ಅರಣ್ಯವು ನಿರ್ಜನ ಪ್ರದೇಶವು ಆನಂದವಾಗಿರುವವು ಮರುಭೂಮಿಯು ಹರ್ಷಿಸಿ ಗುಲಾಬಿಯಂತೆ ಅರಳುವದು.
ಯೆಶಾಯ 35 : 2 (KNV)
ಅದು ಸಮೃದ್ಧಿಯಾಗಿ ಅರಳಿ ಆನಂದ ಸ್ವರವನ್ನೆತ್ತಿ ಉಲ್ಲಾಸಿಸುವದು. ಲೆಬ ನೋನಿನ ಘನತೆಯು ಕರ್ಮೆಲ್ ಮತ್ತು ಶಾರೋ ನಿನ ಗೌರವವು ಅದಕ್ಕೆ ಕೊಡಲ್ಪಡುವದು, ಅವರು ಕರ್ತನ ಮಹಿಮೆಯನ್ನೂ ನಮ್ಮ ದೇವರ ಘನತೆ ಯನ್ನೂ ನೋಡುವರು.
ಯೆಶಾಯ 35 : 3 (KNV)
ನೀವು ಬಲಹೀನವಾದ ಕೈಗಳನ್ನು ಬಲಪಡಿಸಿರಿ ನಿತ್ರಾಣವಾದ ಮೊಣಕಾಲುಗಳನ್ನು ದೃಢಪಡಿಸಿರಿ.
ಯೆಶಾಯ 35 : 4 (KNV)
ಭಯಭ್ರಾಂತ ಹೃದಯವುಳ್ಳವರಿಗೆ--ಬಲಗೊಳ್ಳಿರಿ, ಹೆದರಬೇಡಿರಿ; ಇಗೋ, ನಿಮ್ಮ ದೇವರು ಮುಯ್ಯಿ ತೀರಿಸುವದಕ್ಕೂ ಪ್ರತಿಫಲವನ್ನು ಕೊಡುವದಕ್ಕೂ ಆತನೇ ಬಂದು ನಿಮ್ಮನ್ನು ರಕ್ಷಿಸುವನು ಎಂದು ಅವರಿಗೆ ಹೇಳಿರಿ.
ಯೆಶಾಯ 35 : 5 (KNV)
ಆಗ ಕುರುಡರ ಕಣ್ಣುಗಳು ತೆರೆಯಲ್ಪಡು ವವು, ಕಿವುಡರ ಕಿವಿಗಳು ಕೇಳುವವು.