ಎಸ್ತೇರಳು 6 : 1 (KNV)
ಆ ರಾತ್ರಿ ಅರಸನಿಗೆ ನಿದ್ರೆ ಬಾರದ್ದದರಿಂದ ವೃತಾಂತಗಳನ್ನು ಬರೆದಿರುವ ಪುಸ್ತಕವನ್ನು ತಕ್ಕೊಂಡು ಬರಲು ಹೇಳಿದನು.
ಎಸ್ತೇರಳು 6 : 2 (KNV)
ಅವು ಅರಸನ ಮುಂದೆ ಓದಲ್ಪಟ್ಟಾಗ ದ್ವಾರಪಾಲಕರಾಗಿದ್ದ ಅರಸನ ಮನೆವಾರ್ತೆಯವರಲ್ಲಿ ಇಬ್ಬರು ಬಿಗೆತಾನನೂ ತೆರೆಷನೂ ಅರಸನಾದ ಅಹಷ್ವೇರೋಷನ ಮೇಲೆ ಕೈಹಾಕಲು ಹುಡುಕುತ್ತಾ ಇದ್ದರೆಂಬುವ ವರ್ತಮಾನ ವನ್ನು ಮೊರ್ದೆಕೈಯು ತಿಳಿಸಿದನೆಂದು ಬರೆಯಲ್ಪಟ್ಟಿದ್ದು ಸಿಕ್ತಿತು.
ಎಸ್ತೇರಳು 6 : 3 (KNV)
ಆಗ ಅರಸನು--ಇದಕ್ಕೋಸ್ಕರ ಮೊರ್ದೆಕೈಗೆ ಏನಾದರೂ ಘನವೂ ಮಹಿಮೆಯೂ ಮಾಡಲ್ಪಟ್ಟವೋ ಅಂದನು. ಅವನಿಗೆ ಮಾಡಿದ್ದು ಏನೂ ಇಲ್ಲವೆಂದೂ ಅರಸನನ್ನು ಸೇವಿಸುವ ಅವನ ಸೇವಕರು ಹೇಳಿದರು.
ಎಸ್ತೇರಳು 6 : 4 (KNV)
ಆಗ ಅರಸನು--ಅಂಗಳದಲ್ಲಿ ಯಾರು ಅಂದನು. ಆಗ ಹಾಮಾನನು ಮೊರ್ದೆಕೈಗೋಸ್ಕರ ಸಿದ್ಧಮಾಡಿದ ಗಲ್ಲಿನ ಮರದಲ್ಲಿ ಅವನನ್ನು ಹಾಕುವ ಹಾಗೆ ಅರಸನ ಸಂಗಡ ಮಾತನಾಡಲು ಅರಮನೆಯ ಹೊರಗಿನ ಅಂಗಳದಲ್ಲಿ ಬಂದಿದ್ದನು.
ಎಸ್ತೇರಳು 6 : 5 (KNV)
ಅರಸನ ಸೇವಕರು ಅವ ನಿಗೆ--ಇಗೋ, ಹಾಮಾನನು ಅಂಗಳದಲ್ಲಿ ನಿಂತಿ ದ್ದಾನೆ ಅಂದರು. ಅರಸನು--ಅವನು ಒಳಗೆ ಬರಲಿ ಅಂದನು.
ಎಸ್ತೇರಳು 6 : 6 (KNV)
ಹಾಮಾನನು ಒಳಕ್ಕೆ ಬಂದಾಗ ಅರಸನು ಅವನಿಗೆ--ಅರಸನು ಇಷ್ಟಪಟ್ಟು ಘನಪಡಿಸಬೇಕೆಂದಿ ರುವ ಮನುಷ್ಯನಿಗೆ ಮಾಡಬೇಕಾದದ್ದೇನು ಅಂದನು. ಆಗ ಹಾಮಾನನು ತನ್ನ ಹೃದಯದಲ್ಲಿ--ಅರಸನು ನನಗಿಂತ ಹೆಚ್ಚಾಗಿ ಇನ್ನಾರನ್ನು ಘನಪಡಿಸಬೇಕೆಂದಿ ರುವನು ಎಂದು ಅಂದುಕೊಂಡನು.
ಎಸ್ತೇರಳು 6 : 7 (KNV)
ಹಾಮಾನನು ಅರಸನಿಗೆ--ಅರಸನು ಘನಪಡಿಸಬೇಕೆಂದಿರುವ ಮನು ಷ್ಯನಿಗೆ ಮಾಡಬೇಕಾದದ್ದೇನಂದರೆ,
ಎಸ್ತೇರಳು 6 : 8 (KNV)
ಅರಸನು ಧರಿಸಿ ಕೊಳ್ಳುವ ರಾಜವಸ್ತ್ರಗಳೂ ಅರಸನು ಹತ್ತುವ ಕುದು ರೆಯೂ ಅವನ ತಲೆಯ ಮೇಲೆ ಇಟ್ಟುಕೊಳ್ಳುವ ರಾಜಕಿರೀಟವೂ ತರಲ್ಪಡಲಿ;
ಎಸ್ತೇರಳು 6 : 9 (KNV)
ಆ ವಸ್ತ್ರವೂ ಕುದು ರೆಯೂ ಅರಸನ ಶ್ರೇಷ್ಠರಾದ ಪ್ರಧಾನರಲ್ಲಿ ಒಬ್ಬನ ಕೈಗೆ ಕೊಡಲ್ಪಡಲಿ; ಅರಸನು ಘನಪಡಿಸಬೇಕೆಂಬ ವನನ್ನು ಅವರು ಉಡಿಸಿದ ತರುವಾಯ ಅವನನ್ನು ಕುದುರೆಯ ಮೇಲೆ ಹತ್ತಿಸಿ ಪಟ್ಟಣ ಬೀದಿಯಲ್ಲಿ ತಕ್ಕೊಂಡು ಹೋಗಿ ಅವನ ಮುಂದೆ--ಅರಸನು ಘನಪಡಿಸಬೇಕೆಂದಿರುವ ಮನುಷ್ಯನಿಗೆ ಈ ಪ್ರಕಾರ ಮಾಡಲ್ಪಡುವದು ಎಂದು ಸಾರಬೇಕು ಅಂದನು.
ಎಸ್ತೇರಳು 6 : 10 (KNV)
ಆಗ ಅರಸನು ಹಾಮಾನನಿಗೆ--ನೀನು ಹೇಳಿದ ಪ್ರಕಾರವೇ ತ್ವರೆಮಾಡಿ ವಸ್ತ್ರವನ್ನೂ ಕುದುರೆಯನ್ನೂ ತಕ್ಕೊಂಡು ಅರಮನೆಯ ಬಾಗಲಲ್ಲಿ ಕುಳಿತಿರುವ ಯೆಹೂದ್ಯನಾದ ಮೊರ್ದೆಕೈಗೆ ಆ ಪ್ರಕಾರ ಮಾಡು. ನೀನು ಹೇಳಿದ್ದೆಲ್ಲಾದರಲ್ಲಿ ಒಂದಾದರೂ ತಪ್ಪಬಾರದು ಅಂದನು.
ಎಸ್ತೇರಳು 6 : 11 (KNV)
ಆಗ ಹಾಮಾನನು ವಸ್ತ್ರವನ್ನೂ ಕುದು ರೆಯನ್ನೂ ತಕ್ಕೊಂಡು ಮೊರ್ದೆಕೈಯನ್ನು ಧರಿಸುವಂತೆ ಮಾಡಿ ಕುದುರೆಯ ಮೇಲೆ ಹತ್ತಿಸಿ ಪಟ್ಟಣದ ಬೀದಿ ಯಲ್ಲಿ ತಕ್ಕೊಂಡು ಹೋಗಿ ಅವನ ಮುಂದೆ ಅರಸನು ಘನಪಡಿಸಬೇಕೆಂದಿರುವ ಮನುಷ್ಯನಿಗೆ ಈ ಪ್ರಕಾರ ಮಾಡಲ್ಪಡುವದೆಂದು ಸಾರಿ ಹೇಳಿದನು.
ಎಸ್ತೇರಳು 6 : 12 (KNV)
ಮೊರ್ದೆಕೈ ಅರಮನೆಯ ಬಾಗಲಿಗೆ ತಿರಿಗಿ ಬಂದನು. ಆದರೆ ಹಾಮಾನನು ದುಃಖಪಟ್ಟು ತಲೆ ಯನ್ನು ಮುಚ್ಚಿಕೊಂಡು ತನ್ನ ಮನೆಗೆ ತೀವ್ರವಾಗಿ ಹೋದನು.
ಎಸ್ತೇರಳು 6 : 13 (KNV)
ಆಗ ಹಾಮಾನನು ತನ್ನ ಹೆಂಡತಿಯಾದ ಜೆರೆಷಳಿಗೂ ತನ್ನ ಸಮಸ್ತ ಸ್ನೇಹಿತರಿಗೂ ತನಗೆ ಆದ ದ್ದನ್ನೆಲ್ಲಾ ವಿವರವಾಗಿ ಹೇಳಿದನು. ಆಗ ಅವನ ಜ್ಞಾನಿಗಳೂ ಅವನ ಹೆಂಡತಿಯಾದ ಜೆರೆಷಳೂ ಅವ ನಿಗೆ--ನೀನು ಯಾವನ ಮುಂದೆ ಬೀಳಲಾರಂಭಿಸಿ ದ್ದೀಯೋ, ಆ ಮೊರ್ದೆಕೈ ಯೆಹೂದ್ಯರ ವಂಶಸ್ಥನಾ ಗಿದ್ದರೆ ನೀನು ಅವನನ್ನು ಜಯಿಸಲಾರಿ; ಅವನ ಮುಂದೆ ಬಿದ್ದೇಬೀಳುವಿ ಅಂದರು.ಅವರು ಇನ್ನೂ ಅವನ ಸಂಗಡ ಮಾತನಾಡುತ್ತಿರುವಾಗ ಅರಸನ ಮನೆ ವಾರ್ತೆಯವರು ಬಂದು ಎಸ್ತೇರಳು ಸಿದ್ಧಮಾಡಿಸಿದ ಔತಣಕ್ಕೆ ಹಾಮಾನನನ್ನು ಕರಕ್ಕೊಂಡು ಹೋಗಲು ತ್ವರೆಮಾಡಿದರು.
ಎಸ್ತೇರಳು 6 : 14 (KNV)
ಅವರು ಇನ್ನೂ ಅವನ ಸಂಗಡ ಮಾತನಾಡುತ್ತಿರುವಾಗ ಅರಸನ ಮನೆ ವಾರ್ತೆಯವರು ಬಂದು ಎಸ್ತೇರಳು ಸಿದ್ಧಮಾಡಿಸಿದ ಔತಣಕ್ಕೆ ಹಾಮಾನನನ್ನು ಕರಕ್ಕೊಂಡು ಹೋಗಲು ತ್ವರೆಮಾಡಿದರು.

1 2 3 4 5 6 7 8 9 10 11 12 13 14

BG:

Opacity:

Color:


Size:


Font: