ಹೋಶೇ 13 : 1 (KNV)
ಎಫ್ರಾಯಾಮು ನಡುಗುತ್ತಾ ಮಾತನಾಡಿದಾಗ ಅವನು ತನ್ನನ್ನು ಇಸ್ರಾಯೇಲಿನಲ್ಲಿ ಹೆಚ್ಚಿಸಿಕೊಂಡನು; ಆದರೆ ಬಾಳನ ವಿಷಯದಲ್ಲಿ ಅವನು ಅಪರಾಧಿಯಾದ ಮೇಲೆ ಸತ್ತನು.
ಹೋಶೇ 13 : 2 (KNV)
ಈಗ ಅವರು ಹೆಚ್ಚೆಚ್ಚಾಗಿ ಪಾಪವನ್ನು ಮಾಡುತ್ತಾರೆ; ಸ್ವಂತ ಬುದ್ಧಿಯ ಪ್ರಕಾರ ತಮ್ಮ ಬೆಳ್ಳಿಯಿಂದ ಎರಕದ ವಿಗ್ರಹಗಳನ್ನೂ ಮೂರ್ತಿಗಳನ್ನೂ ಮಾಡಿಕೊಂಡಿದ್ದಾರೆ. ಅವೆಲ್ಲವೂ ಶಿಲ್ಪಿಗಳ ಕೈಕೆಲಸವೇ, ಬಲಿ ಅರ್ಪಿಸುವ ಮನುಷ್ಯರು ಹಸುಗಳಿಗೆ ಮುದ್ದಿಡಲೆಂದು ಅವರು ಅವರ ವಿಷಯ ವಾಗಿ ಹೇಳಿದರು.
ಹೋಶೇ 13 : 3 (KNV)
ಆದದರಿಂದ ಅವರು ಪ್ರಾತಃ ಕಾಲದ ಮೇಘದ ಹಾಗೆಯೂ ಬೇಗನೆ ಮಾಯ ವಾಗುವ ಇಬ್ಬನಿ ಹಾಗೆಯೂ ಸುಳಿಗಾಳಿಯು ನೆಲದಿಂದ ಬಡಿದುಕೊಂಡು ಹೋಗುವ ಹೊಟ್ಟಿನ ಹಾಗೆಯೂ ಚಿಮಿಣಿಗೆಯಿಂದ ಹೊರಡುವ ಹೊಗೆಯ ಹಾಗೆಯೂ ಇರುವರು.
ಹೋಶೇ 13 : 4 (KNV)
ಆದಾಗ್ಯೂ ನಾನು ಐಗುಪ್ತದಿಂದ ನಿನ್ನ ದೇವರಾಗಿರುವ ಕರ್ತನಾಗಿದ್ದೇನೆ, ನೀನು ನನ್ನ ಹೊರತು ಯಾವ ದೇವರನ್ನೂ ತಿಳಿದುಕೊಳ್ಳಬಾರದು; ಯಾಕಂದರೆ ನನ್ನ ಹೊರತು ನಿನಗೆ ಬೇರೆ ರಕ್ಷಕನು ಇಲ್ಲ.
ಹೋಶೇ 13 : 5 (KNV)
ನಾನು ನಿನ್ನನ್ನು ಅರಣ್ಯದಲ್ಲಿಯೂ ಬಹು ಬಾಯಾರಿಕೆಯ ದೇಶದಲ್ಲಿಯೂ ತಿಳಿದುಕೊಂಡಿದ್ದೇನೆ.
ಹೋಶೇ 13 : 6 (KNV)
ಅವರ ಆಹಾರದ ಪ್ರಕಾರ ತೃಪ್ತರಾದರು, ಅದರಿಂದ ಅವರ ಹೃದಯಗಳು ಉಬ್ಬಿಕೊಂಡಿತು; ಆದಕಾರಣ ಅವರು ನನ್ನನ್ನು ಮರೆತುಬಿಟ್ಟರು.
ಹೋಶೇ 13 : 7 (KNV)
ಆದದರಿಂದ ನಾನು ಅವರಿಗೆ ಸಿಂಹದ ಹಾಗೆ ಆಗುವೆನು; ಮಾರ್ಗದಲ್ಲಿ ಚಿರತೆಯ ಹಾಗೆ ಅವರಿಗಾಗಿ ಹೊಂಚಿಹಾಕುವೆನು.
ಹೋಶೇ 13 : 8 (KNV)
ಮರಿಗಳನ್ನು ಕಳೆದುಕೊಂಡ ಕರಡಿಯಂತೆ ನಾನು ಅವರನ್ನು ಎದುರುಗೊಳ್ಳುವೆನು; ಅವರ ಹೃದಯದ ಪೊರೆಯನ್ನು ಹರಿದುಬಿಡುವೆನು. ಅಲ್ಲಿ ನಾನು ಸಿಂಹದ ಹಾಗೆ ಅವರನ್ನು ನುಂಗುವೆನು; ಕಾಡುಮೃಗವು ಅವರನ್ನು ಸೀಳಿಹಾಕುವದು.
ಹೋಶೇ 13 : 9 (KNV)
ಓ ಇಸ್ರಾಯೇಲೇ, ನಿನ್ನನ್ನು ನೀನು ಹಾಳುಮಾಡಿಕೊಂಡಿದ್ದೀ, ಆದರೆ ನನ್ನಲ್ಲಿ ನಿನಗೆ ಸಹಾಯ ಉಂಟು.
ಹೋಶೇ 13 : 10 (KNV)
ನಾನೇ ನಿನ್ನ ಅರಸನಾಗಿ ರುವೆನು; ನಿನ್ನ ಎಲ್ಲಾ ಪಟ್ಟಣಗಳಲ್ಲಿ ನಿನ್ನನ್ನು ರಕ್ಷಿಸುವ ಬೇರೆಯ ವನು ಎಲ್ಲಿದ್ದಾನೆ? ಮತ್ತು--ರಾಜನನ್ನೂ ಪ್ರಧಾನ ರನ್ನೂ ನನಗೆ ದಯಪಾಲಿಸು ಎಂದು ನೀನು ಹೇಳಿದ ನ್ಯಾಯಾಧಿಪತಿಗಳು ಎಲ್ಲಿದ್ದಾರೆ?
ಹೋಶೇ 13 : 11 (KNV)
ನನ್ನ ಕೋಪದಲ್ಲಿ ನಿನಗೆ ಅರಸನನ್ನು ಕೊಟ್ಟೆನು, ನನ್ನ ರೌದ್ರದಲ್ಲಿ ಅವನನ್ನು ತೆಗೆದುಹಾಕಿದೆನು.
ಹೋಶೇ 13 : 12 (KNV)
ಎಫ್ರಾ ಯಾಮಿನ ದುಷ್ಕೃತ್ಯವು ಕಟ್ಟಲ್ಪಟ್ಟಿದೆ, ಅವನ ಪಾಪವು ಬಚ್ಚಿಡಲ್ಪಟ್ಟಿದೆ.
ಹೋಶೇ 13 : 13 (KNV)
ಹೆರು ವವಳ ಸಂಕಟಗಳು ಅವನ ಮೇಲೆಯೇ ಬರುವವು. ಅವನು ಬುದ್ಧಿಹೀನ ಮಗನಾಗಿದ್ದಾನೆ; ಮಕ್ಕಳು ಹುಟ್ಟುವ ಸ್ಥಳದಲ್ಲಿ ಅವನು ಬಹಳ ಹೊತ್ತು ನಿಲ್ಲುವದಿಲ್ಲ.
ಹೋಶೇ 13 : 14 (KNV)
ನಾನು ಸಮಾಧಿಯ ಶಕ್ತಿಯಿಂದ ಅವರನ್ನು ಈಡು ಕೊಟ್ಟು ವಿಮೋಚಿಸುವೆನು; ಮರಣದಿಂದ ಅವರನ್ನು ಬಿಡಿಸುವೆನು. ಓ ಮರಣವೇ, ನಾನು ನಿನ್ನ ಬಾಧೆಗ ಳಾಗಿರುವೆನು; ಓ ಸಮಾಧಿಯೇ, ನಾನು ನಿನ್ನ ನಾಶನ ವಾಗಿದ್ದೇನೆ; ಪಶ್ಚಾತ್ತಾಪವು ನನ್ನ ಕಣ್ಣುಗಳಿಂದ ಮರೆ ಯಾಗಿದೆ.
ಹೋಶೇ 13 : 15 (KNV)
ಅವನು ತನ್ನ ಸಹೋದರರ ಮಧ್ಯದಲ್ಲಿ ಫಲಭರಿತನಾಗಿದ್ದರೂ ಪೂರ್ವದ ಗಾಳಿಯು ಬರಲು ಕರ್ತನ ಗಾಳಿಯು ಅರಣ್ಯದಿಂದ ಏರಿಬರುವದು, ಆಗ ಅವನ ಬುಗ್ಗೆಯು ಒಣಗಿ ಅವನ ಒರತೆಯು ಬತ್ತಿ ಹೋಗುವದು. ಅವನು ಎಲ್ಲಾ ಪ್ರಿಯ ವಸ್ತುಗಳ ನಿಧಿಯನ್ನು ಹಾಳು ಮಾಡುವನು.
ಹೋಶೇ 13 : 16 (KNV)
ಸಮಾರ್ಯವು ಹಾಳಾಗಿ ಹೋಗುವದು; ಅವಳು ತನ್ನ ದೇವರಿಗೆ ವಿರುದ್ಧವಾಗಿ ತಿರಿಗಿ ಬಿದ್ದಿದ್ದಾಳೆ; ಅವರೆಲ್ಲರೂ ಕತ್ತಿ ಯಿಂದ ಬೀಳುವರು; ಅವರ ಎಳೇ ಕೂಸುಗಳು ಚೂರು ಚೂರಾಗಿ ಬಡಿಯಲ್ಪಡುವವು; ಅವರ ಗರ್ಭಿಣಿಯರು ಸೀಳಲ್ಪಡುವರು.

1 2 3 4 5 6 7 8 9 10 11 12 13 14 15 16

BG:

Opacity:

Color:


Size:


Font: