ಆದಿಕಾಂಡ 16 : 1 (KNV)
ಅಬ್ರಾಮನ ಹೆಂಡತಿಯಾದ ಸಾರಯಳು ಅವನಿಂದ ಮಕ್ಕಳನ್ನು ಪಡೆಯಲಿಲ್ಲ. ಆಕೆಗೆ ಹಾಗರಳೆಂಬ ಐಗುಪ್ತದೇಶದ ದಾಸಿಯು ಇದ್ದಳು.
ಆದಿಕಾಂಡ 16 : 2 (KNV)
ಆಗ ಸಾರಯಳು ಅಬ್ರಾಮನಿಗೆ--ಇಗೋ, ಮಕ್ಕ ಳನ್ನು ಹೆರದಂತೆ ಕರ್ತನು ನನಗೆ ಅಡ್ಡಿಮಾಡಿದ್ದಾನೆ. ಆದದರಿಂದ ನೀನು ನನ್ನ ದಾಸಿಯ ಬಳಿಗೆ ಹೋಗು; ಒಂದು ವೇಳೆ ಅವಳಿಂದ ನಾನು ಮಕ್ಕಳನ್ನು ಪಡೆಯ ಬಹುದು ಎಂದು ಬೇಡಿಕೊಂಡಳು. ಅಬ್ರಾಮನು ಸಾರಯಳ ಮಾತನ್ನು ಕೇಳಿದನು.
ಆದಿಕಾಂಡ 16 : 3 (KNV)
ಅಬ್ರಾಮನು ಕಾನಾನ್‌ದೇಶದಲ್ಲಿ ಹತ್ತು ವರುಷ ವಾಸಿಸಿದ ತರುವಾಯ ಅಬ್ರಾಮನ ಹೆಂಡತಿಯಾದ ಸಾರಯಳು ಐಗುಪ್ತದ ತನ್ನ ದಾಸಿಯಾದ ಹಾಗರಳನ್ನು ತನ್ನ ಗಂಡನಾದ ಅಬ್ರಾಮನಿಗೆ ಹೆಂಡತಿಯಾಗಿರುವದಕ್ಕೆ ಕೊಟ್ಟಳು.
ಆದಿಕಾಂಡ 16 : 4 (KNV)
ಅವನು ಹಾಗರಳನ್ನು ಕೂಡಿದಾಗ ಗರ್ಭಿಣಿ ಯಾದಳು. ತಾನು ಗರ್ಭಿಣಿಯಾದೆನೆಂದು ತಿಳಿದಾಗ ಅವಳ ಯಜಮಾನಿಯು ಅವಳ ದೃಷ್ಟಿಯಲ್ಲಿ ತಿರಸ್ಕರಿಸ ಲ್ಪಟ್ಟಳು.
ಆದಿಕಾಂಡ 16 : 5 (KNV)
ಆಗ ಸಾರಯಳು ಅಬ್ರಾಮನಿಗೆ--ನನಗೆ ಆದ ಅನ್ಯಾಯವು ನಿನ್ನ ಮೇಲೆ ಇರಲಿ. ನಾನು ನನ್ನ ದಾಸಿಯನ್ನು ನಿನ್ನ ಮಗ್ಗುಲಿಗೆ ಕೊಟ್ಟೆನು. ಈಗ ಅವಳು ಗರ್ಭಿಣಿಯಾದ್ದರಿಂದ ನಾನು ಅವಳ ಕಣ್ಣಿಗೆ ತಿರಸ್ಕಾರವಾದೆನು. ದೇವರು ನಿನಗೂ ನನಗೂ ನ್ಯಾಯತೀರಿಸಲಿ ಅಂದಳು.
ಆದಿಕಾಂಡ 16 : 6 (KNV)
ಆಗ ಅಬ್ರಾಮನು ಸಾರಯಳಿಗೆ--ಇಗೋ, ನಿನ್ನ ದಾಸಿಯು ನಿನ್ನ ಕೈಯಲ್ಲಿ ಇದ್ದಾಳೆ; ನೀನು ಮೆಚ್ಚುವದನ್ನು ಮಾಡು ಅಂದನು. ಆಗ ಸಾರಯಳು ಅವಳನ್ನು ಬಾಧಿಸಿದ್ದರಿಂದ ಅವಳು ಸಾರಯಳ ಬಳಿಯಿಂದ ಓಡಿಹೋದಳು.
ಆದಿಕಾಂಡ 16 : 7 (KNV)
ಆಗ ಕರ್ತನ ದೂತನು ಅರಣ್ಯದಲ್ಲಿ ಶೂರಿನ ಮಾರ್ಗದಲ್ಲಿರುವ ಒಂದು ನೀರಿನ ಬುಗ್ಗೆಯ ಬಳಿಯಲ್ಲಿ ಅವಳನ್ನು ಕಂಡು
ಆದಿಕಾಂಡ 16 : 8 (KNV)
ಸಾರಯಳ ದಾಸಿಯಾದ ಹಾಗರಳೇ, ನೀನು ಎಲ್ಲಿಂದ ಬಂದಿ? ನೀನು ಎಲ್ಲಿಗೆ ಹೋಗುತ್ತೀ ಅಂದನು. ಅವಳು--ನನ್ನ ಯಜಮಾನಿಯಾದ ಸಾರ ಯಳ ಸಮ್ಮುಖದಿಂದ ಓಡಿ ಹೋಗುತ್ತಿದ್ದೇನೆ ಅಂದಳು.
ಆದಿಕಾಂಡ 16 : 9 (KNV)
ಕರ್ತನ ದೂತನು ಅವಳಿಗೆ--ನಿನ್ನ ಯಜಮಾನಿಯ ಬಳಿಗೆ ಹಿಂತಿರುಗಿ ಹೋಗಿ ಅವಳಿಗೆ ನೀನು ಅಧೀನಳಾಗಿರು ಅಂದನು.
ಆದಿಕಾಂಡ 16 : 10 (KNV)
ಇದಲ್ಲದೆ ಕರ್ತನ ದೂತನು ಅವಳಿಗೆ--ನಿನ್ನ ಸಂತತಿಯನ್ನು ಬಹಳವಾಗಿ ಹೆಚ್ಚಿಸುವೆನು; ಅದು ಹೆಚ್ಚಾಗುವದರಿಂದ ಅದನ್ನು ಲೆಕ್ಕಿಸುವದಕ್ಕಾಗುವದಿಲ್ಲ ಅಂದನು.
ಆದಿಕಾಂಡ 16 : 11 (KNV)
ಕರ್ತನ ದೂತನು ಅವಳಿಗೆ--ಇಗೋ, ನೀನು ಗರ್ಭಿಣಿ ಯಾಗಿದ್ದೀ, ನೀನು ಒಬ್ಬ ಮಗನನ್ನು ಹೆರುವಿ; ಅವನಿಗೆ ಇಷ್ಮಾಯೇಲ ಎಂದು ಹೆಸರಿಡಬೇಕು. ಯಾಕಂದರೆ ಕರ್ತನು ನಿನ್ನ ವ್ಯಥೆಯನ್ನು ಕೇಳಿದ್ದಾನೆ.
ಆದಿಕಾಂಡ 16 : 12 (KNV)
ಅವನು ಕಾಡು ಮನುಷ್ಯನಾಗಿರುವನು; ಎಲ್ಲರಿಗೆ ವಿರೋಧವಾಗಿ ಅವನ ಕೈಯೂ ಅವನಿಗೆ ವಿರೋಧ ವಾಗಿ ಎಲ್ಲರ ಕೈಯೂ ಇರುವದು, ಅವನು ತನ್ನ ಸಹೋದರರೆಲ್ಲರ ಎದುರಿನಲ್ಲಿ ವಾಸವಾಗಿರುವನು ಅಂದನು.
ಆದಿಕಾಂಡ 16 : 13 (KNV)
ಹಾಗರಳು ತನ್ನ ಸಂಗಡ ಮಾತನಾಡಿದ ಕರ್ತನಿಗೆ--ನೀನು ನನ್ನನ್ನು ನೋಡುವ ದೇವರು ಎಂದು ಹೆಸರಿಟ್ಟಳು. ಯಾಕಂದರೆ ನನ್ನನ್ನು ನೋಡುವಾ ತನನ್ನು ನಾನು ಇಲ್ಲಿಯೂ ನೋಡುವಂತಾಯಿತಲ್ಲಾ ಎಂದು ಅಂದುಕೊಂಡಳು.
ಆದಿಕಾಂಡ 16 : 14 (KNV)
ಆದದರಿಂದ ಆ ಬಾವಿಗೆ ಬೆರ್‌ ಲಹೈರೋಯಿ ಎಂದು ಹೆಸರಾಯಿತು. ಅದು ಕಾದೇಶಿಗೂ ಬೆರೆದಿಗೂ ಮಧ್ಯದಲ್ಲಿ ಇದೆ.
ಆದಿಕಾಂಡ 16 : 15 (KNV)
ತರು ವಾಯ ಹಾಗರಳು ಅಬ್ರಾಮನಿಗೆ ಮಗನನ್ನು ಹೆತ್ತಳು. ಹಾಗರಳು ಅಬ್ರಾಮನಿಗೆ ಹೆತ್ತ ಮಗನಿಗೆ ಅವನು ಇಷ್ಮಾಯೇಲ ಎಂದು ಹೆಸರಿಟ್ಟನು.ಹಾಗರಳು ಅಬ್ರಾಮನಿಗೆ ಇಷ್ಮಾಯೇಲನನ್ನು ಹೆತ್ತಾಗ ಅಬ್ರಾಮನು ಎಂಭತ್ತಾರು ವರುಷದವನಾಗಿದ್ದನು.
ಆದಿಕಾಂಡ 16 : 16 (KNV)
ಹಾಗರಳು ಅಬ್ರಾಮನಿಗೆ ಇಷ್ಮಾಯೇಲನನ್ನು ಹೆತ್ತಾಗ ಅಬ್ರಾಮನು ಎಂಭತ್ತಾರು ವರುಷದವನಾಗಿದ್ದನು.

1 2 3 4 5 6 7 8 9 10 11 12 13 14 15 16

BG:

Opacity:

Color:


Size:


Font: