ಪ್ರಸಂಗಿ 6 : 1 (KNV)
ಸೂರ್ಯನ ಕೆಳಗೆ ಇರುವ ಒಂದು ಕೇಡನ್ನು ನಾನು ಕಂಡೆನು; ಅದು ಮನುಷ್ಯರೊ ಳಗೆ ಸಾಧಾರಣವಾಗಿದೆ.
ಪ್ರಸಂಗಿ 6 : 2 (KNV)
ತಾನು ಅಪೇಕ್ಷೆ ಪಟ್ಟದ್ದ ರಲ್ಲಿ ಯಾವದೂ ತನ್ನ ಪ್ರಾಣಕ್ಕೆ ಕೊರತೆಯಾಗದಂತೆ ದೇವರು ತನಗೆ ಅನುಗ್ರಹಿಸಿದ ಧನವೂ ಐಶ್ವರ್ಯವೂ ಸನ್ಮಾನವೂ ಇರುವ ಮನುಷ್ಯನಿಗೆ ಅದನ್ನು ಅನುಭವಿಸು ವಂತೆ ಆತನು ಸಾಮರ್ಥ್ಯವನ್ನು ಕೊಡುವದಿಲ್ಲ; ಆದರೆ ಪರನು ಅದನ್ನು ಅನುಭವಿಸುತ್ತಾನೆ; ಇದು ವ್ಯರ್ಥವೂ ಕೆಟ್ಟರೋಗವೂ ಆಗಿದೆ.
ಪ್ರಸಂಗಿ 6 : 3 (KNV)
ತನ್ನ ವರುಷಗಳ ದಿನಗಳು ಬಹಳವಾಗಿದ್ದು ತನ್ನ ಪ್ರಾಣವು ಸುಖದಿಂದ ತೃಪ್ತಿ ಪಡದೆ ತನಗೆ ಹೂಣಿಡುವಿಕೆಯು ಇಲ್ಲದೇ ಅವನು ನೂರು ಮಕ್ಕಳನ್ನು ಪಡೆದು ಅನೇಕ ವರುಷಗಳು ಬದುಕಿದರೆ ನಾನು ಹೇಳುವದೇನಂದರೆ, ಅವನಿ ಗಿಂತಲೂ ಇನ್ನು ಹುಟ್ಟದಿರುವವನೇ ಉತ್ತಮ.
ಪ್ರಸಂಗಿ 6 : 4 (KNV)
ಅವನು ವ್ಯರ್ಥದಿಂದ ಬಂದು ಕತ್ತಲೆಯಲ್ಲಿ ಹೊರಟು ಹೋಗು ತ್ತಾನೆ; ಅವನ ಹೆಸರು ಕತ್ತಲೆಯಿಂದ ಮುಚ್ಚಲ್ಪಡುವದು.
ಪ್ರಸಂಗಿ 6 : 5 (KNV)
ಇದಲ್ಲದೆ ಅವನು ಸೂರ್ಯನನ್ನು ನೋಡಲಿಲ್ಲ, ಯಾವದನ್ನು ಅರಿತಿರಲಿಲ್ಲ; ಮತ್ತೊಬ್ಬನಿಗಿಂತ ಇದಕ್ಕೆ ಹೆಚ್ಚಿನ ವಿಶ್ರಾಂತಿ ಇದೆ.
ಪ್ರಸಂಗಿ 6 : 6 (KNV)
ಹೌದು, ಎರಡು ಸಾವಿರ ದಷ್ಟು ವರುಷಗಳು ಅವನು ಬದುಕಿದರೂ ಅವನು ಸುಖವನ್ನು ಅನುಭವಿಸಲಿಲ್ಲ; ಎಲ್ಲರೂ ಒಂದೇ ಸ್ಥಳಕ್ಕೆ ಹೋಗುತ್ತಾರಲ್ಲವೇ?
ಪ್ರಸಂಗಿ 6 : 7 (KNV)
ಮನುಷ್ಯನ ಪ್ರಯಾಸವೆಲ್ಲಾ ಅವನ ಹೊಟ್ಟೆಗಾಗಿಯೇ ಮತ್ತು ಅವನ ಅಪೇಕ್ಷೆ ತೃಪ್ತಿಹೊಂದುವದಿಲ್ಲ.
ಪ್ರಸಂಗಿ 6 : 8 (KNV)
ಬುದ್ಧಿಹೀನನಿಗಿಂತ ಜ್ಞಾನಿಗೆ ಹೆಚ್ಚು ಏನಿದೆ? ಜೀವಿತರ ಮುಂದೆ ನಡೆಯುವದಕ್ಕೆ ತಿಳಿದ ಬಡವನಿಗೆ ಏನಿದೆ?
ಪ್ರಸಂಗಿ 6 : 9 (KNV)
ಅಪೇಕ್ಷೆಯ ತಿರುಗಾಟ ಕ್ಕಿಂತ ಕಣ್ಣುಗಳ ದೃಷ್ಟಿಯು ಉತ್ತಮ; ಇದೂ ಕೂಡ ವ್ಯರ್ಥವೂ ಮನಸ್ಸಿಗೆ ಆಯಾಸಕರವೂ ಆಗಿದೆ.
ಪ್ರಸಂಗಿ 6 : 10 (KNV)
ಇದ್ದವನು ಆಗಲೇ ಹೆಸರುಗೊಂಡಿದ್ದಾನೆ; ಅವನು ಮನುಷ್ಯನೇ ಎಂದು ಗೊತ್ತಾಗಿದೆ; ಅಲ್ಲದೆ ಅವನಿಗಿಂತ ಬಲಿಷ್ಟನೊಂದಿಗೆ ಅವನು ಹೋರಾಡುವದಿಲ್ಲ.
ಪ್ರಸಂಗಿ 6 : 11 (KNV)
ವ್ಯರ್ಥವಾದದ್ದನ್ನು ವೃದ್ಧಿಗೊಳಿಸುವ ಅನೇಕ ಸಂಗತಿ ಗಳು ಇರುವದರಿಂದ ಮನುಷ್ಯನಿಗೆ ಏನು ಲಾಭ?
ಪ್ರಸಂಗಿ 6 : 12 (KNV)
ನೆರಳಿನಂತೆ ತನ್ನ ವ್ಯರ್ಥವಾದ ಜೀವಿತದ ಎಲ್ಲಾ ದಿವಸಗಳು ಕಳೆಯುವ ಮನುಷ್ಯನಿಗೆ ಈ ಜೀವಿತ ದಲ್ಲಿ ಯಾವದು ಒಳ್ಳೇದೆಂದು ಯಾವನು ಬಲ್ಲನು? ಸೂರ್ಯನ ಕೆಳಗೆ ಅವನ ತರುವಾಯ ಏನು ಇರುವ ದೆಂದು ಯಾವ ಮನುಷ್ಯನಿಗೆ ಹೇಳಬಲ್ಲನು.
❮
❯
1
2
3
4
5
6
7
8
9
10
11
12