ಯೆಹೆಜ್ಕೇಲನು 22 : 1 (KNV)
ಇದಲ್ಲದೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
ಯೆಹೆಜ್ಕೇಲನು 22 : 2 (KNV)
ಈಗ ಮನುಷ್ಯ ಪುತ್ರನೇ, ನೀನು ನ್ಯಾಯತೀರಿಸುವೆಯಾ? ರಕ್ತಾಪರಾಧ ವುಳ್ಳ ಪಟ್ಟಣಕ್ಕೆ ನ್ಯಾಯತೀರಿಸುವೆಯಾ ಹೌದು ಅದರ ಅಸಹ್ಯವಾದವುಗಳನ್ನೆಲ್ಲಾ ಅದಕ್ಕೆ ತಿಳಿಸುವಿ.
ಯೆಹೆಜ್ಕೇಲನು 22 : 3 (KNV)
ನೀನು ಹೇಳಬೇಕಾದದ್ದೇನಂದರೆ, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಪಟ್ಟಣವು ಅದರ ಮಧ್ಯದಲ್ಲಿ ಅದರ ಕಾಲ ಬರುವ ಹಾಗೆ ರಕ್ತವನ್ನು ಚೆಲ್ಲುತ್ತದೆ. ತನ್ನನ್ನು ಅಶುದ್ಧ ಮಾಡುವ ಹಾಗೆ ತನ್ನಲ್ಲಿ ವಿಗ್ರಹಗಳನ್ನು ಮಾಡಿಕೊಂಡಿದೆ.
ಯೆಹೆಜ್ಕೇಲನು 22 : 4 (KNV)
ನೀನು ಚೆಲ್ಲಿದ ನಿನ್ನ ರಕ್ತದಿಂದ ನಿನಗೆ ಅಪರಾಧ ಬಂದಿತು; ನೀನು ಮಾಡಿದ ನಿನ್ನ ವಿಗ್ರಹಗಳಿಂದ ನೀನು ಅಶುದ್ಧವಾದೆ; ನಿನ್ನ ದಿನಗಳನ್ನು ಸವಿಾಪಿಸಿರುವೆ; ನಿನ್ನ ವರುಷಗಳನ್ನು ಮುಟ್ಟಿರುವೆ. ಆದದರಿಂದ ನಿನ್ನನ್ನು ಅನ್ಯಜನಾಂಗಗಳಿಗೆ ನಾಚಿಕೆ ಯಾಗಿಯೂ ಎಲ್ಲಾ ದೇಶಗಳಿಗೆ ನಿಂದೆಯಾಗಿಯೂ ಮಾಡಿದ್ದೇನೆ.
ಯೆಹೆಜ್ಕೇಲನು 22 : 5 (KNV)
ಅಶುದ್ಧ ಹೆಸರುಳ್ಳವಳೇ, ಬಹಳ ತೊಂದರೆಗೊಳಗಾದವಳೇ, ನಿನಗೆ ಹತ್ತಿರದವರೂ ದೂರದವರೂ ನಿಂದಿಸುವರು.
ಯೆಹೆಜ್ಕೇಲನು 22 : 6 (KNV)
ಇಗೋ ಇಸ್ರಾ ಯೇಲಿನ ಪ್ರಭುಗಳಲ್ಲಿ ಪ್ರತಿಯೊಬ್ಬನು ತನ್ನ ತನ್ನ ಶಕ್ತ್ಯಾನುಸಾರವಾಗಿ ರಕ್ತವನ್ನು ನಿನ್ನ ಮೇಲೆ ಚೆಲ್ಲುತ್ತಲೇ ಇದ್ದಾನೆ.
ಯೆಹೆಜ್ಕೇಲನು 22 : 7 (KNV)
ನಿನ್ನಲ್ಲಿ ತಂದೆಯನ್ನೂ ತಾಯಿಯನ್ನೂ ಅಲಕ್ಷ್ಯ ಮಾಡಿದ್ದಾರೆ; ನಿನ್ನಲ್ಲಿ ಅಪರಿಚಿತರಿಗೆ ಬಲಾತ್ಕಾರ ಮಾಡಿದ್ದಾರೆ; ನಿನ್ನಲ್ಲಿ ದಿಕ್ಕಿಲ್ಲದವನನ್ನೂ ವಿಧವೆಯನ್ನೂ ಪೀಡಿಸಿದ್ದಾರೆ.
ಯೆಹೆಜ್ಕೇಲನು 22 : 8 (KNV)
ನೀನು ನನ್ನ ಪರಿಶುದ್ಧ ಸಂಗತಿಗಳನು ತಿರಸ್ಕರಿಸಿ ನನ್ನ ಸಬ್ಬತ್ತುಗಳನ್ನು ಅಪವಿತ್ರಪಡಿಸಿದ್ದೀ.
ಯೆಹೆಜ್ಕೇಲನು 22 : 9 (KNV)
ನಿನ್ನಲ್ಲಿ ರಕ್ತಚೆಲ್ಲುವ ಹಾಗೆ ಚಾಡಿ ಹೇಳುವ ಜನ ಇದ್ದಾರೆ; ಬೆಟ್ಟಗಳ ಮೇಲೆ ತಿನ್ನುವವರಿದ್ದಾರೆ; ದುರಾ ಚಾರಿಗಳು ನಿನ್ನ ಮಧ್ಯದಲ್ಲಿದ್ದಾರೆ.
ಯೆಹೆಜ್ಕೇಲನು 22 : 10 (KNV)
ನಿನ್ನಲ್ಲಿ ತಂದೆಯ ಬೆತ್ತಲೆತನವನ್ನು ಹೊರಗೆಡವಿದ್ದಾರೆ; ನಿನ್ನಲ್ಲಿ ಮುಟ್ಟಾಗಿ ಪ್ರತ್ಯೇಕವಾಗಿರುವವರನ್ನು ಕೂಡಿದ್ದಾರೆ;
ಯೆಹೆಜ್ಕೇಲನು 22 : 11 (KNV)
ಒಬ್ಬನು ತನ್ನ ನೆರೆಯವನ ಹೆಂಡತಿಯ ಸಂಗಡ ದುರಾಚಾರವನ್ನು ಮಾಡಿದ್ದಾನೆ; ಮತ್ತೊಬ್ಬನು ಅಕೃತ್ಯದಿಂದ ಸೊಸೆಯನ್ನು ಕೆಡಿಸಿದ್ದಾನೆ; ಇನ್ನೊಬ್ಬನು ತನ್ನ ತಂದೆಯ ಮಗಳಾದ ತನ್ನ ಸಹೋದರಿಯನ್ನೇ ಭಂಗಪಡಿಸಿದ್ದಾನೆ.
ಯೆಹೆಜ್ಕೇಲನು 22 : 12 (KNV)
ನಿನ್ನಲ್ಲಿ ರಕ್ತ ಚೆಲ್ಲುವ ಹಾಗೆ ಲಂಚತಿಂದಿದ್ದಾರೆ; ಬಡ್ಡಿಯನ್ನೂ ಲಾಭವನ್ನೂ ತೆಗೆದುಕೊಂಡಿದ್ದಾರೆ; ಬಲಾತ್ಕಾರದಿಂದ ನಿನ್ನ ನೆರೆಯವರಲ್ಲಿ ದುರ್ಲಾಭಮಾಡಿಕೊಂಡಿದ್ದಾರೆ; ನನ್ನನ್ನು ಮರೆತುಬಿಟ್ಟಿ ದ್ದಾರೆಂದು ದೇವರಾದ ಕರ್ತನು ಹೇಳುತ್ತಾನೆ.
ಯೆಹೆಜ್ಕೇಲನು 22 : 13 (KNV)
ಆದದರಿಂದ ಇಗೋ, ನೀನು ಮಾಡಿದ ಈ ದುರ್ಲಾಭದಿಂದಲೂ ನಿನ್ನಲ್ಲಿರುವ ನಿನ್ನ ರಕ್ತಾಪ ರಾಧದಿಂದಲೂ ನಾನು ನನ್ನ ಕೈ ಬಡಿದುಕೊಂಡಿದ್ದೇನೆ.
ಯೆಹೆಜ್ಕೇಲನು 22 : 14 (KNV)
ನಾನು ನಿನ್ನೊಳಗೆ ಕೆಲಸ ನಡೆಸುವ ದಿವಸಗಳಲ್ಲಿ ನಿನ್ನ ಹೃದಯವು ನಿಲ್ಲುವದೋ? ನಿನ್ನ ಕೈಗಳು ಬಲವಾಗಿರುವವೋ? ಕರ್ತನಾದ ನಾನೇ ಹೇಳಿದ್ದೇನೆ, ನಾನೇ ಅದನ್ನು ಮಾಡುತ್ತೇನೆ.
ಯೆಹೆಜ್ಕೇಲನು 22 : 15 (KNV)
ನಿನ್ನನ್ನು ಅನ್ಯ ಜನಾಂಗಗಳಲ್ಲಿ ಚದರಿಸಿ, ದೇಶಗಳಲ್ಲಿ ಹರಡಿಸುವೆನು; ನಿನ್ನ ಅಶುದ್ಧತ್ವವನ್ನು ನಿನ್ನಿಂದ ತೆಗೆದು ನಾಶಮಾಡುವೆನು.
ಯೆಹೆಜ್ಕೇಲನು 22 : 16 (KNV)
ಆಗ ನೀನು ಅನ್ಯಜನಾಂಗಗಳ ಮುಂದೆ ನೀನು ನಿನ್ನ ಬಾಧ್ಯತೆಯನ್ನು ತಕ್ಕೊಳ್ಳುವಿ; ನಾನೇ ಕರ್ತನೆಂದು ನೀನು ತಿಳಿದುಕೊಳ್ಳುವಿ.
ಯೆಹೆಜ್ಕೇಲನು 22 : 17 (KNV)
ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇ ನಂದರೆ --
ಯೆಹೆಜ್ಕೇಲನು 22 : 18 (KNV)
ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರು ನನಗೆ (ಮಂಡೂರ) ಕಿಟ್ಟದ ಹಾಗಾದರು ಅವರೆಲ್ಲರೂ ಬಲೆಯ ಮಧ್ಯದಲ್ಲಿರುವ ಹಿತ್ತಾಳೆ, ತವರ, ಕಬ್ಬಿಣದ, ಹಾಗೆ ಇದ್ದಾರೆ. ಸೀಸದ ಮತ್ತು ಬೆಳ್ಳಿಯ ಕಿಟ್ಟಗಳ ಹಾಗೆಯೂ ಇದ್ದಾರೆ.
ಯೆಹೆಜ್ಕೇಲನು 22 : 19 (KNV)
ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ನೀವೆಲ್ಲರೂ ಕಿಟ್ಟವಾಗಿರುವದರಿಂದ ಇಗೋ, ನಾನು ನಿಮ್ಮನ್ನು ಯೆರೂಸಲೇಮಿನ ಮಧ್ಯಕ್ಕೆ ಕೂಡಿಸುತ್ತೇನೆ.
ಯೆಹೆಜ್ಕೇಲನು 22 : 20 (KNV)
ಅವರು ಬೆಳ್ಳಿ, ಹಿತ್ತಾಳೆ, ಕಬ್ಬಿಣ, ಸೀಸ ಮತ್ತು ತಗಡುಗಳನ್ನು ಹೇಗೆ ಒಲೆಯೊಳಗೆ ಕೂಡಿಸಿ ಅದಕ್ಕೆ ಬೆಂಕಿಯನ್ನೂದಿ ಕರಗಿಸುವರೋ ಹಾಗೆಯೇ ನಾನು ನಿಮ್ಮನ್ನು ನನ್ನ ಕೋಪದಲ್ಲಿಯೂ ನನ್ನ ರೋಷದಲ್ಲಿಯೂ ಕರಗಿಸಿಬಿಡುವೆನು.
ಯೆಹೆಜ್ಕೇಲನು 22 : 21 (KNV)
ಹೌದು, ನನ್ನ ರೋಷದ ಬೆಂಕಿಯಿಂದ ನಾನು ನಿಮ್ಮ ಮೇಲೆ ಊದುವೆನು. ನೀವು ಅದರೊಳಗೆ ಕರಗಿ ಹೋಗುವಿರಿ.
ಯೆಹೆಜ್ಕೇಲನು 22 : 22 (KNV)
ಬೆಳ್ಳಿಯು ಕುಲುಮೆಯಲ್ಲಿ ಕರಗುವ ಹಾಗೆ ನೀವು ನನ್ನ ರೋಷಾಗ್ನಿಯಲ್ಲಿ ಕರಗು ವಿರಿ; ನಿನ್ನ ಮೇಲೆ ರೋಷಾಗ್ನಿಯನ್ನು ಸುರಿಸಿದಾತನು ಕರ್ತನಾದ ನಾನೇ ಎಂದು ನಿಮಗೆ ತಿಳಿಯುತ್ತದೆ.
ಯೆಹೆಜ್ಕೇಲನು 22 : 23 (KNV)
ಇದಲ್ಲದೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ --
ಯೆಹೆಜ್ಕೇಲನು 22 : 24 (KNV)
ಮನುಷ್ಯಪುತ್ರನೇ, ಅದಕ್ಕೆ ಹೀಗೆ ಹೇಳು ಅಶುದ್ಧರಾಗದಂಥ ರೌದ್ರದ ದಿವಸ ಗಳಲ್ಲಿ ಮಳೆ ಸುರಿಯುವಂತಹ ದೇಶವು ನೀನೇ,
ಯೆಹೆಜ್ಕೇಲನು 22 : 25 (KNV)
ಕೊಳ್ಳೆಯನ್ನು ಸುಲಿದುಕೊಳ್ಳುವ ಘರ್ಜಿಸುವ ಸಿಂಹದ ಹಾಗೆ ಅದರ ಮಧ್ಯದಲ್ಲಿ ಪ್ರವಾದಿಗಳ ಒಳಸಂಚು ಉಂಟು; ಪ್ರಾಣಗಳನ್ನು ತಿಂದುಬಿಟ್ಟಿದ್ದಾರೆ. ಸಂಪತ್ತನ್ನೂ ಅಮೂಲ್ಯವಾದ ವಸ್ತುವನ್ನೂ ದೋಚಿ ಕೊಂಡಿದ್ದಾರೆ, ಅವರು ಅದರ ಮಧ್ಯದಲ್ಲಿ ಬಹಳ ಜನರನ್ನು ವಿಧವೆಯರನ್ನಾಗಿ ಮಾಡಿದ್ದಾರೆ.
ಯೆಹೆಜ್ಕೇಲನು 22 : 26 (KNV)
ಅದರ ಯಾಜಕರು ನನ್ನ ವಿಧಿಗಳನ್ನು ಭಂಗಪಡಿಸಿದ್ದಾರೆ; ನನ್ನ ಪರಿಶುದ್ಧ ವಸ್ತುಗಳನ್ನು ಅಪವಿತ್ರಪಡಿಸಿದ್ದಾರೆ; ಪರಿಶುದ್ಧ ವಾದದ್ದಕ್ಕೂ ಅಪವಿತ್ರವಾದದ್ದಕ್ಕೂ ಭೇದವೆಣಿಸಲಿಲ್ಲ; ಶುದ್ಧಾಶುದ್ಧ ವಿವೇಚನೆಯನ್ನು ಬೋಧಿಸಲಿಲ್ಲ, ನನ್ನ ಸಬ್ಬತ್ತುಗಳಿಗೆ ತಮ್ಮ ಕಣ್ಣುಗಳನ್ನು ಮರೆಮಾಡಿದ್ದಾರೆ. ಆದದರಿಂದ ನಾನು ಅವರಲ್ಲಿ ಅಪವಿತ್ರನಾದೆನು.
ಯೆಹೆಜ್ಕೇಲನು 22 : 27 (KNV)
ಅಲ್ಲಿನ ಪ್ರಧಾನರು ಸುಲಿಗೆಗಾಗಿ ರಕ್ತ ಸುರಿಸಿ ಪ್ರಾಣ ಗಳನ್ನು ನುಂಗುವ ಹಾಗೆ ಬೇಟೆಯ ತೋಳಗಳಂತಿ ದ್ದಾರೆ.
ಯೆಹೆಜ್ಕೇಲನು 22 : 28 (KNV)
ಅವರ ಪ್ರವಾದಿಗಳು ಅವರಿಗೆ ಸುಣ್ಣ ಹಚ್ಚುತ್ತಾರೆ, ಮೋಸವನ್ನು ದರ್ಶಿಸಿ ಸುಳ್ಳು ಶಕುನ ಹೇಳುತ್ತಾರೆ; ಕರ್ತನು ಮಾತನಾಡದಿರುವದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳು ತ್ತಾರೆ.
ಯೆಹೆಜ್ಕೇಲನು 22 : 29 (KNV)
ದೇಶದ ಜನರು ಬಲಾತ್ಕಾರ ಮಾಡಿದ್ದಾರೆ, ಕೊಳ್ಳೆಯನ್ನು ಹೊಡೆದಿದ್ದಾರೆ. ಬಡವನನ್ನೂ ದರಿದ್ರ ರನ್ನೂ ಪೀಡಿಸಿದ್ದಾರೆ; ಹೌದು, ಅವರು ನ್ಯಾಯವಿಲ್ಲದೆ ಒಬ್ಬ ಅಪರಿಚಿತನನ್ನು ಬಲಾತ್ಕಾರಪಡಿಸಿದ್ದಾರೆ.
ಯೆಹೆಜ್ಕೇಲನು 22 : 30 (KNV)
ಬೇಲಿ ಕಟ್ಟುವ ಮನುಷ್ಯನನ್ನು ದೇಶಕ್ಕೋಸ್ಕರ ನಾನು ಅದನು ನಾಶಮಾಡದ ಹಾಗೆ ಪೌಳಿಯ ಒಡಕಿನಲ್ಲಿ ನಿಲ್ಲತಕ್ಕ ವನನ್ನು ಹುಡುಕಿದೆನು, ಆದರೆ ಸಿಕ್ಕಲಿಲ್ಲ.
ಯೆಹೆಜ್ಕೇಲನು 22 : 31 (KNV)
ಆದದ ರಿಂದ ನನ್ನ ರೋಷವನ್ನು ಅವರ ಮೇಲೆ ಸುರಿಸಿದ್ದೇನೆ; ನನ್ನ ಸಿಟ್ಟಿನ ಬೆಂಕಿಯಿಂದ ಅವರನ್ನು ಸಂಹರಿಸಿದ್ದೇನೆ; ಅವರ ಮಾರ್ಗವನ್ನು ಅವರ ತಲೆಗಳ ಮೇಲೆ ಮುಯ್ಯಿ ತೀರಿಸಿದ್ದೇನೆಂದು ದೇವರಾದ ಕರ್ತನು ಹೇಳುತ್ತಾನೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31