ಪ್ರಸಂಗಿ 4 : 1 (KNV)
ಹೀಗೆ ನಾನು ತಿರುಗಿಕೊಂಡು ಸೂರ್ಯನ ಕೆಳಗೆ ನಡೆಯುತ್ತಿರುವ ಹಿಂಸೆಗಳನ್ನೆಲ್ಲಾ ನಾನು ಯೋಚಿಸಿದೆನು; ಹಿಂಸಿಸಲ್ಪಟ್ಟವರ ಕಣ್ಣೀರನ್ನೂ ಅವರನ್ನು ಆದರಿಸುವವರು ಯಾರೂ ಇಲ್ಲದಿರುವ ದನ್ನೂ ನೋಡಿದೆನು; ಅವರನ್ನು ಹಿಂಸೆಪಡಿಸುವವರ ಕಡೆಗೆ ಶಕ್ತಿ ಇತ್ತು; ಆದರೆ ಇವರನ್ನು ಆದರಿಸುವವನು ಯಾವನೂ ಇಲ್ಲ.
ಪ್ರಸಂಗಿ 4 : 2 (KNV)
ಆದಕಾರಣ ಇನ್ನೂ ಜೀವ ದಿಂದಿದ್ದು ಬದುಕುವವರಿಗಿಂತ ಆಗಲೇ ಮೃತಪಟ್ಟ ಸತ್ತವರನ್ನು ನಾನು ಹೆಚ್ಚಾಗಿ ಹೊಗಳಿದೆನು.
ಪ್ರಸಂಗಿ 4 : 3 (KNV)
ಹೌದು, ಇನ್ನೂ ಹುಟ್ಟದೆ, ಸೂರ್ಯನ ಕೆಳಗೆ ನಡೆಯುವ ಕೆಟ್ಟ ಕೃತ್ಯವನ್ನು ನೋಡದಿರುವವನೇ ಇವರಿಬ್ಬರಿ ಗಿಂತಲೂ ಶ್ರೇಷ್ಠನು.
ಪ್ರಸಂಗಿ 4 : 4 (KNV)
ತಿರುಗಿ ಎಲ್ಲಾ ಪ್ರಯಾಸಕ್ಕಾಗಿಯೂ ಪ್ರತಿಯೊಂದು ಒಳ್ಳೆಯ ಕಾರ್ಯಕ್ಕಾಗಿಯೂ ಮನುಷ್ಯನು ತನ್ನ ನೆರೆಯವನ ಮೇಲೆ ಅಸೂಯೆ ಪಡುತ್ತಾನೆಂದೂ ನಾನು ತಿಳುಕೊಂಡೆನು. ಇದೂ ಕೂಡ ವ್ಯರ್ಥವೂ ಪ್ರಾಣಕ್ಕೆ ಆಯಾಸಕರವೂ ಆಗಿದೆ.
ಪ್ರಸಂಗಿ 4 : 5 (KNV)
ಬುದ್ಧಿಹೀನನು ತನ್ನ ಕೈಗಳನ್ನು ಒಟ್ಟಿಗೆ ಮಡಚಿಕೊಂಡು ತನ್ನ ಸ್ವಂತ ಮಾಂಸವನ್ನು ತಿನ್ನುತ್ತಾನೆ.
ಪ್ರಸಂಗಿ 4 : 6 (KNV)
ಪ್ರಯಾಸದಿಂದಲೂ ಪ್ರಾಣಕ್ಕೆ ಆಯಾಸದಿಂದಲೂ ತುಂಬಿದ ಎರಡು ಕೈಗಳಿಂದಾದದ್ದಕಿಂತ ನೆಮ್ಮದಿಯಿಂದ ಕೂಡಿದ ಒಂದು ಕೈಯಿಂದಾದದ್ದೇ ಲೇಸು.
ಪ್ರಸಂಗಿ 4 : 7 (KNV)
ಆಗ ನಾನು ತಿರುಗಿಕೊಂಡು ಸೂರ್ಯನ ಕೆಳಗೆ ಇದ್ದ ವ್ಯರ್ಥವನ್ನು ಕಂಡೆನು.
ಪ್ರಸಂಗಿ 4 : 8 (KNV)
ಎರಡನೆಯವನಿಲ್ಲದ ಒಬ್ಬೊಂಟಿಗನು ಒಬ್ಬನಿದ್ದಾನೆ; ಹೌದು, ಅವನಿಗೆ ಮಗುವಾಗಲೀ ಸಹೋದರನಾಗಲೀ ಇಲ್ಲ; ಆದರೂ ಅವನ ಪ್ರಯಾಸಕ್ಕೆ ಕೊನೆಯಿಲ್ಲ. ಅಲ್ಲದೆ ಐಶ್ವರ್ಯ ದಿಂದ ಅವನ ಕಣ್ಣು ತೃಪ್ತಿಹೊಂದದು; ಮಾತ್ರವಲ್ಲದೆ ಅವನು--ನಾನು ಯಾರಿಗೋಸ್ಕರ ಕಷ್ಟಪಟ್ಟು ಪ್ರಾಣ ವನ್ನು ಅದಕ್ಕೆ ಸುಖವಿಲ್ಲದ ಹಾಗೆ ಕೊರೆತೆಪಡಿಸು ತ್ತೇನೆ; ಎಂದು ಅವನು ಅಂದುಕೊಳ್ಳುವನು. ಇದು ಕೂಡ ವ್ಯರ್ಥವೇ; ಹೌದು, ವ್ಯಥೆಯಿಂದಾದ ಪ್ರಯಾಸವೇ.
ಪ್ರಸಂಗಿ 4 : 9 (KNV)
ಒಬ್ಬನಿಗಿಂತ ಇಬ್ಬರು ಲೇಸು; ತಮ್ಮ ಪ್ರಯಾಸಕ್ಕೆ ಅವರಿಗೆ ಒಳ್ಳೆಯ ಪ್ರತಿಫಲವಿದೆ.
ಪ್ರಸಂಗಿ 4 : 10 (KNV)
ಒಬ್ಬನು ಬಿದ್ದರೆ ಇನ್ನೊಬ್ಬನು ತನ್ನ ಸಂಗಡಿಗನನ್ನು ಎತ್ತುವನು; ಅವನು ಒಬ್ಬೊಂಟಿಗನಾಗಿ ಬಿದ್ದರೆ ಅಯ್ಯೋ! ಅವನಿಗೆ ಸಹಾಯ ಮಾಡುವದಕ್ಕೆ ಇನ್ನೊಬ್ಬ ನಿಲ್ಲ.
ಪ್ರಸಂಗಿ 4 : 11 (KNV)
ತಿರುಗಿ ಇಬ್ಬರು ಜೊತೆಯಲ್ಲಿ ಮಲಗಿಕೊಂಡರೆ ಅವರಿಗೆ ಬೆಚ್ಚಗಾಗುತ್ತದೆ; ಒಬ್ಬನು ಹೇಗೆ ಬೆಚ್ಚಗಾಗಿ ರುತ್ತಾನೆ?
ಪ್ರಸಂಗಿ 4 : 12 (KNV)
ಅವನನ್ನು ಒಬ್ಬನು ಜಯಿಸಿದರೆ ಇಬ್ಬರು ಅವನನ್ನು ಎದುರಿಸುವರು; ಮೂರು ಹುರಿಯ ಹಗ್ಗವು ಬೇಗನೆ ಕಿತ್ತುಹೋಗುವದಿಲ್ಲ.
ಪ್ರಸಂಗಿ 4 : 13 (KNV)
ಬುದ್ಧಿಯ ಹೇಳಿಕೆಗೆ ಕಿವಿಗೊಡದ ಮುದುಕನೂ ಮೂಢನೂ ಆದ ಅರಸನಿಗಿಂತ ಬಡವನೂ ಜ್ಞಾನಿಯೂ ಆದ ಒಂದು ಮಗುವೇ ಮೇಲು.
ಪ್ರಸಂಗಿ 4 : 14 (KNV)
ಸೆರೆ ಯಿಂದ ಆಳುವದಕ್ಕಾಗಿ ಅವನು ಬರುತ್ತಾನೆ; ಇದಲ್ಲದೆ, ತನ್ನ ರಾಜ್ಯದಲ್ಲಿ ಹುಟ್ಟಿದವನು ಬಡವನಾಗುತ್ತಾನೆ.
ಪ್ರಸಂಗಿ 4 : 15 (KNV)
ತನಗೆ ಪ್ರತಿಯಾಗಿ ನಿಲ್ಲುವ ಎರಡನೆಯ ಮಗು ವಿನೊಂದಿಗೆ ನಡೆಯುವ ಜೀವಿತರನ್ನೆಲ್ಲಾ ಸೂರ್ಯನ ಕೆಳಗೆ ನಾನು ನೋಡಿದೆನು.
ಪ್ರಸಂಗಿ 4 : 16 (KNV)
ಎಲ್ಲಾ ಜನರಿಗೂ ಅವರಿಗಿಂತ ಮುಂಚೆ ಇದ್ದ ಎಲ್ಲವುಗಳಿಗೂ ಅಂತ್ಯವಿಲ್ಲ; ಅವನ ತರುವಾಯ ಬರುವವನು ಸಹ ಅವನಲ್ಲಿ ಆನಂದಿಸುವದಿಲ್ಲ. ಖಂಡಿತವಾಗಿಯೂ ಇದೂ ಕೂಡ ವ್ಯರ್ಥವೂ ಮನಸ್ಸಿಗೆ ಆಯಾಸಕರವೂ ಆಗಿದೆ.
❮
❯