ಆದಿಕಾಂಡ 14 : 1 (KNV)
ಶಿನಾರಿನ ಅರಸನಾದ ಅಮ್ರಾಫೆಲನು, ಎಲ್ಲಸಾರಿನ ಅರಸನಾದ ಅರಿಯೋಕನು, ಏಲಾಮಿನ ಅರಸನಾದ ಕೆದೊರ್ಲಗೋಮರನು, ಜನಾಂಗಗಳ ಅರಸನಾದ ತಿದ್ಗಾಲನು ಇವರ ದಿನಗಳಲ್ಲಿ ಆದದ್ದೇನಂದರೆ,
ಆದಿಕಾಂಡ 14 : 2 (KNV)
ಇವರು ಸೊದೋಮಿನ ಅರಸನಾದ ಬೆರಗನೂ ಗೊಮೋರದ ಅರಸನಾದ ಬಿರ್ಶಗನೂ ಅದ್ಮಾಹದ ಅರಸನಾದ ಶಿನಾಬನಿಗೂ ಚೆಬೋಯಾಮಿನ ಅರಸನಾದ ಶಮೇಬರನಿಗೂ ಬೇಲ ಎಂಬ ಚೋಗರದ ಅರಸನಿಗೂ ವಿರೋಧವಾಗಿ ಯುದ್ದಮಾಡಿದರು.
ಆದಿಕಾಂಡ 14 : 3 (KNV)
ಇವರೆಲ್ಲರು ಉಪ್ಪಿನ ಸಮುದ್ರ ವಾಗಿರುವ ಸಿದ್ದೀಮ್ ತಗ್ಗಿನಲ್ಲಿ ಒಟ್ಟಾಗಿ ಕೂಡಿ ಬಂದರು.
ಆದಿಕಾಂಡ 14 : 4 (KNV)
ಅವರು ಹನ್ನೆರಡು ವರುಷ ಕೆದೊರ್ಲ ಗೋಮರನಿಗೆ ಸೇವೆಮಾಡಿ ಹದಿಮೂರನೆಯ ವರುಷ ದಲ್ಲಿ ತಿರಿಗಿ ಬಿದ್ದರು.
ಆದಿಕಾಂಡ 14 : 5 (KNV)
ಹದಿನಾಲ್ಕನೆಯ ವರುಷದಲ್ಲಿ ಕೆದೊರ್ಲಗೋಮರನೂ ಅವನ ಸಂಗಡ ಇದ್ದ ಅರಸರೂ ಬಂದು ಅಷ್ಟರೋತ್ ಕರ್ನಯಿಮಿನಲ್ಲಿ ರೆಫಾಯರನ್ನೂ ಹಾಮಿನಲ್ಲಿ ಜೂಜ್ಯರನ್ನೂ ಶಾವೆ ಕಿರ್ಯಾತಯಿಮಿನಲ್ಲಿ ಏಮಿಯರನ್ನೂ
ಆದಿಕಾಂಡ 14 : 6 (KNV)
ಅವರ ಬೆಟ್ಟ ವಾದ ಸೇಯಾರಿನಲ್ಲಿ ಹೋರಿಯರನ್ನೂ ಅರಣ್ಯಕ್ಕೆ ಸವಿಾಪವಾದ ಏಲ್ಪಾರಾನಿನ ವರೆಗೂ ಅವರನ್ನು ಸಂಹರಿಸಿದರು.
ಆದಿಕಾಂಡ 14 : 7 (KNV)
ಅವರು ಹಿಂತಿರುಗಿ ಕಾದೇಶ್ ಎಂಬ ಎನ್ಮಿಷ್ಪಾಟಿಗೆ ಬಂದು ಅಮಾಲೆಕ್ಯರ ಎಲ್ಲಾ ಬೈಲನ್ನು ಹಚಚೋನ್ತಾಮರಿನಲ್ಲಿ ವಾಸವಾಗಿದ್ದ ಅಮೋರಿಯರನ್ನೂ ಸಂಹರಿಸಿದರು.
ಆದಿಕಾಂಡ 14 : 8 (KNV)
ಸೊದೋಮಿನ ಅರಸನೂ ಗೊಮೋರದ ಅರಸನೂ ಅದ್ಮಾಹದ ಅರಸನೂ ಚೆಬೋಯಾಮಿನ ಅರಸನೂ ಚೋಗ ರೆಂಬ ಬೇಲದ ಅರಸನೂ ಹೊರಟು
ಆದಿಕಾಂಡ 14 : 9 (KNV)
ಏಲಾಮಿನ ಅರಸನಾದ ಕೆದೊರ್ಲಗೋಮರನಿಗೂ ಜನಾಂಗಗಳ ಅರಸನಾದ ತಿದ್ಗಾಲನಿಗೂ ಶಿನಾರಿನ ಅರಸನಾದ ಅಮ್ರಾಫೆಲನಿಗೂ ಎಲ್ಲಸಾರಿನ ಅರಸನಾದ ಅರಿಯೋಕನಿಗೂ ವಿರೋಧವಾಗಿ ಸಿದ್ದೀಮ್ ತಗ್ಗಿನಲ್ಲಿ ಯುದ್ಧಮಾಡಿದರು. ಐದು ಮಂದಿ ಅರಸರು ನಾಲ್ವರು ಅರಸರಿಗೆ ವಿರೋಧವಾಗಿದ್ದರು.
ಆದಿಕಾಂಡ 14 : 10 (KNV)
ಸಿದ್ದೀಮ್ ತಗ್ಗು ಜೇಡಿನ ಕುಣಿಗಳಿಂದ ತುಂಬಿತ್ತು. ಸೊದೋಮ್ ಗೊಮೋರಗಳ ಅರಸರು ಓಡಿಹೋಗುವಾಗ ಅಲ್ಲಿ ಬಿದ್ದರು. ಉಳಿದವರು ಬೆಟ್ಟಕ್ಕೆ ಓಡಿಹೋದರು.
ಆದಿಕಾಂಡ 14 : 11 (KNV)
ಆಗ ಅವರು ಸೊದೋಮ್ ಗೊಮೋರಗಳ ಎಲ್ಲಾ ಸಂಪತ್ತನ್ನೂ ಅವರ ಎಲ್ಲಾ ಆಹಾರ ಪದಾರ್ಥ ವನ್ನೂ ತೆಗೆದುಕೊಂಡು ಹೋದರು.
ಆದಿಕಾಂಡ 14 : 12 (KNV)
ಸೊದೋ ಮಿನಲ್ಲಿ ವಾಸವಾಗಿದ್ದ ಅಬ್ರಾಮನ ಸಹೋದರನ ಮಗನಾದ ಲೋಟನನ್ನೂ ಅವನ ಸಂಪತ್ತನ್ನೂ ತೆಗೆದುಕೊಂಡು ಹೋದರು.
ಆದಿಕಾಂಡ 14 : 13 (KNV)
ತಪ್ಪಿಸಿಕೊಂಡವನೊಬ್ಬನು ಹೋಗಿ ಇಬ್ರಿಯ ನಾದ ಅಬ್ರಾಮನಿಗೆ ಇದನ್ನು ತಿಳಿಸಿದನು. ಇವನು ಎಷ್ಕೋಲನಿಗೂ ಆನೇರನಿಗೂ ಸಹೋದರನಾಗಿದ್ದು ಅಮೋರಿಯನಾದ ಮಮ್ರೆಯ ಮೈದಾನದಲ್ಲಿ ವಾಸ ವಾಗಿದ್ದನು. ಇವರು ಅಬ್ರಾಮನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದರು.
ಆದಿಕಾಂಡ 14 : 14 (KNV)
ತನ್ನ ಸಹೋದರನು ಸೆರೆ ಯಾಗಿ ಒಯ್ಯಲ್ಪಟ್ಟನೆಂದು ಕೇಳಿ ಅಬ್ರಾಮನು ತನ್ನ ಮನೆಯಲ್ಲಿ ಹುಟ್ಟಿ ಶಿಕ್ಷಿತರಾಗಿದ್ದ ಮುನ್ನೂರ ಹದಿನೆಂಟು ಸೇವಕರನ್ನು ಯುದ್ಧಕ್ಕೆ ಸಿದ್ಧಮಾಡಿ ದಾನಿನ ವರೆಗೆ ಹಿಂದಟ್ಟಿ
ಆದಿಕಾಂಡ 14 : 15 (KNV)
ರಾತ್ರಿಯಲ್ಲಿ ಅವರಿಗೆ ವಿರೋಧ ವಾಗಿ ತನ್ನ ಸೇವಕರ ಸೈನ್ಯವನ್ನು ವಿಭಾಗಿಸಿ ಅವರನ್ನು ಹೊಡೆದು ದಮಸ್ಕದ ಬಲಗಡೆಯಲ್ಲಿರುವ ಹೋಬಾದ ವರೆಗೆ ಅವರನ್ನು ಸಂಹರಿಸಿ
ಆದಿಕಾಂಡ 14 : 16 (KNV)
ಸಂಪತ್ತನ್ನೆಲ್ಲಾ ಹಿಂದಕ್ಕೆ ತೆಗೆದುಕೊಂಡು ಬಂದನು. ತನ್ನ ಸಹೋದರನಾದ ಲೋಟನನ್ನೂ ಅವನ ಸಂಪತ್ತನ್ನೂ ಸ್ತ್ರೀಯರನ್ನೂ ಜನರನ್ನೂ ಹಿಂದಕ್ಕೆ ತಕ್ಕೊಂಡು ಬಂದನು.
ಆದಿಕಾಂಡ 14 : 17 (KNV)
ಅವನು ಕೆದೊರ್ಲಗೋಮರನನ್ನು ಅವನ ಸಂಗಡ ಇದ್ದ ಅರಸರನ್ನು ಸಂಹರಿಸಿ ಹಿಂತಿರುಗಿ ಬಂದ ಮೇಲೆ ಸೊದೋಮಿನ ಅರಸನು ಹೊರಟು ಶಾವೆ ಎಂಬ ಅರಸನ ತಗ್ಗಿನ ವರೆಗೆ ಅಬ್ರಾಮನನ್ನು ಎದುರುಗೊಳ್ಳುವದಕ್ಕಾಗಿ ಬಂದನು.
ಆದಿಕಾಂಡ 14 : 18 (KNV)
ಸಾಲೇಮಿನ ಅರಸನಾದ ಮೆಲ್ಕೀಚೆದೇಕನು ರೊಟ್ಟಿಯನ್ನೂ ದ್ರಾಕ್ಷಾ ರಸವನ್ನೂ ತಂದನು. ಇವನು ಮಹೋನ್ನತನಾದ ದೇವರ ಯಾಜಕನು.
ಆದಿಕಾಂಡ 14 : 19 (KNV)
ಇವನು ಅಬ್ರಾಮನನ್ನು ಆಶೀರ್ವದಿಸಿ--ಅಬ್ರಾಮನು ಆಕಾಶವನ್ನು ಭೂಮಿ ಯನ್ನು ಹೊಂದಿರುವ ಮಹೋನ್ನತನಾದ ದೇವರಿಂದ ಆಶೀರ್ವದಿಸಲ್ಪಡಲಿ.
ಆದಿಕಾಂಡ 14 : 20 (KNV)
ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ ಮಹೋನ್ನತ ನಾದ ದೇವರು ಸ್ತುತಿಹೊಂದಲಿ ಅಂದನು. ಅಬ್ರಾ ಮನು ಅವನಿಗೆ ಎಲ್ಲಾದರಲ್ಲಿ ದಶಮಭಾಗವನ್ನು ಕೊಟ್ಟನು.
ಆದಿಕಾಂಡ 14 : 21 (KNV)
ಸೊದೋಮಿನ ಅರಸನು ಅಬ್ರಾಮನಿಗೆ--ಮನುಷ್ಯರನ್ನು ನನಗೆ ಕೊಡು, ಸಂಪತ್ತನ್ನು ನೀನೇ ತಕ್ಕೋ ಅಂದನು.
ಆದಿಕಾಂಡ 14 : 22 (KNV)
ಅದಕ್ಕೆ ಅಬ್ರಾಮನು ಸೊದೋ ಮಿನ ಅರಸನಿಗೆ--ನನ್ನ ಕೈಯನ್ನು ಆಕಾಶವನ್ನು ಭೂಮಿಯನ್ನು ಹೊಂದಿರುವ ಮಹೋನ್ನತ ದೇವರಾ ಗಿರುವ ಕರ್ತನ ಕಡೆಗೆ ಎತ್ತಿದ್ದೇನೆ;
ಆದಿಕಾಂಡ 14 : 23 (KNV)
ನಿನ್ನವುಗಳಲ್ಲಿ ನೂಲು ಮೊದಲುಗೊಂಡು ಕೆರದ ಬಾರನ್ನು ಸಹ ನಾನು ತಕ್ಕೊಳ್ಳುವದಿಲ್ಲ. ಯಾಕಂದರೆ--ನಾನು ಅಬ್ರಾಮನನ್ನು ಐಶ್ವರ್ಯವಂತನನ್ನಾಗಿ ಮಾಡಿದ್ದೇನೆ ಎಂದು ನೀನು ಹೇಳಬಾರದು.
ಆದಿಕಾಂಡ 14 : 24 (KNV)
ಯೌವನಸ್ಥರು ಊಟಮಾಡಿದ್ದು, ನನ್ನ ಸಂಗಡ ಹೋದ ಆನೇರ ಎಷ್ಕೋಲ ಮಮ್ರೆ ಎಂಬ ಈ ಮನುಷ್ಯರ ಪಾಲು ಮಾತ್ರ ಇರಲಿ; ಇವರು ತಮ್ಮ ಪಾಲನ್ನು ತಕ್ಕೊಳ್ಳಲಿ ಅಂದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24

BG:

Opacity:

Color:


Size:


Font: