ಧರ್ಮೋಪದೇಶಕಾಂಡ 5 : 1 (KNV)
ಆಗ ಮೋಶೆಯು ಇಸ್ರಾಯೇಲ್ಯರನ್ನೆಲ್ಲಾ ಕರೆದು ಅವರಿಗೆ--ಓ ಇಸ್ರಾಯೇಲೇ, ನಾನು ಈಹೊತ್ತು ನಿಮಗೆ ಹೇಳುವ ನಿಯಮಗಳನ್ನೂ ನ್ಯಾಯಗಳನ್ನೂ ಕೇಳಿರಿ; ಅವುಗಳನ್ನು ಕಲಿತು ಕೈಕೊಂಡು ನಡೆಯಬೇಕು.
ಧರ್ಮೋಪದೇಶಕಾಂಡ 5 : 2 (KNV)
ನಮ್ಮ ದೇವರಾದ ಕರ್ತನು ಹೋರೇ ಬಿನಲ್ಲಿ ನಮ್ಮ ಸಂಗಡ ಆ ಒಡಂಬಡಿಕೆಯನ್ನು ಮಾಡಿದನು.
ಧರ್ಮೋಪದೇಶಕಾಂಡ 5 : 3 (KNV)
ಕರ್ತನು ಆ ಒಡಂಬಡಿಕೆಯನ್ನು ನಮ್ಮ ಪಿತೃಗಳ ಸಂಗಡ ಅಲ್ಲ, ನಮ್ಮ ಸಂಗಡವೇ ಮಾಡಿದನು. ನಾವೆಲ್ಲರೂ ಈಹೊತ್ತು ಇಲ್ಲಿ ಜೀವಿತರಾಗಿದ್ದೇವೆ.
ಧರ್ಮೋಪದೇಶಕಾಂಡ 5 : 4 (KNV)
ಮುಖಾಮುಖಿಯಾಗಿ ಕರ್ತನು ನಿಮ್ಮ ಸಂಗಡ ಬೆಟ್ಟದಲ್ಲಿ ಬೆಂಕಿಯೊಳಗಿಂದ ಮಾತನಾಡಿದನು.
ಧರ್ಮೋಪದೇಶಕಾಂಡ 5 : 5 (KNV)
(ಆ ಕಾಲದಲ್ಲಿ ನಾನು ಕರ್ತನ ವಾಕ್ಯವನ್ನು ನಿಮಗೆ ತಿಳಿಸುವ ಹಾಗೆ ಕರ್ತನಿಗೂ ನಿಮಗೂ ನಡುವೆ ನಿಂತಿದ್ದೆನು; ನೀವು ಆ ಬೆಂಕಿಗೆ ಭಯಪಟ್ಟು ಬೆಟ್ಟದ ಮೇಲೆ ಏರಲಿಲ್ಲ.) ಆತನು ಹೇಳಿದ್ದೇನಂದರೆ--
ಧರ್ಮೋಪದೇಶಕಾಂಡ 5 : 6 (KNV)
ನಿನ್ನನ್ನು ಐಗುಪ್ತದೇಶದೊಳಗಿಂದ ಅಂದರೆ ದಾಸ ತ್ವದ ಮನೆಯೊಳಗಿಂದ ಹೊರಗೆ ಬರಮಾಡಿದ ನಿನ್ನ ದೇವರಾದ ಕರ್ತನು ನಾನೇ.
ಧರ್ಮೋಪದೇಶಕಾಂಡ 5 : 7 (KNV)
ನನ್ನ ಮುಂದೆ ನಿನಗೆ ಬೇರೆ ದೇವರುಗಳು ಇರಬಾರದು.
ಧರ್ಮೋಪದೇಶಕಾಂಡ 5 : 8 (KNV)
ಮೇಲಿನ ಆಕಾಶ ದಲ್ಲಾಗಲಿ ಕೆಳಗಿನ ಭೂಮಿಯಲ್ಲಾಗಲಿ ಭೂಮಿಯ ಕೆಳಗಿನ ನೀರುಗಳಲ್ಲಾಗಲಿ ಇರುವಂಥ ಯಾವ ದೊಂದರ ರೂಪದ ವಿಗ್ರಹವನ್ನು ನಿನಗೆ ಮಾಡಿ ಕೊಳ್ಳಬಾರದು,
ಧರ್ಮೋಪದೇಶಕಾಂಡ 5 : 9 (KNV)
ಅವುಗಳಿಗೆ ಅಡ್ಡಬೀಳಲೂಬಾರದು, ಸೇವಿಸಲೂಬಾರದು. ಯಾಕಂದರೆ ನಿನ್ನ ದೇವರಾದ ಕರ್ತನಾಗಿರುವ ನಾನು ರೋಷವುಳ್ಳ ದೇವರಾಗಿದ್ದೇನೆ. ನನ್ನನ್ನು ಹಗೆಮಾಡುವವರಲ್ಲಿ ಪಿತೃಗಳ ಅಕ್ರಮವನ್ನು ಮಕ್ಕಳ ಮೇಲೆ ಮೂರನೆಯ ನಾಲ್ಕನೆಯ ತಲಾಂತರದ ವರೆಗೆ ನ್ಯಾಯತೀರಿಸುತ್ತೇನೆ.
ಧರ್ಮೋಪದೇಶಕಾಂಡ 5 : 10 (KNV)
ಆದರೆ ನನ್ನನ್ನು ಪ್ರೀತಿ ಮಾಡಿ ನನ್ನ ಆಜ್ಞೆಗಳನ್ನು ಕೈಕೊಳ್ಳುವವರಿಗೆ ಸಾವಿರಗಳ ವರೆಗೆ ಕರುಣೆ ತೋರಿಸುತ್ತೇನೆ.
ಧರ್ಮೋಪದೇಶಕಾಂಡ 5 : 11 (KNV)
ನಿನ್ನ ದೇವರಾದ ಕರ್ತನ ಹೆಸರನ್ನು ವ್ಯರ್ಥವಾಗಿ ಎತ್ತಬೇಡ; ಕರ್ತನು ತನ್ನ ಹೆಸರನ್ನು ವ್ಯರ್ಥವಾಗಿ ಎತ್ತುವವನನ್ನು ನಿರ್ದೋಷಿಯೆಂದು ಎಣಿಸುವದಿಲ್ಲ.
ಧರ್ಮೋಪದೇಶಕಾಂಡ 5 : 12 (KNV)
ನಿನ್ನ ದೇವರಾದ ಕರ್ತನು ನಿನಗೆ ಆಜ್ಞಾಪಿಸಿದಂತೆ ಸಬ್ಬತ್‌ ದಿವಸವನ್ನು ಪರಿಶುದ್ಧಮಾಡುವದಕ್ಕೆ ಅದನ್ನು ಕಾಪಾಡು.
ಧರ್ಮೋಪದೇಶಕಾಂಡ 5 : 13 (KNV)
ಆರು ದಿವಸಗಳಲ್ಲಿ ನೀನು ದುಡಿದು ನಿನ್ನ ಕೆಲಸವನ್ನೆಲ್ಲಾ ಮಾಡಬೇಕು.
ಧರ್ಮೋಪದೇಶಕಾಂಡ 5 : 14 (KNV)
ಏಳನೇ ದಿವಸವು ನಿನ್ನ ದೇವರಾದ ಕರ್ತನ ಸಬ್ಬತ್‌ ದಿವಸವೇ; ಅದ ರಲ್ಲಿ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ಎತ್ತೂ ಕತ್ತೆಯೂ ಎಲ್ಲಾಪಶುಗಳೂ ನಿನ್ನ ಬಾಗಲುಗಳಲ್ಲಿರುವ ಪರವಾಸಿಯೂ ಯಾವ ಕೆಲಸ ವನ್ನೂ ಮಾಡಬಾರದು. ನಿನ್ನ ದಾಸನೂ ದಾಸಿಯೂ ನಿನ್ನ ಹಾಗೆ ವಿಶ್ರಮಿಸಿಕೊಳ್ಳಬೇಕು.
ಧರ್ಮೋಪದೇಶಕಾಂಡ 5 : 15 (KNV)
ನೀನು ಐಗುಪ್ತ ದೇಶದಲ್ಲಿ ದಾಸನಾಗಿದ್ದಿ ಎಂದೂ ನಿನ್ನ ದೇವರಾದ ಕರ್ತನು ನಿನ್ನನ್ನು ಅಲ್ಲಿಂದ ಬಲವಾದ ಕೈಯಿಂದಲೂ ಚಾಚಿದ ತೋಳಿನಿಂದಲೂ ಹೊರಗೆ ಬರಮಾಡಿದ ನೆಂದೂ ಜ್ಞಾಪಕಮಾಡಿಕೊಳ್ಳಬೇಕು. ಆದಕಾರಣ ನಿನ್ನ ದೇವರಾದ ಕರ್ತನು ನಿನಗೆ ಸಬ್ಬತ್‌ ದಿವಸವನ್ನು ಆಚರಿಸಬೇಕೆಂದು ಆಜ್ಞಾಪಿಸಿದ್ದಾನೆ.
ಧರ್ಮೋಪದೇಶಕಾಂಡ 5 : 16 (KNV)
ನಿನ್ನ ದಿವಸಗಳು ಹೆಚ್ಚಾಗುವ ಹಾಗೆಯೂ ನಿನ್ನ ದೇವರಾದ ಕರ್ತನು ನಿನಗೆ ಕೊಡುವ ಭೂಮಿಯಲ್ಲಿ ನಿನಗೆ ಒಳ್ಳೇದಾಗುವ ಹಾಗೆಯೂ ನಿನ್ನ ದೇವರಾದ ಕರ್ತನು ಆಜ್ಞಾಪಿಸಿದಂತೆ ನಿನ್ನ ತಂದೆಯನ್ನೂ ನಿನ್ನ ತಾಯಿಯನ್ನೂ ಸನ್ಮಾನಿಸು.
ಧರ್ಮೋಪದೇಶಕಾಂಡ 5 : 17 (KNV)
ಕೊಲ್ಲಬೇಡ
ಧರ್ಮೋಪದೇಶಕಾಂಡ 5 : 18 (KNV)
ವ್ಯಭಿಚಾರ ಮಾಡಬೇಡ.
ಧರ್ಮೋಪದೇಶಕಾಂಡ 5 : 19 (KNV)
ಕದಿಯಬೇಡ.
ಧರ್ಮೋಪದೇಶಕಾಂಡ 5 : 20 (KNV)
ನಿನ್ನ ನೆರೆಯವನ ಮೇಲೆ ಸುಳ್ಳುಸಾಕ್ಷಿ ಹೇಳಬೇಡ.
ಧರ್ಮೋಪದೇಶಕಾಂಡ 5 : 21 (KNV)
ನಿನ್ನ ನೆರೆಯವನ ಹೆಂಡತಿಯನ್ನು ಆಶಿಸಬೇಡ; ನೆರೆಯವನ ಮನೆಯನ್ನೂ ಅವನ ಹೊಲವನ್ನೂ ದಾಸ ದಾಸಿಯರನ್ನೂ ಪಶು ಕತ್ತೆಗಳನ್ನೂ ನಿನ್ನ ನೆರೆಯವನಿಗೆ ಇರುವ ಯಾವದನ್ನೂ ಆಶಿಸಬೇಡ ಎಂದು ಹೇಳಿದನು.
ಧರ್ಮೋಪದೇಶಕಾಂಡ 5 : 22 (KNV)
ಈ ಮಾತುಗಳನ್ನು ಕರ್ತನು ಬೆಂಕಿಯ ಮೇಘದ ಕಾರ್ಗತ್ತಲೆಯ ಮಧ್ಯದಿಂದಲೂ ಮಹಾಶಬ್ದ ದಿಂದಲೂ ಬೆಟ್ಟದಲ್ಲಿ ನಿಮ್ಮ ಸಭೆಗೆಲ್ಲಾ ಹೇಳಿದನು; ಹೆಚ್ಚೇನೂ ಕೂಡಿಸಲಿಲ್ಲ. ಇವುಗಳನ್ನು ಆತನು ಕಲ್ಲಿನ ಎರಡು ಹಲಗೆಗಳಲ್ಲಿ ಬರೆದು ನನಗೆ ಕೊಟ್ಟನು.
ಧರ್ಮೋಪದೇಶಕಾಂಡ 5 : 23 (KNV)
(ಆ ಬೆಟ್ಟವು ಬೆಂಕಿಯಿಂದ ಉರಿಯುತ್ತಿರಲಾಗಿ ನೀವು ಕತ್ತಲೆಯಿಂದ ಆ ಶಬ್ದವನ್ನು ಕೇಳಿ ನಿಮ್ಮ ಗೋತ್ರ ಗಳ ಮುಖ್ಯಸ್ಥರೂ ನಿಮ್ಮ ಹಿರಿಯರೂ ನನ್ನ ಬಳಿಗೆ ಬಂದು ನನಗೆ)
ಧರ್ಮೋಪದೇಶಕಾಂಡ 5 : 24 (KNV)
ಇಗೋ, ನಮ್ಮ ದೇವರಾದ ಕರ್ತನು ತನ್ನ ಮಹಿಮೆಯನ್ನೂ ತನ್ನ ಘನವನ್ನೂ ನಮಗೆ ತೋರಿಸಿದ್ದಾನೆ; ಆತನ ಶಬ್ದವನ್ನು ಬೆಂಕಿಯೊಳಗಿಂದ ಕೇಳಿದ್ದೇವೆ; ದೇವರು ಮನುಷ್ಯರ ಸಂಗಡ ಮಾತ ನಾಡಲು ಅವರು ಬದುಕುತ್ತಾರೆಂದು ಈಹೊತ್ತು ನೋಡಿದ್ದೇವೆ.
ಧರ್ಮೋಪದೇಶಕಾಂಡ 5 : 25 (KNV)
ಹಾಗಾದರೆ ಈಗ ನಾವು ಯಾಕೆ ಸಾಯಬೇಕು? ಈ ಮಹಾಅಗ್ನಿಯು ನಿಶ್ಚಯವಾಗಿ ನಮ್ಮನ್ನು ದಹಿಸಿಬಿಡುವದು; ನಾವು ಇನ್ನೂ ನಮ್ಮ ದೇವರಾದ ಕರ್ತನ ಶಬ್ದವನ್ನು ಕೇಳಿದರೆ ಸಾಯುತ್ತೇವೆ.
ಧರ್ಮೋಪದೇಶಕಾಂಡ 5 : 26 (KNV)
ಸಮಸ್ತ ಜನರಲ್ಲಿ ಯಾರು ನಮ್ಮ ಹಾಗೆ ಬೆಂಕಿಯೊಳ ಗಿಂದ ಮಾತನಾಡುವ ಜೀವವುಳ್ಳ ದೇವರ ಶಬ್ದವನ್ನು ಕೇಳಿ ಬದುಕಿದರು?
ಧರ್ಮೋಪದೇಶಕಾಂಡ 5 : 27 (KNV)
ನೀನೇ ಸವಿಾಪಕ್ಕೆ ಹೋಗಿ ನಮ್ಮ ದೇವರಾದ ಕರ್ತನು ಹೇಳುವದನ್ನೆಲ್ಲಾ ಕೇಳಿ ನಮ್ಮ ದೇವರಾದ ಕರ್ತನು ನಿನಗೆ ಹೇಳಿದ್ದನ್ನೆಲ್ಲಾ ನೀನೇ ನಮಗೆ ಹೇಳು; ಆಗ ನಾವು ಕೇಳಿ ಅದನ್ನು ಮಾಡುವೆವು ಎಂದು ಹೇಳಿದಿರಿ.
ಧರ್ಮೋಪದೇಶಕಾಂಡ 5 : 28 (KNV)
ನೀವು ನನ್ನ ಹತ್ತಿರ ಮಾತನಾಡಿದಾಗ ಕರ್ತನು ನಿಮ್ಮ ಮಾತುಗಳ ಶಬ್ದವನ್ನು ಕೇಳಿ ನನಗೆ--ಈ ಜನರು ನಿನಗೆ ಹೇಳಿದ ಮಾತುಗಳ ಶಬ್ದವನ್ನು ಕೇಳಿ ದ್ದೇನೆ. ಅವರು ಹೇಳಿದ್ದೆಲ್ಲಾ ಒಳ್ಳೇದು.
ಧರ್ಮೋಪದೇಶಕಾಂಡ 5 : 29 (KNV)
ಅವರು ನನಗೆ ಭಯಪಟ್ಟು ನನ್ನ ಆಜ್ಞೆಗಳನ್ನೆಲ್ಲಾ ಎಂದೆಂದಿಗೂ ಕೈಕೊಳ್ಳುವಂಥ ಹೃದಯವು ಅವರಲ್ಲಿದ್ದರೆ ಎಷ್ಟೋ ಒಳ್ಳೇದು; ಆಗ ಅವರಿಗೂ ಅವರ ಮಕ್ಕಳಿಗೂ ಎಂದೆಂ ದಿಗೂ ಒಳ್ಳೆಯದಾಗುವದು.
ಧರ್ಮೋಪದೇಶಕಾಂಡ 5 : 30 (KNV)
ನೀನು ಹೋಗಿ ಅವರಿಗೆ--ನಿಮ್ಮ ಡೇರೆಗಳಿಗೆ ತಿರುಗಿಕೊಳ್ಳಬೇಕು ಎಂದು ಹೇಳು.
ಧರ್ಮೋಪದೇಶಕಾಂಡ 5 : 31 (KNV)
ನೀನಾದರೋ ಇಲ್ಲಿ ನನ್ನ ಸಂಗಡ ನಿಂತು ಕೋ; ಆಗ ನೀನು ಅವರಿಗೆ ಬೋಧಿಸತಕ್ಕಂಥ ಮತ್ತು ನಾನು ಅವರಿಗೆ ಸ್ವಾಸ್ತ್ಯವಾಗಿ ಕೊಡುವ ದೇಶದಲ್ಲಿ ಅವರು ಮಾಡತಕ್ಕಂಥ ಎಲ್ಲಾ ಆಜ್ಞೆ ನಿಯಮ ನ್ಯಾಯ ಗಳನ್ನು ನಿನಗೆ ಹೇಳುವೆನು ಅಂದನು.
ಧರ್ಮೋಪದೇಶಕಾಂಡ 5 : 32 (KNV)
ಹೀಗಿರುವದರಿಂದ ನಿಮ್ಮ ದೇವರಾದ ಕರ್ತನು ನಿಮಗೆ ಆಜ್ಞಾಪಿಸಿದಂತೆ ಕೈಕೊಂಡು ನಡೆಯಬೇಕು; ಎಡಕ್ಕಾದರೂ ಬಲಕ್ಕಾದರೂ ತಿರುಗಬೇಡಿರಿ.ನೀವು ಬದುಕುವ ಹಾಗೆಯೂ ನಿಮಗೆ ಒಳ್ಳೆಯದಾಗುವ ಹಾಗೆಯೂ ನೀವು ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ನಿಮ್ಮ ದಿವಸಗಳು ಬಹಳವಾಗುವ ಹಾಗೆಯೂ ನಿಮ್ಮ ದೇವರಾದ ಕರ್ತನು ನಿಮಗೆ ಆಜ್ಞಾಪಿಸಿದ ಮಾರ್ಗ ಗಳಲ್ಲಿ ನಡಕೊಳ್ಳಬೇಕು.
ಧರ್ಮೋಪದೇಶಕಾಂಡ 5 : 33 (KNV)
ನೀವು ಬದುಕುವ ಹಾಗೆಯೂ ನಿಮಗೆ ಒಳ್ಳೆಯದಾಗುವ ಹಾಗೆಯೂ ನೀವು ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ನಿಮ್ಮ ದಿವಸಗಳು ಬಹಳವಾಗುವ ಹಾಗೆಯೂ ನಿಮ್ಮ ದೇವರಾದ ಕರ್ತನು ನಿಮಗೆ ಆಜ್ಞಾಪಿಸಿದ ಮಾರ್ಗ ಗಳಲ್ಲಿ ನಡಕೊಳ್ಳಬೇಕು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33

BG:

Opacity:

Color:


Size:


Font: