುದ್ಧವು ತೀರಿತೆಂದೂ ದೋಷವು ಕ್ಷಮಿಸಲ್ಪಟ್ಟಿದೆ ಎಂದು ಕೂಗಿರಿ; ಅದು ಎಲ್ಲಾ ಪಾಪಗಳಿಗೂ ಕರ್ತನಿಂದ ಎರಡರಷ್ಟು ಹೊಂದಿ ದ್ದಾಯಿತು.
ಯೆಶಾಯ 40 : 3 (KNV)
ಇಗೋ, ಒಂದು ವಾಣಿ, ಅರಣ್ಯದಲ್ಲಿ ಕರ್ತನ ದಾರಿಯನ್ನು ನೆಟ್ಟಗೆ ಮಾಡಿರಿ; ಅಡವಿಯಲ್ಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ನೆಟ್ಟಗೆ ಮಾಡಿರಿ.
ಯೆಶಾಯ 40 : 4 (KNV)
ಎಲ್ಲಾ ತಗ್ಗುಗಳು ಮುಚ್ಚಲ್ಪಡಲಿ, ಎಲ್ಲಾ ಬೆಟ್ಟ ಗುಡ್ಡ ಗಳು ತಗ್ಗಿಸಲ್ಪಡಲಿ, ಕೊರಕಲ ನೆಲವು ಸಮವಾಗು ವದು; ಕರ್ತನ ಮಹಿಮೆಯು ಗೋಚರವಾಗುವದು.
ಯೆಶಾಯ 40 : 5 (KNV)
ಎಲ್ಲಾ ಮನುಷ್ಯರು ಒಟ್ಟಿಗೆ ಅದನ್ನು ಕಾಣುವರು ಕರ್ತನ ಬಾಯಿಯೇ ಇದನ್ನು ನುಡಿದದೆ ಎಂದು ಒಬ್ಬನು ಕೂಗುತ್ತಾನೆ.
ಯೆಶಾಯ 40 : 6 (KNV)
ವಾಣಿಯು ಕೂಗು ಅನ್ನುತ್ತದೆ. ಅವನು--ನಾನು ಏನು ಕೂಗಲಿ ಅನ್ನಲು ಎಲ್ಲಾ ನರಮನುಷ್ಯರು ಹುಲ್ಲಿನ ಹಾಗಿದ್ದಾರೆ. ಕರ್ತನ ಶ್ವಾಸವು ಅವರ ಮೇಲೆ ಬೀಸುವದರಿಂದ ಅವರ ಲಾವಣ್ಯವೆಲ್ಲಾ ಹೊಲದ ಹೂವಿನಂತಿದೆ.
ಯೆಶಾಯ 40 : 7 (KNV)
ಹುಲ್ಲು ಒಣಗಿ ಹೋಗು ವದು ಹೂವು ಬಾಡಿಹೋಗುವದು. ಕರ್ತನ ಆತ್ಮ ಅವುಗಳ ಮೇಲೆ ಊದುವನು; ನಿಶ್ಚಯವಾಗಿ ಜನರು ಹುಲ್ಲೇ.
ಯೆಶಾಯ 40 : 8 (KNV)
ಹುಲ್ಲು ಒಣಗಿಹೋಗುವದು ಹೂವು ಬಾಡಿಹೋಗುವದು. ಆದರೆ ನಮ್ಮ ದೇವರ ವಾಕ್ಯವು ಸದಾಕಾಲ ನಿಲ್ಲುವದು ಎಂದು ಉತ್ತರವಾಯಿತು.
ಯೆಶಾಯ 40 : 9 (KNV)
ಶುಭಸಮಾಚಾರವನ್ನು ತಿಳಿಸುವ ಓ ಚೀಯೋನೇ, ನೀನು ಉನ್ನತಪರ್ವತವನ್ನು ಏರು; ಶುಭಸಮಾ ಚಾರವನ್ನು ತಿಳಿಸುವ ಓ ಯೆರೂಸಲೇಮೇ, ಬಲವಾಗಿ ನಿನ್ನ ಸ್ವರವನ್ನು ಎತ್ತು, ಭಯಪಡದೆ ಎತ್ತು; ಯೆಹೂದದ ಪಟ್ಟಣಗಳಿಗೆ ಇಗೋ, ನಿನ್ನ ದೇವರು ಎಂದು ಹೇಳು.
ಯೆಶಾಯ 40 : 10 (KNV)
ಇಗೋ, ಕರ್ತನಾದ ದೇವರು ಬಲವುಳ್ಳ ಕೈಯಿಂದ ಬರುತ್ತಾನೆ, ಆತನ ತೋಳು ತನಗೋಸ್ಕರ ಆಳುವದು. ಇಗೋ, ಆತನ ಬಹುಮಾನವು ಆತನ ಸಂಗಡಲೂ ಆತನ ಪ್ರತಿಫಲವು ಆತನ ಮುಂದೆಯೂ ಇದೆ.
ಯೆಶಾಯ 40 : 11 (KNV)
ಆತನು ತನ್ನ ಮಂದೆಯನ್ನು ಕುರುಬನಂತೆ ಮೇಯಿ ಸುವನು. ಕುರಿಮರಿಗಳನ್ನು ಕೂಡಿಸಿ ಅವುಗಳನ್ನು ತನ್ನ ಎದೆಗಪ್ಪಿಕೊಳ್ಳುವನು ಎಳೇಮರಿಗಳನ್ನು ಮೆಲ್ಲಗೆ ನಡಿಸುವನು ಎಂದು ಸಾರು.
ಯೆಶಾಯ 40 : 12 (KNV)
ಸಮುದ್ರ ಸಾಗರವನ್ನು ಬರಿದಾದ ತನ್ನ ಕೈಯಿಂದ ಅಳತೆ ಮಾಡಿದವನೂ ಆಕಾಶಗಳ ಮೇರೆಯನ್ನು ಗೇಣಿನಿಂದ ಅಳೆದವನೂ ಭೂಮಿಯ ದೂಳನ್ನು ಅಳತೆ ಮಾಡಿ ತಿಳುಕೊಂಡವನೂ ಬೆಟ್ಟಗಳ ಮಟ್ಟ ವನ್ನೂ ಗುಡ್ಡಗಳನ್ನೂ ತಕ್ಕಡಿಯಿಂದ ತೂಗಿದವನು ಯಾರು?
ಯೆಶಾಯ 40 : 13 (KNV)
ಕರ್ತನ ಆತ್ಮವನ್ನು ನಡಿಸಿದವನೂ ಇಲ್ಲವೇ ಆತನಿಗೆ ಆಲೋಚನಾಕರ್ತನಾಗಿ ಕಲಿಸಿದವನು ಯಾರು?
ಯೆಶಾಯ 40 : 14 (KNV)
ಆತನು ಯಾವನ ಆಲೋಚನೆಯನ್ನು ಪಡೆದನು. ಆತನಿಗೆ ಉಪದೇಶಿಸಿದವನೂ ನ್ಯಾಯದ ಹಾದಿ ಯನ್ನು ಕಲಿಸಿ, ತಿಳುವಳಿಕೆಯನ್ನು ಆತನಿಗೆ ಬೋಧಿಸಿ, ವಿವೇಕದ ಮಾರ್ಗವನ್ನು ತಿಳಿಸಿದವನು ಯಾರು?
ಯೆಶಾಯ 40 : 15 (KNV)
ಇಗೋ, ಆತನ ಎಣಿಕೆಯಲ್ಲಿ ಜನಾಂಗಗಳು ಕಪಿಲೆ ಯಿಂದುದುರುವ ಹನಿಯಂತೆಯೂ ತಕ್ಕಡಿಯಲ್ಲಿನ ದೂಳಿನ ಹಾಗೂ ಇರುತ್ತವೆ. ಇಗೋ, ದ್ವೀಪಗಳನ್ನು ಅಣುರೇಣುವಿನಂತೆ ಆತನು ಎತ್ತುತ್ತಾನೆ.
ಯೆಶಾಯ 40 : 16 (KNV)
ಲೆಬ ನೋನು ಸುಡುವದಕ್ಕೆ ಸಾಲವು ಅದರ ಮೃಗಗಳು ಬಲಿಗೆ (ಯಜ್ಞಕ್ಕೆ, ಹೋಮಕ್ಕೆ) ಸಾಲವು.
ಯೆಶಾಯ 40 : 17 (KNV)
ಸಕಲ ಜನಾಂಗಗಳು ಆತನ ಮುಂದೆ ಏನೂ ಇಲ್ಲದಂತಿವೆ; ಅವು ಆತನ ಎಣಿಕೆಯಲ್ಲಿ ಶೂನ್ಯವಾಗಿಯೂ ವ್ಯರ್ಥ ವಾಗಿಯೂ ಇವೆ.
ಯೆಶಾಯ 40 : 18 (KNV)
ಹೀಗಿರಲು ದೇವರನ್ನು ಯಾರಿಗೆ ಹೋಲಿಸು ವಿರಿ? ಅಥವಾ ಯಾವ ಹೋಲಿಕೆಯನ್ನು ಆತನಿಗೆ ಸಮಾನ ಮಾಡುವಿರಿ?
ಯೆಶಾಯ 40 : 19 (KNV)
ಕಂಚುಗಾರನು ವಿಗ್ರಹವನ್ನು ಎರಕ ಹೊಯ್ಯುತ್ತಾನೆ; ಅಕ್ಕಸಾಲಿಗನು ಅದಕ್ಕೆ ಚಿನ್ನದ ಕವಚವನ್ನು ಹೊದಿಸಿ; ಬೆಳ್ಳಿಯ ಸರಪಣಿಗಳನ್ನು ಹಾಕುವನು.
ಯೆಶಾಯ 40 : 20 (KNV)
ಕಾಣಿಕೆಯನ್ನಾಗಿ ಪ್ರತಿಷ್ಠಿಸಿಕೊಳ್ಳ ಲಾರದ ಬಡವನು ಹುಳುತು ಹೋಗದ ಮರವನ್ನು ಹುಡುಕಿ ಚಲಿಸದ ವಿಗ್ರಹವನ್ನು ತಯಾರಿಸುವದಕ್ಕೆ ಕುಯುಕ್ತಿಯ ಕೆಲಸಗಾರರನ್ನು ವಿಚಾರಿಸಿಕೊಳ್ಳುವನು.
ಯೆಶಾಯ 40 : 21 (KNV)
ನಿಮಗೆ ತಿಳಿದಿಲ್ಲವೋ? ನೀವು ಕೇಳಿಲ್ಲವೋ? ಆದಿಯಿಂದಲೇ ನಿಮಗೆ ತಿಳಿಸಲ್ಪಟ್ಟಿಲ್ಲವೋ? ಭೂಮಿ ಯು ಸ್ಥಾಪಿತವಾದಂದಿನಿಂದ ನಿಮಗೆ ಅರ್ಥವಾಗ ಲಿಲ್ಲವೋ?
ಯೆಶಾಯ 40 : 22 (KNV)
ಆಕಾಶ ಮಂಡಲವನ್ನು ತೆರೆಯಂತೆ ವಿಸ್ತರಿಸಿ ಅದರೊಳಗೆ ವಾಸಮಾಡುವ ಗುಡಾರದಂತೆ ಹರಡಿ ಭೂನಿವಾಸಿಗಳು ಮಿಡತೆಯಂತೆ ಕಾಣಿಸುವಷ್ಟು ಭೂವೃತ್ತದ ಮೇಲೆ ಕೂತಿರುವಾತನು ಆತನೇ.
ಯೆಶಾಯ 40 : 23 (KNV)
ಅದು ಪ್ರಭುಗಳನ್ನು ನಿರ್ನಾಮ ಮಾಡುತ್ತದೆ ಭೂಮಿಯ ನ್ಯಾಯಾಧಿಪತಿಗಳನ್ನು ಶೂನ್ಯವಾಗುವಂತೆ ಮಾಡು ತ್ತದೆ.
ಯೆಶಾಯ 40 : 24 (KNV)
ಹೌದು, ಅವರು ನೆಡಲ್ಪಡುವದಿಲ್ಲ ಬಿತ್ತ ಲ್ಪಡುವದಿಲ್ಲ. ಹೌದು ಅವರ ಬುಡವು ಭೂಮಿ ಯಲ್ಲಿ ಬೇರೂರುವದಿಲ್ಲ. ಆತನು ಶ್ವಾಸವನ್ನು ಅವರ ಮೇಲೆ ಊದಲು ಒಣಗಿಹೋಗುವರು. ಬಿರು ಗಾಳಿಯು ಅವರನ್ನು ಹೊಟ್ಟಿನಂತೆ ಬಡಿದುಕೊಂಡು ಹೋಗುವದು.
ಯೆಶಾಯ 40 : 25 (KNV)
ಹೀಗಿರಲು ನನ್ನನ್ನು ಯಾರಿಗೆ ಹೋಲಿಸಿ ಸರಿ ಸಮಾನ ಮಾಡುತ್ತೀರಿ ಎಂದು ಪರಿಶುದ್ಧನಾದವನು ಹೇಳುತ್ತಾನೆ.
ಯೆಶಾಯ 40 : 26 (KNV)
ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ನೋಡಿರಿ; ಇಗೋ, ಇವುಗಳನ್ನು ಸೃಷ್ಟಿಸಿದಾತನು ಯಾರು? ಆತನೇ ತನ್ನ ಮಹಾಶಕ್ತಿಯಿಂದಲೂ ಅವುಗಳ ಸೈನ್ಯವನ್ನೆಲ್ಲಾ ಲೆಕ್ಕಮಾಡಿ ಹೊರಗೆ ತರು ವನು. ಆತನು ಅತಿ ಬಲಾಢ್ಯನಾಗಿರುವದರಿಂದ ಅವುಗಳೊಳಗೆ ಒಂದೂ ತಪ್ಪದು.
ಯೆಶಾಯ 40 : 27 (KNV)
ನನ್ನ ಮಾರ್ಗವು ಕರ್ತನಿಗೆ ಮರೆಯಾಗಿದೆ ಮತ್ತು ನನ್ನ ನ್ಯಾಯವು ನನ್ನ ದೇವರಿಂದ ದಾಟಿ ಹೋಯಿ ತಲ್ಲಾ! ಎಂದು ಯಾಕೋಬೇ ಯಾಕೆ ಹೇಳುತ್ತಿ? ಇಸ್ರಾಯೇಲೇ ಯಾಕೆ ಮಾತಾಡುತ್ತಿ?
ಯೆಶಾಯ 40 : 28 (KNV)
ನಿನಗೆ ಗೊತ್ತಿಲ್ಲವೋ? ನೀನು ಕೇಳಲಿಲ್ಲವೋ? ಕರ್ತನು ನಿರಂತರವಾದ ದೇವರೂ ಭೂಮಿಯ ಅಂತ್ಯಗಳನ್ನು ಸೃಷ್ಟಿಸಿದವನೂ ದಣಿಯುವದಿಲ್ಲ ಇಲ್ಲವೆ ಬಳಲುವ ದಿಲ್ಲ; ಆತನ ತಿಳುವಳಿಕೆಯು ಪರಿಶೋಧನೆಗೆ ಅಗಮ್ಯ.
ಯೆಶಾಯ 40 : 29 (KNV)
ಆತನು ದಣಿದವನಿಗೆ ಶಕ್ತಿಯನ್ನೂ ಬಲಹೀನನಿಗೆ ಬಹುಬಲವನ್ನೂ ಕೊಡುತ್ತಾನೆ.
ಯೆಶಾಯ 40 : 30 (KNV)
ಯೌವನಸ್ಥರೋ ದಣಿದು ಬಳಲುವರು ತರುಣರು ಸಂಪೂರ್ಣವಾಗಿ ಬೀಳುವರು.
ಯೆಶಾಯ 40 : 31 (KNV)
ಆದರೆ ಕರ್ತನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಅವರು ಹದ್ದುಗ ಳಂತೆ ರೆಕ್ಕೆಗಳಿಂದ ಬೆಟ್ಟವನ್ನು ಏರುವರು. ಓಡಿ ದಣಿಯರು, ನಡೆದು ಬಳಲರು.
❮
❯