ಧರ್ಮೋಪದೇಶಕಾಂಡ 23 : 1 (KNV)
ಬೀಜದಲ್ಲಿ ಗಾಯವುಳ್ಳವನೂ ರಹಸ್ಯಾಂಗ ಕೊಯ್ಯಲ್ಪಟ್ಟವನೂ ಕರ್ತನ ಸಭೆಗೆ ಸೇರ ಬಾರದು.
ಧರ್ಮೋಪದೇಶಕಾಂಡ 23 : 2 (KNV)
ಜಾರಳ ಮಗನು ಕರ್ತನ ಸಭೆಗೆ ಸೇರ ಬಾರದು; ಅವನ ಹತ್ತನೇ ತಲಾಂತರದವರೆಗೂ ಕರ್ತನ ಸಭೆಗೆ ಸೇರಬಾರದು.
ಧರ್ಮೋಪದೇಶಕಾಂಡ 23 : 3 (KNV)
ಅಮ್ಮೋನ್ಯನು ಇಲ್ಲವೆ ಮೋವಾಬ್ಯನು ಕರ್ತನ ಸಭೆಗೆ ಸೇರಬಾರದು. ಹತ್ತನೇ ತಲಾಂತರವಾದರೂ ಅವರು ಎಂದಿಗೂ ಕರ್ತನ ಸಭೆಯಲ್ಲಿ ಸೇರಬಾರದು.
ಧರ್ಮೋಪದೇಶಕಾಂಡ 23 : 4 (KNV)
ನೀವು ಐಗುಪ್ತವನ್ನು ಬಿಟ್ಟು ಬರುವಾಗ ಅವರು ನಿಮಗೆ ರೊಟ್ಟಿಯನ್ನೂ ನೀರನ್ನೂ ಕೊಡುವದಕ್ಕೆ ಎದು ರಾಗಿ ಬರಲಿಲ್ಲ; ನಿಮ್ಮನ್ನು ಶಪಿಸುವದಕ್ಕೆ ಮೆಸೊಪೊ ತಾಮ್ಯದಲ್ಲಿರುವ ಪೆತೋರಿನಿಂದ ಬೆಯೋರನ ಮಗ ನಾದ ಬಿಳಾಮನನ್ನು ಕೂಲಿ ಕೊಟ್ಟು ನಿಮಗೆ ವಿರೋಧ ವಾಗಿ ತರಿಸಿದರು.
ಧರ್ಮೋಪದೇಶಕಾಂಡ 23 : 5 (KNV)
ಆದರೆ ನಿನ್ನ ದೇವರಾದ ಕರ್ತನು ಬಿಳಾಮನನ್ನು ಕೇಳಲೊಲ್ಲದೆ ಇದ್ದನು; ನಿನ್ನ ದೇವರಾದ ಕರ್ತನು ಆ ಶಾಪವನ್ನು ನಿನಗೆ ಆಶೀರ್ವಾದಕ್ಕೆ ತಿರುಗಿ ಸಿದನು; ಯಾಕಂದರೆ ನಿನ್ನ ದೇವರಾದ ಕರ್ತನು ನಿನ್ನನ್ನು ಪ್ರೀತಿಮಾಡಿದನು.
ಧರ್ಮೋಪದೇಶಕಾಂಡ 23 : 6 (KNV)
ನೀನು ಇರುವ ವರೆಗೆ ಎಂದಿಗೂ ಅವರ ಸಮಾಧಾನವನ್ನೂ ಅವರ ಮೇಲನ್ನೂ ಹುಡುಕ ಬಾರದು.
ಧರ್ಮೋಪದೇಶಕಾಂಡ 23 : 7 (KNV)
ಎದೋಮ್ಯನನ್ನು ಅಸಹ್ಯಿಸಬೇಡ; ಅವನು ನಿನ್ನ ಸಹೋದರನು; ಐಗುಪ್ತ್ಯನನ್ನು ಅಸಹ್ಯಿಸಬೇಡ; ಅವನ ದೇಶದಲ್ಲಿ ನೀನು ಪರವಾಸಿಯಾಗಿದ್ದಿ.
ಧರ್ಮೋಪದೇಶಕಾಂಡ 23 : 8 (KNV)
ಅವರಿಗೆ ಹುಟ್ಟುವ ಮಕ್ಕಳು ಮೂರನೇ ತಲಾಂತರದಲ್ಲಿ ಕರ್ತನ ಸಭೆಯಲ್ಲಿ ಸೇರಬಹುದು.
ಧರ್ಮೋಪದೇಶಕಾಂಡ 23 : 9 (KNV)
ನೀನು ನಿನ್ನ ಶತ್ರುಗಳಿಗೆ ವಿರೋಧವಾಗಿ ಸೈನ್ಯ ದೊಡನೆ ಹೊರಟರೆ ದುಷ್ಟ ಕಾರ್ಯಗಳಿಗೆಲ್ಲಾ ದೂರ ವಾಗಿರುವಂತೆ ನಿನ್ನನ್ನು ಕಾಪಾಡಿಕೋ.
ಧರ್ಮೋಪದೇಶಕಾಂಡ 23 : 10 (KNV)
ರಾತ್ರಿಯಲ್ಲಿ ಸಂಭವಿಸಿದ ಕಾರ್ಯದ ದೆಸೆಯಿಂದ ಶುದ್ಧವಲ್ಲದ ಮನುಷ್ಯನು ನಿಮ್ಮಲ್ಲಿದ್ದರೆ ಅವನು ಪಾಳೆಯದ ಹೊರಗೆ ಹೋಗಬೇಕು; ಪಾಳೆಯದ ಒಳಗೆ ಬರಬಾರದು.
ಧರ್ಮೋಪದೇಶಕಾಂಡ 23 : 11 (KNV)
ಸಂಜೆ ಆಗುತ್ತಿರುವಾಗ ಅವನು ನೀರಿನಲ್ಲಿ ತೊಳ ಕೊಳ್ಳಲಿ; ಸೂರ್ಯನು ಮುಣುಗಿದಾಗ ಪಾಳೆಯದ ಒಳಗೆ ತಿರಿಗಿ ಬರಲಿ.
ಧರ್ಮೋಪದೇಶಕಾಂಡ 23 : 12 (KNV)
ಇದಲ್ಲದೆ ನೀನು ಹೊರಗಡೆ ಹೋಗುವದಕ್ಕೆ ನಿನಗೆ ಪಾಳೆಯದ ಹೊರಗೆ ಸ್ಥಳವಿರಬೇಕು.
ಧರ್ಮೋಪದೇಶಕಾಂಡ 23 : 13 (KNV)
ನಿನ್ನ ಆಯುಧದೊಂದಿಗೆ ಮೊಳೆ ಇರಬೇಕು; ನೀನು ಹೊರಗೆ ಕೂತುಕೊಂಡಾಗ ಅದರಿಂದ ಅಗಿದು ನಿನ್ನಿಂದ ಹೊರಡು ವದನ್ನು ಮುಚ್ಚಬೇಕು.
ಧರ್ಮೋಪದೇಶಕಾಂಡ 23 : 14 (KNV)
ನಿನ್ನ ದೇವರಾದ ಕರ್ತನು ನಿನ್ನನ್ನು ರಕ್ಷಿಸುವದಕ್ಕೂ ನಿನ್ನ ಶತ್ರುಗಳನ್ನು ನಿನ್ನ ಮುಂದೆ ಒಪ್ಪಿಸಿಬಿಡುವದಕ್ಕೂ ಪಾಳೆಯದ ಮಧ್ಯದಲ್ಲಿ ಸಂಚಾರ ಮಾಡುತ್ತಾನೆ. ಆತನು ನಿನ್ನಲ್ಲಿ ಅಶುದ್ಧವಾದ ಕಾರ್ಯ ವನ್ನು ನೋಡಿ ನಿನ್ನನ್ನು ಬಿಟ್ಟು ತಿರುಗದ ಹಾಗೆ ನಿನ್ನ ಪಾಳೆಯವು ಪರಿಶುದ್ಧವಾಗಿರಬೇಕು.
ಧರ್ಮೋಪದೇಶಕಾಂಡ 23 : 15 (KNV)
ತನ್ನ ಯಜಮಾನನನ್ನು ಬಿಟ್ಟು ನಿನ್ನ ಬಳಿಗೆ ತಪ್ಪಿಸಿ ಕೊಂಡು ಬಂದ ದಾಸನನ್ನು ತನ್ನ ಯಜಮಾನನಿಗೆ ಒಪ್ಪಿಸಬಾರದು.
ಧರ್ಮೋಪದೇಶಕಾಂಡ 23 : 16 (KNV)
ಅವನು ನಿನ್ನ ಸಂಗಡ ನಿನ್ನ ಮಧ್ಯ ದಲ್ಲಿ ಅವನು ಆದುಕೊಂಡಲ್ಲಿ ನಿನ್ನ ಬಾಗಲುಗಳ ಒಂದರಲ್ಲಿ ಅವನಿಗೆ ಒಳ್ಳೇದೆಂದು ತೋಚಿದಲ್ಲಿ ವಾಸ ವಾಗಿರಬೇಕು; ಅವನನ್ನು ಉಪದ್ರಪಡಿಸಬಾರದು.
ಧರ್ಮೋಪದೇಶಕಾಂಡ 23 : 17 (KNV)
ಇಸ್ರಾಯೇಲಿನ ಕುಮಾರ್ತೆಯರಲ್ಲಿ ಸೂಳೆ ಇರ ಬಾರದು; ಇಸ್ರಾಯೇಲಿನ ಕುಮಾರರಲ್ಲಿ ಪುರುಷ ಸಂಗದವನು ಇರಬಾರದು.
ಧರ್ಮೋಪದೇಶಕಾಂಡ 23 : 18 (KNV)
ಸೂಳೆಯ ಕೂಲಿಯನ್ನು ಇಲ್ಲವೆ ನಾಯಿಯ ಕ್ರಯವನ್ನು ಯಾವದೊಂದು ಪ್ರಮಾಣವಾಗಿ ನಿನ್ನ ದೇವರಾದ ಕರ್ತನ ಮನೆಗೆ ತರಬಾರದು. ಅವೆರಡು ನಿನ್ನ ದೇವರಾದ ಕರ್ತನಿಗೆ ಅಸಹ್ಯ.
ಧರ್ಮೋಪದೇಶಕಾಂಡ 23 : 19 (KNV)
ನಿನ್ನ ಸಹೋದರನಿಗೆ ಹಣವನ್ನಾಗಲಿ, ಊಟವ ನ್ನಾಗಲಿ, ಬಡ್ಡಿಗೆ ಕೊಡುವ ಯಾವದನ್ನಾಗಲಿ ಬಡ್ಡಿಗೆ ಕೊಡಬಾರದು.
ಧರ್ಮೋಪದೇಶಕಾಂಡ 23 : 20 (KNV)
ಪರನಿಗೆ ಬಡ್ಡಿಗೋಸ್ಕರ ಕೊಡ ಬಹುದು; ಆದರೆ ನಿನ್ನ ಸಹೋದರನಿಗೆ ನೀನು ಸ್ವಾಧೀನ ಮಾಡಿಕೊಳ್ಳಲು ಹೋಗುವ ದೇಶದಲ್ಲಿ ನಿನ್ನ ದೇವರಾದ ಕರ್ತನು ನಿನ್ನನ್ನು ನಿನ್ನ ಎಲ್ಲಾ ಕೈ ಕೆಲಸದಲ್ಲಿ ಆಶೀರ್ವ ದಿಸುವ ಹಾಗೆ ಬಡ್ಡಿಗೆ ಕೊಡಬಾರದು.
ಧರ್ಮೋಪದೇಶಕಾಂಡ 23 : 21 (KNV)
ನೀನು ನಿನ್ನ ದೇವರಾದ ಕರ್ತನಿಗೆ ಪ್ರಮಾಣ ಮಾಡಿದ ಮೇಲೆ ಅದನ್ನು ಸಲ್ಲಿಸುವದಕ್ಕೆ ತಡಮಾಡ ಬೇಡ; ನಿನ್ನ ದೇವರಾದ ಕರ್ತನು ಅದನ್ನು ನಿಶ್ಚಯ ವಾಗಿಯೂ ನಿನ್ನ ಬಳಿಯಲ್ಲಿ ವಿಚಾರಿಸುವನು; ಅದು ನಿನ್ನಲ್ಲಿ ಪಾಪವಾಗಿರುವದು.
ಧರ್ಮೋಪದೇಶಕಾಂಡ 23 : 22 (KNV)
ಆದರೆ ನೀನು ಪ್ರಮಾಣ ಮಾಡಿರದಿದ್ದರೆ ನಿನ್ನ ಮೇಲೆ ಪಾಪವಿರು ವದಿಲ್ಲ.
ಧರ್ಮೋಪದೇಶಕಾಂಡ 23 : 23 (KNV)
ನಿನ್ನ ತುಟಿಗಳಿಂದ ಹೊರಟದ್ದನ್ನು ಕಾಪಾಡಿ ನೀನು ಉಚಿತವಾಗಿ ನಿನ್ನ ದೇವರಾದ ಕರ್ತನಿಗೆ ಪ್ರಮಾಣಮಾಡಿದಂತೆ ನಿನ್ನ ಬಾಯಿಂದ ಪ್ರಮಾಣ ಮಾಡಬೇಕು.
ಧರ್ಮೋಪದೇಶಕಾಂಡ 23 : 24 (KNV)
ನಿನ್ನ ನೆರೆಯವನ ದ್ರಾಕ್ಷೇತೋಟಕ್ಕೆ ಬಂದರೆ ನಿನಗೆ ಮನಸ್ಸು ಬಂದ ಹಾಗೆ ತೃಪ್ತಿಯಾಗುವ ವರೆಗೆ ಹಣ್ಣುಗಳನ್ನು ತಿನ್ನಬಹುದು;
ಧರ್ಮೋಪದೇಶಕಾಂಡ 23 : 25 (KNV)
ಆದರೆ ನಿನ್ನ ಚೀಲದಲ್ಲಿ ಹಾಕಬಾರದು. ನಿನ್ನ ನೆರೆಯವನ ಪೈರಿಗೆ ಬಂದರೆಕೈಯಿಂದ ತೆನೆಗಳನ್ನು ಕೀಳಬಹುದು. ಆದರೆ ನಿನ್ನ ನೆರೆಯವನ ಪೈರಿನಲ್ಲಿ ಕುಡುಗೋಲಾಡಿಸಬೇಡ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25

BG:

Opacity:

Color:


Size:


Font: