ಆದಿಕಾಂಡ 1 : 1 (KNV)
ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದನು.
ಆದಿಕಾಂಡ 1 : 2 (KNV)
ಭೂಮಿ ಯು ನಿರಾಕಾರವಾಗಿಯೂ ಶೂನ್ಯವಾಗಿಯೂ ಇತ್ತು; ಅಗಾಧದ ಮೇಲೆ ಕತ್ತಲೆ ಇತ್ತು. ದೇವರ ಆತ್ಮನು ನೀರುಗಳ ಮೇಲೆ ಚಲಿಸುತ್ತಿದ್ದನು.
ಆದಿಕಾಂಡ 1 : 3 (KNV)
ಆಗ ದೇವರು--ಬೆಳಕಾಗಲಿ ಅನ್ನಲು ಬೆಳಕಾ ಯಿತು.
ಆದಿಕಾಂಡ 1 : 4 (KNV)
ದೇವರು ಬೆಳಕನ್ನು ಒಳ್ಳೆಯದೆಂದು ನೋಡಿದನು; ದೇವರು ಬೆಳಕನ್ನು ಕತ್ತಲೆಯಿಂದ ಬೇರೆ ಮಾಡಿದನು.
ಆದಿಕಾಂಡ 1 : 5 (KNV)
ದೇವರು ಬೆಳಕಿಗೆ ಹಗ ಲೆಂದೂ ಕತ್ತಲೆಗೆ ರಾತ್ರಿಯೆಂದೂ ಕರೆದನು. ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಮೊದಲನೆಯ ದಿನವಾಯಿತು.
ಆದಿಕಾಂಡ 1 : 6 (KNV)
ಇದಲ್ಲದೆ ದೇವರು--ನೀರುಗಳ ನಡುವೆ ವಿಶಾಲ ವಿರಲಿ ಮತ್ತು ಅದು ನೀರುಗಳಿಂದ ನೀರುಗಳನ್ನು ಬೇರೆ ಮಾಡಲಿ ಅಂದನು.
ಆದಿಕಾಂಡ 1 : 7 (KNV)
ದೇವರು ವಿಶಾಲವನ್ನು ಮಾಡಿ ವಿಶಾಲದ ಕೆಳಗಿದ್ದ ನೀರುಗಳನ್ನು ವಿಶಾಲದ ಮೇಲಿದ್ದ ನೀರುಗಳಿಂದ ಬೇರೆ ಮಾಡಿದನು. ಅದು ಹಾಗೆಯೇ ಆಯಿತು.
ಆದಿಕಾಂಡ 1 : 8 (KNV)
ದೇವರು ವಿಶಾಲಕ್ಕೆ ಆಕಾಶ ವೆಂದು ಕರೆದನು. ಹೀಗೆ ಸಾಯಂಕಾಲವೂ ಪ್ರಾತಃ ಕಾಲವೂ ಆಗಿ ಎರಡನೆಯ ದಿನವಾಯಿತು.
ಆದಿಕಾಂಡ 1 : 9 (KNV)
ಆಗ ದೇವರು--ಆಕಾಶದ ಕೆಳಗಿರುವ ನೀರುಗಳು ಒಂದು ಸ್ಥಳದಲ್ಲಿ ಕೂಡಿಕೊಳ್ಳಲಿ ಮತ್ತು ಒಣನೆಲವು ಕಾಣಿಸಲಿ ಅಂದನು. ಅದು ಹಾಗೆಯೇ ಆಯಿತು.
ಆದಿಕಾಂಡ 1 : 10 (KNV)
ದೇವರು ಒಣನೆಲಕ್ಕೆ ಭೂಮಿಯೆಂದೂ ಒಟ್ಟು ಗೂಡಿದ ನೀರುಗಳಿಗೆ ಸಮುದ್ರಗಳೆಂದೂ ಕರೆದನು. ದೇವರು ಅದನ್ನು ಒಳ್ಳೆಯದೆಂದು ನೋಡಿದನು.
ಆದಿಕಾಂಡ 1 : 11 (KNV)
ತರುವಾಯ ದೇವರು--ಭೂಮಿಯು ಹುಲ್ಲನ್ನೂ ಬೀಜಕೊಡುವ ಪಲ್ಯವನ್ನೂ ತನ್ನೊಳಗೆ ಬೀಜವಿದ್ದು ತನ್ನ ಜಾತಿಯ ಪ್ರಕಾರ ಫಲಫಲಿಸುವ ಹಣ್ಣಿನ ಮರವನ್ನೂ ಭೂಮಿಯ ಮೇಲೆ ಮೊಳೆಯಿಸಲಿ ಎಂದು ಹೇಳಿದನು; ಅದು ಹಾಗೆಯೇ ಆಯಿತು.
ಆದಿಕಾಂಡ 1 : 12 (KNV)
ಭೂಮಿಯು ಹುಲ್ಲನ್ನೂ ತನ್ನ ಜಾತಿಯ ಪ್ರಕಾರ ಬೀಜಕೊಡುವ ಪಲ್ಯವನ್ನೂ ತನ್ನ ಜಾತಿಯ ಪ್ರಕಾರ ತನ್ನೊಳಗೆ ಬೀಜವಿರುವ ಹಣ್ಣಿನ ಮರವನ್ನೂ ಮೊಳೆ ಯಿಸಿತು. ದೇವರು ಅದನ್ನು ಒಳ್ಳೆಯದೆಂದು ನೋಡಿ ದನು.
ಆದಿಕಾಂಡ 1 : 13 (KNV)
ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಮೂರನೆಯ ದಿನವಾಯಿತು.
ಆದಿಕಾಂಡ 1 : 14 (KNV)
ದೇವರು--ಹಗಲನ್ನು ರಾತ್ರಿಯಿಂದ ಬೇರೆ ಮಾಡುವದಕ್ಕೆ ಆಕಾಶದ ವಿಶಾಲದಲ್ಲಿ ಬೆಳಕುಗಳಿರಲಿ; ಅವು ಹಗಲಿರುಳುಗಳನ್ನೂ ಸಮಯ ದಿನ ಸಂವತ್ಸರ ಗಳನ್ನೂ ತೋರಿಸುವದಕ್ಕೆ ಗುರುತುಗಳಾಗಿರಲಿ;
ಆದಿಕಾಂಡ 1 : 15 (KNV)
ಅವು ಭೂಮಿಯ ಮೇಲೆ ಬೆಳಕುಕೊಡುವಂತೆ ಆಕಾಶದ ವಿಶಾಲದಲ್ಲಿ ಬೆಳಕುಗಳಾಗಿರಲಿ ಅಂದನು. ಅದು ಹಾಗೆಯೇ ಆಯಿತು.
ಆದಿಕಾಂಡ 1 : 16 (KNV)
ದೇವರು ಎರಡು ದೊಡ್ಡ ಬೆಳಕುಗಳನ್ನು ಮಾಡಿದನು; ದೊಡ್ಡ ಬೆಳಕು ಹಗಲನ್ನಾಳುವದಕ್ಕೂ ಚಿಕ್ಕ ಬೆಳಕು ರಾತ್ರಿಯನ್ನಾಳು ವದಕ್ಕೂ ಮಾಡಿದ್ದಲ್ಲದೆ ನಕ್ಷತ್ರಗಳನ್ನು ಸಹ ಮಾಡಿ ದನು.
ಆದಿಕಾಂಡ 1 : 17 (KNV)
ಭೂಮಿಯ ಮೇಲೆ ಬೆಳಕುಕೊಡುವದಕ್ಕಾಗಿ ದೇವರು ಆಕಾಶದ ವಿಶಾಲದಲ್ಲಿ ಅವುಗಳನ್ನು ಇರಿಸಿದನು.
ಆದಿಕಾಂಡ 1 : 18 (KNV)
ಇದಲ್ಲದೆ ಅವು ಹಗಲನ್ನು ಮತ್ತು ರಾತ್ರಿಯನ್ನು ಆಳುವದಕ್ಕೂ ಬೆಳಕನ್ನು ಕತ್ತಲೆಯಿಂದ ಬೇರೆ ಮಾಡುವದಕ್ಕೂ ಇರಿಸಿದನು. ದೇವರು ಅದನ್ನು ಒಳ್ಳೆಯದೆಂದು ನೋಡಿದನು.
ಆದಿಕಾಂಡ 1 : 19 (KNV)
ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ನಾಲ್ಕನೆಯ ದಿನವಾಯಿತು.
ಆದಿಕಾಂಡ 1 : 20 (KNV)
ದೇವರು--ಚಲಿಸುವ ಜೀವಜಂತುಗಳನ್ನು ನೀರು ಗಳು ಸಮೃದ್ಧಿಯಾಗಿ ಬರಮಾಡಲಿ; ಭೂಮಿಯ ಮೇಲೆ ಆಕಾಶದ ವಿಶಾಲದಲ್ಲಿ ಪಕ್ಷಿಗಳು ಹಾರಾಡಲಿ ಅಂದನು.
ಆದಿಕಾಂಡ 1 : 21 (KNV)
ಇದಲ್ಲದೆ ತಮ್ಮ ಜಾತಿಯ ಪ್ರಕಾರ ನೀರುಗಳು ಸಮೃದ್ಧಿಯಾಗಿ ಬರಮಾಡಿದ ದೊಡ್ಡ ತಿಮಿಂಗಿಲಗಳನ್ನೂ ಚಲಿಸುವ ಪ್ರತಿಯೊಂದು ಜೀವ ಜಂತುಗಳನ್ನೂ ತನ್ನ ಜಾತಿಗನುಸಾರವಾದ ರೆಕ್ಕೆಗಳಿದ್ದ ಪ್ರತಿಯೊಂದು ಪಕ್ಷಿಯನ್ನೂ ದೇವರು ಸೃಷ್ಟಿಸಿದನು. ದೇವರು ಅದನ್ನು ಒಳ್ಳೆಯದೆಂದು ನೋಡಿದನು.
ಆದಿಕಾಂಡ 1 : 22 (KNV)
ಆಗ ದೇವರು ಅವುಗಳನ್ನು ಆಶೀರ್ವದಿಸಿ-- ಅಭಿವೃದ್ಧಿಯಾಗಿ ಹೆಚ್ಚಿ ಸಮುದ್ರಗಳ ನೀರುಗಳಲ್ಲಿ ತುಂಬಿಕೊಳ್ಳಲಿ ಮತ್ತು ಪಕ್ಷಿಗಳು ಭೂಮಿಯಲ್ಲಿ ಹೆಚ್ಚಲಿ ಅಂದನು.
ಆದಿಕಾಂಡ 1 : 23 (KNV)
ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಐದನೆಯ ದಿನವಾಯಿತು.
ಆದಿಕಾಂಡ 1 : 24 (KNV)
ದೇವರು--ಆಯಾ ಜಾತಿಯ ಜೀವಜಂತುಗಳನ್ನೂ ಪಶುಗಳನ್ನೂ ಹರಿದಾಡುವ ಕ್ರಿಮಿಗಳನ್ನೂ ತನ್ನ ಜಾತಿಗನುಸಾರವಾದ ಭೂಮೃಗಗಳನ್ನೂ ಭೂಮಿಯು ಬರಮಾಡಲಿ ಅಂದನು; ಅದು ಹಾಗೆಯೇ ಆಯಿತು.
ಆದಿಕಾಂಡ 1 : 25 (KNV)
ದೇವರು ಅದರ ಜಾತಿಗನುಸಾರವಾಗಿ ಭೂಮೃಗಗಳನ್ನೂ ಅವುಗಳ ಜಾತಿಗನುಸಾರವಾಗಿ ಪಶುಗಳನ್ನೂ ತನ್ನ ಜಾತಿಗನುಸಾರವಾಗಿ ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದನ್ನೂ ಮಾಡಿದನು. ದೇವರು ಅದನ್ನು ಒಳ್ಳೆಯದೆಂದು ನೋಡಿದನು.
ಆದಿಕಾಂಡ 1 : 26 (KNV)
ತರುವಾಯ ದೇವರು--ನಮ್ಮ ರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯನನ್ನು ಮಾಡೋಣ; ಅವರು ಸಮುದ್ರದ ವಿಾನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ಎಲ್ಲಾ ಭೂಮಿಯ ಮೇಲೆಯೂ ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಕ್ರಿಮಿಯ ಮೇಲೆಯೂ ದೊರೆತನಮಾಡಲಿ ಅಂದನು.
ಆದಿಕಾಂಡ 1 : 27 (KNV)
ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಸಿದನು, ದೇವರರೂಪದಲ್ಲಿ ಆತನು ಅವನನ್ನು ಸೃಷ್ಟಿಸಿದನು. ಆತನು ಅವರನ್ನು ಗಂಡು ಹೆಣ್ಣಾಗಿ ಸೃಷ್ಟಿಸಿದನು.
ಆದಿಕಾಂಡ 1 : 28 (KNV)
ಇದಲ್ಲದೆ ದೇವರು ಅವರನ್ನು ಆಶೀರ್ವದಿಸಿದನು. ದೇವರು--ಅಭಿವೃದ್ಧಿಯಾಗಿ ಹೆಚ್ಚಿ ಭೂಮಿಯನ್ನು ತುಂಬಿಕೊಂಡು ಅದನ್ನು ವಶಮಾಡಿ ಕೊಳ್ಳಿರಿ; ಸಮುದ್ರದ ವಿಾನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯ ಮೇಲೆ ಚಲಿಸುವ ಪ್ರತಿಯೊಂದು ಜೀವಿಯ ಮೇಲೆಯೂ ದೊರೆತನಮಾಡಿರಿ ಎಂದು ಅವರಿಗೆ ಹೇಳಿದನು.
ಆದಿಕಾಂಡ 1 : 29 (KNV)
ದೇವರು--ಇಗೋ, ಸಮಸ್ತ ಭೂಮಿಯ ಮೇಲೆ ಇರುವ ಬೀಜವುಳ್ಳ ಪ್ರತಿಯೊಂದು ಪಲ್ಯವನ್ನೂ ಬೀಜಬಿಡುವ ಪ್ರತಿಯೊಂದು ಹಣ್ಣಿನ ಮರವನ್ನೂ ನಿಮಗೆ ಕೊಟ್ಟಿದ್ದೇನೆ. ಅದು ನಿಮಗೆ ಆಹಾರಕ್ಕಾಗಿ ರುವದು.
ಆದಿಕಾಂಡ 1 : 30 (KNV)
ಇದಲ್ಲದೆ ನಾನು ಭೂಮಿಯ ಪ್ರತಿ ಯೊಂದು ಮೃಗಕ್ಕೂ ಆಕಾಶದ ಪ್ರತಿಯೊಂದು ಪಕ್ಷಿಗೂ ಭೂಮಿಯ ಮೇಲೆ ಹರಿದಾಡುವ ಜೀವವುಳ್ಳ ಪ್ರತಿ ಯೊಂದಕ್ಕೂ ಹಸುರಾದ ಪ್ರತಿಯೊಂದು ಪಲ್ಯವನ್ನು ಆಹಾರಕ್ಕಾಗಿ ಕೊಟ್ಟಿದ್ದೇನೆ ಅಂದನು; ಅದು ಹಾಗೆಯೇ ಆಯಿತು.ದೇವರು ತಾನು ಮಾಡಿದ್ದನ್ನೆಲ್ಲಾ ನೋಡಲಾಗಿ ಇಗೋ, ಅದು ಬಹಳ ಒಳ್ಳೆಯದಾಗಿತ್ತು. ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಆರನೆಯ ದಿನವಾಯಿತು.
ಆದಿಕಾಂಡ 1 : 31 (KNV)
ದೇವರು ತಾನು ಮಾಡಿದ್ದನ್ನೆಲ್ಲಾ ನೋಡಲಾಗಿ ಇಗೋ, ಅದು ಬಹಳ ಒಳ್ಳೆಯದಾಗಿತ್ತು. ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಆರನೆಯ ದಿನವಾಯಿತು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31

BG:

Opacity:

Color:


Size:


Font: