ಯೆಶಾಯ 32 : 1 (KNV)
ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು, ಅಧಿಪತಿಗಳು ನ್ಯಾಯ ದಿಂದ ದೊರೆತನಮಾಡುವರು.
ಯೆಶಾಯ 32 : 2 (KNV)
ಆಗ ಮನುಷ್ಯನು ಗಾಳಿಗೋಸ್ಕರ ಅಡಗಿಕೊಳ್ಳುವಂತೆಯೂ ಬಿರುಗಾಳಿ ಗೋಸ್ಕರ ಮರೆಮಾಡಿಕೊಳ್ಳುವಂತೆಯೂ ಸ್ಥಾನದ ಹಾಗೂ ಒಣಗಿದ ಸ್ಥಳದಲ್ಲಿರುವ ನೀರಿನ ಕಾಲುವೆಗಳ ಹಾಗೂ ಆಯಾಸವುಳ್ಳ ದೇಶದಲ್ಲಿರುವ ದೊಡ್ಡ ಬಂಡೆಯ ನೆರಳಿನ ಹಾಗೆಯೂ ಇರುವನು.
ಯೆಶಾಯ 32 : 3 (KNV)
ಆಗ ನೋಡುವವರ ಕಣ್ಣುಗಳು ಮೊಬ್ಬಾಗವು, ಕೇಳುವವರ ಕಿವಿಗಳು ಮಂದವಾಗವು.
ಯೆಶಾಯ 32 : 4 (KNV)
ಆತುರಗಾರರ ಹೃದಯವು ತಿಳುವಳಿಕೆಯನ್ನು ಗ್ರಹಿಸುವದು, ತೊದಲು ಮಾತನಾ ಡುವವರ ನಾಲಿಗೆ ಸ್ವಚ್ಛವಾಗಿ ಮಾತಾಡುವದಕ್ಕೆ ಸಿದ್ಧ ವಾಗಿರುವದು.
ಯೆಶಾಯ 32 : 5 (KNV)
ಇನ್ನು ಮೇಲೆ ನೀಚ ಮನುಷ್ಯನು ಘನವಂತನೆನಿಸಿಕೊಳ್ಳನು. ಇಲ್ಲವೆ ಜಿಪುಣನು ಉದಾರ ನೆಂದು ಹೇಳಲಾಗದು.
ಯೆಶಾಯ 32 : 6 (KNV)
ನೀಚನು ನೀಚನಾಗಿ ಮಾತನಾಡುವನು. ಅವನ ಹೃದಯವು ಕಪಟತ್ವವನ್ನು ಅಭ್ಯಾ ಸಿಸುವಂತೆಯೂ ಕರ್ತನಿಗೆ ವಿರೋಧವಾಗಿ ಸಂಪೂ ರ್ಣವಾಗಿ ತಪ್ಪಿಹೋಗುವವರಂತೆಯೂ ಹಸಿವೆ ಗೊಂಡವನ ಆಶೆಯನ್ನು ಬರಿದು ಮಾಡುವಂತೆಯೂ ಕೇಡನ್ನು ಮಾಡುವನು. ಬಾಯಾರಿದವನ ಪಾನವನ್ನು ಇಲ್ಲದಂತೆ ಮಾಡುವ ಹಾಗೆ ಕಾರಣನಾಗುವನು.
ಯೆಶಾಯ 32 : 7 (KNV)
ಜಿಪುಣನ ಆಯುಧಗಳು ಕೆಟ್ಟವುಗಳೇ, ದರಿದ್ರನು ನ್ಯಾಯವಾದದ್ದನ್ನು ಮಾತನಾಡಿದರೂ ಅವನು ಬಡವ ರನ್ನು ಸುಳ್ಳು ಮಾತುಗಳಿಂದ ಕೆಡಿಸುವದಕ್ಕೆ ಕುಯುಕ್ತಿ (ದೋಷ)ಗಳನ್ನು ಕಲ್ಪಿಸುವನು.
ಯೆಶಾಯ 32 : 8 (KNV)
ಘನವಂತನಾ ದರೋ, ಘನಕಾರ್ಯಗಳನ್ನು ಕಲ್ಪಿಸುವನು; ಅವನು ಘನವಾದವುಗಳಲ್ಲಿಯೇ ನಿರತನಾಗಿರುವನು.
ಯೆಶಾಯ 32 : 9 (KNV)
ನಿಶ್ಚಿಂತೆಯರಾದ ಹೆಂಗಸರೇ, ಏಳಿರಿ, ನನ್ನ ಸ್ವರ ವನ್ನು ಕೇಳಿರಿ, ಭಯವಿಲ್ಲದ ಹೆಣ್ಣುಮಕ್ಕಳೇ, ನನ್ನ ಮಾತಿಗೆ ಕಿವಿಗೊಡಿರಿ.
ಯೆಶಾಯ 32 : 10 (KNV)
ನಿಶ್ಚಿಂತೆಯ ಸ್ತ್ರಿಯರೇ, ನೀವು ವರುಷದ ಮೇಲೆ ಹೆಚ್ಚಾದ ದಿವಸಗಳಲ್ಲಿ ಕಳವಳ ಪಡುವಿರಿ, ದ್ರಾಕ್ಷೇ ಕೊಯ್ಯುವ ಕಾಲ ಇಲ್ಲದೆ ಹೋಗುವದು; ಹಣ್ಣು ಕೂಡಿಸುವ ಕಾಲ ಬಾರದು.
ಯೆಶಾಯ 32 : 11 (KNV)
ನಿಶ್ಚಿಂತೆಯುಳ್ಳ ಹೆಂಗಸರೇ, ನೀವು ನಡುಗಿರಿ, ನಿರ್ಭೀತರೇ ಕಳವಳಗೊಳ್ಳಿರಿ; ನಿಮ್ಮ ಬಟ್ಟೆಯನ್ನು ಕಿತ್ತು ಹಾಕಿ ಬೆತ್ತಲೆಯಾಗಿ ಸೊಂಟಕ್ಕೆ ಗೋಣೀತಟ್ಟನ್ನು ಸುತ್ತಿಕೊಳ್ಳಿರಿ.
ಯೆಶಾಯ 32 : 12 (KNV)
ಇಷ್ಟವಾದ ಹೊಲಗಳ ಮತ್ತು ಫಲ ವತ್ತಾದ ದ್ರಾಕ್ಷಾಲತೆಗಳ ನಿಮಿತ್ತ ಎದೆ ಬಡುಕೊಳ್ಳು ವರು.
ಯೆಶಾಯ 32 : 13 (KNV)
ನನ್ನ ಜನರ ಭೂಮಿಯ ಮೇಲೂ ಹೌದು, ಉತ್ಸಾಹ ಪಟ್ಟಣದಲ್ಲಿ ಉಲ್ಲಾಸಗೊಳ್ಳುವ ಎಲ್ಲಾ ಮನೆ ಗಳ ಮೇಲೂ ಮುಳ್ಳು ಮತ್ತು ದತ್ತೂರಿ ಬೆಳೆಯುವವು.
ಯೆಶಾಯ 32 : 14 (KNV)
ಅರಮನೆಗಳು ಕೈಬಿಡಲ್ಪಡುವವು. (ವಿಸರ್ಜಿಸು ವವು) ಸಮೂಹಗಳಿಂದ ತುಂಬಿದ್ದ ಪಟ್ಟಣವು ನಿರ್ಜನ ವಾಗುವದು. ದುರ್ಗಗಳೂ ಕೋಟೆಗಳೂ ಯಾವಾ ಗಲೂ ಗುಹೆ (ಗವಿ)ಗಳಾಗಿಯೂ ಕಾಡುಕತ್ತೆಗಳಿಗೆ ಸಂತೋಷವಾಗಿಯೂ ಮಂದೆಗಳಿಗೆ ಮೇಯುವ ಸ್ಥಳವಾಗಿಯೂ ಇರುವವು.
ಯೆಶಾಯ 32 : 15 (KNV)
ಬಳಿಕ ಉನ್ನತದಿಂದ ಆತ್ಮ ನಮ್ಮ ಮೇಲೆ ಸುರಿ ಸಲ್ಪಡುವಾಗ, ಆಗ ಅರಣ್ಯಗಳು ಪೈರಿನ ಹೊಲ ವಾಗುವದು. ಪೈರಿನ ಹೊಲವು ಅರಣ್ಯವೆಂದೆಣಿಸಲ್ಪ ಡುವದು.
ಯೆಶಾಯ 32 : 16 (KNV)
ನ್ಯಾಯವು ಅರಣ್ಯದಲ್ಲಿಯೂ ನೆಲೆಗೊ ಳ್ಳುವದು. ಪೈರಿನ ಹೊಲದಲ್ಲಿ ನೀತಿಯು ನೆಲೆಯಾಗಿರುವದು.
ಯೆಶಾಯ 32 : 17 (KNV)
ನೀತಿಯ ಕೆಲಸವು ಸಮಾಧಾನವೂ ನೀತಿಯ ಫಲವು ನಿತ್ಯವಾದ ಶಾಂತಿಯೂ ಭರವಸವೂ ಆಗಿರುವದು.
ಯೆಶಾಯ 32 : 18 (KNV)
ಆಗ ನನ್ನ ಜನರು ಸಮಾಧಾನದ ನಿವಾಸಗಳಲ್ಲಿಯೂ ಭದ್ರವಾದ ಸ್ಥಾನಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.
ಯೆಶಾಯ 32 : 19 (KNV)
ಆದರೆ ಕಲ್ಮಳೆ ಸುರಿಯುವಾಗ ವನವು ಹಾಳಾಗು ವದು; ಪಟ್ಟಣವು ತಗ್ಗಾದ ಸ್ಥಳಕ್ಕೆ ತಗ್ಗಿಸಲ್ಪಡುವದು.
ಯೆಶಾಯ 32 : 20 (KNV)
ಎಲ್ಲಾ ನೀರುಗಳ ಬಳಿಯಲ್ಲಿ ಬಿತ್ತುತ್ತಲೂ ಎತ್ತು ಕತ್ತೆಗಳನ್ನು (ಕಾವಲಿಗೆ) ಮೇಯ ಬಿಡುತ್ತಲೂ ಇರುವ ನೀವು ಧನ್ಯರೇ ಸರಿ.

1 2 3 4 5 6 7 8 9 10 11 12 13 14 15 16 17 18 19 20