ಪ್ರಸಂಗಿ 9 : 1 (KNV)
ನಾನು ಇವೆಲ್ಲವುಗಳ ಮೇಲೆ ಮನಸ್ಸಿಟ್ಟು ಇವೆಲ್ಲವುಗಳಲ್ಲಿ ನಾನು ತೀರ್ಮಾನಿಸಿ ದ್ದೇನಂದರೆ--ನೀತಿವಂತನು ಮತ್ತು ಜ್ಞಾನಿ ಇವರ ಕೆಲಸಗಳು ದೇವರ ಕೈಯಲ್ಲಿವೆ; ಯಾವ ಮನುಷ್ಯನೂ ಅವರ ಮುಂದಿರುವ ಎಲ್ಲವುಗಳನ್ನು, ಅಂದರೆ ಪ್ರೀತಿ ಯನ್ನು ಅಥವಾ ದ್ವೇಷವನ್ನು ತಿಳಿಯಲಾರನು.
ಪ್ರಸಂಗಿ 9 : 2 (KNV)
ಎಲ್ಲವು ಗಳು ಎಲ್ಲರಿಗೂ ಒಂದೇ ಬಗೆಯಾಗಿ ಸಂಭವಿಸುವವು. ನೀತಿವಂತನಿಗೂ ದುಷ್ಟನಿಗೂ ಸಂಗತಿ ಒಳ್ಳೆಯವನಿಗೂ ಶುದ್ಧನಿಗೂ ಅಶುದ್ಧನಿಗೂ ಮತ್ತು ಅರ್ಪಿಸುವವನಿಗೂ ಅರ್ಪಿಸದವನಿಗೂ ಒಂದೇ ಗತಿಯಾಗುವದು. ಒಳ್ಳೆಯ ವನ ಹಾಗೆಯೇ ಪಾಪಿಯೂ ಇರುವನು; ಆಣೆಯಿಡು ವವನಿಗೆ ಹೇಗೋ ಹಾಗೆಯೇ ಆಣೆಗೆ ಭಯಪಡುವ ವನೂ ಇರುವನು.
ಪ್ರಸಂಗಿ 9 : 3 (KNV)
ಸೂರ್ಯನ ಕೆಳಗೆ ಮಾಡುವ ಎಲ್ಲಾ ಸಂಗತಿಗಳಲ್ಲಿಯೂ ಇದೂ ಒಂದು ಕೆಟ್ಟದ್ದು; ಇದಕ್ಕೆಲ್ಲಾ ಒಂದು ಗತಿಯಿದೆ; ಹೌದು, ಮನುಷ್ಯ ಕುಮಾರರ ಹೃದಯಗಳು ಸಹ ಕೆಟ್ಟತನದಿಂದ ತುಂಬಿವೆ; ಅವರು ಜೀವಿಸುವಾಗ ಅವರ ಹೃದಯಗಳಲ್ಲಿ ಹುಚ್ಚು ತನವಿದೆ. ಅನಂತರ ಅವರು ಸಾಯುತ್ತಾರೆ (ಸತ್ತವರ ಬಳಿಗೆ ಹೋಗುತ್ತಾರೆ.)
ಪ್ರಸಂಗಿ 9 : 4 (KNV)
ಜೀವಂತರಾಗಿರುವವರೆಲ್ಲ ರೊಂದಿಗೆ ಸೇರಿಕೊಂಡವನಿಗೆ ನಿರೀಕ್ಷೆ ಇರುವದು. ಸತ್ತ ಸಿಂಹಕ್ಕಿಂತ ಬದುಕಿರುವ ನಾಯಿಯೇ ಲೇಸು.
ಪ್ರಸಂಗಿ 9 : 5 (KNV)
ಬದುಕಿರುವವರು ತಾವು ಸಾಯುತ್ತೇವೆಂದು ತಿಳಿದಿ ದ್ದಾರೆ; ಆದರೆ ಸತ್ತವರಿಗೆ ಏನೂ ತಿಳಿಯದು. ಇಲ್ಲವೆ ಅವರಿಗೆ ಇನ್ನು ಮೇಲೆ ಪ್ರತಿಫಲವೇನೂ ಇರದು. ಅವರ ಜ್ಞಾಪಕವು ಮರೆತುಹೋಗಿದೆ.
ಪ್ರಸಂಗಿ 9 : 6 (KNV)
ಅವರ ಪ್ರೀತಿಯೂ ದ್ವೇಷವೂ ಹೊಟ್ಟೇಕಿಚ್ಚೂ ಸಹ ಈಗ ಅಳಿದು ಹೋಗಿವೆ. ಸೂರ್ಯನ ಕೆಳಗೆ ಆಗುವ ಯಾವ ದರಲ್ಲೂ ಎಂದಿಗೂ ಅವರಿಗೆ ಪಾಲು ಇಲ್ಲ.
ಪ್ರಸಂಗಿ 9 : 7 (KNV)
ನೀನು ಹೋಗಿ ಸಂತೋಷದಿಂದ ನಿನ್ನ ರೊಟ್ಟಿ ಯನ್ನು ತಿಂದು ಹರ್ಷಹೃದಯದಿಂದ ನಿನ್ನ ದ್ರಾಕ್ಷಾ ರಸವನ್ನು ಕುಡಿ; ದೇವರು ಈಗ ನಿನ್ನ ಕೆಲಸಗಳನ್ನು ಒಪ್ಪಿಕೊಳ್ಳುತ್ತಾನೆ.
ಪ್ರಸಂಗಿ 9 : 8 (KNV)
ನಿನ್ನ ವಸ್ತ್ರಗಳು ಯಾವಾಗಲೂ ಬಿಳುಪಾಗಿರಲಿ. ನಿನ್ನ ತಲೆಯಲ್ಲಿ ಎಣ್ಣೆಯು ಕಡಿಮೆ ಯಾಗದಿರಲಿ.
ಪ್ರಸಂಗಿ 9 : 9 (KNV)
ನಿನ್ನ ನಿರ್ಥಕವಾದ ಎಲ್ಲಾ ದಿನಗಳಲ್ಲಿ ಸೂರ್ಯನ ಕೆಳಗೆ ಆತನು ನಿನಗೆ ಕೊಟ್ಟ ಜೀವನದ ಎಲ್ಲಾ ದಿನಗಳಲ್ಲಿ ನೀನು ಪ್ರೀತಿಸುವ ನಿನ್ನ ಹೆಂಡತಿ ಯೊಡನೆ ಆನಂದದಿಂದ ವಾಸಿಸು; ಸೂರ್ಯನ ಕೆಳಗೆ ನೀನು ಪಡುವ ಕಷ್ಟದಲ್ಲಿಯೂ ಇದೇ ನಿನ್ನ ಪಾಲಾಗಿದೆ.
ಪ್ರಸಂಗಿ 9 : 10 (KNV)
ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಶಕ್ತಿಯಿಂದ ಮಾಡು; ನೀನು ಹೋಗಲಿರುವ ಸಮಾಧಿಯಲ್ಲಿ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.
ಪ್ರಸಂಗಿ 9 : 11 (KNV)
ನಾನು ತಿರುಗಿಕೊಂಡು ಸೂರ್ಯನ ಕೆಳಗೆ ನೋಡಿದ್ದೇನಂದರೆ, ವೇಗಿಗಳಿಗೆ ಓಟವೂ ಪರಾಕ್ರಮ ಶಾಲಿಗಳಿಗೆ ಯುದ್ಧವೂ ಜ್ಞಾನಿಗಳಿಗೆ ರೊಟ್ಟಿಯೂ ವಿವೇಕಿಗಳಿಗೆ ಐಶ್ವರ್ಯವೂ ಪ್ರವೀಣರಿಗೆ ದಯೆಯೂ ಸಿಗುವದಿಲ್ಲ. ಕಾಲವೂ ಗತಿಯೂ ಅವರೆಲ್ಲರಿಗೆ ಸಂಭವಿ ಸುತ್ತವೆ.
ಪ್ರಸಂಗಿ 9 : 12 (KNV)
ಮನುಷ್ಯನು ಸಹ ತನ್ನ ಕಾಲವನ್ನು ತಿಳಿದಲ್ಲಿ ಬಾಧೆಯನ್ನುಂಟುಮಾಡುವ ಬಲೆಯಿಂದ ಹಿಡಿಯುವ ವಿಾನಿನಂತೆಯೂ ಉರುಲಿನಲ್ಲಿ ಸಿಕ್ಕುವ ಪಕ್ಷಿಗ ಳಂತೆಯೂ ಮನುಷ್ಯನ ಮಕ್ಕಳ ಮೇಲೆ ಕೇಡಿನ ಕಾಲವು ತಕ್ಷಣ ಬೀಳುವಾಗ ಹಿಡಿಯಲ್ಪಡುತ್ತಾರೆ.
ಪ್ರಸಂಗಿ 9 : 13 (KNV)
ನಾನು ಈ ಜ್ಞಾನವನ್ನೂ ಸಹ ಸೂರ್ಯನ ಕೆಳಗೆ ನೋಡಿದೆನು; ಇದು ನನಗೆ ದೊಡ್ಡದಾಗಿ ಕಾಣಿಸಿತು.
ಪ್ರಸಂಗಿ 9 : 14 (KNV)
ಅಲ್ಲಿ ಒಂದು ಸಣ್ಣ ನಗರವಿತ್ತು; ಅದರಲ್ಲಿ ಕೆಲವು ಮನುಷ್ಯರಿದ್ದರು; ಆಗ ಅಲ್ಲಿಗೆ ಒಬ್ಬ ಮಹಾಅರಸನು ಬಂದು ಅದನ್ನು ಮುತ್ತಿಗೆಹಾಕಿ ಅದಕ್ಕೆ ಎದುರಾಗಿ ದೊಡ್ಡ ಕೊತ್ತಲುಗಳನ್ನು ಕಟ್ಟಿಸಿದನು.
ಪ್ರಸಂಗಿ 9 : 15 (KNV)
ಆಗ ಅದ ರಲ್ಲಿ ಒಬ್ಬ ಜ್ಞಾನಿಯಾದ ಬಡಮನುಷ್ಯನು ಕಾಣಿಸಿ ಕೊಂಡು ಅವನು ತನ್ನ ಜ್ಞಾನದಿಂದ ಆ ಪಟ್ಟಣವನ್ನು ತಪ್ಪಿಸಿದನು. ಆದರೂ ಆ ಬಡಮನುಷ್ಯನನ್ನು ಯಾವನೂ ಜ್ಞಾಪಕಮಾಡಿಕೊಳ್ಳಲಿಲ್ಲ.
ಪ್ರಸಂಗಿ 9 : 16 (KNV)
ಆ ಮೇಲೆ ನಾನು--ಜ್ಞಾನವು ಬಲಕ್ಕಿಂತ ಉತ್ತಮವಾದದ್ದಾಗಿ ದ್ದಾಗ್ಯೂ ಬಡವನ ಜ್ಞಾನವು ತಿರಸ್ಕರಿಸಲ್ಪಟ್ಟದ್ದಾಗಿದ್ದು ಅವನ ಮಾತುಗಳನ್ನು ಯಾರೂ ಲಕ್ಷಿಸುವದಿಲ್ಲ ಎಂದು ಅಂದುಕೊಂಡೆನು.
ಪ್ರಸಂಗಿ 9 : 17 (KNV)
ಜ್ಞಾನಿಗಳ ಮಾತುಗಳು ಹುಚ್ಚರನ್ನು ಆಳುವವನ ಕೂಗಿಗಿಂತಲೂ ಸಮಾಧಾನವಾಗಿ ಕೇಳಲ್ಪಡುತ್ತವೆ.
ಪ್ರಸಂಗಿ 9 : 18 (KNV)
ಯುದ್ಧದ ಆಯುಧಗಳಿಗಿಂತಲೂ ಜ್ಞಾನವು ಲೇಸು. ಆದರೆ ಒಬ್ಬ ಪಾಪಿಯು ಹೆಚ್ಚು ಒಳ್ಳೆಯದನ್ನು ನಾಶಪಡಿಸುತ್ತಾನೆ.

1 2 3 4 5 6 7 8 9 10 11 12 13 14 15 16 17 18