ಆದಿಕಾಂಡ 8 : 1 (KNV)
ಆಗ ದೇವರು ನೋಹನನ್ನೂ ಅವನ ಸಂಗಡ ನಾವೆಯಲ್ಲಿದ್ದ ಎಲ್ಲಾ ಜೀವರಾಶಿ ಗಳನ್ನೂ ಪಶುಗಳನ್ನೂ ಜ್ಞಾಪಕಮಾಡಿಕೊಂಡು ದೇವರು ಭೂಮಿಯ ಮೇಲೆ ಗಾಳಿ ಬೀಸುವಂತೆ ಮಾಡಲಾಗಿ ನೀರು ತಗ್ಗಿತು.
ಆದಿಕಾಂಡ 8 : 2 (KNV)
ಅಗಾಧದ ಬುಗ್ಗೆಗಳೂ ಆಕಾಶದ ಕಿಟಕಿಗಳೂ ಮುಚ್ಚಲ್ಪಟ್ಟವು. ಇದಲ್ಲದೆ ಆಕಾಶದಿಂದ ಬೀಳುವ ಮಳೆಯೂ ನಿಂತಿತು.
ಆದಿಕಾಂಡ 8 : 3 (KNV)
ಹೀಗೆ ಭೂಮಿಯ ಮೇಲಿದ್ದ ಜಲವು ಕ್ರಮವಾಗಿ ತಗ್ಗಿಹೋಯಿತು. ನೂರೈವತ್ತು ದಿನಗಳಾದ ಮೇಲೆ ನೀರು ಕಡಿಮೆ ಯಾಯಿತು.
ಆದಿಕಾಂಡ 8 : 4 (KNV)
ಏಳನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ ನಾವೆಯು ಅರಾರಾಟ್‌ ಬೆಟ್ಟಗಳ ಮೇಲೆ ನೆಲೆಸಿತ್ತು.
ಆದಿಕಾಂಡ 8 : 5 (KNV)
ಹತ್ತನೆಯ ತಿಂಗಳಿನ ವರೆಗೆ ನೀರು ಕ್ರಮವಾಗಿ ಕಡಿಮೆಯಾಗುತ್ತಾ ಬಂತು. ಹತ್ತನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಬೆಟ್ಟಗಳ ತುದಿಗಳು ಕಾಣ ಬಂದವು.
ಆದಿಕಾಂಡ 8 : 6 (KNV)
ನಾಲ್ವತ್ತು ದಿವಸಗಳಾದ ತರುವಾಯ ಆದದ್ದೇ ನಂದರೆ, ನೋಹನು ತಾನು ಮಾಡಿದ ನಾವೆಯ ಕಿಟಕಿಯನ್ನು ತೆರೆದು
ಆದಿಕಾಂಡ 8 : 7 (KNV)
ಒಂದು ಕಾಗೆಯನ್ನು ಹೊರಗೆ ಬಿಟ್ಟನು; ಅದು ಹೊರಟು ಭೂಮಿಯ ಮೇಲಿದ್ದ ಜಲವು ಆರಿಹೋಗುವ ವರೆಗೆ ಹೋಗುತ್ತಾ ಬರುತ್ತಾ ಇತ್ತು.
ಆದಿಕಾಂಡ 8 : 8 (KNV)
ಭೂಮುಖದ ಮೇಲೆ ನೀರು ಕಡಿಮೆ ಆಯಿತೋ ಇಲ್ಲವೋ ಎಂದು ನೋಡುವಂತೆ ಒಂದು ಪಾರಿವಾಳವನ್ನು ಬಿಟ್ಟನು.
ಆದಿಕಾಂಡ 8 : 9 (KNV)
ಆದರೆ ನೀರು ಭೂಮುಖದಲ್ಲೆಲ್ಲಾ ಇದ್ದದ್ದರಿಂದ ಪಾರಿವಾಳದ ಅಂಗಾಲಿಗೆ ವಿಶ್ರಮಿಸುವದಕ್ಕೆ ಸ್ಥಳವು ಸಿಕ್ಕದೆ ಅದು ತಿರಿಗಿ ಅವನ ಬಳಿಗೆ ನಾವೆಗೆ ಬಂತು. ಅವನು ಕೈಚಾಚಿ ಅದನ್ನು ಹಿಡಿದು ನಾವೆಯೊಳಗೆ ಸೇರಿಸಿ ಕೊಂಡನು.
ಆದಿಕಾಂಡ 8 : 10 (KNV)
ಅವನು ಇನ್ನು ಏಳು ದಿನಗಳಾದ ಮೇಲೆ ತಿರಿಗಿ ನಾವೆಯೊಳಗಿಂದ ಪಾರಿವಾಳವನ್ನು ಬಿಟ್ಟನು.
ಆದಿಕಾಂಡ 8 : 11 (KNV)
ಸಾಯಂಕಾಲದಲ್ಲಿ ಪಾರಿವಾಳವು ಅವನ ಬಳಿಗೆ ಬರಲಾಗಿ ಇಗೋ, ಕಿತ್ತಿದ್ದ ಹಿಪ್ಪೆ ಎಲೆಯು ಅದರ ಬಾಯಲ್ಲಿತ್ತು; ಆಗ ನೋಹನು ಭೂಮಿಯ ಮೇಲಿನಿಂದ ನೀರು ಕಡಿಮೆಯಾಯಿತೆಂದು ತಿಳು ಕೊಂಡನು.
ಆದಿಕಾಂಡ 8 : 12 (KNV)
ಇನ್ನೂ ಏಳು ದಿನಗಳು ತಡೆದು ಪಾರಿವಾಳವನ್ನು ಬಿಟ್ಟಾಗ ಅದು ತಿರಿಗಿ ಅವನ ಬಳಿಗೆ ಬರಲೇ ಇಲ್ಲ.
ಆದಿಕಾಂಡ 8 : 13 (KNV)
ಆರುನೂರ ಒಂದನೆಯ ವರುಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಆದದ್ದೇನಂದರೆ, ನೀರು ಭೂಮಿಯ ಮೇಲಿನಿಂದ ಒಣಗಿಹೋಗಿತ್ತು. ನೋಹನು ನಾವೆಯ ಮುಚ್ಚಳವನ್ನು ತೆಗೆದು ನೋಡಲಾಗಿ, ಇಗೋ, ಭೂಮಿಯು ಒಣಗಿಹೋಗಿತ್ತು.
ಆದಿಕಾಂಡ 8 : 14 (KNV)
ಎರಡನೆಯ ತಿಂಗಳಿನ ಇಪ್ಪತ್ತೇಳನೆಯ ದಿನದಲ್ಲಿ ಭೂಮಿಯು ಒಣಗಿತ್ತು.
ಆದಿಕಾಂಡ 8 : 15 (KNV)
ಆಗ ದೇವರು ನೋಹನೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
ಆದಿಕಾಂಡ 8 : 16 (KNV)
ನೀನೂ ನಿನ್ನ ಸಂಗಡ ನಿನ್ನ ಹೆಂಡತಿಯೂ ನಿನ್ನ ಕುಮಾರರೂ ಅವರ ಹೆಂಡತಿ ಯರೂ ನಾವೆಯೊಳಗಿಂದ ಹೊರಗೆ ಹೋಗಿರಿ.
ಆದಿಕಾಂಡ 8 : 17 (KNV)
ನಿನ್ನ ಸಂಗಡ ಇರುವ ಎಲ್ಲಾ ಶರೀರದ ಪಕ್ಷಿಗಳೂ ಮೃಗಗಳೂ ಭೂಮಿಯ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳೂ ಎಲ್ಲಾ ಜೀವಜಂತುಗಳೂ ಭೂಮಿಯ ಮೇಲೆ ಅಭಿವೃದ್ಧಿಯಾಗಿ ಭೂಮಿಯಲ್ಲಿ ಹೆಚ್ಚುವ ಹಾಗೆ ಅವು ನಿನ್ನ ಸಂಗಡ ಹೊರಗೆ ಬರಮಾಡು ಅಂದನು.
ಆದಿಕಾಂಡ 8 : 18 (KNV)
ಆಗ ನೋಹನ ಸಂಗಡ ಅವನ ಹೆಂಡತಿ ಕುಮಾರರು ಸೊಸೆಯರು ಹೊರಗೆ ಬಂದರು.
ಆದಿಕಾಂಡ 8 : 19 (KNV)
ಎಲ್ಲಾ ಮೃಗಗಳೂ ಕ್ರಿಮಿಗಳೂ ಪಕ್ಷಿಗಳೂ ಭೂಮಿ ಯಲ್ಲಿ ಹರಿದಾಡುವ ಎಲ್ಲವುಗಳು ತಮ್ಮತಮ್ಮ ಜಾತ್ಯಾ ನುಸಾರವಾಗಿ ನಾವೆಯೊಳಗಿಂದ ಹೊರಬಂದವು.
ಆದಿಕಾಂಡ 8 : 20 (KNV)
ನೋಹನು ಕರ್ತನಿಗೆ ಬಲಿಪೀಠವನ್ನು ಕಟ್ಟಿ ಶುದ್ಧವಾದ ಎಲ್ಲಾ ಪಶು ಪಕ್ಷಿಗಳಿಂದಲೂ (ಕೆಲವನ್ನು) ತೆಗೆದು ಬಲಿಪೀಠದ ಮೇಲೆ ದಹನಬಲಿಗಳನ್ನು ಅರ್ಪಿಸಿದನು.
ಆದಿಕಾಂಡ 8 : 21 (KNV)
ಆಗ ಕರ್ತನಿಗೆ ಅದರ ಸುವಾಸನೆಯು ಗಮಗಮಿಸಲು ತನ್ನ ಹೃದಯದಲ್ಲಿ--ಇನ್ನು ಮೇಲೆ ನಾನು ಮನುಷ್ಯನಿಗೋಸ್ಕರ ಭೂಮಿಯನ್ನು ಶಪಿಸುವ ದಿಲ್ಲ; ಯಾಕಂದರೆ ಮನುಷ್ಯನ ಹೃದಯದ ಕಲ್ಪನೆಯು ಅವನ ಚಿಕ್ಕತನದಿಂದಲೇ ಕೆಟ್ಟದ್ದು. ನಾನು ಈಗ ಮಾಡಿದ ಪ್ರಕಾರ ಇನ್ನು ಮೇಲೆ ಜೀವಿಗಳನ್ನೆಲ್ಲಾ ಸಂಹರಿಸುವದಿಲ್ಲ.ಭೂಮಿಯು ಇರುವ ವರೆಗೆ ಬಿತ್ತುವ ಕಾಲವೂ ಕೊಯ್ಯುವ ಕಾಲವೂ ತಂಪೂ ಶೆಕೆಯೂ ಬೇಸಿಗೆಯೂ ಚಳಿಗಾಲವೂ ಹಗಲೂ ರಾತ್ರಿಯೂ ನಿಂತು ಹೋಗವು ಎಂದು ಅಂದು ಕೊಂಡನು.
ಆದಿಕಾಂಡ 8 : 22 (KNV)
ಭೂಮಿಯು ಇರುವ ವರೆಗೆ ಬಿತ್ತುವ ಕಾಲವೂ ಕೊಯ್ಯುವ ಕಾಲವೂ ತಂಪೂ ಶೆಕೆಯೂ ಬೇಸಿಗೆಯೂ ಚಳಿಗಾಲವೂ ಹಗಲೂ ರಾತ್ರಿಯೂ ನಿಂತು ಹೋಗವು ಎಂದು ಅಂದು ಕೊಂಡನು.

1 2 3 4 5 6 7 8 9 10 11 12 13 14 15 16 17 18 19 20 21 22

BG:

Opacity:

Color:


Size:


Font: