ಗಲಾತ್ಯದವರಿಗೆ 5 : 1 (KNV)
ಕ್ರಿಸ್ತನು ನಮ್ಮನ್ನು ಸ್ವತಂತ್ರರನ್ನಾಗಿ ಮಾಡಿದ್ದಾನೆ. ಅದರಲ್ಲಿ ಸ್ಥಿರವಾಗಿ ನಿಲ್ಲಿರಿ; ದಾಸತ್ವದ ನೊಗದಲ್ಲಿ ತಿರಿಗಿ ಸಿಕ್ಕಿಕೊಳ್ಳಬೇಡಿರಿ.
ಗಲಾತ್ಯದವರಿಗೆ 5 : 2 (KNV)
ಇಗೋ, ಪೌಲನೆಂಬ ನಾನು ನಿಮಗೆ ಹೇಳುವದೇನಂದರೆ, ನೀವು ಸುನ್ನತಿ ಮಾಡಿಸಿಕೊಂಡರೆ ಕ್ರಿಸ್ತನಿಂದ ನಿಮಗೆ ಏನು ಪ್ರಯೋಜನವಿಲ್ಲ.
ಗಲಾತ್ಯದವರಿಗೆ 5 : 3 (KNV)
ಯಾಕಂದರೆ ಸುನ್ನತಿ ಮಾಡಿಸಿಕೊಳ್ಳುವ ಪ್ರತಿ ಯೊಬ್ಬನು ನ್ಯಾಯಪ್ರಮಾಣವನ್ನೆಲ್ಲಾ ಕೈಕೊಳ್ಳುವ ಹಂಗಿನಲ್ಲಿದ್ದಾನೆ ಎಂದು ತಿರಿಗಿ ಪ್ರಮಾಣವಾಗಿ ಹೇಳುತ್ತೇನೆ.
ಗಲಾತ್ಯದವರಿಗೆ 5 : 4 (KNV)
ನಿಮ್ಮಲ್ಲಿ ಯಾರಾದರೂ ನ್ಯಾಯ ಪ್ರಮಾಣದ ಮೂಲಕ ನೀತಿವಂತರಾಗಬೇಕೆಂದಿದ್ದರೆ ಅವರಿಗೆ ಕ್ರಿಸ್ತನಿಂದ ಯಾವ ಪ್ರಯೋಜನವೂ ಆಗುವದಿಲ್ಲ; ನೀವು ಕೃಪೆಯಿಂದ ಬಿದ್ದವರಾಗಿದ್ದೀರಿ.
ಗಲಾತ್ಯದವರಿಗೆ 5 : 5 (KNV)
ನಾವಾದರೋ ಆತ್ಮನ ಮೂಲಕ ನಂಬಿಕೆಯಿಂದಾದ ನೀತಿಯ ನಿರೀಕ್ಷೆಗಾಗಿ ಎದುರು ನೋಡುತ್ತೇವೆ.
ಗಲಾತ್ಯದವರಿಗೆ 5 : 6 (KNV)
ಯಾಕಂದರೆ ಯೇಸು ಕ್ರಿಸ್ತನಲ್ಲಿರುವವರಿಗೆ ಸುನ್ನತಿ ಯಾದರೂ ಪ್ರಯೋಜನವಿಲ್ಲ, ಆಗದಿದ್ದರೂ ಪ್ರಯೋ ಜನವಿಲ್ಲ. ಪ್ರೀತಿಯಿಂದ ಕೆಲಸನಡಿಸುವ ನಂಬಿಕೆ ಯಿಂದಲೇ ಪ್ರಯೋಜನವಾಗುತ್ತದೆ.
ಗಲಾತ್ಯದವರಿಗೆ 5 : 7 (KNV)
ನೀವು ಚೆನ್ನಾಗಿ ಓಡುತ್ತಿದ್ದಿರಿ, ನೀವು ಸತ್ಯಕ್ಕೆ ವಿಧೇಯರಾಗದಂತೆ ಯಾರು ನಿಮ್ಮನ್ನು ತಡೆದರು?
ಗಲಾತ್ಯದವರಿಗೆ 5 : 8 (KNV)
ಈ ಪ್ರೇರಣೆಯು ನಿಮ್ಮನ್ನು ಕರೆದಾತನಿಂದ ಬಂದದ್ದಲ್ಲ.
ಗಲಾತ್ಯದವರಿಗೆ 5 : 9 (KNV)
ಸ್ವಲ್ಪ ಹುಳಿಯಿಂದ ಕಣಿಕ ವೆಲ್ಲಾ ಹುಳಿಯಾಗುವದು.
ಗಲಾತ್ಯದವರಿಗೆ 5 : 10 (KNV)
ನೀವು ಬೇರೆ ಅಭಿಪ್ರಾಯವನ್ನು ಹಿಡಿಯುವದಿಲ್ಲವೆಂದು ಕರ್ತನಲ್ಲಿ ನಿಮ್ಮನ್ನು ಕುರಿತು ನನಗೆ ಭರವಸೆ ಉಂಟು. ಆದರೆ ನಿಮ್ಮನ್ನು ಕಳವಳಪಡಿಸುವವನು ಯಾವನಾದರೂ ಸರಿಯೇ ತನ್ನ ದಂಡನೆಯನ್ನು ಅನುಭವಿಸುವನು.
ಗಲಾತ್ಯದವರಿಗೆ 5 : 11 (KNV)
ಸಹೋದರರೇ, ನಾನಾದರೋ ಸುನ್ನತಿಯಾಗ ಬೇಕೆಂದು ಇನ್ನೂ ಸಾರುವವನಾಗಿದ್ದರೆ ಇನ್ನು ನನಗೆ ಹಿಂಸೆಯಾಗುವದು ಯಾಕೆ? ಆ ಪಕ್ಷದಲ್ಲಿ ಶಿಲುಬೆಯ ದೆಸೆಯಿಂದ ಉಂಟಾದ ಆಕ್ಷೇಪವು ನಿಂತು ಹೋಯಿ ತಲ್ಲಾ?
ಗಲಾತ್ಯದವರಿಗೆ 5 : 12 (KNV)
ನಿಮ್ಮನ್ನು ಕಳವಳಪಡಿಸುವವರು ಛೇದಿಸ ಲ್ಪಡುವದೇ ನನ್ನ ಇಷ್ಟ.
ಗಲಾತ್ಯದವರಿಗೆ 5 : 13 (KNV)
ಸಹೋದರರೇ, ನೀವು ಸ್ವತಂತ್ರರಾಗಿರಬೇಕೆಂದು ಕರೆಯಲ್ಪಟ್ಟಿದ್ದೀರಿ. ಸ್ವಾತಂತ್ರ್ಯವನ್ನು ಶರೀರಕ್ಕೆ ಆಸ್ಪದವಾಗಿ ಬಳಸದೆ ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆ ಮಾಡಿರಿ.
ಗಲಾತ್ಯದವರಿಗೆ 5 : 14 (KNV)
ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು ಎಂಬ ಒಂದೇ ಮಾತಿನಲ್ಲಿ ನ್ಯಾಯಪ್ರಮಾಣವೆಲಾ ನೆರವೇರುತ್ತದೆ.
ಗಲಾತ್ಯದವರಿಗೆ 5 : 15 (KNV)
ಆದರೆ ನೀವು ಒಬ್ಬರನ್ನೊಬ್ಬರು ಕಚ್ಚಿ ನುಂಗುವವರಾದರೆ ಒಬ್ಬರಿಂದೊಬ್ಬರು ನಾಶವಾದೀರಿ, ಎಚ್ಚರವಾಗಿರ್ರಿ.
ಗಲಾತ್ಯದವರಿಗೆ 5 : 16 (KNV)
ನಾನು ಹೇಳುವದೇನಂದರೆ, ಆತ್ಮನನ್ನು ಅನು ಸರಿಸಿ ನಡೆದುಕೊಳ್ಳಿರಿ; ಆಗ ನೀವು ಶರೀರಭಾವದ ಅಭಿಲಾಷೆಯನ್ನು ಎಷ್ಟು ಮಾತ್ರಕ್ಕೂ ನೆರವೇರಿಸು ವದಿಲ್ಲ.
ಗಲಾತ್ಯದವರಿಗೆ 5 : 17 (KNV)
ಶರೀರದಾಶೆಯು ಆತ್ಮನಿಗೆ ವಿರುದ್ಧ ವಾಗಿದೆ. ಆತ್ಮನು ಶರೀರಕ್ಕೆ ವಿರುದ್ಧವಾಗಿದ್ದಾನೆ. ನೀವು ಮಾಡಲಿಚ್ಛಿಸುವದನ್ನು ಮಾಡದಂತೆ ಇವು ಒಂದ ಕ್ಕೊಂದು ವಿರೋಧವಾಗಿವೆ.
ಗಲಾತ್ಯದವರಿಗೆ 5 : 18 (KNV)
ಆದರೆ ನೀವು ಆತ್ಮನಿಂದ ನಡಿಸಿಕೊಳ್ಳುವವರಾದರೆ ನ್ಯಾಯಪ್ರಮಾ ಣಕ್ಕೆ ಅಧೀನರಲ್ಲ.
ಗಲಾತ್ಯದವರಿಗೆ 5 : 19 (KNV)
ಶರೀರದ ಕೃತ್ಯಗಳು ಸ್ಪಷ್ಟವಾಗಿ ತೋರಿಬಂದಿವೆ; ಅವು ಯಾವವೆಂದರೆ--ವ್ಯಭಿಚಾರ ಜಾರತ್ವ ಅಶುದ್ಧತ್ವ ಬಂಡುತನ
ಗಲಾತ್ಯದವರಿಗೆ 5 : 20 (KNV)
ವಿಗ್ರಹಾರಾಧನೆ ಮಾಟ ಹಗೆತನ ಮತಭೇದ ಹೊಟ್ಟೇಕಿಚ್ಚು ಸಿಟ್ಟು ಜಗಳ ಒಳಸಂಚು ಭಿನ್ನಾಭಿಪ್ರಾಯಗಳು
ಗಲಾತ್ಯದವರಿಗೆ 5 : 21 (KNV)
ಅಸೂಯೆ ಗಳು ಕೊಲೆಗಳು ಕುಡುಕತನ ದುಂದೌತನ ಈ ಮೊದಲಾದವುಗಳೇ; ಇಂಥ ಕೃತ್ಯಗಳನ್ನು ನಡಿಸುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂದು ನಾನು ನಿಮಗೆ ಮುಂಚೆಯೇ ಹೇಳಿದಂತೆ ಈಗಲೂ ಹೇಳುತ್ತೇನೆ.
ಗಲಾತ್ಯದವರಿಗೆ 5 : 22 (KNV)
ಆದರೆ ಆತ್ಮನ ಫಲವೇನಂದರೆ--ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ವಿನಯ ಸದ್ಗುಣ ನಂಬಿಕೆ
ಗಲಾತ್ಯದವರಿಗೆ 5 : 23 (KNV)
ಸಾತ್ವಿಕತ್ವ ಮಿತವ್ಯಯ ಇಂಥ ವುಗಳೇ; ಇಂಥವುಗಳಿಗೆ ವಿರೋಧವಾಗಿ ನ್ಯಾಯ ಪ್ರಮಾಣವಿಲ್ಲ.
ಗಲಾತ್ಯದವರಿಗೆ 5 : 24 (KNV)
ಕ್ರಿಸ್ತನವರು ತಮ್ಮ ಶರೀರವನ್ನು ಅದರ ಇಚ್ಛೆ ದುರಾಶೆ ಸಹಿತವಾಗಿ ಶಿಲುಬೆಗೆ ಹಾಕಿದ್ದಾರೆ.
ಗಲಾತ್ಯದವರಿಗೆ 5 : 25 (KNV)
ನಾವು ಆತ್ಮನಲ್ಲಿ ಜೀವಿಸುವದಾದರೆ ನಾವು ಸಹ ಆತ್ಮನಲ್ಲಿ ನಡೆಯೋಣ.ನಾವು ವ್ಯರ್ಥವಾದ ಹೊಗಳಿಕೆಯನ್ನು ಅಪೇಕ್ಷಿಸದೆಯೂ ಒಬ್ಬರನ್ನೊಬ್ಬರು ಕೆಣಕದೆಯೂ ಒಬ್ಬರ ಮೇಲೊಬ್ಬರು ಹೊಟ್ಟೇಕಿಚ್ಚು ಪಡದೆಯೂ ಇರೋಣ.
ಗಲಾತ್ಯದವರಿಗೆ 5 : 26 (KNV)
ನಾವು ವ್ಯರ್ಥವಾದ ಹೊಗಳಿಕೆಯನ್ನು ಅಪೇಕ್ಷಿಸದೆಯೂ ಒಬ್ಬರನ್ನೊಬ್ಬರು ಕೆಣಕದೆಯೂ ಒಬ್ಬರ ಮೇಲೊಬ್ಬರು ಹೊಟ್ಟೇಕಿಚ್ಚು ಪಡದೆಯೂ ಇರೋಣ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26

BG:

Opacity:

Color:


Size:


Font: