ಆದಿಕಾಂಡ 42 : 1 (KNV)
ಐಗುಪ್ತದಲ್ಲಿ ಧಾನ್ಯ ಉಂಟೆಂದುಯಾಕೋಬನು ತಿಳಿದಾಗ ಅವನು ತನ್ನ ಕುಮಾರರಿಗೆನೀವು ಒಬ್ಬರನ್ನೊಬ್ಬರು ನೋಡಿಕೊಳ್ಳು ವದೇನು ಅಂದನು.
ಆದಿಕಾಂಡ 42 : 2 (KNV)
ಅವನು--ಇಗೋ, ಐಗುಪ್ತದಲ್ಲಿ ಧಾನ್ಯ ಉಂಟೆಂದು ನಾನು ಕೇಳಿದ್ದೇನೆ. ನಾವು ಸಾಯದೆ ಬದುಕುವಂತೆ ನೀವು ಅಲ್ಲಿಗೆ ಇಳಿದು ಹೋಗಿ ನಮಗಾಗಿ ಅಲ್ಲಿಂದ ಧಾನ್ಯವನ್ನು ಕೊಂಡು ಕೊಳ್ಳಿರಿ ಅಂದನು.
ಆದಿಕಾಂಡ 42 : 3 (KNV)
ಆಗ ಯೋಸೇಫನ ಹತ್ತು ಮಂದಿ ಸಹೋದರರು ಐಗುಪ್ತದಲ್ಲಿ ಧಾನ್ಯವನ್ನು ಕೊಂಡುಕೊಳ್ಳುವದಕ್ಕೆ ಇಳಿದು ಹೋದರು.
ಆದಿಕಾಂಡ 42 : 4 (KNV)
ಆದರೆ ಯಾಕೋಬನು ಯೋಸೆಫನ ತಮ್ಮನಾದ ಬೆನ್ಯಾವಿಾನ ನಿಗೆ ಕೇಡುಬಂದೀತು ಎಂದು ಹೇಳಿ ಅಣ್ಣಂದಿರ ಸಂಗಡ ಅವನನ್ನು ಕಳುಹಿಸಲಿಲ್ಲ.
ಆದಿಕಾಂಡ 42 : 5 (KNV)
ಕಾನಾನ್ ದೇಶದಲ್ಲಿ ಬರವಿದ್ದದರಿಂದ ಧಾನ್ಯ ವನ್ನು ಕೊಂಡುಕೊಳ್ಳುವದಕ್ಕಾಗಿ ಬರುವವರೊಂದಿಗೆ ಇಸ್ರಾಯೇಲನ ಕುಮಾರರು ಬಂದರು.
ಆದಿಕಾಂಡ 42 : 6 (KNV)
ಆಗ ಯೋಸೇಫನು ದೇಶದ ಮೇಲೆಲ್ಲಾ ಅಧಿಪತಿಯಾ ಗಿದ್ದನು. ದೇಶದ ಜನರಿಗೆಲ್ಲಾ ಧಾನ್ಯವನ್ನು ಮಾರು ವವನು ಅವನೇ ಆಗಿದ್ದನು. ಹೀಗಿರಲಾಗಿ ಯೋಸೇಫನ ಸಹೋದರರು ಬಂದು ತಮ್ಮ ಮುಖಗಳನ್ನು ನೆಲದ ಮಟ್ಟಿಗೂ ತಗ್ಗಿಸಿ ಅವನಿಗೆ ಅಡ್ಡಬಿದ್ದರು.
ಆದಿಕಾಂಡ 42 : 7 (KNV)
ಯೋಸೇ ಫನು ತನ್ನ ಸಹೋದರರನ್ನು ನೋಡಿ ಅವರನ್ನು ಗುರುತಿಸಿದಾಗ್ಯೂ ತಿಳಿಯದವನ ಹಾಗೆ ಅನ್ಯನಂತೆ ಕಠಿಣವಾದ ಮಾತುಗಳನ್ನಾಡಿ ಅವರಿಗೆ--ಎಲ್ಲಿಂದ ಬಂದಿರಿ ಅಂದನು. ಅದಕ್ಕೆ ಅವರು--ಆಹಾರ ಕೊಂಡುಕೊಳ್ಳುವದಕ್ಕೆ ಕಾನಾನ್ ದೇಶದಿಂದ ಬಂದೆವು ಅಂದರು.
ಆದಿಕಾಂಡ 42 : 8 (KNV)
ಯೋಸೇಫನು ತನ್ನ ಸಹೋದರರನ್ನು ಗುರುತಿಸಿದಾಗ್ಯೂ ಅವರು ಅವನನ್ನು ಗುರುತಿಸಲಿಲ್ಲ.
ಆದಿಕಾಂಡ 42 : 9 (KNV)
ಆಗ ಯೋಸೇಫನು ತಾನು ಅವರ ವಿಷಯದಲ್ಲಿ ಕಂಡ ಕನಸುಗಳನ್ನು ಜ್ಞಾಪಕಮಾಡಿಕೊಂಡು ಅವ ರಿಗೆ--ನೀವು ಗೂಢಚಾರರು; ದೇಶದ ಒಳಗುಟ್ಟನ್ನು ನೋಡುವದಕ್ಕಾಗಿ ಬಂದಿದ್ದೀರಿ ಅಂದನು.
ಆದಿಕಾಂಡ 42 : 10 (KNV)
ಅದ ಕ್ಕವರು--ಅಲ್ಲ, ನಮ್ಮ ಒಡೆಯಾ, ನಿನ್ನ ದಾಸರಾದ ನಾವು ಆಹಾರವನ್ನು ಕೊಂಡುಕೊಳ್ಳುವದಕ್ಕಾಗಿ ಬಂದಿದ್ದೇವೆ.
ಆದಿಕಾಂಡ 42 : 11 (KNV)
ನಾವೆಲ್ಲರೂ ಒಬ್ಬ ಮನುಷ್ಯನ ಕುಮಾರರಾಗಿದ್ದು ಸತ್ಯವಂತರಾಗಿದ್ದೇವೆ. ಆದದರಿಂದ ನಿನ್ನ ದಾಸರು ಗೂಢಚಾರರಲ್ಲ ಅಂದರು.
ಆದಿಕಾಂಡ 42 : 12 (KNV)
ಆದರೆ ಅವನು ಅವರಿಗೆ--ಇಲ್ಲ, ದೇಶದ ಒಳಗುಟ್ಟನ್ನು ನೀವು ತಿಳುಕೊಳ್ಳುವದಕ್ಕೋಸ್ಕರವೇ ಬಂದಿದ್ದೀರಿ ಅಂದನು.
ಆದಿಕಾಂಡ 42 : 13 (KNV)
ಅದಕ್ಕವರು--ನಿನ್ನ ದಾಸರಾದ ನಾವು ಹನ್ನೆರಡು ಮಂದಿ ಸಹೋದರರು; ನಾವು ಕಾನಾನ್ ದೇಶದಲ್ಲಿರುವ ಒಬ್ಬ ಮನುಷ್ಯನ ಮಕ್ಕಳು. ಇಗೋ, ಈಗ ಚಿಕ್ಕವನು ನಮ್ಮ ತಂದೆಯೊಂದಿಗೆ ಇದ್ದಾನೆ. ಮತ್ತೊಬ್ಬನು ಇಲ್ಲ ಎಂದು ಹೇಳಿದರು.
ಆದಿಕಾಂಡ 42 : 14 (KNV)
ಆಗ ಯೋಸೇಫನು ಅವರಿಗೆ--ನೀವು ಗೂಢಚಾರರೆಂದು ನಾನು ನಿಮಗೆ ಹೇಳಿದ ಮಾತು ನಿಜವೇ.
ಆದಿಕಾಂಡ 42 : 15 (KNV)
ನೀವು ಪರೀಕ್ಷಿಸಲ್ಪಡುವದು ಹೇಗಂದರೆ--ನಿಮ್ಮ ತಮ್ಮನನ್ನು ಇಲ್ಲಿಗೆ ತಾರದ ಹೊರತು ಫರೋಹನ ಜೀವದಾಣೆ ನೀವು ಇಲ್ಲಿಂದ ಹೊರಗೆ ಹೋಗಬಾರದು.
ಆದಿಕಾಂಡ 42 : 16 (KNV)
ನಿಮ್ಮಲ್ಲಿ ಒಬ್ಬನನ್ನು ಕಳುಹಿಸಿರಿ; ಅವನು ನಿಮ್ಮ ಸಹೋದರ ನನ್ನು ಕರಕೊಂಡು ಬರಲಿ. ಆದರೆ ನೀವು ಸೆರೆಮನೆ ಯಲ್ಲಿರಬೇಕು. ಹೀಗೆ ನಿಮ್ಮಲ್ಲಿ ಸತ್ಯವು ಉಂಟೋ ಇಲ್ಲವೋ ಎಂದು ನಿಮ್ಮ ಮಾತುಗಳು ಪರೀಕ್ಷಿಸಲ್ಪಡು ವವು. ಇಲ್ಲದಿದ್ದರೆ ಫರೋಹನ ಜೀವದಾಣೆ ನಿಶ್ಚಯವಾಗಿ ನೀವು ಗೂಢಚಾರರು ಎಂದು ಹೇಳಿದನು.
ಆದಿಕಾಂಡ 42 : 17 (KNV)
ಯೋಸೇಫನು ಎಲ್ಲರನ್ನು ಒಟ್ಟಿಗೆ ಮೂರು ದಿನಗಳು ಸೆರೆಯಲ್ಲಿಟ್ಟನು.
ಆದಿಕಾಂಡ 42 : 18 (KNV)
ಮೂರನೆಯ ದಿನದಲ್ಲಿ ಯೋಸೇಫನು ಅವರಿಗೆ--ಇದನ್ನು ಮಾಡಿ ಬದುಕಿರಿ, ಯಾಕಂದರೆ ನಾನು ದೇವರಿಗೆ ಭಯಪಡುವವನಾ ಗಿದ್ದೇನೆ.
ಆದಿಕಾಂಡ 42 : 19 (KNV)
ನೀವು ಸತ್ಯವಂತರಾಗಿದ್ದರೆ ನಿಮ್ಮ ಸಹೋದರರಲ್ಲಿ ಒಬ್ಬನು ನೀವು ಇದ್ದ ಸೆರೆಮನೆಯಲ್ಲಿ ಬಂಧಿಸಲ್ಪಡಲಿ. ಆದರೆ ನೀವು ನಿಮ್ಮ ಮನೆಗಳ ಕ್ಷಾಮಕ್ಕೆ ಧಾನ್ಯವನ್ನು ತಕ್ಕೊಂಡು ಹೋಗಿರಿ.
ಆದಿಕಾಂಡ 42 : 20 (KNV)
ನಿಮ್ಮ ತಮ್ಮನನ್ನು ನನ್ನ ಬಳಿಗೆ ಕರತನ್ನಿರಿ. ಆಗ ನಿಮ್ಮ ಮಾತುಗಳು ಸತ್ಯವೆಂದು ದೃಢವಾಗುವವು, ನೀವು ಸಾಯದೆ ಇರುವಿರಿ ಅಂದನು. ಅವರು ಹಾಗೆಯೇ ಮಾಡಿದರು.
ಆದಿಕಾಂಡ 42 : 21 (KNV)
ಆಗ ಅವರು--ನಿಶ್ಚಯವಾಗಿ ನಮ್ಮ ಸಹೋದರನ ಅಪರಾಧವು ನಮ್ಮ ಮೇಲೆ ಇದೆ. ಅವನು ನಮ್ಮನ್ನು ಬೇಡಿಕೊಂಡಾಗ ಅವನ ಪ್ರಾಣ ಸಂಕಟವನ್ನು ನೋಡಿಯೂ ಕೇಳದೆ ಹೋದೆವು. ಆದಕಾರಣ ಈ ಸಂಕಟವು ನಮ್ಮ ಮೇಲೆ ಬಂದಿತು ಎಂದು ಅಂದುಕೊಂಡರು.
ಆದಿಕಾಂಡ 42 : 22 (KNV)
ಆಗ ರೂಬೇನನು ಅವರಿಗೆ ಪ್ರತ್ಯುತ್ತರವಾಗಿ--ಆ ಹುಡುಗನಿಗೆ ಏನೂ ಕೇಡುಮಾಡಬೇಡಿರಿ ಎಂದು ನಾನು ನಿಮಗೆ ಹೇಳಿ ದಾಗ್ಯೂ ನೀವು ಕೇಳಲಿಲ್ಲ. ಆದದರಿಂದ ಈಗ ಇಗೋ, ಅವನ ರಕ್ತವು ನಮ್ಮ ಮೇಲೆ ಇದೆ ಅಂದನು.
ಆದಿಕಾಂಡ 42 : 23 (KNV)
ಆದರೆ ಅವನು ಅವರು ಆಡಿದ್ದನ್ನು ತಿಳಿದುಕೊಳ್ಳುತ್ತಾನೆಂದು ಅವರಿಗೆ ಗೊತ್ತಾಗಲಿಲ್ಲ; ದ್ವಿಭಾಷೆಯಿಂದ ಅವರ ಸಂಗಡ ಮಾತನಾಡಿದನು.
ಆದಿಕಾಂಡ 42 : 24 (KNV)
ಆಗ ಅವನು ಅವರ ಕಡೆಯಿಂದ ಹೊರಟುಹೋಗಿ ಅತ್ತು ಮತ್ತೆ ಅವರ ಬಳಿಗೆ ಬಂದು ಅವರ ಸಂಗಡ ಮಾತನಾಡಿ ಅವರಲ್ಲಿ ಸಿಮೆಯೋನನನ್ನು ಹಿಡಿಸಿ ಅವರ ಕಣ್ಣೆದುರಿನಲ್ಲಿ ಬಂಧಿಸಿ ಸೆರೆಯಲ್ಲಿ ಹಾಕಿಸಿದನು..
ಆದಿಕಾಂಡ 42 : 25 (KNV)
ತರುವಾಯ ಯೋಸೇಫನು ಧಾನ್ಯವನ್ನು ತುಂಬಿಸ ಬೇಕೆಂದೂ ಒಬ್ಬೊಬ್ಬನ ಚೀಲದಲ್ಲಿ ಅವನವನ ಹಣವನ್ನು ತಿರಿಗಿ ಇಡಬೇಕೆಂದೂ ಹಾದಿಗೋಸ್ಕರ ಅವರಿಗೆ ಆಹಾರ ಸರಬರಾಜು ಮಾಡಬೇಕೆಂದೂ ಆಜ್ಞಾಪಿಸಿದನು. ಹೀಗೆಯೇ ಅವನು ಅವರಿಗೆ ಮಾಡಿ ದನು.
ಆದಿಕಾಂಡ 42 : 26 (KNV)
ಆಗ ಅವರು ತಮ್ಮ ಧಾನ್ಯವನ್ನು ಕತ್ತೆಗಳ ಮೇಲೆ ಹೇರಿಕೊಂಡು ಅಲ್ಲಿಂದ ಹೋಗಿಬಿಟ್ಟರು.
ಆದಿಕಾಂಡ 42 : 27 (KNV)
ಒಬ್ಬನು ತನ್ನ ಕತ್ತೆಗೆ ಆಹಾರವನ್ನು ಕೊಡುವದಕ್ಕಾಗಿ ವಸತಿ ಗೃಹದಲ್ಲಿ ತನ್ನ ಚೀಲವನ್ನು ಬಿಚ್ಚಿದಾಗ ಇಗೋ, ಚೀಲದ ಬಾಯಿಯಲ್ಲಿಟ್ಟಿದ ತನ್ನ ಹಣವನ್ನು ಕಂಡನು.
ಆದಿಕಾಂಡ 42 : 28 (KNV)
ಅವನು ತನ್ನ ಸಹೋದರರಿಗೆ--ನನ್ನ ಹಣವು ಹಿಂದಕ್ಕೆ ಕೊಡಲ್ಪಟ್ಟಿದೆ. ಇಗೋ, ಅದು ನನ್ನ ಚೀಲದಲ್ಲಿದೆ ಅಂದಾಗ ಅವರಿಗೆ ಹೃದಯ ಕುಗ್ಗಿ ದಂತಾಗಿ ಹೆದರಿ ಒಬ್ಬರಿಗೊಬ್ಬರು--ದೇವರು ನಮಗೆ ಮಾಡಿದ್ದೇನು ಅಂದರು.
ಆದಿಕಾಂಡ 42 : 29 (KNV)
ಅವರು ಕಾನಾನ್ ದೇಶಕ್ಕೆ ತಮ್ಮ ತಂದೆಯಾದ ಯಾಕೋಬನ ಬಳಿಗೆ ಬಂದು ತಮಗೆ ಸಂಭವಿಸಿದ್ದೆಲ್ಲ ವನ್ನು ಅವನಿಗೆ ತಿಳಿಸಿದರು. ಅದೇನಂದರೆ--
ಆದಿಕಾಂಡ 42 : 30 (KNV)
ಆ ದೇಶದ ಪ್ರಭುವಾಗಿರುವ ಮನುಷ್ಯನು ನಮ್ಮ ಸಂಗಡ ಕಠಿಣವಾಗಿ ಮಾತನಾಡಿ ಗೂಢಚಾರ ರನ್ನಾಗಿ ನಮ್ಮನ್ನು ಎಣಿಸಿದನು.
ಆದಿಕಾಂಡ 42 : 31 (KNV)
ನಾವು ಅವ ನಿಗೆ--ನಾವು ಗೂಢಚಾರರಲ್ಲ, ಸತ್ಯವಂತರೇ.
ಆದಿಕಾಂಡ 42 : 32 (KNV)
ನಾವು ಒಬ್ಬನೇ ತಂದೆಗೆ ಹುಟ್ಟಿದ ಹನ್ನೆರಡು ಮಂದಿ ಸಹೋದರರಾಗಿದ್ದೇವೆ; ಒಬ್ಬನು ಇಲ್ಲ; ಚಿಕ್ಕವನು ಇಂದು ನಮ್ಮ ತಂದೆಯ ಸಂಗಡ ಕಾನಾನ್ ದೇಶದಲ್ಲಿ ಇದ್ದಾನೆ ಅಂದೆವು.
ಆದಿಕಾಂಡ 42 : 33 (KNV)
ಆಗ ದೇಶದ ಪ್ರಭುವಾಗಿರುವ ಆ ಮನುಷ್ಯನು--ನೀವು ಯಥಾರ್ಥರೆಂದು ನಾನು ಇದರ ಮೂಲಕ ತಿಳುಕೊಳ್ಳುವೆನು. ನೀವು ನಿಮ್ಮ ಸಹೋದರರಲ್ಲಿ ಒಬ್ಬನನ್ನು ನನ್ನ ಬಳಿಯಲ್ಲಿಟ್ಟು ನಿಮ್ಮ ಮನೆಯ ಕ್ಷಾಮಕ್ಕೆ ಅವಶ್ಯವಾದದ್ದನ್ನು ತಕ್ಕೊಂಡುಹೋಗಿರಿ.
ಆದಿಕಾಂಡ 42 : 34 (KNV)
ನಿಮ್ಮ ಚಿಕ್ಕ ತಮ್ಮನನ್ನು ನನ್ನ ಬಳಿಗೆ ತನ್ನಿರಿ, ಆಗ ನೀವು ಗೂಢಚಾರರಲ್ಲವೆಂದೂ ಯಥಾರ್ಥ ರೆಂದೂ ತಿಳುಕೊಂಡು ನಿಮ್ಮ ಸಹೋದರನನ್ನು ನಿಮಗೆ ಒಪ್ಪಿಸುವೆನು. ಆಗ ನೀವು ದೇಶದಲ್ಲಿ ವ್ಯಾಪಾರ ಮಾಡಬಹುದು ಎಂದು ಹೇಳಿದನು ಅಂದರು.
ಆದಿಕಾಂಡ 42 : 35 (KNV)
ಇದಲ್ಲದೆ ಅವರು ತಮ್ಮ ಚೀಲಗಳನ್ನು ಬರಿದು ಮಾಡುತ್ತಿದ್ದಾಗ ಇಗೋ, ಅವನವನ ಹಣದ ಗಂಟು ಅವನವನ ಚೀಲದಲ್ಲಿ ಇತ್ತು. ಅವರೂ ಅವರ ತಂದೆಯೂ ಆ ಹಣದ ಗಂಟುಗಳನ್ನು ನೋಡಿ ಭಯಪಟ್ಟರು.
ಆದಿಕಾಂಡ 42 : 36 (KNV)
ಆಗ ಅವರ ತಂದೆಯಾದ ಯಾಕೋಬನು ಅವರಿಗೆ--ನನ್ನನ್ನು ಮಕ್ಕಳಿಲ್ಲದವ ನನ್ನಾಗಿ ಮಾಡಿದ್ದೀರಿ. ಯೋಸೇಫನೂ ಇಲ್ಲ, ಸಿಮೆಯೋನನೂ ಇಲ್ಲ, ಬೆನ್ಯಾವಿಾನನ್ನೂ ಕರಕೊಂಡು ಹೋಗುವದಕ್ಕಿದ್ದೀರಿ. ಇವುಗಳೆಲ್ಲಾ ನನಗೆ ವಿರೋಧವಾಗಿವೆ ಅಂದನು.
ಆದಿಕಾಂಡ 42 : 37 (KNV)
ರೂಬೇನನು ತನ್ನ ತಂದೆಗೆ--ನಾನು ಅವನನ್ನು ನಿನ್ನ ಬಳಿಗೆ ತಾರದೆ ಹೋದರೆ ನನ್ನ ಇಬ್ಬರು ಕುಮಾರರನ್ನು ಕೊಂದುಬಿಡು. ನೀನು ಅವನನ್ನು ನನ್ನ ಕೈಯಲ್ಲಿ ಒಪ್ಪಿಸು. ನಾನು ಅವನನ್ನು ನಿನ್ನ ಬಳಿಗೆ ತಿರಿಗಿ ತರುವೆನು ಅಂದನು.
ಆದಿಕಾಂಡ 42 : 38 (KNV)
ಆದರೆ ಅವನು--ನನ್ನ ಮಗನು ನಿಮ್ಮ ಸಂಗಡ ಹೋಗಬಾರದು; ಅವನ ಅಣ್ಣನು ಸತ್ತುಹೋಗಿ ಅವನೊಬ್ಬನೇ ಉಳಿದಿದ್ದಾನೆ; ನೀವು ಹೋಗುವ ಮಾರ್ಗದಲ್ಲಿ ಇವನಿಗೆ ಕೇಡು ಬಂದರೆ ಮುದಿ ಪ್ರಾಯದಲ್ಲಿ ನನ್ನನ್ನು ದುಃಖದಿಂದ ಸಮಾಧಿಗೆ ಹೋಗುವಂತೆ ಮಾಡುವಿರಿ ಅಂದನು.
❮
❯