ವಿಮೋಚನಕಾಂಡ 33 : 1 (KNV)
ಕರ್ತನು ಮೋಶೆಗೆ--ನೀನು ಐಗುಪ್ತ ದೇಶದಿಂದ ಬರಮಾಡಿದ ಜನರ ಸಂಗಡ ಈ ಸ್ಥಳವನ್ನು ಬಿಟ್ಟು ನಾನು ಅಬ್ರಹಾಮ್ ಇಸಾಕ್ ಯಾಕೋಬರಿಗೂ--ನಿಮ್ಮ ಸಂತತಿಗೆ ಅದನ್ನು ಕೊಡು ವೆನು ಎಂದು ಹೇಳಿ ಪ್ರಮಾಣಮಾಡಿದ ದೇಶಕ್ಕೆ ಹೋಗು.
ವಿಮೋಚನಕಾಂಡ 33 : 2 (KNV)
ನಾನು ನಿನ್ನ ಮುಂದೆ ದೂತನನ್ನು ಕಳುಹಿಸಿ ಕಾನಾನ್ಯರನ್ನೂ ಅಮೋರಿಯರನ್ನೂ ಹಿತ್ತಿಯರನ್ನೂ ಪೆರಿಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ಹೊರಡಿಸಿ ಬಿಡುವೆನು.
ವಿಮೋಚನಕಾಂಡ 33 : 3 (KNV)
ಹಾಲೂ ಜೇನೂ ಹರಿಯುವ ದೇಶಕ್ಕೆ ಹೋಗು, ನಾನು ನಿಮ್ಮ ಮಧ್ಯದಲ್ಲಿ ಹೋಗು ವದಿಲ್ಲ. ನೀವು ಬಗ್ಗದ ಕುತ್ತಿಗೆಯುಳ್ಳ ಜನವಾಗಿದ್ದೀರಿ; ಮಾರ್ಗದಲ್ಲಿ ನಿಮ್ಮನ್ನು ನಾನು ಸಂಹರಿಸೇನು ಅಂದನು.
ವಿಮೋಚನಕಾಂಡ 33 : 4 (KNV)
ಜನರು ಈ ಕಠಿಣವಾದ ಮಾತುಗಳನ್ನು ಕೇಳಿ ದುಃಖಪಟ್ಟರು. ಯಾರೂ ತಮ್ಮ ಆಭರಣಗಳನ್ನು ಹಾಕಿ ಕೊಳ್ಳಲಿಲ್ಲ.
ವಿಮೋಚನಕಾಂಡ 33 : 5 (KNV)
ಕರ್ತನು ಮೋಶೆಗೆ--ಇಸ್ರಾಯೇಲ್ ಮಕ್ಕಳಿಗೆ ಹೀಗೆ ಹೇಳು--ನೀವು ಬಗ್ಗದ ಕುತ್ತಿಗೆಯುಳ್ಳ ಜನರು, ನಾನು ಕ್ಷಣಮಾತ್ರದಲ್ಲಿ ನಿಮ್ಮೊಳಗೆ ಬಂದು ನಿಮ್ಮನ್ನು ನಿರ್ಮೂಲಮಾಡುವೆನು. ಹೀಗಿರುವದರಿಂದ ನಾನು ನಿಮಗೆ ಏನು ಮಾಡಬೇಕೋ ಅದನ್ನು ತಿಳುಕೊಳ್ಳು ವಂತೆ ನಿಮ್ಮ ಆಭರಣಗಳನ್ನು ಈಗ ನಿಮ್ಮಿಂದ ತೆಗೆದು ಬಿಡಿರಿ ಎಂದು ಹೇಳು ಅಂದನು.
ವಿಮೋಚನಕಾಂಡ 33 : 6 (KNV)
ಅದರಂತೆಯೇ ಇಸ್ರಾಯೇಲ್ ಮಕ್ಕಳು ಹೋರೆಬ್ ಬೆಟ್ಟದ ಬಳಿಯಲ್ಲಿ ತಮ್ಮ ಆಭರಣಗಳನ್ನು ತೆಗೆದುಬಿಟ್ಟರು.
ವಿಮೋಚನಕಾಂಡ 33 : 7 (KNV)
ಇದಲ್ಲದೆ ಮೋಶೆಯು ಗುಡಾರವನ್ನು ತೆಗೆದು ಪಾಳೆಯದ ಹೊರಗೆ ಪಾಳೆಯಕ್ಕೆ ದೂರವಾಗಿ ಹಾಕಿ ಅದಕ್ಕೆ ದೇವದರ್ಶನ ಗುಡಾರ ಎಂದು ಹೆಸರಿಟ್ಟನು. ತರುವಾಯ ಕರ್ತನನ್ನು ಹುಡುಕುವವರೆಲ್ಲಾ ಪಾಳೆಯದ ಹೊರಗೆ ಇರುವ ದೇವದರ್ಶನ ಗುಡಾರಕ್ಕೆ ಹೋದರು.
ವಿಮೋಚನಕಾಂಡ 33 : 8 (KNV)
ಇದಾದ ಮೇಲೆ ಮೋಶೆಯು ಹೊರಗೆ ಗುಡಾರದ ಬಳಿಗೆ ಹೋಗುವಾಗೆಲ್ಲಾ ಜನರೆಲ್ಲರು ಎದ್ದು ತಮ್ಮ ತಮ್ಮ ಗುಡಾರಗಳ ಬಾಗಿಲುಗಳಲ್ಲಿ ನಿಂತುಕೊಂಡು ಮೋಶೆಯು ಗುಡಾರದಲ್ಲಿ ಪ್ರವೇಶಿಸುವ ವರೆಗೆ ಅವನ ಹಿಂದೆ ನೋಡುತ್ತಿದ್ದರು.
ವಿಮೋಚನಕಾಂಡ 33 : 9 (KNV)
ತರುವಾಯ ಮೋಶೆಯು ಗುಡಾರದಲ್ಲಿ ಪ್ರವೇಶಿಸಿದಾಗ ಮೇಘಸ್ತಂಭವು ಇಳಿದು ಬಂದು ಗುಡಾರದ ಬಾಗಿಲಲ್ಲಿ ನಿಲ್ಲುತಿತ್ತು. ಕರ್ತನು ಮೋಶೆಯ ಸಂಗಡ ಮಾತನಾಡುವನು.
ವಿಮೋಚನಕಾಂಡ 33 : 10 (KNV)
ಜನ ರೆಲ್ಲರೂ ಗುಡಾರದ ಬಾಗಿಲಲ್ಲಿ ನಿಂತ ಮೇಘಸ್ತಂಭವನ್ನು ನೋಡಿ ತಮ್ಮ ತಮ್ಮ ಡೇರೆಗಳ ಬಾಗಿಲುಗಳಲ್ಲಿ ಎದ್ದು ನಿಂತು ಆರಾಧಿಸುತ್ತಿದ್ದರು.
ವಿಮೋಚನಕಾಂಡ 33 : 11 (KNV)
ಒಬ್ಬ ಮನುಷ್ಯನು ತನ್ನ ಸ್ನೇಹಿತನ ಸಂಗಡ ಮಾತನಾಡುವಂತೆ ಕರ್ತನು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡು ತ್ತಿದ್ದನು. ತರುವಾಯ ಅವನು ಪಾಳೆಯಕ್ಕೆ ಹಿಂತಿರಿಗಿ ಹೋದನು. ಆದರೆ ಅವನ ಸೇವಕನೂ ನೂನನ ಮಗನೂ ಆದ ಯೆಹೋಶುವ ಎಂಬ ಯೌವನಸ್ಥನು ಗುಡಾರವನ್ನು ಬಿಟ್ಟುಹೋಗಲಿಲ್ಲ.
ವಿಮೋಚನಕಾಂಡ 33 : 12 (KNV)
ಆಗ ಮೋಶೆಯು ಕರ್ತನಿಗೆ--ನೋಡು, ನೀನು ಜನರನ್ನು ಕರೆದುಕೊಂಡು ಹೋಗು ಎಂದು ನನಗೆ ಹೇಳಿದ್ದೀ ಯಾರನ್ನು ನನ್ನ ಸಂಗಡ ಕಳುಹಿಸುವಿ ಎಂದು ನೀನು ನನಗೆ ತಿಳಿಸಲಿಲ್ಲ. ಆದಾಗ್ಯೂ ನೀನು--ನಾನು ನಿನ್ನ ಹೆಸರಿನ ಮೂಲಕ ನಿನ್ನನ್ನು ತಿಳಿದಿದ್ದೇನೆ, ನನ್ನ ದೃಷ್ಟಿಯಲ್ಲಿ ನಿನಗೆ ಕೃಪೆ ದೊರೆ ಯಿತು ಎಂದು ಹೇಳಿದ್ದೀಯಲ್ಲಾ.
ವಿಮೋಚನಕಾಂಡ 33 : 13 (KNV)
ಈಗ ನಿನ್ನ ದೃಷ್ಟಿಯಲ್ಲಿ ನನಗೆ ಕೃಪೆ ದೊರಕ್ಕಿದ್ದಾದರೆ ನಾನು ನಿನ್ನನ್ನು ತಿಳಿಯುವ ಹಾಗೆ ನಿನ್ನ ಮಾರ್ಗವನ್ನು ನನಗೆ ತೋರಿಸು. ಆಗ ನಿನ್ನ ದೃಷ್ಟಿಯಲ್ಲಿ ನನಗೆ ಕೃಪೆ ದೊರಕಿರುವದು. ಈ ಜನಾಂಗವು ನಿನ್ನ ಜನರೆಂದು ತಿಳಿದುಕೋ ಎಂದು ನಾನು ಬೇಡಿಕೊಳ್ಳುತ್ತೇನೆ ಎಂದು ಹೇಳಿದನು.
ವಿಮೋಚನಕಾಂಡ 33 : 14 (KNV)
ಆಗ ಆತನು--ನನ್ನ ಸನ್ನಿಧಾನವು ನಿನ್ನ ಸಂಗಡ ಹೋಗುವದು; ನಾನು ನಿನಗೆ ವಿಶ್ರಾಂತಿಯನ್ನು ಕೊಡುವೆನು ಅಂದನು.
ವಿಮೋಚನಕಾಂಡ 33 : 15 (KNV)
ಮೋಶೆಯು ಆತನಿಗೆ--ನಿನ್ನ ಸನ್ನಿಧಾನವು ನನ್ನೊಂದಿಗೆ ಹೋಗದಿದ್ದರೆ ನಮ್ಮನ್ನು ಇಲ್ಲಿಂದ ಕರ ಕೊಂಡು ಹೋಗಬೇಡ.
ವಿಮೋಚನಕಾಂಡ 33 : 16 (KNV)
ನನಗೂ ನಿನ್ನ ಜನರಿಗೂ ನಿನ್ನ ದೃಷ್ಟಿಯಲ್ಲಿ ಕೃಪೆ ದೊರಕಿತೆಂದು ಯಾವದರಿಂದ ತಿಳಿದು ಬರುವದು? ನೀನು ನಮ್ಮೊಂದಿಗೆ ಹೋಗುವ ದರಿಂದ ಅಲ್ಲವೋ? ಹೀಗೆ ನಾನೂ ನಿನ್ನ ಜನರೂ ಭೂಮಿಯ ಮೇಲಿರುವ ಎಲ್ಲಾ ಜನರಿಂದ ಪ್ರತ್ಯೇಕ ವಾಗುವೆವು ಅಂದನು.
ವಿಮೋಚನಕಾಂಡ 33 : 17 (KNV)
ಅದಕ್ಕೆ ಕರ್ತನು ಮೋಶೆಗೆ--ನೀನು ಆಡಿದ ಈ ಮಾತಿನಂತೆಯೇ ನಾನು ಇದನ್ನು ಮಾಡುತ್ತೇನೆ. ನನ್ನ ದೃಷ್ಟಿಯಲ್ಲಿ ನಿನಗೆ ಕೃಪೆ ದೊರಕಿತು. ನಾನು ನಿನ್ನನ್ನು ಹೆಸರಿನಿಂದ ತಿಳಿದಿದ್ದೇನೆ ಅಂದನು.
ವಿಮೋಚನಕಾಂಡ 33 : 18 (KNV)
ಅವನು--ನಿನ್ನ ಮಹಿಮೆಯನ್ನು ನನಗೆ ತೋರಿಸು ಎಂದು ನಾನು ನಿನ್ನನ್ನು ಬೇಡುತ್ತೇನೆ ಅಂದನು.
ವಿಮೋಚನಕಾಂಡ 33 : 19 (KNV)
ಅದಕ್ಕೆ ಆತನು--ನಾನು ನನ್ನ ಸರ್ವೋತ್ತಮತ್ವವನ್ನು ನಿನ್ನೆದುರಿಗೆ ಹಾದು ಹೋಗಗೊಡಿಸಿ ಕರ್ತನ ಹೆಸರನ್ನು ನಿನ್ನ ಮುಂದೆ ಪ್ರಕಟಮಾಡಿ ನಾನು ಯಾರಿಗೆ ಕೃಪೆಯುಳ್ಳವ ನಾಗಿರಬೇಕೋ ಅವರಿಗೆ ಕೃಪೆಯುಳ್ಳವನಾಗಿರುವೆನು; ನಾನು ಯಾರಿಗೆ ಕರುಣೆಯನ್ನು ತೋರಿಸಬೇಕೋ ಅವರಿಗೆ ಕರುಣೆಯನ್ನು ತೋರಿಸುವೆನು ಅಂದನು.
ವಿಮೋಚನಕಾಂಡ 33 : 20 (KNV)
ಆತನು ಅವನಿಗೆ--ನೀನು ನನ್ನ ಮುಖವನ್ನು ನೋಡ ಲಾರಿ; ಯಾವ ಮನುಷ್ಯನೂ ನನ್ನನ್ನು ನೋಡಿ ಬದುಕುವದಿಲ್ಲ ಅಂದನು.
ವಿಮೋಚನಕಾಂಡ 33 : 21 (KNV)
ಇದಲ್ಲದೆ ಕರ್ತನುಇಗೋ, ನನ್ನ ಬಳಿಯಲ್ಲಿ ಒಂದು ಸ್ಥಳವಿದೆ; ನೀನು ಬಂಡೆಯ ಮೇಲೆ ನಿಂತುಕೊಳ್ಳುವಿ.
ವಿಮೋಚನಕಾಂಡ 33 : 22 (KNV)
ನನ್ನ ಮಹಿ ಮೆಯು ಹಾದು ಹೋಗುವಾಗ ನಿನ್ನನ್ನು ಬಂಡೆಯ ಬಿರುಕಿನಲ್ಲಿ ನಿಲ್ಲಿಸಿ ನಿನ್ನ ಮೇಲೆ ನನ್ನ ಕೈ ಮುಚ್ಚುವೆನು.
ವಿಮೋಚನಕಾಂಡ 33 : 23 (KNV)
ತರುವಾಯ ನನ್ನ ಕೈಯನ್ನು ತೆಗೆದು ಬಿಡುವೆನು, ಆಗ ನೀನು ನನ್ನ ಹಿಂಭಾಗವನ್ನು ನೋಡುವಿ, ಆದರೆ ನನ್ನ ಮುಖವು ಕಾಣಿಸುವದಿಲ್ಲ ಅಂದನು.
❮
❯