ಯೆಹೆಜ್ಕೇಲನು 32 : 1 (KNV)
ಹನ್ನೆರಡನೇ ವರುಷದ, ಹನ್ನೆರಡನೇ ತಿಂಗಳಿನ, ಮೊದಲನೇ ದಿನದಲ್ಲಿ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
ಯೆಹೆಜ್ಕೇಲನು 32 : 2 (KNV)
ಮನುಷ್ಯ ಪುತ್ರನೇ, ಐಗುಪ್ತ ಅರಸನಾದ ಫರೋಹನ ವಿಷಯ ವಾಗಿ ಗೋಳಾಟವನ್ನೆತ್ತಿ ಅವನಿಗೆ ನೀನು ಹೇಳಬೇಕಾ ದದ್ದೇನಂದರೆ--ನೀನು ಜನಾಂಗಗಳಲ್ಲಿ ಪ್ರಾಯದ ಸಿಂಹಕ್ಕೆ ಸಮನಾಗಿರುವೆ; ಸಮುದ್ರಗಳಲ್ಲಿರುವ ತಿಮಿಂಗಲದ ಹಾಗಿರುವೆ. ನೀನಿದ್ದ ನದಿಗಳನ್ನು ಭೇಧಿಸಿಕೊಂಡು ಬಂದ ನೀರನ್ನು ನಿನ್ನ ಕಾಲುಗಳಿಂದ ಕಲಕಿ ಹೊಳೆಗಳನ್ನು ತುಳಿದು ಬದಿಗೆ ಮಾಡಿದೆ.
ಯೆಹೆಜ್ಕೇಲನು 32 : 3 (KNV)
ದೇವರಾದ ಕರ್ತನು ಹೀಗೆ ಹೇಳುತ್ತಾನೆ, ಆದುದ ರಿಂದ ನಾನು ಗುಂಪಾಗಿ ಕೂಡಿದ ಬಹಳ ಜನಾಂಗಗಳ ಮೇಲೆ ಬಲೆಯನ್ನು ಬೀಸುವೆನು; ಅವರು ನಿನ್ನನ್ನು ನನ್ನ ಬಲೆಯಲ್ಲಿ ಮೇಲಕ್ಕೆಳೆಯುವರು.
ಯೆಹೆಜ್ಕೇಲನು 32 : 4 (KNV)
ಆಗ ನಾನು ನಿನ್ನನ್ನು ನೆಲದ ಮೇಲೆ ಹಾಕಿಬಿಡುವೆನು, ಬಯಲಿನ ಮೇಲೆ ಬಿಸಾಡುವೆನು; ಆಕಾಶದ ಪಕ್ಷಿಗಳನ್ನೆಲ್ಲಾ ನಿನ್ನ ಮೇಲೆ ಕೂರಿಸಿ, ಸಮಸ್ತ ಭೂಮಿಯ ಮೇಲಿನ ಮೃಗಗಳನ್ನು ನಿನ್ನಿಂದ ತೃಪ್ತಿಪಡಿಸುವೆನು.
ಯೆಹೆಜ್ಕೇಲನು 32 : 5 (KNV)
ನಿನ್ನ ಮಾಂಸವನ್ನು ಬೆಟ್ಟಗಳ ಮೇಲೆ ಹಾಕಿ, ನಿನ್ನ ರಾಶಿ ಯಿಂದ ಕಣಿವೆಗಳನ್ನು ತುಂಬಿಸುವೆನು.
ಯೆಹೆಜ್ಕೇಲನು 32 : 6 (KNV)
ನಿನ್ನ ರಕ್ತ ಪ್ರವಾಹದಿಂದ ದೇಶವನ್ನು ಬೆಟ್ಟಗಳ ತನಕ ತೋಯಿಸು ವೆನು; ನದಿಗಳು ನಿನ್ನಿಂದ ತುಂಬುವವು.
ಯೆಹೆಜ್ಕೇಲನು 32 : 7 (KNV)
ಇದಲ್ಲದೆ, ನಾನು ನಿನ್ನನ್ನು ನಂದಿಸುವಾಗ ಆಕಾಶಕ್ಕೆ ಮುಸುಕುಹಾಕಿ ಅಲ್ಲಿನ ನಕ್ಷತ್ರಗಳನ್ನು ಕತ್ತಲಾಗ ಮಾಡಿ, ಸೂರ್ಯನನ್ನು ಮೋಡದಿಂದ ಮುಚ್ಚಿಬಿಡುವೆನು; ಚಂದ್ರನು ತನ್ನ ಬೆಳಕನ್ನು ಕೊಡದೆ ಇರುವನು.
ಯೆಹೆಜ್ಕೇಲನು 32 : 8 (KNV)
ಆಕಾಶದಲ್ಲಿ ಪ್ರಕಾಶಿ ಸುವ ಬೆಳಕುಗಳನ್ನು ನಿನ್ನ ನಿಮಿತ್ತವಾಗಿ ನಾನು ಕತ್ತಲು ಮಾಡುವೆನು; ಆ ಕತ್ತಲೆಯನ್ನು ನಿನ್ನ ದೇಶದ ಮೇಲೆ ಇಡುತ್ತೇನೆಂದು ದೇವರಾದ ಕರ್ತನು ಹೇಳುತ್ತಾನೆ.
ಯೆಹೆಜ್ಕೇಲನು 32 : 9 (KNV)
ಇದಲ್ಲದೆ ಜನಾಂಗಗಳೊಳಗೆ ನೀನು ಅರಿಯದ ದೇಶಗಳಲ್ಲಿ, ನಿನ್ನ ನಾಶನವನ್ನು ಪ್ರಸಿದ್ಧಿಪಡಿಸಿ, ಅನೇಕ ಜನಗಳ ಹೃದಯದಲ್ಲಿ ಗಲಿಬಿಲಿ ಎಬ್ಬಿಸುವೆನು.
ಯೆಹೆಜ್ಕೇಲನು 32 : 10 (KNV)
ಹೌದು, ನಾನು ಅನೇಕ ಜನರನ್ನು ನಿನ್ನ ವಿಷಯದಲ್ಲಿ ವಿಸ್ಮಯಗೊಳಿಸುವೆನು, ನಾನು ಅವರ ಮುಂದೆ ನನ್ನ ಕತ್ತಿಯನ್ನು ಬೀಸುವಾಗ ಅವರ ಅರಸರು ನಿನ್ನ ವಿಷಯದಲ್ಲಿ ಭಯಭ್ರಾಂತಿಗೊಳ್ಳುವರು. ನೀನು ಬೀಳುವ ಆ ದಿನದಲ್ಲಿ ಅವರು ಕ್ಷಣಕ್ಷಣಕ್ಕೆ ತಮ್ಮ ತಮ್ಮ ಪ್ರಾಣದ ಬಗ್ಗೆ ನಡುಗುವರು.
ಯೆಹೆಜ್ಕೇಲನು 32 : 11 (KNV)
ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಬಾಬೆಲಿನ ಅರಸನ ಕತ್ತಿಯು ನಿನ್ನ ಮೇಲೆ ಬರುವದು;
ಯೆಹೆಜ್ಕೇಲನು 32 : 12 (KNV)
ಪರಾಕ್ರಮ ಶಾಲಿಗಳ ಕತ್ತಿಗಳಿಂದ ಜನಾಂಗಗಳಲ್ಲಿ ಭಯಂಕರ ರಾಗಿರುವ ನಿನ್ನ ಸಮೂಹವನ್ನು ನಾನು ಬೀಳುವಂತೆ ಮಾಡುವೆನು; ಅವರು ಐಗುಪ್ತದ ಮಹತ್ತನ್ನು ಕೆಡಿಸು ವರು; ಅದರ ಜನಸಮೂಹವೆಲ್ಲಾ ಹಾಳಾಗುವದು.
ಯೆಹೆಜ್ಕೇಲನು 32 : 13 (KNV)
ನಾನು ಆ ಬಹುಪ್ರವಾಹಗಳ ಬಳಿಯಲ್ಲಿರುವ ಅದರ ಮೃಗಗಳನ್ನೆಲ್ಲಾ ನಾಶಮಾಡುವೆನು; ಆ ನೀರಿನಲ್ಲಿ ಇನ್ನು ಮೇಲೆ ಮನುಷ್ಯನ ಕಾಲಾಗಲಿ, ಪ್ರಾಣಿಗಳ ಗೊರಸಾಗಲಿ ಕಲಕಿಸುವದಿಲ್ಲ.
ಯೆಹೆಜ್ಕೇಲನು 32 : 14 (KNV)
ಆಮೇಲೆ ನಾನು ಆ ನೀರುಗಳನ್ನು ಆಳವಾಗಿ ಮಾಡುವೆನು; ಅದರ ನದಿಗಳನ್ನು ಎಣ್ಣೆಯ ಹಾಗೆ ಹರಿಯುವಂತೆ ಮಾಡು ವೆನು ಎಂದು ದೇವರಾದ ಕರ್ತನು ಹೇಳುತ್ತಾನೆ.
ಯೆಹೆಜ್ಕೇಲನು 32 : 15 (KNV)
ನಾನು ಐಗುಪ್ತದೇಶವನ್ನು ಹಾಳು ಮಾಡುವಾಗ, ಆ ದೇಶವು ಪರಿಪೂರ್ಣವಾಗಿ ಹಾಳಾಗುವಾಗ ಮತ್ತು ನಾನು ಅವರ ನಿವಾಸಿಗಳನ್ನೆಲ್ಲಾ ಹೊಡೆಯುವಾಗ ನಾನೇ ಕರ್ತನೆಂದು ಅವರಿಗೆ ತಿಳಿಯುವದು.
ಯೆಹೆಜ್ಕೇಲನು 32 : 16 (KNV)
ಇದು ಅವರು ಗೋಳಾಡುವಂತಹ ಗೋಳಾಟವಾಗಿದೆ; ಐಗುಪ್ತದ ವಿಷಯವಾಗಿಯೂ ಅದರ ಎಲ್ಲಾ ಜನ ಸಮೂಹದ ವಿಷಯವಾಗಿಯೂ ಜನಾಂಗಗಳ ಕುಮಾರ್ತೆಯರು ಇದನ್ನು ಕುರಿತು ಗೋಳಾಡುವರು; ಎಂದು ದೇವರಾದ ಕರ್ತನು ಹೇಳುತ್ತಾನೆ.
ಯೆಹೆಜ್ಕೇಲನು 32 : 17 (KNV)
ಇದಲ್ಲದೆ ಹನ್ನೆರಡನೇ ವರ್ಷದ, ತಿಂಗಳಿನ ಹದಿನೈದನೇ ದಿನದಲ್ಲಿ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
ಯೆಹೆಜ್ಕೇಲನು 32 : 18 (KNV)
ಮನುಷ್ಯಪುತ್ರನೇ, ಐಗುಪ್ತದ ಜನಸಮೂಹದ ವಿಷಯವಾಗಿ ಗೋಳಾಡು. ಅದನ್ನು, ಅದರ ಸಂಗಡ ಘನವುಳ್ಳ ಜನಾಂಗಗಳ ಕುಮಾರ್ತೆ ಯರನ್ನು ಭೂಮಿಯ ಕೆಳಗಿನ ಭಾಗಗಳಿಗೆ ಕುಣಿಯೊ ಳಗೆ ಇಳಿಯುವವರ ಜೊತೆ ತಳ್ಳಿಬಿಡು.
ಯೆಹೆಜ್ಕೇಲನು 32 : 19 (KNV)
ನೀನು ಸೌಂದರ್ಯದಲ್ಲಿ ಯಾರಿಗೆ ಹೋಲುವಿ? ಕೆಳಗೆ ಹೋಗು ಮತ್ತು ಸುನ್ನತಿಯಿಲ್ಲದವರ ಸಂಗಡ ಮಲಗು.
ಯೆಹೆಜ್ಕೇಲನು 32 : 20 (KNV)
ಅವರು ಕತ್ತಿಯಿಂದ ಹತರಾದವರ ಮಧ್ಯದಲ್ಲಿ ಬೀಳುವರು. ಅವಳು ಕತ್ತಿಗೆ ಒಪ್ಪಿಸಲ್ಪಟ್ಟಿದ್ದಾಳೆ; ಅವಳನ್ನೂ ಅವಳ ಎಲ್ಲಾ ಸಮೂಹವನ್ನೂ ಎಳೆಯಿರಿ.
ಯೆಹೆಜ್ಕೇಲನು 32 : 21 (KNV)
ಶೂರರಲ್ಲಿ ಬಲಿಷ್ಠರೂ ಅವನಿಗೆ ಸಹಾಯ ಮಾಡಿದವರ ಸಂಗಡ ಪಾತಾಳದೊಳಗಿಂದ ಅವನ ಸಂಗಡ ಮಾತನಾಡುವರು; ಅವರು ಇಳಿದುಹೋಗಿ ಸುನ್ನತಿ ಯಿಲ್ಲದವರಾಗಿಯೂ ಕತ್ತಿಯಿಂದ ಹತರಾದವರಾ ಗಿಯೂ ಮಲಗಿದ್ದಾರೆ.
ಯೆಹೆಜ್ಕೇಲನು 32 : 22 (KNV)
ಅಲ್ಲಿ ಅಶ್ಶೂರ್ಯ ಮತ್ತು ಅದರ ಎಲ್ಲಾ ಗುಂಪು ಇರುವದು; ಸುತ್ತಲೂ ಅದರ ಸಮಾಧಿಗಳಿರುವವು; ಅವರೆಲ್ಲರೂ ಕತ್ತಿಯಿಂದ ಬಿದ್ದು ಹತರಾದವರೇ.
ಯೆಹೆಜ್ಕೇಲನು 32 : 23 (KNV)
ಅವರ ಸಮಾಧಿಗಳು ಕುಣಿಯ ಕಡೆಗಳಲ್ಲಿ ಇಡಲ್ಪಟ್ಟಿವೆ, ಅದರ ಸಮಾಧಿಯ ಸುತ್ತಲೂ ಅವರ ಗುಂಪುಗಳಿವೆ. ಜೀವಿತರ ದೇಶದಲ್ಲಿ ಭಯಂಕ ರರಾಗಿದ್ದ ಇವರೆಲ್ಲರೂ ಕತ್ತಿಯಿಂದ ಬಿದ್ದು ಹತರಾ ದರು.
ಯೆಹೆಜ್ಕೇಲನು 32 : 24 (KNV)
ಅಲ್ಲಿ ಏಲಾಮು ಮತ್ತು ಅದರ ಎಲ್ಲಾ ಸಮೂಹವು ಆಕೆಯ ಸಮಾಧಿಯ ಸುತ್ತಲೂ ಇದೆ; ಅವರೆಲ್ಲರೂ ಕತ್ತಿಯಿಂದ ಬಿದ್ದು ಹತರಾದವರೇ; ಸುನ್ನತಿಯಿಲ್ಲದವರಾಗಿ ಭೂಮಿಯ ಕೆಳಗಿನ ಭಾಗಗಳಿಗೆ ಇಳಿದುಹೋದವರೇ, ಅವರು ಜೀವಿತರ ದೇಶದಲ್ಲಿ ಭಯಂಕರರಾಗಿದ್ದಾಗ್ಯೂ ಕುಣಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತುಕೊಂಡಿದ್ದಾರೆ.
ಯೆಹೆಜ್ಕೇಲನು 32 : 25 (KNV)
ಅವರು ಅದರ ಎಲ್ಲಾ ಸಮೂಹಕ್ಕೂ ಹತವಾದವರ ಮಧ್ಯದಲ್ಲಿ ಹಾಸಿಗೆ ಹಾಕಿದ್ದಾರೆ; ಅದರ ಸುತ್ತಲೂ ಅವರ ಸಮಾಧಿಗಳಿವೆ; ಅವರೆಲ್ಲರೂ ಕತ್ತಿಯಿಂದ ಹತರಾಗಿ ಸುನ್ನತಿಯಿಲ್ಲದವರಾಗಿದ್ದಾರೆ; ಅವರು ಜೀವಿತರ ದೇಶದಲ್ಲಿ ಭಯಂಕರರಾಗಿದ್ದಾಗ್ಯೂ ಕುಣಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತು ಕೊಂಡು ಹತರಾದವರ ಮಧ್ಯದಲ್ಲಿ ಇಡಲ್ಪಟ್ಟಿದ್ದಾರೆ.
ಯೆಹೆಜ್ಕೇಲನು 32 : 26 (KNV)
ಅಲ್ಲಿ ಮೇಷೆಕೂ ತೂಬಲೂ ಮತ್ತು ಅದರ ಎಲ್ಲಾ ಸಮೂಹವೂ ಅದರ ಸಮಾಧಿಗಳೂ ಅದರ ಸುತ್ತಲಾಗಿ ಇವೆ ಇವರೆಲ್ಲರೂ ಜೀವಿತರ ದೇಶದಲ್ಲಿ ಭಯಂಕರರಾಗಿ ದ್ದಾಗ್ಯೂ ಸುನ್ನತಿಯಿಲ್ಲದೆ ಕತ್ತಿಯಿಂದ ಹತರಾದವರು.
ಯೆಹೆಜ್ಕೇಲನು 32 : 27 (KNV)
ಸುನ್ನತಿಯಿಲ್ಲದವರಲ್ಲಿ ಬಿದ್ದಂತ ತಮ್ಮ ಯುದ್ಧದ ಆಯುಧಗಳ ಸಂಗಡ ಪಾತಾಳಕ್ಕೆ ಇಳಿದಂತ ಶೂರರ ಸಂಗಡ ಇವರು ಮಲಗಬೇಡವೇ? ಅವರು ತಮ್ಮ ಕತ್ತಿಗಳನ್ನು ತಮ್ಮ ತಲೆಗಳ ಕೆಳಗೆ ಇಟ್ಟುಕೊಂಡಿದ್ದಾರೆ; ಅವರು ಜೀವಿತರ ದೇಶದಲ್ಲಿ ಶೂರರಿಗೆ ಭಯಂಕರ ರಾಗಿದ್ದಾಗ್ಯೂ ಅವರ ಅಕ್ರಮಗಳು ಅವರ ಎಲುಬು ಗಳ ಮೇಲೆ ಇರುವವು.
ಯೆಹೆಜ್ಕೇಲನು 32 : 28 (KNV)
ಹೌದು, ನೀನು ಸುನ್ನತಿಯಿಲ್ಲದವರ ಮಧ್ಯದಲ್ಲಿ ಮುರಿಯಲ್ಪಡುವಿ; ಕತ್ತಿಯಿಂದ ಹತರಾದವರ ಸಂಗಡ ಮಲಗುವಿ.
ಯೆಹೆಜ್ಕೇಲನು 32 : 29 (KNV)
ಅಲ್ಲಿ ಎದೋಮೂ ಅದರ ಅರಸರೂ ಮತ್ತು ಎಲ್ಲಾ ಪ್ರಧಾನರೂ ಶೂರರಾಗಿದ್ದಾಗ್ಯೂ ಕತ್ತಿಯಿಂದ ಹತವಾ ದವರ ಸಂಗಡ ಹೂಣಲ್ಪಟ್ಟಿದ್ದಾರೆ; ಅವರು ಸುನ್ನತಿಯಿಲ್ಲದವರ ಸಂಗಡವೂ ಕುಣಿಗೆ ಇಳಿಯುವವರ ಸಂಗಡವೂ ಹತರಾದವರು.
ಯೆಹೆಜ್ಕೇಲನು 32 : 30 (KNV)
ಅಲ್ಲಿ ಉತ್ತರದ ಪ್ರಧಾ ನರೂ ಚೀದೋನಿನವರೆಲ್ಲರೂ ಹತರಾದವರ ಸಂಗಡ ಇಳಿದಿದ್ದಾರೆ; ಅವರು ಭಯಂಕರತ್ವದಿಂದ ತಮ್ಮ ಪರಾ ಕ್ರಮಕ್ಕೆ ನಾಚಿಕೆಪಟ್ಟಿದ್ದಾರೆ; ಹತರಾದವರ ಸಂಗಡ ಇಳಿದಿದ್ದಾರೆ; ಸುನ್ನತಿಯಿಲ್ಲದವರಾಗಿದ್ದು ಕತ್ತಿಯಿಂದ ಹತರಾಗಿ ಕುಣಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತವರಾಗಿದ್ದಾರೆ.
ಯೆಹೆಜ್ಕೇಲನು 32 : 31 (KNV)
ಫರೋಹನು ತನ್ನ ಯಾವ ಸಮೂಹವನ್ನು ನೋಡಿ ಆದರಣೆ ಹೊಂದುವನೋ ಹೌದು, ಅವನೂ ಅವನ ಎಲ್ಲಾ ಸೈನ್ಯವು ಹತರಾದವರು ಎಂದು ದೇವರಾದ ಕರ್ತನು ಹೇಳುತ್ತಾನೆ.
ಯೆಹೆಜ್ಕೇಲನು 32 : 32 (KNV)
ನಾನು ನನ್ನ ಭಯವನ್ನು ಜೀವಿತರ ದೇಶದಲ್ಲಿ ಉಂಟು ಮಾಡಿದ್ದೇನೆ. ಆ ಫರೋಹನೂ ಅವನ ಎಲ್ಲಾ ಸಮೂಹದ ಸಹಿತವಾಗಿ ಕತ್ತಿಯಿಂದ ಹತರಾದವರ ಸಂಗಡ, ಸುನ್ನತಿಯಿಲ್ಲದವರ ಮಧ್ಯದಲ್ಲಿ ಮಲಗಿಸಲ್ಪಡುವನೆಂದು ದೇವರಾದ ಕರ್ತನು ಹೇಳುತ್ತಾನೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32

BG:

Opacity:

Color:


Size:


Font: