ವಿಮೋಚನಕಾಂಡ 24 : 1 (KNV)
ಆತನು ಮೋಶೆಗೆ--ನೀನೂ ಆರೋನನೂ ನಾದಾಬನೂ ಅಬೀಹೂ ಇಸ್ರಾಯೇಲಿನ ಹಿರಿಯರಲ್ಲಿ ಎಪ್ಪತ್ತು ಮಂದಿಯೂ ಕರ್ತನ ಬಳಿಗೆ ಬಂದು ದೂರದಲ್ಲಿ ಆರಾಧಿಸಿರಿ.
ವಿಮೋಚನಕಾಂಡ 24 : 2 (KNV)
ಮೋಶೆ ಒಬ್ಬನೇ ಕರ್ತನ ಸವಿಾಪಕ್ಕೆ ಬರಲಿ; ಆದರೆ ಅವರು ಸವಿಾಪಕ್ಕೆ ಬರಬಾರದು. ಇಲ್ಲವೆ ಜನರು ಅವನ ಸಂಗಡ ಬರಬಾರದು ಎಂದು ಹೇಳಿದನು.
ವಿಮೋಚನಕಾಂಡ 24 : 3 (KNV)
ಮೋಶೆಯು ಬಂದು ಕರ್ತನ ಎಲ್ಲಾ ಮಾತುಗಳನ್ನೂ ಎಲ್ಲಾ ನ್ಯಾಯವಿಧಿಗಳನ್ನೂ ಜನರಿಗೆ ತಿಳಿಯಪಡಿ ಸಿದನು; ಆಗ ಜನರೆಲ್ಲಾ ಒಂದೇ ಸ್ವರದಿಂದ--ಕರ್ತನು ಹೇಳಿದ ಎಲ್ಲಾ ಮಾತುಗಳ ಪ್ರಕಾರ ಮಾಡುತ್ತೇವೆ ಎಂದು ಉತ್ತರಕೊಟ್ಟರು.
ವಿಮೋಚನಕಾಂಡ 24 : 4 (KNV)
ಮೋಶೆಯು ಕರ್ತನ ಮಾತುಗಳನ್ನೆಲ್ಲಾ ಬರೆದು ಬೆಳಿಗ್ಗೆ ಎದ್ದು ಬೆಟ್ಟದ ಕೆಳಗೆ ಯಜ್ಞವೇದಿಯನ್ನು ಕಟ್ಟಿಸಿ ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ಅನುಸಾರವಾಗಿ ಹನ್ನೆರಡು ಸ್ತಂಭಗಳನ್ನು ನಿಲ್ಲಿಸಿದನು.
ವಿಮೋಚನಕಾಂಡ 24 : 5 (KNV)
ಅವನು ಕರ್ತನಿಗೆ ದಹನಬಲಿಗಳನ್ನೂ ಸಮಾಧಾನದ ಬಲಿಗಾಗಿ ಎತ್ತು ಗಳನ್ನೂ ಅರ್ಪಿಸುವದಕ್ಕಾಗಿ ಇಸ್ರಾಯೇಲ್‌ ಮಕ್ಕಳ ಯೌವನಸ್ಥರನ್ನು ಕಳುಹಿಸಿದನು.
ವಿಮೋಚನಕಾಂಡ 24 : 6 (KNV)
ಮೋಶೆಯು ರಕ್ತದಲ್ಲಿ ಅರ್ಧವನ್ನು ತೆಗೆದುಕೊಂಡು ಬೋಗುಣಿಗಳಲ್ಲಿ ಹಾಕಿ ದನು ಮತ್ತು ರಕ್ತದಲ್ಲಿ ಅರ್ಧವನ್ನು ಯಜ್ಞವೇದಿಯ ಮೇಲೆ ಚಿಮುಕಿಸಿದನು.
ವಿಮೋಚನಕಾಂಡ 24 : 7 (KNV)
ಇದಲ್ಲದೆ ಒಡಂಬಡಿಕೆಯ ಪ್ರುಸ್ತಕವನ್ನು ತೆಗೆದುಕೊಂಡು ಜನರ ಮುಂದೆ ಓದಿದನು. ಆಗ ಅವರು--ಕರ್ತನು ಹೇಳುವದನ್ನೆಲ್ಲಾ ನಾವು ಮಾಡಿ ವಿಧೇಯರಾಗುವೆವು ಅಂದರು.
ವಿಮೋಚನಕಾಂಡ 24 : 8 (KNV)
ತರು ವಾಯ ಮೋಶೆಯು ರಕ್ತವನ್ನು ತೆಗೆದುಕೊಂಡು ಜನರ ಮೇಲೆ ಚಿಮುಕಿಸಿ--ಇಗೋ, ಈ ಎಲ್ಲಾ ಮಾತುಗಳ ವಿಷಯದಲ್ಲಿ ಕರ್ತನು ನಿಮ್ಮೊಂದಿಗೆ ಮಾಡಿದ ಒಡಂಬಡಿಕೆಯ ರಕ್ತವು ಇದೇ ಅಂದನು.
ವಿಮೋಚನಕಾಂಡ 24 : 9 (KNV)
ಆಗ ಮೋಶೆಯೂ ಅರೋನನೂ ನಾದಾಬನೂ ಅಬೀಹುವೂ ಇಸ್ರಾಯೇಲಿನ ಹಿರಿಯರಲ್ಲಿ ಎಪ್ಪತ್ತು ಜನರೂ ಏರಿಹೋದರು.
ವಿಮೋಚನಕಾಂಡ 24 : 10 (KNV)
ಅವರು ಇಸ್ರಾಯೇಲಿನ ದೇವರನ್ನು ನೋಡಿದರು. ಆತನ ಪಾದಗಳ ಕೆಳಗೆ ನೀಲವರ್ಣದ ಕಲ್ಲಿನ ಕೆಲಸಕ್ಕೆ ಸಮಾನವಾದದ್ದೂ ಆಕಾಶದ ಹಾಗೆ ನಿರ್ಮಲವಾದದ್ದೂ ಇತ್ತು.
ವಿಮೋಚನಕಾಂಡ 24 : 11 (KNV)
ಆದರೆ ಇಸ್ರಾಯೇಲ್‌ ಮಕ್ಕಳ ಶ್ರೇಷ್ಠರ ಮೇಲೆ ಆತನು ಕೈ ಹಾಕಲಿಲ್ಲ. ಅವರು ಸಹ ದೇವರ ದರ್ಶನದ ನಂತರ ತಿಂದು ಕುಡಿದರು.
ವಿಮೋಚನಕಾಂಡ 24 : 12 (KNV)
ಕರ್ತನು ಮೋಶೆಗೆ--ಬೆಟ್ಟವನ್ನೇರಿ ನನ್ನ ಬಳಿಗೆ ಬಂದು ಅಲ್ಲೇ ಇರು. ನಾನು ನಿನಗೆ ಕಲ್ಲಿನ ಹಲಗೆಗಳನ್ನು ಅವರಿಗೆ ಕಲಿಸುವದಕ್ಕೋಸ್ಕರ ನಾನು ಬರೆದ ನ್ಯಾಯ ಪ್ರಮಾಣವನ್ನು ಆಜ್ಞೆಗೆಳನ್ನು ಕೊಡುವೆನು ಎಂದು ಹೇಳಿದನು.
ವಿಮೋಚನಕಾಂಡ 24 : 13 (KNV)
ಆಗ ಮೋಶೆಯೂ ಅವನ ಸೇವಕನಾದ ಯೆಹೋಶುವನೂ ಎದ್ದು ನಿಂತರು. ಮೋಶೆಯಾ ದರೋ ದೇವರ ಬೆಟ್ಟವನ್ನು ಏರಿದನು.
ವಿಮೋಚನಕಾಂಡ 24 : 14 (KNV)
ಹಿರಿಯರಿಗೆ ಅವನು--ನಾವು ನಿಮ್ಮ ಬಳಿಗೆ ತಿರಿಗಿ ಬರುವ ವರೆಗೆ ಇಲ್ಲಿ ನಮಗಾಗಿ ಕಾದುಕೊಂಡಿರ್ರಿ; ಇಗೋ, ಆರೋ ನನೂ ಹೂರನೂ ನಿಮ್ಮ ಸಂಗಡ ಇರುತ್ತಾರೆ. ಯಾರಿ ಗಾದರೂ ವ್ಯಾಜ್ಯವಿದ್ದರೆ ಅವನು ಅವರ ಬಳಿಗೆ ಬರಲಿ ಅಂದನು.
ವಿಮೋಚನಕಾಂಡ 24 : 15 (KNV)
ಹೀಗೆ ಮೋಶೆಯು ಬೆಟ್ಟವನ್ನೇರಿ ಹೋದನು. ಆಗ ಮೇಘವು ಬೆಟ್ಟವನ್ನು ಮುಚ್ಚಿಕೊಂಡಿತು.
ವಿಮೋಚನಕಾಂಡ 24 : 16 (KNV)
ಇದ ಲ್ಲದೆ ಕರ್ತನ ಮಹಿಮೆಯು ಸೀನಾಯಿಬೆಟ್ಟದ ಮೇಲೆ ನೆಲೆಯಾಗಿದದ್ದರಿಂದ ಮೇಘವು ಅದನ್ನು ಆರು ದಿನಗಳ ವರೆಗೆ ಮುಚ್ಚಿಕೊಂಡಿತು; ಏಳನೆಯ ದಿನದಲ್ಲಿ ಆತನು ಮೇಘದೊಳಗಿಂದ ಮೋಶೆಯನ್ನು ಕರೆದನು.
ವಿಮೋಚನಕಾಂಡ 24 : 17 (KNV)
ಇದಲ್ಲದೆ ಇಸ್ರಾಯೇಲ್‌ ಮಕ್ಕಳ ಕಣ್ಣುಗಳ ಮುಂದೆ ಬೆಟ್ಟದ ತುದಿಯಲ್ಲಿ ಕರ್ತನ ಮಹಿಮೆಯ ದೃಶ್ಯವು ದಹಿಸುವ ಅಗ್ನಿಯಂತೆ ಇತ್ತು.ಆಗ ಮೋಶೆಯು ಮೇಘದ ಮಧ್ಯಕ್ಕೆ ಹೋಗಿ ಬೆಟ್ಟವನ್ನೇರಿದನು. ಅವನು ನಾಲ್ವತ್ತು ಹಗಲೂ ನಾಲ್ವತ್ತು ರಾತ್ರಿಯೂ ಪರ್ವತದಲ್ಲಿದ್ದನು.
ವಿಮೋಚನಕಾಂಡ 24 : 18 (KNV)
ಆಗ ಮೋಶೆಯು ಮೇಘದ ಮಧ್ಯಕ್ಕೆ ಹೋಗಿ ಬೆಟ್ಟವನ್ನೇರಿದನು. ಅವನು ನಾಲ್ವತ್ತು ಹಗಲೂ ನಾಲ್ವತ್ತು ರಾತ್ರಿಯೂ ಪರ್ವತದಲ್ಲಿದ್ದನು.

1 2 3 4 5 6 7 8 9 10 11 12 13 14 15 16 17 18

BG:

Opacity:

Color:


Size:


Font: