ಆದಿಕಾಂಡ 7 : 1 (KNV)
ಕರ್ತನು ನೋಹನಿಗೆ--ನೀನೂ ನಿನ್ನ ಮನೆಯವರೆಲ್ಲರೂ ನಾವೆಯೊಳಗೆ ಬನ್ನಿರಿ; ಯಾಕಂದರೆ ಈ ಸಂತತಿಯಲ್ಲಿ ನೀನೊಬ್ಬನೇ ನನ್ನ ಮುಂದೆ ನೀತಿವಂತನಾಗಿರುವದನ್ನು ನಾನು ನೋಡಿ ದ್ದೇನೆ.
ಆದಿಕಾಂಡ 7 : 2 (KNV)
ಶುದ್ಧವಾದ ಎಲ್ಲಾ ಪ್ರಾಣಿಗಳಲ್ಲಿ ಗಂಡು ಹೆಣ್ಣಾಗಿರುವ ಏಳೇಳೂ ಅಶುದ್ಧ ಪ್ರಾಣಿಗಳಲ್ಲಿ ಗಂಡು ಹೆಣ್ಣು ಎರಡೆರಡರಂತೆಯೂ ನಿನ್ನ ಬಳಿಗೆ ತೆಗೆದುಕೋ.
ಆದಿಕಾಂಡ 7 : 3 (KNV)
ಆಕಾಶದ ಪಕ್ಷಿಗಳಲ್ಲಿಯೂ ಗಂಡು ಹೆಣ್ಣು ಏಳೇಳ ರಂತೆ ತೆಗೆದುಕೊಂಡು ಭೂಮಿಯ ಮೇಲೆಲ್ಲಾ ಅವು ಗಳ ಸಂತತಿಯನ್ನು ಜೀವದಲ್ಲಿ ಕಾಪಾಡು.
ಆದಿಕಾಂಡ 7 : 4 (KNV)
ಇನ್ನು ಏಳು ದಿವಸಗಳಲ್ಲಿ ಭೂಮಿಯ ಮೇಲೆ ನಾಲ್ವತ್ತು ಹಗಲು ನಾಲ್ವತು ರಾತ್ರಿ ಮಳೆಯು ಬರುವಂತೆ ನಾನು ಮಾಡುವೆನು. ನಾನು ಉಂಟುಮಾಡಿದ ಜೀವರಾಶಿಯನ್ನೆಲ್ಲಾ ಭೂಮುಖದಿಂದ ನಾಶಮಾಡು ತ್ತೇನೆ ಅಂದನು.
ಆದಿಕಾಂಡ 7 : 5 (KNV)
ಕರ್ತನು ತನಗೆ ಆಜ್ಞಾಪಿಸಿದಂತೆಯೇ ನೋಹನು ಎಲ್ಲವನ್ನು ಮಾಡಿದನು.
ಆದಿಕಾಂಡ 7 : 6 (KNV)
ಜಲಪ್ರಳಯವು ಭೂಮಿಯ ಮೇಲೆ ಉಂಟಾದಾಗ ನೋಹನು ಆರುನೂರು ವರುಷದವನಾಗಿದ್ದನು.
ಆದಿಕಾಂಡ 7 : 7 (KNV)
ಆಗ ನೋಹನು ಅವನ ಹೆಂಡತಿಯೂ ಕುಮಾರರೂ ಅವರ ಹೆಂಡತಿಯರೂ ಜಲಪ್ರಳಯವನ್ನು ತಪ್ಪಿಸಿ ಕೊಳ್ಳುವದಕ್ಕಾಗಿ ನಾವೆಯೊಳಗೆ ಹೋದರು.
ಆದಿಕಾಂಡ 7 : 8 (KNV)
ಶುದ್ಧ ಪ್ರಾಣಿಗಳಲ್ಲಿಯೂ ಅಶುದ್ಧ ಪ್ರಾಣಿಗಳಲ್ಲಿಯೂ ಪಕ್ಷಿ ಗಳಲ್ಲಿಯೂ ಭೂಮಿಯ ಮೇಲೆ ಹರಿದಾಡುವವು ಗಳೆಲ್ಲವೂ
ಆದಿಕಾಂಡ 7 : 9 (KNV)
ದೇವರು ನೋಹನಿಗೆ ಆಜ್ಞಾಪಿಸಿದ ಪ್ರಕಾರ ಗಂಡು ಹೆಣ್ಣಾಗಿರುವ ಎರಡೆರಡು ನೋಹನ ಬಳಿಗೆ ನಾವೆಯಲ್ಲಿ ಹೋದವು.
ಆದಿಕಾಂಡ 7 : 10 (KNV)
ಏಳು ದಿವಸಗಳಾದ ಮೇಲೆ ಪ್ರಳಯದ ನೀರು ಭೂಮಿಯ ಮೇಲೆ ಇತ್ತು.
ಆದಿಕಾಂಡ 7 : 11 (KNV)
ನೋಹನ ಜೀವಮಾನದ ಆರುನೂರನೆಯ ವರುಷದ ಎರಡನೆಯ ತಿಂಗಳಿನ ಅಂದರೆ ಅದೇ ತಿಂಗಳಿನ ಹದಿನೇಳನೆಯ ದಿವಸದಲ್ಲಿಯೇ ಮಹಾ ಅಗಾಧದ ಬುಗ್ಗೆಗಳೆಲ್ಲಾ ಒಡೆದವು. ಆಕಾಶದ ಕಿಟಕಿ ಗಳು ತೆರೆಯಲ್ಪಟ್ಟವು.
ಆದಿಕಾಂಡ 7 : 12 (KNV)
ನಾಲ್ವತ್ತು ಹಗಲು ನಾಲ್ವತು ರಾತ್ರಿ ಭೂಮಿಯ ಮೇಲೆ ಮಳೆ ಸುರಿಯಿತು.
ಆದಿಕಾಂಡ 7 : 13 (KNV)
ಅದೇ ದಿನದಲ್ಲಿ ನೋಹನೂ ಅವನ ಕುಮಾರರಾದ ಶೇಮ್‌ ಹಾಮ್‌ ಯೆಫೆತ್‌ ಇವರೂ ನೋಹನ ಹೆಂಡತಿಯೂ ಅವರ ಕೂಡ ಅವನ ಕುಮಾರರ ಮೂವರು ಹೆಂಡತಿಯರೂ ನಾವೆಯಲ್ಲಿ ಪ್ರವೇಶಿಸಿ ದರು.
ಆದಿಕಾಂಡ 7 : 14 (KNV)
ಇದಲ್ಲದೆ ಅವುಗಳ ಜಾತ್ಯಾನುಸಾರವಾಗಿ ಎಲ್ಲಾ ವಿಧವಾದ ಪ್ರಾಣಿ ಪಶು ಪಕ್ಷಿ ಕ್ರಿಮಿಗಳೂ ಪ್ರವೇಶಿಸಿದವು.
ಆದಿಕಾಂಡ 7 : 15 (KNV)
ಹೀಗೆ ಜೀವಶ್ವಾಸವಿರುವ ಎಲ್ಲಾ ಶರೀರಗಳಲ್ಲಿಯೂ ಎರಡೆರಡು ನೋಹನ ಬಳಿಗೆ ನಾವೆಯೊಳಗೆ ಹೋದವು.
ಆದಿಕಾಂಡ 7 : 16 (KNV)
ದೇವರು ಅಪ್ಪಣೆ ಕೊಟ್ಟಿದ್ದ ಪ್ರಕಾರ ಒಳಗೆ ಸೇರಿದವುಗಳು ಗಂಡು ಹೆಣ್ಣಾಗಿದ್ದ ಸಕಲ ಶರೀರಗಳು ಒಳಗೆ ಹೋದವು. ಆಗ ಕರ್ತನು ಅವನನ್ನು ಒಳಗೆ ಸೇರಿಸಿ (ಬಾಗಲನ್ನು) ಮುಚ್ಚಿದನು.
ಆದಿಕಾಂಡ 7 : 17 (KNV)
ನಾಲ್ವತ್ತು ದಿನ ಭೂಮಿಯ ಮೇಲೆ ಪ್ರಳಯವು ಇತ್ತು; ಆಗ ನೀರುಗಳು ಹೆಚ್ಚಿ ನಾವೆಯನ್ನು ಎತ್ತಲು ಅದು ಭೂಮಿಯಿಂದ ಎತ್ತಲ್ಪಟ್ಟಿತು.
ಆದಿಕಾಂಡ 7 : 18 (KNV)
ನೀರು ಪ್ರಬಲವಾಗಿ ಭೂಮಿಯ ಮೇಲೆ ಬಹಳವಾಗಿ ಹೆಚ್ಚಿದಾಗ ಆ ನಾವೆಯು ನೀರಿನ ಮೇಲೆ ಹೋಯಿತು.
ಆದಿಕಾಂಡ 7 : 19 (KNV)
ಇದಲ್ಲದೆ ನೀರು ಭೂಮಿಯ ಮೇಲೆ ಅತ್ಯಧಿಕವಾಗಿ ಪ್ರಬಲವಾದದ್ದರಿಂದ ಆಕಾಶದ ಕೆಳಗಿರುವ ಎತ್ತರ ವಾದ ಎಲ್ಲಾ ಬೆಟ್ಟಗಳು ಮುಚ್ಚಲ್ಪಟ್ಟವು.
ಆದಿಕಾಂಡ 7 : 20 (KNV)
ನೀರುಗಳು ಬೆಟ್ಟಗಳನ್ನು ಮುಚ್ಚಿ ಅವುಗಳ ಮೇಲೆ ಹದಿನೈದು ಮೊಳದ ವರೆಗೆ ಏರಿತು.
ಆದಿಕಾಂಡ 7 : 21 (KNV)
ಆಗ ಪಶು ಪಕ್ಷಿ ಮೃಗ ಭೂಮಿಯಲ್ಲಿ ಹರಿದಾಡುವ ಕ್ರಿಮಿ ಎಲ್ಲಾ ಮನುಷ್ಯರು ಸಹಿತವಾಗಿ ಅಂತೂ ಭೂಮಿಯ ಮೇಲೆ ಚಲಿಸುವ ಎಲ್ಲಾ ಶರೀರಗಳು ಸತ್ತುಹೋದವು.
ಆದಿಕಾಂಡ 7 : 22 (KNV)
ಒಣ ನೆಲದ ಮೇಲಿದ್ದಂಥ ಮೂಗಿನಲ್ಲಿ ಶ್ವಾಸವಿರುವ ವುಗಳೆಲ್ಲಾ ಸತ್ತುಹೋದವು.
ಆದಿಕಾಂಡ 7 : 23 (KNV)
ಮನುಷ್ಯರೂ ಪಶು ಗಳೂ ಕ್ರಿಮಿಗಳೂ ಆಕಾಶದ ಪಕ್ಷಿಗಳೂ ಭೂಮಿಯ ಮೇಲಿರುವ ಎಲ್ಲಾ ಜೀವರಾಶಿಗಳೂ ನಾಶವಾದವು. ಅವು ಭೂಮಿಯ ಮೇಲಿಂದ ಅಳಿಸಲ್ಪಟ್ಟವು. ನೋಹನೂ ಅವನ ಸಂಗಡ ನಾವೆಯಲ್ಲಿದ್ದವರೂ ಮಾತ್ರ ಜೀವದಿಂದ ಉಳಿಸಲ್ಪಟ್ಟರು.ಜಲವು ಭೂಮಿಯ ಮೇಲೆ ನೂರೈವತ್ತು ದಿನ ಪ್ರಬಲ ವಾಯಿತು.
ಆದಿಕಾಂಡ 7 : 24 (KNV)
ಜಲವು ಭೂಮಿಯ ಮೇಲೆ ನೂರೈವತ್ತು ದಿನ ಪ್ರಬಲ ವಾಯಿತು.

1 2 3 4 5 6 7 8 9 10 11 12 13 14 15 16 17 18 19 20 21 22 23 24

BG:

Opacity:

Color:


Size:


Font: