ವಿಮೋಚನಕಾಂಡ 12 : 1 (KNV)
ಕರ್ತನು ಐಗುಪ್ತದಲ್ಲಿ ಮೋಶೆ ಆರೋನರ ಸಂಗಡ ಮಾತನಾಡಿ ಹೇಳಿದ್ದೇನಂದರೆ--
ವಿಮೋಚನಕಾಂಡ 12 : 2 (KNV)
ಈ ತಿಂಗಳೇ ನಿಮಗೆ ಆದಿಮಾಸವಾಗಿರಬೇಕು. ಇದು ನಿಮಗೆ ವರುಷದ ಮೊದಲನೆಯ ತಿಂಗಳಾಗಿರುವದು.
ವಿಮೋಚನಕಾಂಡ 12 : 3 (KNV)
ಇಸ್ರಾಯೇಲ್ ಸಭೆಗೆಲ್ಲಾ ನೀವು ಹೇಳಬೇಕಾದದ್ದೇ ನಂದರೆ--ಈ ತಿಂಗಳಿನ ಹತ್ತನೆಯ ದಿನದಲ್ಲಿ ಅವರು ತಮಗೆ ಒಂದೊಂದು ಕುರಿಮರಿಯನ್ನು ಅವರ ತಂದೆಗಳ ಮನೆಯ ಪ್ರಕಾರ ಮನೆಗೆ ಒಂದು ಕುರಿಮರಿಯನ್ನು ತಕ್ಕೊಳ್ಳಬೇಕು.
ವಿಮೋಚನಕಾಂಡ 12 : 4 (KNV)
ಒಂದು ಕುರಿಮರಿಯನ್ನು ತಿನ್ನುವದಕ್ಕೆ ಕುಟುಂಬವು ಚಿಕ್ಕದಾಗಿದ್ದರೆ ಅವನೂ ತನ್ನ ಮನೆಗೆ ಸವಿಾಪವಾಗಿರುವ ತನ್ನ ನೆರೆಯವನೂ ವ್ಯಕ್ತಿಗಳ ಲೆಕ್ಕದ ಪ್ರಕಾರ ಒಂದನ್ನು ತಕ್ಕೊಳ್ಳಲಿ; ಒಬ್ಬೊಬ್ಬನು ತಾನು ತಿನ್ನುವ ಅಳತೆಯ ಪ್ರಕಾರ ಕುರಿಮರಿಯನ್ನು ತಕ್ಕೊಳ್ಳಲಿ.
ವಿಮೋಚನಕಾಂಡ 12 : 5 (KNV)
ನಿಮ್ಮ ಕುರಿಮರಿಯು ನಿರ್ದೋಷವಾಗಿರುವ ಒಂದು ವರುಷದ ಗಂಡುಮರಿಯಾಗಿರಬೇಕು. ನೀವು ಕುರಿಗಳಿಂದಾಗಲಿ ಮೇಕೆಗಳಿಂದಾಗಲಿ ಅದನ್ನು ತಕ್ಕೊ ಳ್ಳಬೇಕು.
ವಿಮೋಚನಕಾಂಡ 12 : 6 (KNV)
ಅದನ್ನು ಈ ತಿಂಗಳಿನ ಹದಿನಾಲ್ಕನೆಯ ದಿನದ ವರೆಗೆ ಇಟ್ಟುಕೊಳ್ಳಬೇಕು. ತರುವಾಯ ಸಾಯಂ ಕಾಲದಲ್ಲಿ ಇಸ್ರಾಯೇಲಿನ ಕೂಟದ ಇಡೀ ಸಭೆಯು ಅದನ್ನು ಕೊಲ್ಲಬೇಕು.
ವಿಮೋಚನಕಾಂಡ 12 : 7 (KNV)
ರಕ್ತದಲ್ಲಿ ಸ್ವಲ್ಪ ತೆಗೆದು ಅವರು ಊಟ ಮಾಡುವ ಮನೆಗಳ ಎರಡು ನಿಲುವು ಗಂಬಗ ಳಿಗೂ ಬಾಗಿಲ ಮೇಲಿನ ಅಡ್ಡಗಂಬಕ್ಕೂ ಹಚ್ಚಬೇಕು.
ವಿಮೋಚನಕಾಂಡ 12 : 8 (KNV)
ಆ ರಾತ್ರಿಯಲ್ಲಿಯೇ ಆ ಮಾಂಸವನ್ನು ತಿನ್ನಬೇಕು. ಬೆಂಕಿಯಲ್ಲಿ ಸುಟ್ಟು ಅದನ್ನೂ ಹುಳಿಯಿಲ್ಲದ ರೊಟ್ಟಿಗ ಳನ್ನೂ ಕಹಿಯಾದ ಪಲ್ಯಗಳ ಸಂಗಡ ತಿನ್ನಬೇಕು.
ವಿಮೋಚನಕಾಂಡ 12 : 9 (KNV)
ಅದರಲ್ಲಿ ಯಾವದನ್ನೂ ಹಸಿಯಾದದ್ದಾಗಲಿ ನೀರಿ ನಲ್ಲಿ ಬೇಯಿಸಿದ್ದಾಗಲಿ ತಿನ್ನದೆ ಅದರ ತಲೆ ತೊಡೆ ಒಳಗಿನವುಗಳ ಸಹಿತವಾಗಿ ಬೆಂಕಿಯಲ್ಲಿ ಸುಟ್ಟೇ ಅದನ್ನು ತಿನ್ನಬೇಕು.
ವಿಮೋಚನಕಾಂಡ 12 : 10 (KNV)
ಅದರಲ್ಲಿ ಬೆಳಗಿನ ವರೆಗೆ ಏನನ್ನೂ ಉಳಿಸಬಾರದು. ಬೆಳಗಿನ ವರೆಗೆ ಅದರಲ್ಲಿ ಉಳಿದದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
ವಿಮೋಚನಕಾಂಡ 12 : 11 (KNV)
ನೀವು ಅದನ್ನು ತಿನ್ನತಕ್ಕ ರೀತಿ ಇದೇ: ನೀವು ನಿಮ್ಮ ನಡುಕಟ್ಟಿಕೊಂಡು, ಕೆರ ಮೆಟ್ಟಿಕೊಂಡು, ಕೋಲನ್ನು ಹಿಡಿದುಕೊಂಡು, ತ್ವರೆಯಾಗಿ ಅದನ್ನು ತಿನ್ನಬೇಕು. ಅದು ಕರ್ತನ ಪಸ್ಕವಾಗಿದೆ.
ವಿಮೋಚನಕಾಂಡ 12 : 12 (KNV)
ನಾನು ಈ ರಾತ್ರಿ ಐಗುಪ್ತದೇಶದಲ್ಲಿ ಹಾದುಹೋಗುತ್ತೇನೆ. ಐಗುಪ್ತದೇಶದಲ್ಲಿರುವ ಎಲ್ಲಾ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಇರುವ ಚೊಚ್ಚ ಲಾದವುಗಳನ್ನು ಸಂಹರಿಸುವೆನು. ಐಗುಪ್ತದ ದೇವರುಗ ಳಿಗೆಲ್ಲಾ ನಾನು ನ್ಯಾಯತೀರಿಸುವೆನು; ನಾನೇ ಕರ್ತನು.
ವಿಮೋಚನಕಾಂಡ 12 : 13 (KNV)
ಆದರೆ ನೀವು ಇರುವ ಎಲ್ಲಾ ಮನೆಗಳ ಮೇಲೆ ರಕ್ತವು ನಿಮಗೆ ಗುರುತಾಗಿರುವದು. ಆ ರಕ್ತವನ್ನು ನಾನು ನೋಡುವಾಗ ನಿಮ್ಮನ್ನು ದಾಟಿಹೋಗುವೆನು. ಐಗುಪ್ತದೇಶವನ್ನು ನಾನು ಹೊಡೆಯುವ ಸಮಯದಲ್ಲಿ ನಿಮ್ಮನ್ನು ನಾಶಮಾಡುವ ಯಾವ ಬಾಧೆಯೂ ನಿಮ್ಮ ಮೇಲೆ ಬರುವದಿಲ್ಲ.
ವಿಮೋಚನಕಾಂಡ 12 : 14 (KNV)
ಈ ದಿನವು ನಿಮಗೆ ಜ್ಞಾಪಕಾರ್ಥವಾಗಿರುವದು; ನೀವು ಇದನ್ನು ಕರ್ತನಿಗೆ ಹಬ್ಬವಾಗಿ ತಲತಲಾಂತರ ಗಳಲ್ಲಿ ಆಚರಿಸಬೇಕು; ಇದನ್ನು ನಿತ್ಯ ಶಾಸನದಂತೆ ಎಂದೆಂದಿಗೂ ಆಚರಿಸಬೇಕು.
ವಿಮೋಚನಕಾಂಡ 12 : 15 (KNV)
ಏಳು ದಿನಗಳ ವರೆಗೆ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲಿಯೇ ಹುಳಿಹಿಟ್ಟನ್ನು ನಿಮ್ಮ ಮನೆಯೊಳಗಿಂದ ತೆಗೆದುಹಾಕಬೇಕು; ಮೊದಲನೆಯ ದಿನದಿಂದ ಏಳ ನೆಯ ದಿನದ ವರೆಗೆ ಹುಳಿರೊಟ್ಟಿಯನ್ನು ತಿನ್ನುವವರು ಇಸ್ರಾಯೇಲಿನೊಳಗಿಂದ ತೆಗೆದು ಹಾಕಲ್ಪಡಬೇಕು.
ವಿಮೋಚನಕಾಂಡ 12 : 16 (KNV)
ಇದಲ್ಲದೆ ಮೊದಲನೆಯ ದಿನದಲ್ಲಿ ಪರಿಶುದ್ಧ ಸಭೆಯೂ ಏಳನೆಯ ದಿನದಲ್ಲಿ ಪರಿಶುದ್ಧ ಸಭೆಯೂ ನಿಮಗೆ ಇರಬೇಕು. ಊಟಮಾಡುವದನ್ನು ಬಿಟ್ಟು ಆ ದಿನಗಳಲ್ಲಿ ಯಾವ ತರವಾದ ಕೆಲಸವನ್ನೂ ಮಾಡ ಬಾರದು.
ವಿಮೋಚನಕಾಂಡ 12 : 17 (KNV)
ನೀವು ಹುಳಿಯಿಲ್ಲದ ರೊಟ್ಟಿಯ ಹಬ್ಬ ವನ್ನು ಆಚರಿಸಬೇಕು. ಆ ದಿನದಲ್ಲಿಯೇ ನಾನು ನಿಮ್ಮ ಸೈನ್ಯಗಳನ್ನು ಐಗುಪ್ತದೇಶದೊಳಗಿಂದ ಹೊರಗೆ ಬರ ಮಾಡಿದ್ದೇನೆ; ಆದಕಾರಣ ನಿಮ್ಮ ಸಂತತಿಗಳಲ್ಲಿ ಸದಾ ಕಾಲಕ್ಕೂ ಒಂದು ಶಾಸನವಾಗಿ ಈ ದಿನವನ್ನು ನೀವು ಆಚರಿಸಬೇಕು.
ವಿಮೋಚನಕಾಂಡ 12 : 18 (KNV)
ಮೊದಲನೆಯ ತಿಂಗಳಿನಲ್ಲಿ ಅದೇ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲದಿಂದ ಆ ತಿಂಗಳಿನ ಇಪ್ಪತ್ತೊಂದನೆಯ ದಿನದ ಸಾಯಂಕಾಲದ ವರೆಗೆ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು.
ವಿಮೋಚನಕಾಂಡ 12 : 19 (KNV)
ಏಳು ದಿನಗಳ ವರೆಗೆ ಹುಳಿಹಿಟ್ಟು ನಿಮ್ಮ ಮನೆಗಳಲ್ಲಿ ಇರಬಾರದು; ಹುಳಿಕಲಸಿದ್ದನ್ನು ಯಾರು ತಿನ್ನುವರೋ ಆ ವ್ಯಕ್ತಿಯು ಪರದೇಶದವನಾಗಲಿ ಸ್ವದೇಶದವ ನಾಗಲಿ ಅವನನ್ನು ಇಸ್ರಾಯೇಲ್ ಸಭೆಯೊಳಗಿಂದ ತೆಗೆದು ಹಾಕಬೇಕು.
ವಿಮೋಚನಕಾಂಡ 12 : 20 (KNV)
ಹುಳಿಕಲಸಿದ್ದು ಯಾವದೇ ಆಗಿರಲಿ ನೀವು ತಿನ್ನಬಾರದು; ನಿಮ್ಮ ಎಲ್ಲಾ ನಿವಾಸ ಗಳಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನೇ ತಿನ್ನಬೇಕು ಎಂದು ಹೇಳಿದನು.
ವಿಮೋಚನಕಾಂಡ 12 : 21 (KNV)
ಆಗ ಮೋಶೆಯು ಇಸ್ರಾಯೇಲಿನ ಎಲ್ಲಾ ಹಿರಿಯ ರನ್ನು ಕರೆದು ಅವರಿಗೆ--ನಿಮ್ಮ ಗೋತ್ರಗಳ ಪ್ರಕಾರ ಕುರಿಗಳನ್ನು ತೆಗೆದುಕೊಂಡು ಪಸ್ಕವನ್ನು (ಕುರಿಯನ್ನು) ಕೊಯ್ಯಿರಿ.
ವಿಮೋಚನಕಾಂಡ 12 : 22 (KNV)
ಹಿಸ್ಸೋಪಿನ ಕಟ್ಟನ್ನು ತೆಗೆದುಕೊಂಡು ಬೋಗುಣಿಯಲ್ಲಿರುವ ರಕ್ತದಲ್ಲಿ ಅದನ್ನು ಅದ್ದಿ ಬಾಗಿ ಲಿನ ಮೇಲಿನ ಅಡ್ಡಗಂಬಕ್ಕೂ ಪಕ್ಕದಲ್ಲಿರುವ ಎರಡು ನಿಲುವುಗಂಬಗಳಿಗೂ ಹಚ್ಚಿರಿ. ನಿಮ್ಮಲ್ಲಿ ಯಾರೂ ಬೆಳಗಾಗುವ ವರೆಗೆ ಮನೆಯ ಬಾಗಿಲನ್ನು ಬಿಟ್ಟು ಹೋಗಬಾರದು.
ವಿಮೋಚನಕಾಂಡ 12 : 23 (KNV)
ಕರ್ತನು ಐಗುಪ್ತ್ಯರನ್ನು ಸಂಹರಿ ಸುವದಕ್ಕಾಗಿ ಹಾದುಹೋಗುವನು; ಆತನು ಮೇಲಿನ ಅಡ್ಡಗಂಬದ ಮೇಲೂ ಪಕ್ಕದ ಎರಡು ನಿಲುವು ಕಂಬಗಳ ಮೇಲೂ ರಕ್ತವನ್ನು ನೋಡಿದಾಗ ಸಂಹಾರಕನು ನಿಮ್ಮ ಮನೆಗಳೊಳಗೆ ಬಂದು ನಿಮ್ಮನ್ನು ಸಂಹಾರಮಾಡ ದಂತೆ ನಿಮ್ಮ ಬಾಗಿಲುಗಳನ್ನು ದಾಟಿ ಹೋಗುವನು.
ವಿಮೋಚನಕಾಂಡ 12 : 24 (KNV)
ಇದನ್ನು ಒಂದು ಶಾಸನವಾಗಿ ನೀವೂ ನಿಮ್ಮ ಕುಮಾರರೂ ಸದಾಕಾಲಕ್ಕೂ ಇದನ್ನು ಆಚರಿಸತಕ್ಕದ್ದು.
ವಿಮೋಚನಕಾಂಡ 12 : 25 (KNV)
ಕರ್ತನು ಕೊಡುವೆನೆಂದು ಪ್ರಮಾಣಮಾಡಿದ ದೇಶಕ್ಕೆ ನೀವು ಬಂದಾಗ ಈ ಆಚರಣೆಯನ್ನು ನೀವು ಕೈಕೊಳ್ಳಬೇಕು.
ವಿಮೋಚನಕಾಂಡ 12 : 26 (KNV)
ನಿಮ್ಮ ಮಕ್ಕಳು ಈ ಆಚಾರದ ಅರ್ಥವೇನು ಎಂದು ಕೇಳಿದಾಗ
ವಿಮೋಚನಕಾಂಡ 12 : 27 (KNV)
ನೀವು ಅವ ರಿಗೆ--ಕರ್ತನು ಐಗುಪ್ತದೇಶದಲ್ಲಿ ಐಗುಪ್ತ್ಯರನ್ನು ಸಂಹರಿಸಿ ನಮ್ಮ ಮನೆಗಳನ್ನು ಕಾಪಾಡುವದಕ್ಕಾಗಿ ಇಸ್ರಾಯೇಲ್ ಮಕ್ಕಳ ಮನೆಗಳನ್ನು ದಾಟಿಹೋದ ಕರ್ತನ ಪಸ್ಕವೇ ಇದು ಎಂದು ನೀವು ಹೇಳಬೇಕು ಅಂದನು. ಆಗ ಜನರು ತಲೆಬಾಗಿಸಿ ಆರಾಧಿಸಿದರು.
ವಿಮೋಚನಕಾಂಡ 12 : 28 (KNV)
ಇಸ್ರಾಯೇಲ್ ಮಕ್ಕಳು ಹೊರಟುಹೋಗಿ ಕರ್ತನು ಮೋಶೆ ಆರೋನರಿಗೆ ಆಜ್ಞಾಪಿಸಿದ ಮೇರೆಗೆ ಅವರು ಮಾಡಿದರು.
ವಿಮೋಚನಕಾಂಡ 12 : 29 (KNV)
ಮಧ್ಯರಾತ್ರಿಯಲ್ಲಿ ನಡೆದದ್ದೇನಂದರೆ, ಸಿಂಹಾ ಸನದ ಮೇಲೆ ಕೂತುಕೊಂಡ ಫರೋಹನ ಚೊಚ್ಚಲು ಮಗನು ಮೊದಲುಗೊಂಡು ಸೆರೆಯಲ್ಲಿದ್ದ ಸೆರೆಯವನ ಚೊಚ್ಚಲು ಮಗನ ವರೆಗೂ ಅಂದರೆ ಐಗುಪ್ತದೇಶ ದಲ್ಲಿದ್ದ ಎಲ್ಲಾ ಚೊಚ್ಚಲು ಮಕ್ಕಳನ್ನೂ ಪಶುಗಳಲ್ಲಿ ಚೊಚ್ಚಲಾದವುಗಳೆಲ್ಲವನ್ನೂ ಕರ್ತನು ಸಂಹರಿಸಿದನು.
ವಿಮೋಚನಕಾಂಡ 12 : 30 (KNV)
ಆಗ ಫರೋಹನೂ ಅವನ ಎಲ್ಲಾ ಸೇವಕರೂ ಎಲ್ಲಾ ಐಗುಪ್ತ್ಯರೂ ರಾತ್ರಿಯಲ್ಲಿ ಎದ್ದರು. ಆಗ ಐಗುಪ್ತದಲ್ಲಿ ದೊಡ್ಡ ಗೋಳಾಟವಾಯಿತು. ಅಲ್ಲಿ ಸತ್ತವರಿಲ್ಲದ ಒಂದು ಮನೆಯಾದರೂ ಇರಲಿಲ್ಲ.
ವಿಮೋಚನಕಾಂಡ 12 : 31 (KNV)
ಫರೋಹನು ರಾತ್ರಿಯಲ್ಲಿ ಮೋಶೆ ಆರೋನರನ್ನು ಕರೆಯಿಸಿ ಅವರಿಗೆ--ನೀವು ಎದ್ದು ನನ್ನ ಜನರೊ ಳಗಿಂದ ಹೊರಟು ಹೋಗಿರಿ; ನೀವು ಹೇಳಿದ ಹಾಗೆಯೇ ಕರ್ತನನ್ನು ಸೇವಿಸುವದಕ್ಕೆ ನೀವೂ ಇಸ್ರಾಯೇಲ್ ಮಕ್ಕಳೂ ಹೋಗಿಬಿಡಿರಿ.
ವಿಮೋಚನಕಾಂಡ 12 : 32 (KNV)
ನೀವು ಹೇಳಿದಂತೆ ನಿಮ್ಮ ಕುರಿದನಗಳನ್ನು ತೆಗೆದುಕೊಳ್ಳಿರಿ. ನನ್ನನ್ನು ಸಹ ಆಶೀರ್ವದಿಸಿರಿ ಅಂದನು.
ವಿಮೋಚನಕಾಂಡ 12 : 33 (KNV)
ಇದಲ್ಲದೆ ಐಗುಪ್ತ್ಯರು--ನಾವೆಲ್ಲರೂ ಸಾಯುತ್ತೇವೆಂದು ಹೇಳಿ ಅವರನ್ನು ತ್ವರೆಯಾಗಿ ದೇಶದೊಳಗಿಂದ ಕಳುಹಿಸಿ ಬಿಡುವ ಹಾಗೆ ಜನರನ್ನು ಒತ್ತಾಯ ಮಾಡಿದರು.
ವಿಮೋಚನಕಾಂಡ 12 : 34 (KNV)
ಆದದರಿಂದ ಜನರು ಹಿಟ್ಟಿಗೆ ಹುಳಿ ಹಾಕುವದಕ್ಕಿಂತ ಮುಂಚೆ ಅದನ್ನು ಅಡಿಗೆ ಮಾಡುವ ಪಾತ್ರೆಗಳ ಸಂಗಡ ಬಟ್ಟೆಗಳಲ್ಲಿ ಕಟ್ಟಿ ಹೆಗಲಿನ ಮೇಲೆ ಹೊತ್ತುಕೊಂಡು ಹೋದರು.
ವಿಮೋಚನಕಾಂಡ 12 : 35 (KNV)
ಮೋಶೆಯು ಹೇಳಿದಂತೆ ಇಸ್ರಾ ಯೇಲ್ ಮಕ್ಕಳು ಮಾಡಿ ಬೆಳ್ಳಿ ಬಂಗಾರದ ಒಡವೆಗಳನ್ನೂ ವಸ್ತ್ರಗಳನ್ನೂ ಐಗುಪ್ತ್ಯರಿಂದ ಕೇಳಿ ಪಡೆದರು.
ವಿಮೋಚನಕಾಂಡ 12 : 36 (KNV)
ಕರ್ತನು ಐಗುಪ್ತ್ಯರ ಎದುರಿನಲ್ಲಿ ಜನರ ಮೇಲೆ ಕೃಪೆ ತೋರಿಸಿದ್ದರಿಂದ ಅವರು ಕೇಳಿದ್ದನ್ನು ಕೊಟ್ಟರು. ಹೀಗೆ ಅವರು ಐಗುಪ್ತ್ಯರನ್ನು ಸುಲು ಕೊಂಡರು.
ವಿಮೋಚನಕಾಂಡ 12 : 37 (KNV)
ಆಗ ಇಸ್ರಾಯೇಲ್ಯರಲ್ಲಿ ಮಕ್ಕಳಲ್ಲದೆ ಗಂಡಸರು ಮಾತ್ರ ಆರು ಲಕ್ಷ ಕಾಲು ನಡಿಗೆಯಾಗಿ ರಮ್ಸೇಸನ್ನು ಬಿಟ್ಟು ಸುಕ್ಕೋತಿಗೆ ಪ್ರಯಾಣ ಮಾಡಿದರು.
ವಿಮೋಚನಕಾಂಡ 12 : 38 (KNV)
ಬೆರೆತಿದ್ದ ಜನಸಮೂಹವೂ ಕುರಿದನಗಳ ಬಹು ದೊಡ್ಡ ಹಿಂಡೂ ಅವರ ಸಂಗಡ ಹೋದವು.
ವಿಮೋಚನಕಾಂಡ 12 : 39 (KNV)
ಆಗ ಅವರು ಐಗುಪ್ತದಿಂದ ತಂದಿದ್ದ ನಾದಿದ ಹಿಟ್ಟು ಇನ್ನೂ ಹುಳಿ ಯಾಗದ ಕಾರಣ ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿ ಗಳನ್ನು ಮಾಡಿದರು; ಯಾಕಂದರೆ ಅವರನ್ನು ಅಲ್ಲಿ ನಿಲ್ಲಗೊಡದೆ ಐಗುಪ್ತದಿಂದ ಓಡಿಸಿಬಿಟ್ಟಿದ್ದರು. ಅವರು ತಮಗಾಗಿ ಯಾವ ಆಹಾರವನ್ನು ಸಿದ್ಧಪಡಿಸಿಕೊಂಡಿ ರಲಿಲ್ಲ.
ವಿಮೋಚನಕಾಂಡ 12 : 40 (KNV)
ಇಸ್ರಾಯೇಲ್ ಮಕ್ಕಳು ಐಗುಪ್ತದಲ್ಲಿ ಪ್ರವಾ ಸವಾಗಿ ವಾಸಮಾಡಿದ್ದ ಕಾಲವು ನಾನೂರ ಮೂವತ್ತು ವರುಷಗಳಾಗಿದ್ದವು.
ವಿಮೋಚನಕಾಂಡ 12 : 41 (KNV)
ನಾನೂರ ಮೂವತ್ತು ವರುಷ ಗಳು ತೀರಿದ ತರುವಾಯ ಅದೇ ದಿನದಲ್ಲಿ ಕರ್ತನ ಸೈನ್ಯಗಳೆಲ್ಲಾ ಐಗುಪ್ತದೇಶವನ್ನು ಬಿಟ್ಟು ಹೊರಗೆ ಹೋದವು.
ವಿಮೋಚನಕಾಂಡ 12 : 42 (KNV)
ಆತನು ಐಗುಪ್ತದೇಶದಿಂದ ಅವರನ್ನು ಹೊರಗೆ ತಂದ ಕಾರಣ ಇದು ಕರ್ತನಿಗೆ ಆಚರಿಸ ಬೇಕಾದ ರಾತ್ರಿಯಾಗಿತ್ತು. ಇಸ್ರಾಯೇಲ್ ಮಕ್ಕಳೆ ಲ್ಲರೂ ತಮ್ಮ ಸಂತತಿಗಳಲ್ಲಿ ಕರ್ತನಿಗೆ ಆಚರಿಸ ಬೇಕಾದ ರಾತ್ರಿಯು ಇದೇ.
ವಿಮೋಚನಕಾಂಡ 12 : 43 (KNV)
ಕರ್ತನು ಮೋಶೆ ಆರೋನರಿಗೆ--ಪಸ್ಕದ ಶಾಸನವು ಇದೇ: ಅನ್ಯರಲ್ಲಿ ಯಾರೂ ಅದನ್ನು ತಿನ್ನ ಬಾರದು.
ವಿಮೋಚನಕಾಂಡ 12 : 44 (KNV)
ಆದರೆ ಹಣಕ್ಕೆ ತೆಗೆದುಕೊಂಡ ಪ್ರತಿ ಯೊಬ್ಬನ ಸೇವಕನನ್ನು ನೀನು ಸುನ್ನತಿಮಾಡಿಸಿದ ತರುವಾಯ ಅವನು ಅದನ್ನು ತಿನ್ನಬಹುದು.
ವಿಮೋಚನಕಾಂಡ 12 : 45 (KNV)
ಪರ ದೇಶದವರೂ ಕೂಲಿಯವರೂ ಅದನ್ನು ತಿನ್ನಬಾರದು.
ವಿಮೋಚನಕಾಂಡ 12 : 46 (KNV)
ಒಂದೇ ಮನೆಯಲ್ಲಿ ಅದನ್ನು ತಿನ್ನಬೇಕು. ಆ ಮಾಂಸ ದಲ್ಲಿ ಸ್ವಲ್ಪ ಅಂಶವನ್ನಾದರೂ ಮನೆಯ ಹೊರಗೆ ತೆಗೆದುಕೊಂಡು ಹೋಗಬಾರದು. ಪಶುವಿನ ಒಂದು ಎಲುಬಾದರೂ ಮುರಿಯಬಾರದು.
ವಿಮೋಚನಕಾಂಡ 12 : 47 (KNV)
ಇಸ್ರಾಯೇಲಿನ ಸಭೆಯೆಲ್ಲಾ ಇದನ್ನು ಆಚರಿಸಬೇಕು.
ವಿಮೋಚನಕಾಂಡ 12 : 48 (KNV)
ನಿನ್ನ ಜೊತೆ ಯಲ್ಲಿ ಪ್ರವಾಸಮಾಡಿದ ಅನ್ಯನು ಕರ್ತನಿಗೆ ಪಸ್ಕವನ್ನು ಆಚರಿಸಬೇಕೆಂದಿದ್ದರೆ ಅವನ ಗಂಡಸರೆಲ್ಲಾ ಸುನ್ನತಿ ಮಾಡಿಸಿಕೊಳ್ಳಲಿ; ತರುವಾಯ ಅವನು ಅದನ್ನು ಆಚರಿಸುವದಕ್ಕೆ ಸವಿಾಪ ಬರಲಿ; ಅಂಥವನು ಸ್ವದೇಶ ದಲ್ಲಿ ಹುಟ್ಟಿದವನಂತೆ ಇರುವನು. ಆದರೆ ಸುನ್ನತಿ ಮಾಡಿಸಿಕೊಳ್ಳದ ಒಬ್ಬನಾದರೂ ಅದನ್ನು ತಿನ್ನಬಾರದು.
ವಿಮೋಚನಕಾಂಡ 12 : 49 (KNV)
ಮನೆಯಲ್ಲಿ ಹುಟ್ಟಿದವನಿಗೂ ನಿಮ್ಮಲ್ಲಿ ಪ್ರವಾಸಿ ಯಾಗಿರುವ ಅನ್ಯನಿಗೂ ಒಂದೇ ನ್ಯಾಯಪ್ರಮಾಣ ವಿರಬೇಕು ಎಂದು ಹೇಳಿದನು.
ವಿಮೋಚನಕಾಂಡ 12 : 50 (KNV)
ಕರ್ತನು ಮೋಶೆ ಆರೋನರಿಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲ್ ಮಕ್ಕಳೆಲ್ಲಾ ಮಾಡಿದರು.
ವಿಮೋಚನಕಾಂಡ 12 : 51 (KNV)
ಅದೇ ದಿನದಲ್ಲಿ ಕರ್ತನು ಇಸ್ರಾಯೇಲ್ ಮಕ್ಕಳನ್ನು ಅವರ ಸೈನ್ಯಗಳ ಪ್ರಕಾರ ಐಗುಪ್ತದೇಶದೊಳಗಿಂದ ಹೊರಗೆ ತಂದನು.
❮
❯