ಯೆಶಾಯ 38 : 1 (KNV)
ಆ ಕಾಲದಲ್ಲಿ ಹಿಜ್ಕೀಯನು ರೋಗಿಯಾಗಿ ಸಾಯುವದಕ್ಕಿದ್ದನು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು ಅವನಿಗೆ--ನಿನ್ನ ಮನೆಯ ವಿಷಯವಾಗಿ ವ್ಯವಸ್ಥೆ ಮಾಡಿಕೋ; ಯಾಕಂದರೆ ನೀನು ಉಳಿಯುವ ಹಾಗಿಲ್ಲ, ಸಾಯಬೇಕಾಗಿದೆ ಎಂಬದಾಗಿ ಕರ್ತನು ಹೇಳುತ್ತಾನೆ ಎಂದು ಹೇಳಿದನು.
ಯೆಶಾಯ 38 : 2 (KNV)
ಆಗ ಹಿಜ್ಕೀಯನು ತನ್ನ ಮುಖವನ್ನು ಗೋಡೆಯ ಕಡೆಗೆ ತಿರುಗಿಸಿ--
ಯೆಶಾಯ 38 : 3 (KNV)
ಓ ಕರ್ತನೇ, ನಾನು ನಿನ್ನ ಮುಂದೆ ಸತ್ಯವಾಗಿಯೂ ಯಥಾರ್ಥ ಹೃದಯದಿಂದಲೂ ನಡೆದು ನಿನ್ನ ದೃಷ್ಟಿ ಯಲ್ಲಿ ಒಳ್ಳೆಯದನ್ನು ಮಾಡಿದ್ದೇನೆಂದು ನೆನಪು ಮಾಡಿಕೋ ಎಂದು ಬೇಡಿಕೊಂಡು ವ್ಯಥೆಪಟ್ಟು ಅತ್ತನು.
ಯೆಶಾಯ 38 : 4 (KNV)
ಆಗ ಕರ್ತನ ವಾಕ್ಯವು ಯೆಶಾ ಯನ ಬಳಿಗೆ ಬಂದು ಹೇಳಿದ್ದೇನಂದರೆ--
ಯೆಶಾಯ 38 : 5 (KNV)
ನೀನು ಹೋಗಿ ಹಿಜ್ಕೀ ಯನಿಗೆ ಹೇಳತಕ್ಕದ್ದೇನಂದರೆ--ನಿನ್ನ ತಂದೆಯಾದ ದಾವೀದನ ದೇವರಾದ ಕರ್ತನು ಹೀಗೆ ಹೇಳುತ್ತಾನೆ, ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನೂ ನೋಡಿದ್ದೇನೆ; ಇಗೋ, ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನೂ ಕೂಡಿಸುತ್ತೇನೆ.
ಯೆಶಾಯ 38 : 6 (KNV)
ನಿನ್ನನ್ನೂ ಈ ಪಟ್ಟಣವನ್ನೂ ಅಶ್ಶೂರದ ಅರಸನ ಕೈಯಿಂದ ಬಿಡಿಸುವೆನು; ಈ ಪಟ್ಟಣವನ್ನು ಕಾಪಾಡುವೆನು.
ಯೆಶಾಯ 38 : 7 (KNV)
ಕರ್ತನು ತಾನು ನುಡಿದದ್ದನ್ನು ನೆರವೇರಿಸುವನು ಎಂಬದಕ್ಕೆ ಒಂದು ಗುರುತನ್ನು ಕಾಣುವಿ.
ಯೆಶಾಯ 38 : 8 (KNV)
ಆಗ ಇಗೋ, ಸೂರ್ಯನ ಇಳಿತರದಿಂದ ಆಹಾಜನ ಸೋಫಾನ ಪಂಕ್ತಿಯಲ್ಲಿ ಮುಂದೆ ಹೋಗಿದ್ದ ನೆರಳನ್ನು ಹತ್ತು ಮೆಟ್ಲು ಹಿಂದಕ್ಕೆ ಬರಮಾಡುವೆನು ಅಂದನು. ಅದರಂತೆ ಸೋಫಾನ ಪಂಕ್ತಿಯಲ್ಲಿ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಲು ಹಿಂದಕ್ಕೆ ಬಂತು.
ಯೆಶಾಯ 38 : 9 (KNV)
ಯೆಹೂದದ ಅರಸನಾದ ಹಿಜ್ಕೀಯನು ರೋಗದಿಂದ ಗುಣ ಹೊಂದಿದನಂತರ ಬರೆದದ್ದು--
ಯೆಶಾಯ 38 : 10 (KNV)
ನನ್ನ ದಿವಸಗಳು ಕಡಿಮೆ ಮಾಡಲ್ಪಟ್ಟದ್ದರಿಂದ ನಾನು ಪಾತಾಳದ ದ್ವಾರ ಗಳೊಳಗೆ ಹೋಗಬೇಕು ನನ್ನ ಆಯುಷ್ಯದಲ್ಲಿ ಮಿಕ್ಕಾ ದದ್ದು ನನಗೆ ತಪ್ಪಿಹೋಯಿತು ಎಂದು ಅಂದು ಕೊಂಡನು.
ಯೆಶಾಯ 38 : 11 (KNV)
ಕರ್ತನನ್ನು, ಜೀವಿತರ ದೇಶದಲ್ಲಿಯೂ ಸಹ ಕರ್ತನನ್ನು ನೋಡೆನೆಂದೂ ಇನ್ನೂ ಭೂಲೋಕ ನಿವಾಸಿಗಳಲ್ಲೊಬ್ಬನಾಗಿ ಮನುಷ್ಯರನ್ನು ನೋಡಲಾರೆ ನಲ್ಲಾ ಎಂದು ಅಂದುಕೊಂಡೆನು.
ಯೆಶಾಯ 38 : 12 (KNV)
ನನ್ನ ಆಯುಷ್ಯ ಮುಗಿಯಿತು ಮತ್ತು ಕುರುಬನ ಗುಡಾರದಂತೆ ನನ್ನಿಂದ ತೆಗೆದುಹಾಕಲ್ಪಟ್ಟಿದೆ; ಆತನು ನನ್ನ ಆಯುಷ್ಯದ ಹಾಸನ್ನು ಕತ್ತರಿಸಿದ್ದರಿಂದ ನೇಯಿಗೆಯವನಂತೆ ನನ್ನ ಜೀವಮಾನವನ್ನು ಸುತ್ತಿಬಿಟ್ಟಿದ್ದೇನೆ; ಬೆಳಗಿನಿಂದ ರಾತ್ರಿಯೊಳಗೇ ನನ್ನನ್ನು ಕೊನೆಗಾಣಿಸುತ್ತೀ.
ಯೆಶಾಯ 38 : 13 (KNV)
ಆತನು ಸಿಂಹದಂತೆ ಎಲುಬುಗಳನ್ನೆಲ್ಲಾ ಮುರಿದಿದ್ದಾಗ್ಯೂ ಬೆಳಗಿನ ವರೆಗೂ ತಾಳಿಕೊಂಡೇ ಇದ್ದೆನು; ಬೆಳಗಿನಿಂದ ರಾತ್ರಿಯೊಳಗೇ ನನ್ನನ್ನು ಕೊನೆಗಾಣಿಸುತ್ತೀ.
ಯೆಶಾಯ 38 : 14 (KNV)
ನಾನು ಬಾನಕ್ಕಿಯಂತೆಯೂ ಬಕದ ಹಾಗೂ ಕೀಚುಗುಟ್ಟಿದೆನು ಪಾರಿವಾಳದಂತೆ ಮೂಲುಗುತ್ತಿದ್ದೆನು. ನನ್ನ ಕಣ್ಣುಗಳು ಮೇಲಕ್ಕೆ ನೋಡುವದರಿಂದ ಕ್ಷೀಣವಾದವು. ಓ ಕರ್ತನೇ, ನಾನು ಬಾಧೆಪಡುತ್ತಿದ್ದೇನೆ; ನೀನು ನನಗೆ ಆಶ್ರಯನಾಗು.
ಯೆಶಾಯ 38 : 15 (KNV)
ನಾನು ಏನು ಹೇಳಲಿ; ಆತನು ನನಗೆ ಮಾತುಕೊಟ್ಟು ತಾನೇ ಅದನ್ನು ನೆರವೇರಿಸಿ ದ್ದಾನೆ. ನನ್ನ ಆತ್ಮಕ್ಕೆ ಸಂಭವಿಸಿದ ದುಃಖದಲ್ಲಿ ನನ್ನ ವರುಷಗಳಲ್ಲೆಲ್ಲಾ ಮೆಲ್ಲಗೆ ನಡೆಯುವೆನು.
ಯೆಶಾಯ 38 : 16 (KNV)
ಓ ಕರ್ತನೇ, ಇಂಥಾ ಸಂಬಂಧಗಳಿಂದ ಮನುಷ್ಯರು ಬದುಕುತ್ತಾರೆ, ಇವೆಲ್ಲವುಗಳಿಂದಲೇ ನನ್ನ ಆತ್ಮದಲ್ಲಿ ಜೀವವುಂಟು, ಹೀಗೆ ನನ್ನನ್ನು ನೀನು ಸ್ವಸ್ಥಮಾಡಿ ಬದುಕುವಂತೆ ಮಾಡಿದಿ.
ಯೆಶಾಯ 38 : 17 (KNV)
ಇಗೋ, ಆ ಬಹು ವ್ಯಥೆಯು ನನ್ನ ಸಮಾಧಾನಕ್ಕಾಗಿಯೇ ಆಯಿತು; ಆದರೆ ನನ್ನ ಆತ್ಮವನ್ನು ನಾಶಕೂಪದಿಂದ ಬಿಡುಗಡೆ ಮಾಡಿದ್ದು ನಿನ್ನ ಪ್ರೀತಿಯೇ. ನನ್ನ ಪಾಪಗಳನ್ನೆಲ್ಲಾ ನಿನ್ನ ಬೆನ್ನಿನ ಹಿಂದೆ ಹಾಕಿಬಿಟ್ಟಿದ್ದೀ.
ಯೆಶಾಯ 38 : 18 (KNV)
ಸಮಾಧಿಯು ನಿನ್ನನ್ನು ಹೊಗಳುವದಿಲ್ಲ, ಮರಣವು ನಿನ್ನನ್ನು ಕೊಂಡಾಡುವದಿಲ್ಲ; ಕುಣಿಯೊಳಕ್ಕೆ ಹೋಗುವವರು ನಿನ್ನ ಸತ್ಯತೆಯಲ್ಲಿ ಭರವಸವಿಡಲಾರರು.
ಯೆಶಾಯ 38 : 19 (KNV)
ನಾನು ಈ ಹೊತ್ತು ಮಾಡುವ ಪ್ರಕಾರ, ಜೀವಂತನು ಹೌದು, ಜೀವಂತನೇ, ನಿನ್ನನ್ನು ಹೊಗಳುವನು; ತಂದೆಯು ಮಕ್ಕಳಿಗೆ ನಿನ್ನ ಸತ್ಯತೆಯನ್ನು ತಿಳಿಯ ಪಡಿಸುವನು.
ಯೆಶಾಯ 38 : 20 (KNV)
ಕರ್ತನು ನನ್ನನ್ನು ರಕ್ಷಿಸಲು ಸಿದ್ಧನಾಗಿ ದ್ದನು; ಆದದರಿಂದ ಕರ್ತನ ಆಲಯದಲ್ಲಿ ನಮ್ಮ ಜೀವ ಮಾನದ ದಿವಸಗಳಲ್ಲೆಲ್ಲಾ ತಂತಿವಾದ್ಯಗಳಿಂದ ಹಾಡು ಗಳನ್ನು ನಾವು ಹಾಡುವೆವು.
ಯೆಶಾಯ 38 : 21 (KNV)
ಯೆಶಾಯನು--ಅಂಜೂರದ ಹಣ್ಣುಗಳ ಅಡೆಯನ್ನು ತರಿಸಿ ಹುಣ್ಣಿನ ಮೇಲೆ ಇಟ್ಟರೆ ಅವನು ಬದುಕುವನೆಂದು ಹೇಳಿದ್ದನು.
ಯೆಶಾಯ 38 : 22 (KNV)
ಇದಲ್ಲದೆ ಹಿಜ್ಕೀಯನು--ನಾನು ಕರ್ತನ ಆಲಯಕ್ಕೆ ಹೋಗುವದಕ್ಕೆ ಗುರುತೇನು ಎಂದು ಕೇಳಿದ್ದನು.

1 2 3 4 5 6 7 8 9 10 11 12 13 14 15 16 17 18 19 20 21 22