ಹಬಕ್ಕೂಕ್ಕ 2 : 1 (KNV)
ನನ್ನ ಕಾವಲಲ್ಲಿ ನಿಂತು ಗೋಪುರದ ಮೇಲೆ ನೆಲೆಯಾಗಿದ್ದು ಆತನು ನನಗೆ ಏನು ಹೇಳುವನೋ, ನನ್ನ ತರ್ಕದ ವಿಷಯ ಏನು ಉತ್ತರ ಕೊಡಬೇಕೋ ನೋಡುವದಕ್ಕೆ ಕಾದುಕೊಂಡಿರುವೆನು.
ಹಬಕ್ಕೂಕ್ಕ 2 : 2 (KNV)
ಆಗ ಕರ್ತನು ನನಗೆ ಉತ್ತರಕೊಟ್ಟು ಹೇಳಿದ್ದೇ ನಂದರೆ--ದರ್ಶನವನ್ನು ಬರೆ; ಓದುವವನು ಶೀಘ್ರ ವಾಗಿ ಓದುವಂತೆ ಅದನ್ನು ಹಲಗೆಗಳ ಮೇಲೆ ಕೆತ್ತು.
ಹಬಕ್ಕೂಕ್ಕ 2 : 3 (KNV)
ದರ್ಶನವು ಇನ್ನು ನೇಮಕವಾದ ಕಾಲಕ್ಕೆ ಉಂಟು; ಆದರೆ ಕಡೆಯಲ್ಲಿ ಅದು ಸುಳ್ಳಾಗದೆ ಮಾತನಾಡುವದು; ಅದು ತಡವಾ ದರೂ ಅದಕ್ಕೆ ಕಾದುಕೊಂಡಿರು; ಅದು ತಡಮಾಡದೆ ನಿಶ್ಚಯವಾಗಿ ಬರುವದು.
ಹಬಕ್ಕೂಕ್ಕ 2 : 4 (KNV)
ಇಗೋ, ಹೆಚ್ಚಿಸಿಕೊಂಡವನ ಆತ್ಮವು ತನ್ನಲ್ಲಿ ಯಥಾರ್ಥವಲ್ಲ; ಆದರೆ ನೀತಿವಂತನು ತನ್ನ ವಿಶ್ವಾಸದಿಂದ ಬದುಕುವನು.
ಹಬಕ್ಕೂಕ್ಕ 2 : 5 (KNV)
ಹೌದು, ಅವನು ದ್ರಾಕ್ಷಾರಸದಿಂದ ಉಲ್ಲಂಘಿಸು ತ್ತಾನೆ. ಅಹಂಕಾರದ ಮನುಷ್ಯನಾಗಿದ್ದಾನೆ; ಮನೆಯಲ್ಲಿ ಇರುವದಿಲ್ಲ; ಇವನು ಪಾತಾಳದ ಹಾಗೆ ತನ್ನ ಆಶೆಯನ್ನು ದೊಡ್ಡದಾಗಿ ಮಾಡಿಕೊಂಡು ಮರಣದ ಹಾಗಿದ್ದಾನೆ, ತೃಪ್ತಿಯಾಗುವದಿಲ್ಲ; ಎಲ್ಲಾ ಜನಾಂಗಗಳನ್ನು ತನಗಾಗಿ ಕೂಡಿಸುತ್ತಾನೆ; ಎಲ್ಲಾ ಜನಗಳನ್ನು ತನಗಾಗಿ ದೊಡ್ಡ ಗುಂಪನ್ನಾಗಿ ಮಾಡಿಕೊಳ್ಳುತ್ತಾನೆ.
ಹಬಕ್ಕೂಕ್ಕ 2 : 6 (KNV)
ಇವರೆಲ್ಲರು ಅವನ ಮೇಲೆ ಸಾಮ್ಯವನ್ನೂ ಹಾಸ್ಯದ ಸಾಮತಿಯನ್ನೂ ಎತ್ತಿ--ತನಗಲ್ಲದ್ದನ್ನು ಹೆಚ್ಚಿಸಿಕೊಳ್ಳು ವವನಿಗೆ ಅಯ್ಯೋ! ಅದು ಎಷ್ಟರ ವರೆಗೆ? ತಾನಾಗಿ ತನ್ನ ಮೇಲೆ ಗಟ್ಟಿ ಮಣ್ಣನ್ನು ಹೊತ್ತುಕೊಳ್ಳುವವನಿಗೆ ಅಯ್ಯೋ ಎಂದು ಹೇಳರೋ?
ಹಬಕ್ಕೂಕ್ಕ 2 : 7 (KNV)
ನಿನ್ನನ್ನು ಕಚ್ಚುವವರು ಕ್ಷಣಮಾತ್ರದಲ್ಲಿ ಏಳರೋ? ನಿನ್ನನ್ನು ಪೀಡಿಸುವವರು ಎಚ್ಚರವಾಗರೋ? ಆಗ ನೀನು ಅವರಿಗೆ ಸುಲಿಗೆ ಯಾಗುವಿ.
ಹಬಕ್ಕೂಕ್ಕ 2 : 8 (KNV)
ನೀನು ಅನೇಕ ಜನಾಂಗಗಳನ್ನು ಸೂರೆ ಮಾಡಿದ್ದರಿಂದ ಜನರಲ್ಲಿ ಉಳಿದವರೆಲ್ಲಾ ನಿನ್ನನ್ನು ಸೂರೆ ಮಾಡುವರು; ಮನುಷ್ಯರ ರಕ್ತಕ್ಕಾಗಿ ದೇಶ, ಪಟ್ಟಣ, ಅದರ ಎಲ್ಲಾ ನಿವಾಸಿಗಳ ಬಲಾತ್ಕಾರದ ನಿಮಿತ್ತವೇ.
ಹಬಕ್ಕೂಕ್ಕ 2 : 9 (KNV)
ತನ್ನ ಗೂಡನ್ನು ಉನ್ನತದಲ್ಲಿ ಇಡುವ ಹಾಗೆಯೂ ಕೇಡಿನ ಕೈಗೆ ತಪ್ಪಿಸಿಕೊಳ್ಳುವ ಹಾಗೆಯೂ ತನ್ನ ಮನೆ ಗೋಸ್ಕರ ದುರ್ಲಾಭವನ್ನು ಆಶಿಸುವವನಿಗೆ ಅಯ್ಯೋ!
ಹಬಕ್ಕೂಕ್ಕ 2 : 10 (KNV)
ಅನೇಕ ಜನಗಳನ್ನು ಕಡಿದುಬಿಡುವದರಿಂದ ನಿನ್ನ ಮನೆಗೆ ನಾಚಿಕೆಯನ್ನು ಯೋಚಿಸಿದ್ದೀ; ಸ್ವಂತ ಪ್ರಾಣಕ್ಕೆ ವಿರೋಧವಾಗಿ ಪಾಪಮಾಡಿದ್ದೀ.
ಹಬಕ್ಕೂಕ್ಕ 2 : 11 (KNV)
ಗೋಡೆಯೊಳ ಗಿಂದ ಕಲ್ಲು ಕೂಗುತ್ತದೆ. ಮರದ ತೊಲೆ ಅದಕ್ಕೆ ಉತ್ತರ ಕೊಡುತ್ತದೆ.
ಹಬಕ್ಕೂಕ್ಕ 2 : 12 (KNV)
ಊರನ್ನು ರಕ್ತದಿಂದ ಕಟ್ಟಿ, ಪಟ್ಟಣವನ್ನು ಅನ್ಯಾಯ ದಿಂದ ಸ್ಥಾಪಿಸುವವನಿಗೆ ಅಯ್ಯೋ!
ಹಬಕ್ಕೂಕ್ಕ 2 : 13 (KNV)
ಇಗೋ, ಇದು ಸೈನ್ಯಗಳ ಕರ್ತನಿಂದ ಅಲ್ಲವೋ? ಏನಂದರೆ, ಜನರು ಬೆಂಕಿಗೋಸ್ಕರ ಪರಿಶ್ರಮಪಟ್ಟ ವ್ಯರ್ಥಕ್ಕೋಸ್ಕರ ಆಯಾಸಪಡುವದೇ.
ಹಬಕ್ಕೂಕ್ಕ 2 : 14 (KNV)
ನೀರುಗಳು ಸಮುದ್ರವನ್ನು ಮುಚ್ಚುವ ಪ್ರಕಾರ ಭೂಮಿಯು ಕರ್ತನ ಮಹಿಮೆಯ ತಿಳುವಳಿಕೆಯಿಂದ ತುಂಬಿರುವದು.
ಹಬಕ್ಕೂಕ್ಕ 2 : 15 (KNV)
ತನ್ನ ನೆರೆಯವ ನಿಗೆ ಕುಡಿಯಕೊಟ್ಟು ನಿನ್ನ ಬುಟ್ಟಿಯನ್ನು ಹೊಯಿದು ಅವರ ಬೆತ್ತಲೆತನವನ್ನು ನೋಡುವ ಹಾಗೆ ಅಮಲೇರಿ ಸುವವನಿಗೆ ಅಯ್ಯೋ!
ಹಬಕ್ಕೂಕ್ಕ 2 : 16 (KNV)
ಘನತೆಗೆ ಬದಲಾಗಿ ನಿಂದೆ ಯಿಂದ ತುಂಬಿದ್ದೀ; ನೀನು ಸಹ ಕುಡಿದು ನಿನ್ನ ಮುಂದೊಗಲು ಮುಚ್ಚಲ್ಪಡದಿರಲಿ. ಕರ್ತನ ಬಲಗೈಯ ಪಾತ್ರೆ ನಿನ್ನ ಕಡೆಗೆ ತಿರುಗುವದು. ನಿನ್ನ ಘನತೆಯ ಮೇಲೆ ಕಾರುವಿಕೆಯೂ ಲಜ್ಜೆಯೂ ಇರುವದು.
ಹಬಕ್ಕೂಕ್ಕ 2 : 17 (KNV)
ಲೆಬನೋನಿನ ಹಿಂಸೆಯು ನಿನ್ನನ್ನು ಮುಚ್ಚುವದು; ಮೃಗಗಳ ಸೂರೆ ನಿನ್ನನ್ನು ಹೆದರಿಸುವದು; ಮನುಷ್ಯರ ರಕ್ತಕ್ಕಾಗಿ, ದೇಶ, ಪಟ್ಟಣ, ಅದರ ಎಲ್ಲಾ ನಿವಾಸಿಗಳ ಹಿಂಸೆಯು ನಿಮಿತ್ತವೇ.
ಹಬಕ್ಕೂಕ್ಕ 2 : 18 (KNV)
ಅದನ್ನು ಕೆತ್ತಿ ರೂಪಿಸಿದವನ ಕೆತ್ತಿದ ವಿಗ್ರಹದಿಂದ ಪ್ರಯೋಜನವೇನು? ಸುಳ್ಳನ್ನು ಬೋಧಿಸುವಂಥ, ಅದನ್ನು ರೂಪಿಸಿದವನು ಮೂಕ ಬೊಂಬೆಗಳನ್ನು ಮಾಡಿ ಅದರಲ್ಲಿ ನಂಬಿಕೆಯಿಡು ವಂಥ, ಎರಕದ ವಿಗ್ರಹದಿಂದ ಪ್ರಯೋಜನವೇನು?
ಹಬಕ್ಕೂಕ್ಕ 2 : 19 (KNV)
ಮರಕ್ಕೆ--ಎಚ್ಚರವಾಗು; ಮೂಕವಾದ ಕಲ್ಲಿಗೆ--ಎದ್ದು ಬೋಧಿಸಲಿ ಎಂದು ಹೇಳುವವನಿಗೆ ಅಯ್ಯೋ! ಇಗೋ, ಅದು ಬಂಗಾರದಿಂದಲೂ ಬೆಳ್ಳಿಯಿಂದಲೂ ಹೊದಿಸಲ್ಪಟ್ಟಿದೆ, ಆದರೆ ಅದರಲ್ಲಿ ಉಸಿರು ಎಷ್ಟು ಮಾತ್ರವೂ ಇಲ್ಲ.
ಹಬಕ್ಕೂಕ್ಕ 2 : 20 (KNV)
ಆದರೆ ಕರ್ತನು ತನ್ನ ಪರಿಶುದ್ಧ ಮಂದಿರದಲ್ಲಿ ಇದ್ದಾನೆ; ಆತನ ಮುಂದೆ ಭೂಮಿಯೆಲ್ಲಾ ಮೌನವಾಗಿರಲಿ.
❮
❯