ಯೆಶಾಯ 24 : 1 (KNV)
ಇಗೋ, ಕರ್ತನು ಭೂಮಿಯನ್ನು (ಲೋಕವನ್ನು) ಬರಿದುಮಾಡಿ ನಿರ್ಜನ ಪ್ರದೇಶ ವನ್ನಾಗಿ ಮಾಡಿ ತಲೆಕೆಳಕಾಗಿ ತಿರುಗಿಸಿ ಅದರ ನಿವಾಸಿ ಗಳನ್ನು ಚದರಿಸಿಬಿಡುವವನಾಗಿದ್ದಾನೆ.
ಯೆಶಾಯ 24 : 2 (KNV)
ಜನಗಳಿಗೆ ಹೇಗೋ ಹಾಗೆಯೇ ಯಾಜಕರಿಗೂ ದಾಸನಿಗೆ ಹೇಗೋ ಹಾಗೆಯೇ ಅವನ ಯಜಮಾನನಿಗೆ, ದಾಸಿಗೆ ಹೇಗೋ ಹಾಗೆಯೇ ಅವಳ ಯಜಮಾನಿಗೆ; ಕೊಳ್ಳುವವನಿಗೆ ಹೇಗೋ ಹಾಗೆಯೇ ಮಾರುವವನಿಗೆ; ಸಾಲಕೊಡುವವನಿಗೆ ಹೇಗೋ ಹಾಗೆಯೇ ತರುವ ವನಿಗೆ; ಬಡ್ಡಿಕೊಡುವವನಿಗೆ ಹೇಗೋ ಹಾಗೆಯೇ ತಕ್ಕೊಳ್ಳುವವನಿಗೆ ಆಗುವದು.
ಯೆಶಾಯ 24 : 3 (KNV)
ಭೂಮಿಯು ಬರಿದೇ ಬರಿದಾಗುವದು ಮತ್ತು ಸಂಪೂರ್ಣ ಸುಲಿಗೆಯಾಗು ವದು. ಕರ್ತನು ತಾನೇ ಈ ಮಾತನ್ನು ಹೇಳಿದ್ದಾನೆ.
ಯೆಶಾಯ 24 : 4 (KNV)
ಭೂಮಿಯು ಪ್ರಲಾಪಿಸುತ್ತಾ ಬಾಡಿಹೋಗುವದು. ಲೋಕವು ಸೊರಗಿ ಬಾಡಿಹೋಗುವದು ಭೂಮಿಯ ಗರ್ವಿಷ್ಠರು ಕುಗ್ಗಿಹೋಗುವರು.
ಯೆಶಾಯ 24 : 5 (KNV)
ಭೂನಿವಾಸಿಗಳು ನ್ಯಾಯಪ್ರಮಾಣಗಳನ್ನು ವಿಾರಿ ನಿಯಮಗಳನ್ನು ಬದ ಲಾಯಿಸಿ ನಿತ್ಯವಾದ ಒಡಂಬಡಿಕೆಯನ್ನು ಭಂಗಪಡಿಸಿ ದ್ದರಿಂದ ಭೂಮಿಯು ಸಹ ಅದರ ನಿವಾಸಿಗಳ ಹೆಜ್ಜೆ ಯಿಂದ ಅಪವಿತ್ರವಾಗುವದು.
ಯೆಶಾಯ 24 : 6 (KNV)
ಆದಕಾರಣ ಶಾಪವು ಲೋಕವನ್ನು ನುಂಗಿಬಿಟ್ಟಿದೆ, ಅದರಲ್ಲಿ ವಾಸವಾಗಿರು ವವರು ಧ್ವಂಸವಾಗುವರು; ಆದ್ದರಿಂದ ಭೂನಿವಾಸಿ ಗಳು ಸುಟ್ಟುಹೋಗಿ ಕೆಲವರು ಮಾತ್ರ ಉಳಿದಿದ್ದಾರೆ.
ಯೆಶಾಯ 24 : 7 (KNV)
ದ್ರಾಕ್ಷಾರಸವು ದುಃಖಿಸುತ್ತದೆ, ದ್ರಾಕ್ಷೆಯು ಕ್ಷೀಣಿಸು ವದು; ಹರ್ಷ ಹೃದಯರೆಲ್ಲಾ ನಿಟ್ಟುಸಿರುಬಿಡುತ್ತಾರೆ.
ಯೆಶಾಯ 24 : 8 (KNV)
ದಮ್ಮಡಿಗಳ ಉತ್ಸಾಹವು ಮುಗಿದಿದೆ, ಉಲ್ಲಾಸದ ಅವರ ಶಬ್ದವು ಕೊನೆಗೊಂಡಿತು. ಕಿನ್ನರಿಯ ಆನಂದ ಸ್ವರವು ತೀರಿತು.
ಯೆಶಾಯ 24 : 9 (KNV)
ಇನ್ನು ಗಾನದೊಡನೆ ದ್ರಾಕ್ಷಾರಸ ವನ್ನು ಕುಡಿಯರು; ಕುಡಿಯುವವರಿಗೆ ಮದ್ಯಪಾನವು ಕಹಿಯಾಗುವದು.
ಯೆಶಾಯ 24 : 10 (KNV)
ಗಲಿಬಿಲಿಗುಂಟಾದ ಪಟ್ಟಣವು ಹಾಳಾಗಿದೆ. ಯಾರು ಒಳಗೆ ಬಾರದಂತೆ ಪ್ರತಿಯೊಂದು ಮನೆಯು ಮುಚ್ಚಿದೆ.
ಯೆಶಾಯ 24 : 11 (KNV)
ದ್ರಾಕ್ಷಾರಸದ ಕೊರತೆಯಿಂದ ಬೀದಿಗಳಲ್ಲಿ ಅರಚುತ್ತಾರೆ; ಉಲ್ಲಾಸವೆಲ್ಲ ಅಸ್ತಮಿಸಿದೆ; ದೇಶದ ಸಡಗರವು ತೊಲಗಿಹೋಗಿದೆ.
ಯೆಶಾಯ 24 : 12 (KNV)
ಪಟ್ಟಣ ದಲ್ಲಿ ಹಾಳೇ ಉಳಿದಿವೆ; ನಾಶನವು ಹೆಬ್ಬಾಗಿಲಿಗೆ ತಟ್ಟಿದೆ.
ಯೆಶಾಯ 24 : 13 (KNV)
ಎಣ್ಣೇ ಮರವನ್ನು ಬಡಿದ ಮೇಲೆಯೂ ದ್ರಾಕ್ಷೇ ಸುಗ್ಗಿಯು ತೀರಿದ ನಂತರವು ನಿಲ್ಲುವ ಉಳಿದ ಕಾಯಿಗಳ ಹಾಗೆ ದೇಶದಲ್ಲಿರುವದು.
ಯೆಶಾಯ 24 : 14 (KNV)
ಅವರು ತಮ್ಮ ಸ್ವರವನ್ನೆತ್ತಿ ಕರ್ತನ ಮಹತ್ತಿನ ನಿಮಿತ್ತ ಹಾಡು ವರು, ಸಮುದ್ರದ ಕಡೆಯಿಂದ ಆರ್ಭಟಿಸುವರು.
ಯೆಶಾಯ 24 : 15 (KNV)
ಆದದರಿಂದ ನೀವು ಕರ್ತನಿಗೆ ಬೆಂಕಿಯಲ್ಲಿಯೂ ಸಮುದ್ರದ ದ್ವೀಪಗಳಲ್ಲಿಯೂ ಇಸ್ರಾಯೇಲ್ಯರ ದೇವ ರಾದ ಕರ್ತನ ಹೆಸರನ್ನು ಘನಪಡಿಸಿರಿ.
ಯೆಶಾಯ 24 : 16 (KNV)
ಭೂಮಂಡಲದ ಕಟ್ಟಕಡೆಯಿಂದ ನೀತಿವಂತರ ಘನತೆಗೆ ಬರುವಂತಹ ಗೀತೆಗಳು ನಮಗೆ ಕೇಳಿ ಬರು ತ್ತಿವೆ. ನಾನಾದರೋ--ಕ್ಷಮಿಸೇ ಕ್ಷಮಿಸುತ್ತೇನೆ. ನನಗೆ ಅಯ್ಯೋ! ಬಾಧಕರು ಬಾಧಿಸುವದರಲ್ಲಿಯೇ ನಿರತ ರಾಗಿದ್ದಾರೆ; ಹೌದು, ಬಾಧಕರು, ಬಹಳವಾಗಿ ಬಾಧಿ ಸುವದರಲ್ಲಿ ನಿರತರಾಗಿದ್ದಾರೆ.
ಯೆಶಾಯ 24 : 17 (KNV)
ಓ, ಭೂಮಿಯ ನಿವಾಸಿಗಳೇ, ಭಯವೂ ಗುಂಡಿಯೂ ಬಲೆಯೂ ನಿಮಗೆ ಕಾದಿವೆ.
ಯೆಶಾಯ 24 : 18 (KNV)
ಆಗ ಭಯದ ಶಬ್ದಕ್ಕೆ ಓಡಿ ಹೋಗುವವನು, ಕುಣಿಯೊಳಗೆ ಬೀಳುವನು; ಆ ಕುಣಿಯೊಳಗಿಂದ ಏರಿ ಬರುವವನು ಬಲೆಗೆ ಬೀಳು ವನು; ಮೇಲಿನ ಕಿಟಕಿಗಳು (ಆಕಾಶದ ದ್ವಾರಗಳು) ತೆರೆಯಲ್ಪಟ್ಟಿವೆ. ಭೂಮಿಯ ಅಸ್ತಿವಾರಗಳು ನಡುಗು ತ್ತವೆ. (ಕಂಪಿಸುತ್ತವೆ).
ಯೆಶಾಯ 24 : 19 (KNV)
ಭೂಮಿಯು ಸಂಪೂರ್ಣ ವಾಗಿ ಮುರಿಯಲ್ಪಟ್ಟಿದೆ. ಪೂರ್ತಿಯಾಗಿ ತುಂಡು ತುಂಡಾಗಿ ಹೋಗಿದೆ. ಭೂಮಿಯು ಮಿತಿವಿಾರಿ ಚಲಿಸ ಲ್ಪಟ್ಟಿದೆ.
ಯೆಶಾಯ 24 : 20 (KNV)
ಭೂಮಿಯು ಕುಡುಕನ ಹಾಗೆ ಓಲಾಡು ತ್ತದೆ ಮತ್ತು ಗುಡಿಸಲಿನ ಹಾಗೆ ತೆಗೆಯಲ್ಪಡುತ್ತದೆ ಅದರ ಅಪರಾಧವು ಅದರ ಮೇಲೆ ಭಾರವಾಗಿರುತ್ತದೆ; ಅದು ಬಿದ್ದುಹೋಗುತ್ತದೆ ತಿರಿಗಿ ಏಳುವದೇ ಇಲ್ಲ.
ಯೆಶಾಯ 24 : 21 (KNV)
ಆ ದಿವಸದಲ್ಲಿ ಆಗುವದೇನಂದರೆ--ಕರ್ತನು ಉನ್ನತದಲ್ಲಿರುವ ಉನ್ನತವಾದವರ ಸೈನ್ಯವನ್ನೂ ಭೂಮಿಯ ಮೇಲಿರುವ ಭೂರಾಜರನ್ನೂ ದಂಡಿಸು ವನು.
ಯೆಶಾಯ 24 : 22 (KNV)
ಕುಣಿಯೊಳಗೆ ಒಟ್ಟುಗೂಡಿದ ಸೆರೆಯವರ ಹಾಗೆ ಅವರು ಒಟ್ಟುಗೂಡಿ ಸೆರೆಮನೆಯಲ್ಲಿ ಮುಚ್ಚ ಲ್ಪಟ್ಟು ಬಹಳ ದಿವಸಗಳಾದ ಮೇಲೆ ದಂಡನೆಗೆ ಗುರಿ ಯಾಗುವರು.
ಯೆಶಾಯ 24 : 23 (KNV)
ಆಮೇಲೆ ಚೀಯೋನ್ ಪರ್ವತ ದಲ್ಲಿಯೂ ಯೆರೂಸಲೇಮಿನಲ್ಲಿಯೂ ತನ್ನ ಪೂರ್ವಿ ಕರ (ಪರಿವಾರದವರ) ಮುಂದೆ ಮಹಿಮೆಯಿಂದ ಆಳುವಾಗ ಚಂದ್ರನಿಗೆ ಅವಮಾನವಾಗುವದು, ಸೂರ್ಯನು ನಾಚಿಕೆ(ಲಜ್ಜೆ)ಪಡುವನು.

1 2 3 4 5 6 7 8 9 10 11 12 13 14 15 16 17 18 19 20 21 22 23