ಆದಿಕಾಂಡ 13 : 1 (KNV)
ಆಗ ಅಬ್ರಾಮನು ತನ್ನ ಹೆಂಡತಿಯೊಂದಿಗೆ ತನಗೆ ಇದ್ದದ್ದನ್ನೆಲ್ಲಾ ತಕ್ಕೊಂಡು ಲೋಟನ ಸಹಿತವಾಗಿ ಐಗುಪ್ತವನ್ನು ಬಿಟ್ಟು ದಕ್ಷಿಣಕ್ಕೆ ಏರಿಹೋದನು.
ಆದಿಕಾಂಡ 13 : 2 (KNV)
ಅಬ್ರಾಮನು ದನಗಳಲ್ಲಿಯೂ ಬೆಳ್ಳಿಯಲ್ಲಿಯೂ ಬಂಗಾರದಲ್ಲಿಯೂ ಬಹು ಧನವಂತನಾಗಿದ್ದನು.
ಆದಿಕಾಂಡ 13 : 3 (KNV)
ಅವನು ತನ್ನ ಪ್ರಯಾಣಗಳಲ್ಲಿ ದಕ್ಷಿಣದಿಂದ ಬೇತೇಲಿಗೆ ಅಂದರೆ ಮೊದಲು ಬೇತೇಲಿಗೆ ಆಯಿಗೆ ಮಧ್ಯದಲ್ಲಿ ಅವನ ಗುಡಾರವಿದ್ದ ಸ್ಥಳಕ್ಕೂ
ಆದಿಕಾಂಡ 13 : 4 (KNV)
ಮೊದಲು ಅವನು ಮಾಡಿದ್ದ ಬಲಿಪೀಠದ ಸ್ಥಳಕ್ಕೂ ಬಂದನು. ಅಲ್ಲಿ ಅಬ್ರಾಮನು ಕರ್ತನ ಹೆಸರನ್ನು ಹೇಳಿಕೊಂಡನು.
ಆದಿಕಾಂಡ 13 : 5 (KNV)
ಅಬ್ರಾಮನ ಸಂಗಡ ಬಂದ ಲೋಟನಿಗೆ ಸಹ ಕುರಿ ದನಗಳೂ ಗುಡಾರಗಳೂ ಇದ್ದವು.
ಆದಿಕಾಂಡ 13 : 6 (KNV)
ಆಗ ಅವರು ಒಂದಾಗಿ ವಾಸಿಸುವ ಹಾಗೆ ಸ್ಥಳವು ಸಾಲದೆ ಹೋಯಿತು. ಯಾಕಂದರೆ ಅವರು ಒಟ್ಟಿಗೆ ವಾಸಿಸದಷ್ಟು ಅವರ ಸಂಪತ್ತು ಬಹಳವಾಗಿತ್ತು.
ಆದಿಕಾಂಡ 13 : 7 (KNV)
ಆಗ ಅಬ್ರಾಮನ ದನಕಾಯುವವರಿಗೂ ಲೋಟನ ದನಕಾಯುವವರಿಗೂ ಜಗಳವಾಯಿತು. ಕಾನಾನ್ಯರೂ ಪೆರಿಜೀಯರೂ ಆಗ ದೇಶದಲ್ಲಿ ವಾಸವಾಗಿದ್ದರು.
ಆದಿಕಾಂಡ 13 : 8 (KNV)
ಅಬ್ರಾಮನು ಲೋಟನಿಗೆ--ನನಗೂ ನಿನಗೂ ನನ್ನ ದನಕಾಯುವವರಿಗೂ ನಿನ್ನ ದನಕಾಯುವವರಿಗೂ ಜಗಳವಿರಬಾರದು; ನಾವು ಸಹೋದರರು.
ಆದಿಕಾಂಡ 13 : 9 (KNV)
ಭೂಮಿ ಯೆಲ್ಲಾ ನಿನ್ನ ಮುಂದೆ ಇರುತ್ತದಲ್ಲವೋ? ಹಾಗಾದರೆ ನನ್ನ ಬಳಿಯಿಂದ ಪ್ರತ್ಯೇಕವಾಗು; ನೀನು ಎಡಕ್ಕೆ ಹೋದರೆ ನಾನು ಬಲಕ್ಕೆ ಹೋಗುವೆನು; ನೀನು ಬಲಕ್ಕೆ ಹೋದರೆ ನಾನು ಎಡಕ್ಕೆ ಹೋಗುವೆನು ಅಂದನು.
ಆದಿಕಾಂಡ 13 : 10 (KNV)
ಲೋಟನು ತನ್ನ ಕಣ್ಣುಗಳನ್ನು ಎತ್ತಿ ಯೊರ್ದನಿನ ಮೈದಾನವನ್ನೆಲ್ಲಾ ನೋಡಿದನು. ಯಾಕಂದರೆ ಕರ್ತನು ಸೊದೋಮನ್ನೂ ಗೊಮೋರ ವನ್ನೂ ನಾಶಮಾಡುವದಕ್ಕಿಂತ ಮುಂಚೆ ಅದೆಲ್ಲಾ ಚೋಗರಿನ ವರೆಗೆ ನೀರಾವರಿಯಾಗಿದ್ದು ಕರ್ತನ ತೋಟದಂತೆಯೂ ಐಗುಪ್ತದೇಶದಂತೆಯೂ ಇತ್ತು.
ಆದಿಕಾಂಡ 13 : 11 (KNV)
ತರುವಾಯ ಲೋಟನು ಯೊರ್ದನಿನ ಮೈದಾನ ವನ್ನೆಲ್ಲಾ ತನಗಾಗಿ ಆರಿಸಿಕೊಂಡನು; ಹೀಗೆ ಲೋಟನು ಮೂಡಣಕ್ಕೆ ಹೊರಟು ಹೋದದ್ದರಿಂದ ಅವರು ಒಬ್ಬರಿಂದೊಬ್ಬರು ಪ್ರತ್ಯೇಕಿಸಲ್ಪಟ್ಟರು.
ಆದಿಕಾಂಡ 13 : 12 (KNV)
ಅಬ್ರಾಮನು ಕಾನಾನ್‌ ದೇಶದಲ್ಲಿ ವಾಸಮಾಡಿದನು. ಲೋಟನು ಸೊದೋಮಿನ ಬಳಿಯಲ್ಲಿ ಗುಡಾರಗಳನ್ನು ಹಾಕಿ ಕೊಂಡು ಮೈದಾನದ ಪಟ್ಟಣಗಳಲ್ಲಿ ವಾಸಿಸಿದನು.
ಆದಿಕಾಂಡ 13 : 13 (KNV)
ಆದರೆ ಸೊದೋಮಿನ ಮನುಷ್ಯರು ದುಷ್ಟರೂ ಕರ್ತನ ದೃಷ್ಟಿಯಲ್ಲಿ ಬಹು ಪಾಪಿಷ್ಠರೂ ಆಗಿದ್ದರು.
ಆದಿಕಾಂಡ 13 : 14 (KNV)
ಲೋಟನು ಅಬ್ರಾಮನಿಂದ ಅಗಲಿದ ಮೇಲೆ ಕರ್ತನು ಅವನಿಗೆ--ನಿನ್ನ ಕಣ್ಣುಗಳನ್ನು ಎತ್ತಿ ನೀನಿರುವ ಸ್ಥಳದಿಂದ ಉತ್ತರಕ್ಕೂ ದಕ್ಷಿಣಕ್ಕೂ ಪೂರ್ವಕ್ಕೂ ಪಶ್ಚಿಮಕ್ಕೂ ನೋಡು.
ಆದಿಕಾಂಡ 13 : 15 (KNV)
ನೀನು ನೋಡುವ ದೇಶ ವನ್ನೆಲ್ಲಾ ನಾನು ನಿನಗೂ ನಿನ್ನ ಸಂತತಿಗೂ ಶಾಶ್ವತವಾಗಿ ಕೊಡುವೆನು.
ಆದಿಕಾಂಡ 13 : 16 (KNV)
ನಿನ್ನ ಸಂತತಿಯನ್ನು ಭೂಮಿಯ ಧೂಳಿನಷ್ಟು ಮಾಡುವೆನು. ಭೂಮಿಯ ಧೂಳನ್ನು ಒಬ್ಬನು ಲೆಕ್ಕಿಸಬಹುದಾದರೆ ನಿನ್ನ ಸಂತಾನವು ಸಹ ಲೆಕ್ಕಿಸಲ್ಪಡುವದು.
ಆದಿಕಾಂಡ 13 : 17 (KNV)
ಎದ್ದು ಭೂಮಿಯ ಉದ್ದಗಲದ ಪ್ರಕಾರ ಅದರಲ್ಲಿ ತಿರುಗಾಡು. ನಾನು ನಿನಗೆ ಅದನ್ನು ಕೊಡುವೆನು ಅಂದನು.ಆಗ ಅಬ್ರಾಮನು ತನ್ನ ಗುಡಾರವನ್ನು ತೆಗೆದುಕೊಂಡು ಹೆಬ್ರೋನಿನ ಲ್ಲಿರುವ ಮಮ್ರೆಯ ಮೈದಾನಕ್ಕೆ ಬಂದು ಅಲ್ಲಿ ವಾಸವಾಗಿದ್ದನು. ಅವನು ಅಲ್ಲಿ ಕರ್ತನಿಗೆ ಬಲಿ ಪೀಠವನ್ನು ಕಟ್ಟಿದನು.
ಆದಿಕಾಂಡ 13 : 18 (KNV)
ಆಗ ಅಬ್ರಾಮನು ತನ್ನ ಗುಡಾರವನ್ನು ತೆಗೆದುಕೊಂಡು ಹೆಬ್ರೋನಿನ ಲ್ಲಿರುವ ಮಮ್ರೆಯ ಮೈದಾನಕ್ಕೆ ಬಂದು ಅಲ್ಲಿ ವಾಸವಾಗಿದ್ದನು. ಅವನು ಅಲ್ಲಿ ಕರ್ತನಿಗೆ ಬಲಿ ಪೀಠವನ್ನು ಕಟ್ಟಿದನು.

1 2 3 4 5 6 7 8 9 10 11 12 13 14 15 16 17 18

BG:

Opacity:

Color:


Size:


Font: