ವಿಮೋಚನಕಾಂಡ 7 : 1 (KNV)
ಆಗ ಕರ್ತನು ಮೋಶೆಗೆ--ಇಗೋ, ನಿನ್ನನ್ನು ಫರೋಹನಿಗೆ ದೇವರಂತೆ ಮಾಡಿದ್ದೇನೆ; ನಿನ್ನ ಸಹೋದರನಾದ ಆರೋನನ್ನು ನಿನ್ನಗೋಸ್ಕರ ಪ್ರವಾದಿಯನ್ನಾಗಿ ಮಾಡಿದ್ದೇನೆ.
ವಿಮೋಚನಕಾಂಡ 7 : 2 (KNV)
ನಾನು ನಿನಗೆ ಆಜ್ಞಾಪಿಸುವದನ್ನೆಲ್ಲಾ ನೀನು ಮಾತನಾಡಬೇಕು; ಇಸ್ರಾಯೇಲ್‌ ಮಕ್ಕಳನ್ನು ತನ್ನ ದೇಶದೊಳಗಿಂದ ಕಳುಹಿಸಿ ಬಿಡುವ ಹಾಗೆ ನಿನ್ನ ಸಹೋದರನಾದ ಆರೋನನು ಫರೋಹನ ಸಂಗಡ ಮಾತನಾಡಬೇಕು.
ವಿಮೋಚನಕಾಂಡ 7 : 3 (KNV)
ಆದರೆ ನಾನು ಫರೋಹನ ಹೃದಯವನ್ನು ಕಠಿಣಪಡಿಸಿ ನನ್ನ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಐಗುಪ್ತದೇಶದಲ್ಲಿ ಹೆಚ್ಚಿಸುವೆನು.
ವಿಮೋಚನಕಾಂಡ 7 : 4 (KNV)
ಆದರೆ ಫರೋಹನು ನಿಮ್ಮ ಮಾತನ್ನು ಕೇಳುವದಿಲ್ಲ; ಆದಾಗ್ಯೂ ನನ್ನ ಕೈಯನ್ನು ಐಗುಪ್ತದ ಮೇಲೆ ಇಟ್ಟು ದೊಡ್ಡ ನ್ಯಾಯತೀರ್ಪು ಗಳಿಂದ ನನ್ನ ಜನರಾದ ಇಸ್ರಾಯೇಲ್‌ ಸೈನ್ಯವನ್ನೆಲ್ಲಾ ಐಗುಪ್ತದೇಶದೊಳಗಿಂದ ಹೊರಗೆ ಬರಮಾಡುವೆನು.
ವಿಮೋಚನಕಾಂಡ 7 : 5 (KNV)
ನಾನು ಐಗುಪ್ತದ ಮೇಲೆ ನನ್ನ ಕೈಯನ್ನಿಟ್ಟು ಅವರೊಳ ಗಿಂದ ಇಸ್ರಾಯೇಲ್‌ ಮಕ್ಕಳನ್ನು ಹೊರಗೆ ಬರಮಾಡಿ ದಾಗ ನಾನೇ ಕರ್ತನೆಂದು ಐಗುಪ್ತ್ಯರಿಗೆ ತಿಳಿದು ಬರುವದು ಎಂದು ಹೇಳಿದನು.
ವಿಮೋಚನಕಾಂಡ 7 : 6 (KNV)
ಕರ್ತನು ತಮಗೆ ಆಜ್ಞಾಪಿಸಿದ ಪ್ರಕಾರವೆ ಮೋಶೆ ಆರೋನರು ಮಾಡಿದರು, ಅಂತಯೇ ಅವರು ಮಾಡಿ ದರು.
ವಿಮೋಚನಕಾಂಡ 7 : 7 (KNV)
ಅವರು ಫರೋಹನ ಮುಂದೆ ಮಾತನಾಡು ವಾಗ ಮೋಶೆಯು ಎಂಭತ್ತು ವರುಷದವನಾಗಿದ್ದನು, ಆರೋನನು ಎಂಭತ್ತುಮೂರು ವರುಷದವನಾಗಿದ್ದನು.
ವಿಮೋಚನಕಾಂಡ 7 : 8 (KNV)
ಆಗ ಕರ್ತನು ಮೋಶೆ ಆರೋನರ ಸಂಗಡ ಮಾತನಾಡಿ--
ವಿಮೋಚನಕಾಂಡ 7 : 9 (KNV)
ಫರೋಹನು ನಿಮಗೆ--ನೀವು ಒಂದು ಅದ್ಭುತಕಾರ್ಯವನ್ನು ತೋರಿಸಿರೆಂದು ಹೇಳುವಾಗ ಮೋಶೆ ಆರೋನನಿಗೆ--ನಿನ್ನ ಕೋಲನ್ನು ತಕ್ಕೊಂಡು ಫರೋಹನ ಮುಂದೆ ಬಿಸಾಡು ಎಂದು ಹೇಳಬೇಕು; ಆಗ ಅದು ಸರ್ಪವಾಗುವದು ಎಂದು ಹೇಳಿದನು.
ವಿಮೋಚನಕಾಂಡ 7 : 10 (KNV)
ಮೋಶೆ ಆರೋನರೂ ಫರೋಹನ ಬಳಿಗೆ ಹೋಗಿ ಕರ್ತನು ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಆರೋನನು ತನ್ನ ಕೋಲನ್ನು ಫರೋಹನ ಮುಂದೆಯೂ ಅವನ ಸೇವಕರ ಮುಂದೆಯೂ ಬಿಸಾಡಿ ದಾಗ ಅದು ಸರ್ಪವಾಯಿತು.
ವಿಮೋಚನಕಾಂಡ 7 : 11 (KNV)
ಫರೋಹನು ಸಹ ಜ್ಞಾನಿಗಳನ್ನೂ ಮಂತ್ರವಾದಿಗಳನ್ನೂ ಕರಿಸಿದಾಗ ಐಗುಪ್ತದ ಮಂತ್ರಗಾರರು ಸಹ ತಮ್ಮ ಮಂತ್ರಗಳಿಂದ ಹಾಗೆಯೇ ಮಾಡಿದರು.
ವಿಮೋಚನಕಾಂಡ 7 : 12 (KNV)
ಅವರು ತಮ್ಮತಮ್ಮ ಕೋಲುಗಳನ್ನು ಬಿಸಾಡಿದಾಗ ಅವು ಸರ್ಪಗಳಾದವು. ಆದರೆ ಆರೋನನ ಕೋಲು ಅವರ ಕೋಲುಗಳನ್ನು ನುಂಗಿಬಿಟ್ಟಿತು.
ವಿಮೋಚನಕಾಂಡ 7 : 13 (KNV)
ಕರ್ತನು ಹೇಳಿದಂತೆಯೇ ಫರೋಹನ ಹೃದಯವು ಆಗ ಕಠಿಣವಾಯಿತು; ಅವನು ಅವರ ಮಾತನ್ನು ಕೇಳಲಿಲ್ಲ.
ವಿಮೋಚನಕಾಂಡ 7 : 14 (KNV)
ಆಗ ಕರ್ತನು ಮೋಶೆಗೆ--ಫರೋಹನ ಹೃದಯವು ಕಠಿಣವಾಯಿತು. ಅವನು ಜನರನ್ನು ಕಳುಹಿಸಿಬಿಡುವದಕ್ಕೆ ನಿರಾಕರಿಸಿದನು.
ವಿಮೋಚನಕಾಂಡ 7 : 15 (KNV)
ಬೆಳಿಗ್ಗೆ ಫರೋಹನ ಬಳಿಗೆ ಹೋಗು; ಇಗೋ, ಅವನು ಹೊರಗೆ ನೀರಿನ ಬಳಿಗೆ ಹೋಗುವನು. ನದೀತೀರದಲ್ಲಿ ಅವನೆದುರಿಗೆ ನಿಂತುಕೊಂಡು ಸರ್ಪವಾಗಿ ಮಾಡಲ್ಪಟ್ಟ ಕೋಲನ್ನು ನಿನ್ನ ಕೈಯಲ್ಲಿ ಹಿಡುಕೊಂಡು
ವಿಮೋಚನಕಾಂಡ 7 : 16 (KNV)
ಅವನಿಗೆ ನೀನು--ಇಬ್ರಿಯರ ದೇವರಾದ ಕರ್ತನು ನನ್ನನ್ನು ನಿನ್ನ ಬಳಿಗೆ ಕಳುಹಿಸಿ ಅರಣ್ಯದಲ್ಲಿ ನನ್ನನ್ನು ಸೇವಿಸುವ ಹಾಗೆ ನನ್ನ ಜನರನ್ನು ಕಳುಹಿಸು ಎಂದು ಹೇಳಿದ್ದಾನೆ. ಆದರೆ ಇಗೋ, ಇಂದಿನ ವರೆಗೂ ನೀನು ಕೇಳಲಿಲ್ಲ.
ವಿಮೋಚನಕಾಂಡ 7 : 17 (KNV)
ಕರ್ತನು ಹೀಗೆ ಹೇಳುತ್ತಾನೆ--ನಾನೇ ಕರ್ತನೆಂದು ಇದರಿಂದ ತಿಳುಕೊಳ್ಳುವಿ. ಇಗೋ, ನನ್ನ ಸೇವಕನ ಕೈಯಲ್ಲಿರುವ ಕೋಲಿನಿಂದ ನದಿಯ ನೀರನ್ನು ಹೊಡೆ ಯುವೆನು, ಆಗ ಅದು ರಕ್ತವಾಗುವದು.
ವಿಮೋಚನಕಾಂಡ 7 : 18 (KNV)
ನದಿಯ ಲ್ಲಿರುವ ವಿಾನುಗಳು ಸಾಯುವವು; ನದಿಯು ನಾರು ವದು. ಐಗುಪ್ತ್ಯರು ನದಿಯ ನೀರನ್ನು ಕುಡಿಯುವದಕ್ಕೆ ಅಸಹ್ಯಪಡುವರು ಎಂದು ಹೇಳು ಅಂದನು.
ವಿಮೋಚನಕಾಂಡ 7 : 19 (KNV)
ಕರ್ತನು ಮೋಶೆಗೆ--ನೀನು ಆರೋನನಿಗೆ--ನಿನ್ನ ಕೋಲನ್ನು ತಕ್ಕೊಂಡು ಐಗುಪ್ತದಲ್ಲಿರುವ ನೀರುಗಳ ಮೇಲೆಯೂ ನದಿ ಪ್ರವಾಹ ಕೆರೆ ಕೊಳ ಕುಂಟೆಗಳ ಮೇಲೆಯೂ ಕೈಚಾಚು ಎಂದು ಹೇಳು. ಆಗ ಅವು ರಕ್ತವಾಗುವವು; ಐಗುಪ್ತದೇಶದಲ್ಲೆಲ್ಲಾ ಮರದ ಪಾತ್ರೆ ಗಳಲ್ಲಾಗಲಿ ಕಲ್ಲಿನ ಪಾತ್ರೆಗಳಲ್ಲಾಗಲಿ ರಕ್ತವಿರುವದು ಎಂದು ಹೇಳಿದನು.
ವಿಮೋಚನಕಾಂಡ 7 : 20 (KNV)
ಮೋಶೆ ಆರೋನರು ಕರ್ತನು ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಅವನು ಕೋಲನ್ನು ಎತ್ತಿ ನದಿಯಲ್ಲಿರುವ ನೀರನ್ನು ಫರೋಹನ ಕಣ್ಣುಗಳ ಮುಂದೆಯೂ ಅವನ ಸೇವಕರ ಕಣ್ಣುಗಳ ಮುಂದೆಯೂ ಹೊಡೆದನು. ಆಗ ನದಿಯ ನೀರೆಲ್ಲಾ ರಕ್ತವಾಯಿತು.
ವಿಮೋಚನಕಾಂಡ 7 : 21 (KNV)
ನದಿಯಲ್ಲಿದ್ದ ವಿಾನುಗಳು ಸತ್ತವು; ನದಿಯು ದುರ್ವಾಸನೆಗೊಂಡಿತು. ಐಗುಪ್ತ್ಯರು ನದಿಯ ನೀರನ್ನು ಕುಡಿಯಲಾರದೆ ಹೋದರು. ಆಗ ಐಗುಪ್ತದೇಶದಲ್ಲೆಲ್ಲಾ ರಕ್ತವೇ ಆಗಿತ್ತು.
ವಿಮೋಚನಕಾಂಡ 7 : 22 (KNV)
ಐಗುಪ್ತದ ಮಂತ್ರಗಾರರು ತಮ್ಮ ಮಂತ್ರಗಳಿಂದ ಹಾಗೆಯೇ ಮಾಡಿದ್ದರಿಂದ ಫರೋಹನ ಹೃದಯವು ಕಠಿಣವಾಯಿತು. ಕರ್ತನು ಹೇಳಿದಂತೆಯೇ ಅವನು ಅವರ ಮಾತನ್ನು ಕೇಳಲಿಲ್ಲ.
ವಿಮೋಚನಕಾಂಡ 7 : 23 (KNV)
ಫರೋಹನು ತಿರುಗಿ ಕೊಂಡು ತನ್ನ ಮನೆಗೆ ಹೋದನು. ಅವನು ಇದಕ್ಕಾ ದರೂ ತನ್ನ ಮನಸ್ಸುಕೊಡಲಿಲ್ಲ.
ವಿಮೋಚನಕಾಂಡ 7 : 24 (KNV)
ಆದರೆ ಐಗುಪ್ತ್ಯ ರೆಲ್ಲರೂ ನದಿಯ ನೀರನ್ನು ಕುಡಿಯಲಾರದೆ ಇದ್ದದರಿಂದ ಕುಡಿಯುವ ನೀರಿಗಾಗಿ ನದಿಯ ಸುತ್ತಲೂ ಅಗೆದರು.ಕರ್ತನು ನದಿಯನ್ನು ಹೊಡೆದಮೇಲೆ ಏಳು ದಿನಗಳು ಪೂರ್ತಿಯಾದವು.
ವಿಮೋಚನಕಾಂಡ 7 : 25 (KNV)
ಕರ್ತನು ನದಿಯನ್ನು ಹೊಡೆದಮೇಲೆ ಏಳು ದಿನಗಳು ಪೂರ್ತಿಯಾದವು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25

BG:

Opacity:

Color:


Size:


Font: