ಧರ್ಮೋಪದೇಶಕಾಂಡ 18 : 1 (KNV)
ಯಾಜಕರಾದ ಲೇವಿಯರಿಗೂ ಆ ಎಲ್ಲಾ ಲೇವಿಯ ಗೋತ್ರಕ್ಕೂ ಇಸ್ರಾಯೇಲಿನ ಸಂಗಡ ಪಾಲೂ ಸ್ವಾಸ್ತ್ಯವೂ ಇರಬಾರದು; ಅವರು ಕರ್ತನ ಬೆಂಕಿಯಿಂದ ಮಾಡಿದ ಬಲಿಗಳನ್ನೂ ಆತನ ಸ್ವಾಸ್ತ್ಯವನ್ನೂ ತಿನ್ನಬೇಕು.
ಧರ್ಮೋಪದೇಶಕಾಂಡ 18 : 2 (KNV)
ಆದದರಿಂದ ಅವರಿಗೆ ಅವರ ಸಹೋದರರ ಮಧ್ಯದಲ್ಲಿ ಸ್ವಾಸ್ತ್ಯವಿರಬಾರದು; ಕರ್ತನು ಅವರಿಗೆ ಹೇಳಿದ ಹಾಗೆ ಆತನೇ ಅವರ ಸ್ವಾಸ್ತ್ಯವಾಗಿದ್ದಾನೆ.
ಧರ್ಮೋಪದೇಶಕಾಂಡ 18 : 3 (KNV)
ಎತ್ತಾಗಲಿ ಕುರಿಯಾಗಲಿ ಒಂದು ಬಲಿಯನ್ನು ಅರ್ಪಿಸುವವರ ಕಡೆಯಿಂದಲೂ ಜನರ ಕಡೆಯಿಂದ ಲೂ ಯಾಜಕರಿಗೆ ಬರತಕ್ಕದ್ದು ಇದೇ: ಮುಂದೊಡೆ ಯನ್ನೂ ಎರಡು ದವಡೆಗಳನ್ನೂ ಕೋಷ್ಟವನ್ನೂ ಯಾಜ ಕನಿಗೆ ಕೊಡಬೇಕು.
ಧರ್ಮೋಪದೇಶಕಾಂಡ 18 : 4 (KNV)
ನಿನ್ನ ಧಾನ್ಯ ದ್ರಾಕ್ಷಾರಸ ಎಣ್ಣೆ ಗಳ ಪ್ರಥಮ ಫಲವನ್ನೂ ನಿನ್ನ ಕುರಿಗಳ ಉಣ್ಣೆ ಯಲ್ಲಿ ಪ್ರಥಮವಾದದ್ದನ್ನೂ ಅವನಿಗೆ ಕೊಡಬೇಕು.
ಧರ್ಮೋಪದೇಶಕಾಂಡ 18 : 5 (KNV)
ಅವನೂ ಅವನ ಕುಮಾರರೂ ನಿತ್ಯವಾಗಿ ಕರ್ತನ ಹೆಸರಿನಲ್ಲಿ ಸೇವಿಸುತ್ತಾ ನಿಂತಿರುವ ಹಾಗೆ ಅವನನ್ನು ನಿನ್ನ ದೇವರಾದ ಕರ್ತನು ನಿನ್ನ ಎಲ್ಲಾ ಗೋತ್ರಗಳೊ ಳಗಿಂದ ಆದುಕೊಂಡಿದ್ದಾನೆ.
ಧರ್ಮೋಪದೇಶಕಾಂಡ 18 : 6 (KNV)
ಇದಲ್ಲದೆ ಲೇವಿಯು ಸಮಸ್ತ ಇಸ್ರಾಯೇಲಿನ ಲ್ಲಿರುವ ನಿನ್ನ ಯಾವ ಬಾಗಲುಗಳಿಂದ ಅವನು ಪ್ರವಾಸವಾಗಿರುವ ಸ್ಥಳದಿಂದ ಬಂದು ತನ್ನ ಮನಸ್ಸಿನ ಪೂರ್ಣಾಪೇಕ್ಷೆಯೊಂದಿಗೆ ಕರ್ತನು ಆದುಕೊಳ್ಳುವ ಸ್ಥಳಕ್ಕೆ ಬಂದರೆ
ಧರ್ಮೋಪದೇಶಕಾಂಡ 18 : 7 (KNV)
ಅಲ್ಲಿ ಕರ್ತನ ಮುಂದೆ ನಿಂತು ಕೊಳ್ಳುವ ಅವನ ಸಹೋದರರಾದ ಲೇವಿಯರ ಹಾಗೆ ಅವನು ತನ್ನ ದೇವರಾದ ಕರ್ತನ ಹೆಸರಿ ನಲ್ಲಿ ಸೇವೆಮಾಡಬಹುದು.
ಧರ್ಮೋಪದೇಶಕಾಂಡ 18 : 8 (KNV)
ಅವರು ಪಿತ್ರಾರ್ಜಿತ ಆಸ್ತಿಯನ್ನು ಮಾರಿದ್ದಲ್ಲದೆ ಸಮವಾದ ಭಾಗಗಳನ್ನು ತಿನ್ನಬೇಕು.
ಧರ್ಮೋಪದೇಶಕಾಂಡ 18 : 9 (KNV)
ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದೇಶಕ್ಕೆ ನೀನು ಬಂದಾಗ ಆ ಜನಾಂಗಗಳು ಮಾಡುವ ಅಸಹ್ಯಗಳ ಪ್ರಕಾರ ಮಾಡುವದಕ್ಕೆ ನೀನು ಕಲಿಯ ಬಾರದು.
ಧರ್ಮೋಪದೇಶಕಾಂಡ 18 : 10 (KNV)
ತನ್ನ ಮಗನನ್ನು ಇಲ್ಲವೆ ಮಗಳನ್ನು ಬೆಂಕಿದಾಟಿಸುವವನೂ ಕಣಿಹೇಳುವವನೂ ಮೇಘಮಂತ್ರದವನೂ ಸರ್ಪಮಂತ್ರದವನೂ ಮಾಟಗಾರನೂ
ಧರ್ಮೋಪದೇಶಕಾಂಡ 18 : 11 (KNV)
ಗಾರಡಿಗಾರನೂ ಯಕ್ಷಿಣಿಗಾರನೂ ಮಂತ್ರಜ್ಞನೂ ಸತ್ತವರ ಹತ್ತಿರ ವಿಚಾರಿಸುವವನೂ ನಿನ್ನಲ್ಲಿ ಸಿಕ್ಕಬಾರದು.
ಧರ್ಮೋಪದೇಶಕಾಂಡ 18 : 12 (KNV)
ಇಂಥವುಗಳನ್ನು ಮಾಡುವ ವರೆಲ್ಲಾ ಕರ್ತನಿಗೆ ಅಸಹ್ಯ; ಈ ಅಸಹ್ಯ ಕಾರ್ಯಗಳ ನಿಮಿತ್ತ ನಿನ್ನ ದೇವರಾದ ಕರ್ತನು ಅವರನ್ನು ನಿನ್ನ ಮುಂದೆ ಹೊರಡಿಸುತ್ತಾನೆ.
ಧರ್ಮೋಪದೇಶಕಾಂಡ 18 : 13 (KNV)
ನೀನು ನಿನ್ನ ದೇವರಾದ ಕರ್ತನೊಂದಿಗೆ ಸಂಪೂರ್ಣನಾಗಿರಬೇಕು.
ಧರ್ಮೋಪದೇಶಕಾಂಡ 18 : 14 (KNV)
ನೀನು ಸ್ವಾಧೀನಪಡಿಸಿಕೊಳ್ಳುವ ಆ ಜನಾಂಗಗಳು ಮೇಘ ಮಂತ್ರದವರ ಕಣಿಹೇಳುವವರ ಮಾತು ಕೇಳುತ್ತಿದ್ದರು; ನಿನ್ನನ್ನಾದರೋ ನಿನ್ನ ದೇವರಾದ ಕರ್ತನು ಹಾಗೆ ಮಾಡಗೊಡಿಸಲಿಲ್ಲ.
ಧರ್ಮೋಪದೇಶಕಾಂಡ 18 : 15 (KNV)
ನನ್ನ ಹಾಗಿರುವ ಪ್ರವಾದಿಯನ್ನು ನಿನ್ನ ದೇವ ರಾದ ಕರ್ತನು ನಿನಗೆ ನಿನ್ನ ಮಧ್ಯದಲ್ಲಿ ನಿನ್ನ ಸಹೋದರ ರಿಂದ ಎಬ್ಬಿಸುವನು; ಅವನ ಮಾತು ನೀವು ಕೇಳ ಬೇಕು.--
ಧರ್ಮೋಪದೇಶಕಾಂಡ 18 : 16 (KNV)
ನೀನು ಹೋರೇಬಿನಲ್ಲಿ ಸಭೆಯ ದಿವಸ ದಲ್ಲಿ ನಿನ್ನ ದೇವರಾದ ಕರ್ತನಿಂದ ಬೇಡಿಕೊಂಡ ಎಲ್ಲಾದರ ಪ್ರಕಾರ ಆಗುವದು; ನಾನು ಸಾಯದ ಹಾಗೆ ಇನ್ನು ಮೇಲೆ ನನ್ನ ದೇವರಾದ ಕರ್ತನ ಶಬ್ದವನ್ನು ನಾನು ಕೇಳುವದಿಲ್ಲ; ಈ ಘೋರವಾದ ಬೆಂಕಿಯನ್ನೂ ನೋಡುವದಿಲ್ಲವೆಂದು ಹೇಳಿದೆಯಲ್ಲಾ.
ಧರ್ಮೋಪದೇಶಕಾಂಡ 18 : 17 (KNV)
ಆಗ ಕರ್ತನು ನನಗೆ--ಅವರು ಹೇಳಿದ್ದನ್ನು ಚೆನ್ನಾಗಿ ಹೇಳಿ ದ್ದಾರೆ.
ಧರ್ಮೋಪದೇಶಕಾಂಡ 18 : 18 (KNV)
ನಿನ್ನ ಹಾಗಿರುವ ಪ್ರವಾದಿಯನ್ನು ಅವರ ಸಹೋದರರಲ್ಲಿಂದ ಅವರಿಗೆ ಎಬ್ಬಿಸುವೆನು; ನನ್ನ ವಾಕ್ಯಗಳನ್ನು ಅವನ ಬಾಯಲ್ಲಿ ಇಡುವೆನು; ನಾನು ಅವನಿಗೆ ಆಜ್ಞಾಪಿಸುವದನ್ನೆಲ್ಲಾ ಅವನು ಅವರಿಗೆ ಹೇಳುವನು.
ಧರ್ಮೋಪದೇಶಕಾಂಡ 18 : 19 (KNV)
ಅವನು ನನ್ನ ಹೆಸರಿನಿಂದ ಹೇಳುವ ನನ್ನ ವಾಕ್ಯಗಳನ್ನು ಕೇಳದ ಮನುಷ್ಯನು ಯಾವನೋ ಅವನನ್ನು ನಾನು ವಿಚಾರಿಸುವೆನು.
ಧರ್ಮೋಪದೇಶಕಾಂಡ 18 : 20 (KNV)
ಆದರೆ ನಾನು ಮಾತನಾಡಲು ಆಜ್ಞಾಪಿಸದೆ ಇರುವದನ್ನು ನನ್ನ ಹೆಸರಿನಿಂದ ಮಾತನಾಡುವದಕ್ಕೆ ಅಹಂಕಾರ ತೋರಿ ಸುವ ಪ್ರವಾದಿಯೂ ಬೇರೆ ದೇವರುಗಳ ಹೆಸರಿ ನಿಂದ ಮಾತನಾಡುವವನೂ ಆದ ಆ ಪ್ರವಾದಿಯೂ ಸಾಯಬೇಕು.
ಧರ್ಮೋಪದೇಶಕಾಂಡ 18 : 21 (KNV)
ಇದಲ್ಲದೆ ಕರ್ತನು ಹೇಳಿದ ವಾಕ್ಯವು ನಮಗೆ ಹೇಗೆ ತಿಳಿದೀತೆಂದು ನೀನು ನಿನ್ನ ಹೃದಯದಲ್ಲಿ ಅಂದುಕೊಂಡರೆ
ಧರ್ಮೋಪದೇಶಕಾಂಡ 18 : 22 (KNV)
ಪ್ರವಾದಿಯು ಕರ್ತನ ಹೆಸರಿನಲ್ಲಿ ಹೇಳಿದ ಮೇಲೆ ಆಗದೆ ಇಲ್ಲವೆ ಸಂಭವಿಸದೆ ಹೋದರೆ ಅದೇ ಕರ್ತನು ಹೇಳದಂಥ, ಮಾತನಾಡದಂಥ ಕಾರ್ಯವು; ಪ್ರವಾದಿಯು ಅಹಂಕಾರದಿಂದ ಅದನ್ನು ಮಾತನಾಡಿದ್ದರೆ ಅವನಿಗೆ ಭಯಪಡಬಾರದು.

1 2 3 4 5 6 7 8 9 10 11 12 13 14 15 16 17 18 19 20 21 22

BG:

Opacity:

Color:


Size:


Font: