ಧರ್ಮೋಪದೇಶಕಾಂಡ 12 : 1 (KNV)
ನೀನು ಸ್ವಾಧೀನಮಾಡಿಕೊಳ್ಳುವದಕ್ಕೆ ನಿನ್ನ ಪಿತೃಗಳ ದೇವರಾದ ಕರ್ತನು ಕೊಡುವ ದೇಶದಲ್ಲಿ ನೀವು ಭೂಮಿಯ ಮೇಲೆ ಬದುಕುವ ದಿವಸಗಳಲ್ಲೆಲ್ಲಾ ಲಕ್ಷಿಸಿ ಮಾಡತಕ್ಕ ನಿಯಮ ನ್ಯಾಯಗಳು ಇವೇ.
ಧರ್ಮೋಪದೇಶಕಾಂಡ 12 : 2 (KNV)
ನೀವು ಸ್ವಾಧೀನಮಾಡಿಕೊಳ್ಳುವ ಜನಾಂಗ ಗಳು ತಮ್ಮ ದೇವರುಗಳಿಗೆ ಎತ್ತರವಾದ ಬೆಟ್ಟಗಳ ಮೇಲೆಯೂ ಗುಡ್ಡಗಳ ಮೇಲೆಯೂ ಹಸುರಾದ ಎಲ್ಲಾ ಮರಗಳ ಕೆಳಗೂ ಸೇವೆಮಾಡಿದ ಸ್ಥಳಗಳನ್ನು, ನೀವು ಪೂರ್ಣವಾಗಿ ನಾಶಮಾಡಬೇಕು.
ಧರ್ಮೋಪದೇಶಕಾಂಡ 12 : 3 (KNV)
ನೀವು ಅವರ ಬಲಿಪೀಠಗಳನ್ನು ಕೆಡವಿಹಾಕಿ ಅವರ ಸ್ತಂಭಗಳನ್ನು ಒಡೆದು ಅವರ ತೋಪುಗಳನ್ನು ಬೆಂಕಿಯಿಂದ ಸುಟ್ಟು ಅವರ ದೇವರುಗಳ ವಿಗ್ರಹಗಳನ್ನು ಕಡಿದುಹಾಕಿ ಅವರ ಹೆಸರುಗಳನ್ನು ಆ ಸ್ಥಳಗಳೊಳಗಿಂದ ನಾಶಮಾಡಬೇಕು.
ಧರ್ಮೋಪದೇಶಕಾಂಡ 12 : 4 (KNV)
ನೀವು ನಿಮ್ಮ ಕರ್ತನಾದ ದೇವರಿಗೆ ಹಾಗೆ ಮಾಡ ಬೇಡಿರಿ.
ಧರ್ಮೋಪದೇಶಕಾಂಡ 12 : 5 (KNV)
ಆದರೆ ನಿಮ್ಮ ದೇವರಾದ ಕರ್ತನು ತನ್ನ ಹೆಸರನ್ನು ಇಡುವದಕ್ಕೆ ನಿಮ್ಮ ಎಲ್ಲಾ ಗೋತ್ರಗಳೊ ಳಗಿಂದ ಆದುಕೊಂಡ ಸ್ಥಳದಲ್ಲಿ ಆತನ ನಿವಾಸವನ್ನು ನೀವು ಹುಡುಕಿ ಅಲ್ಲಿಗೆ ಬರಬೇಕು.
ಧರ್ಮೋಪದೇಶಕಾಂಡ 12 : 6 (KNV)
ಅಲ್ಲಿಗೆ ನಿಮ್ಮ ದಹನಬಲಿಗಳನ್ನೂ ನಿಮ್ಮ ಬಲಿಗಳನ್ನೂ ನಿಮ್ಮ ಕೈಗಳು ಎತ್ತುವ ಅರ್ಪಣೆಗಳನ್ನೂ ನಿಮ್ಮ ದಶಮಾಂಶಗಳನ್ನೂ ನಿಮ್ಮ ಪ್ರಮಾಣಗಳನ್ನೂ ಉಚಿತವಾದ ಕಾಣಿಕೆಗಳನ್ನೂ ನಿಮ್ಮ ಪಶು ಕುರಿಗಳ ಚೊಚ್ಚಲಾದವುಗಳನ್ನೂ ತರಬೇಕು.
ಧರ್ಮೋಪದೇಶಕಾಂಡ 12 : 7 (KNV)
ಅಲ್ಲಿ ನೀವು ನಿಮ್ಮ ದೇವರಾದ ಕರ್ತನ ಮುಂದೆ ತಿಂದು ನಿಮ್ಮ ಕುಟುಂಬಗಳ ಸಂಗಡ ನೀವು ನಿಮ್ಮ ದೇವರಾದ ಕರ್ತನು ನಿಮ್ಮನ್ನು ಆಶೀರ್ವದಿಸಿದ ಎಲ್ಲಾ ಕೈಕೆಲಸದಲ್ಲಿ ಸಂತೋಷಪಡಬೇಕು.
ಧರ್ಮೋಪದೇಶಕಾಂಡ 12 : 8 (KNV)
ನಾವು ಈಗ ಇಲ್ಲಿ ಪ್ರತಿಯೊಬ್ಬನು ತನ್ನ ಸ್ವಂತ ದೃಷ್ಟಿಯಲ್ಲಿ ತೋರುವ ಪ್ರಕಾರ ಮಾಡುವಂತೆ ನೀವು ಮಾಡಬೇಡಿರಿ.
ಧರ್ಮೋಪದೇಶಕಾಂಡ 12 : 9 (KNV)
ನಿಮ್ಮ ದೇವರಾದ ಕರ್ತನು ನಿಮಗೆ ಕೊಡುವ ವಿಶ್ರಾಂತಿಗೂ ಸ್ವಾಸ್ತ್ಯಕ್ಕೂ ನೀವು ಇನ್ನೂ ಸೇರಲಿಲ್ಲ;
ಧರ್ಮೋಪದೇಶಕಾಂಡ 12 : 10 (KNV)
ಆದರೆ ನೀವು ಯೊರ್ದನನ್ನು ದಾಟಿದ ಮೇಲೆ ನಿಮ್ಮ ದೇವರಾದ ಕರ್ತನು ನಿಮಗೆ ಸ್ವಾಸ್ತ್ಯವಾಗಿ ಕೊಡುವ ದೇಶದಲ್ಲಿ ವಾಸಮಾಡುವಾಗ ಆತನು ಸುತ್ತಲಿ ರುವ ಎಲ್ಲಾ ಶತ್ರುಗಳಿಂದ ನಿಮ್ಮನ್ನು ತಪ್ಪಿಸಿ ನಿಮಗೆ ವಿಶ್ರಾಂತಿ ಕೊಟ್ಟ ಮೇಲೆ
ಧರ್ಮೋಪದೇಶಕಾಂಡ 12 : 11 (KNV)
ನೀವು ಸುರಕ್ಷಿತವಾಗಿ ವಾಸಿಸುವಾಗ ನಿಮ್ಮ ದೇವರಾದ ಕರ್ತನು ತನ್ನ ಹೆಸರಿನ ನಿವಾಸಕ್ಕೆ ಆದುಕೊಳ್ಳುವ ಸ್ಥಳವಿರುವದು; ಅಲ್ಲಿಗೆ ನಾನು ನಿಮಗೆ ಆಜ್ಞಾಪಿಸುವದನ್ನೆಲ್ಲಾ ಅಂದರೆ ನಿಮ್ಮ ದಹನ ಬಲಿಗಳನ್ನೂ ಬಲಿಗಳನ್ನೂ ನಿಮ್ಮ ದಶಮಾಂಶಗಳನ್ನೂ ನಿಮ್ಮ ಕೈ ಎತ್ತುವ ಅರ್ಪಣೆಗಳನ್ನೂ ನೀವು ಕರ್ತನಿಗೆ ಮಾಡುವ ಎಲ್ಲಾ ಶ್ರೇಷ್ಠ ಪ್ರಮಾಣಗಳನ್ನೂ ತರಬೇಕು.
ಧರ್ಮೋಪದೇಶಕಾಂಡ 12 : 12 (KNV)
ಅಲ್ಲಿ ನೀವು ನಿಮ್ಮ ದೇವರಾದ ಕರ್ತನ ಮುಂದೆ ಸಂತೋಷವಾಗಿರಬೇಕು; ನೀವೂ ನಿಮ್ಮ ಕುಮಾರ ಕುಮಾರ್ತೆಯರೂ ನಿಮ್ಮ ದಾಸದಾಸಿಯರೂ; ನಿಮ್ಮ ಬಾಗಲುಗಳಲ್ಲಿರುವ ಲೇವಿಯನು ಸಹ. ಅವನಿಗೆ ನಿಮ್ಮ ಸಂಗಡ ಪಾಲೂ ಸ್ವಾಸ್ತ್ಯವೂ ಇಲ್ಲ.
ಧರ್ಮೋಪದೇಶಕಾಂಡ 12 : 13 (KNV)
ನೀನು ಕಂಡ ಎಲ್ಲಾ ಸ್ಥಳಗಳಲ್ಲಿ ನಿನ್ನ ದಹನ ಬಲಿಗಳನ್ನು ಅರ್ಪಿಸದ ಹಾಗೆ ನೋಡಿಕೋ;
ಧರ್ಮೋಪದೇಶಕಾಂಡ 12 : 14 (KNV)
ಕರ್ತನು ನಿನ್ನ ಗೋತ್ರಗಳಲ್ಲಿ ಒಂದನ್ನು ಆದು ಕೊಳ್ಳುವ ಸ್ಥಳದಲ್ಲೇ ನಿನ್ನ ದಹನಬಲಿಗಳನ್ನು ಅರ್ಪಿಸಬೇಕು; ಅಲ್ಲೇ ನಾನು ನಿನಗೆ ಆಜ್ಞಾಪಿಸು ವದನ್ನೆಲ್ಲಾ ಮಾಡಬೇಕು.
ಧರ್ಮೋಪದೇಶಕಾಂಡ 12 : 15 (KNV)
ಆದರೂ ನಿನ್ನ ದೇವರಾದ ಕರ್ತನು ನಿನಗೆ ಕೊಟ್ಟ ಆಶೀರ್ವಾದದ ಪ್ರಕಾರ ನಿನಗೆ ಮನಸ್ಸಿದ್ದಷ್ಟು ಮಾಂಸವನ್ನು ನಿನ್ನ ಎಲ್ಲಾ ಬಾಗಲುಗಳಲ್ಲಿ ಕೊಯ್ದು ತಿನ್ನಬಹುದು; ಜಿಂಕೆ ಕಡವೆ ಗಳ ಹಾಗೆಯೇ ಶುದ್ಧನೂ ಅಶುದ್ಧನೂ ಅದನ್ನು ತಿನ್ನ ಬಹುದು.
ಧರ್ಮೋಪದೇಶಕಾಂಡ 12 : 16 (KNV)
ರಕ್ತವನ್ನು ಮಾತ್ರ ತಿನ್ನಬೇಡಿರಿ, ಅದನ್ನು ನೀರಿನಂತೆ ನೆಲಕ್ಕೆ ಚೆಲ್ಲಬೇಕು.
ಧರ್ಮೋಪದೇಶಕಾಂಡ 12 : 17 (KNV)
ನಿನ್ನ ಧಾನ್ಯ ದ್ರಾಕ್ಷಾರಸ ಎಣ್ಣೆಗಳ ದಶಮಾಂಶ ವನ್ನೂ ನಿನ್ನ ಪಶು ಕುರಿಗಳ ಚೊಚ್ಚಲಾದವುಗಳನ್ನೂ ನೀನು ಮಾಡುವ ಎಲ್ಲಾ ಪ್ರಮಾಣಗಳನ್ನೂ ಉಚಿತ ವಾದ ಕಾಣಿಕೆಗಳನ್ನೂ ಕೈ ಎತ್ತುವ ಅರ್ಪಣೆಯನ್ನೂ ನಿನ್ನ ಬಾಗಲುಗಳಲ್ಲಿ ತಿನ್ನಬೇಡ.
ಧರ್ಮೋಪದೇಶಕಾಂಡ 12 : 18 (KNV)
ಅವುಗಳನ್ನು ನಿನ್ನ ದೇವರಾದ ಕರ್ತನ ಮುಂದೆ ನಿನ್ನ ದೇವರಾದ ಕರ್ತನು ಆದುಕೊಳ್ಳುವ ಸ್ಥಳದಲ್ಲಿ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ನಿನ್ನ ಬಾಗಲುಗಳ ಲ್ಲಿರುವ ಲೇವಿಯನೂ ತಿನ್ನಬೇಕು; ಆಗ ನಿನ್ನ ಎಲ್ಲಾ ಕೈ ಕೆಲಸದಲ್ಲಿ ನಿನ್ನ ದೇವರಾದ ಕರ್ತನ ಮುಂದೆ ನೀನು ಸಂತೋಷಪಡಬೇಕು.
ಧರ್ಮೋಪದೇಶಕಾಂಡ 12 : 19 (KNV)
ನೀನು ಭೂಮಿಯ ಮೇಲೆ ಜೀವಿಸುವ ವರೆಗೆ ಲೇವಿಯನನ್ನು ಬಿಟ್ಟುಬಿಡದ ಹಾಗೆ ನೋಡಿಕೋ.
ಧರ್ಮೋಪದೇಶಕಾಂಡ 12 : 20 (KNV)
ನಿನ್ನ ದೇವರಾದ ಕರ್ತನು ನಿನಗೆ ವಾಗ್ದಾನ ಮಾಡಿದ ಹಾಗೆ ನಿನ್ನ ಮೇರೆಯನ್ನು ವಿಸ್ತಾರಮಾಡು ವಾಗ ನೀನು--ನನ್ನ ಪ್ರಾಣವು ಮಾಂಸವನ್ನು ತಿನ್ನ ಬೇಕೆಂದು ನಾನು ಆಶೆಪಡುವದರಿಂದ ನಾನು ಮಾಂಸ ವನ್ನು ತಿನ್ನುವೆನು ಎಂದು ಹೇಳಿ ನಿನಗೆ ಮನಸ್ಸಿದ್ದಷ್ಟು ಮಾಂಸವನ್ನು ತಿನ್ನಬಹುದು;
ಧರ್ಮೋಪದೇಶಕಾಂಡ 12 : 21 (KNV)
ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಇಡುವದಕ್ಕೆ ಆದುಕೊಂಡ ಸ್ಥಳವು ನಿನಗೆ ದೂರವಾದರೆ ಕರ್ತನು ನಿನಗೆ ಕೊಟ್ಟ ಪಶು ಕುರಿಗಳನ್ನು ನಾನು ನಿನಗೆ ಆಜ್ಞಾಪಿಸಿದಂತೆ ಕೊಯ್ದು ನಿನ್ನ ಬಾಗಲುಗಳಲ್ಲಿ ನಿನಗೆ ಮನಸ್ಸಿದ್ದಷ್ಟು ಉಣ್ಣಬಹುದು.
ಧರ್ಮೋಪದೇಶಕಾಂಡ 12 : 22 (KNV)
ಆದರೆ ಜಿಂಕೆ ಕಡವೆಗಳನ್ನು ಉಣ್ಣುವ ಹಾಗೆ ಅದನ್ನು ಉಣ್ಣಬೇಕು. ಶುದ್ಧನೂ ಅಶುದ್ಧನೂ ಕೂಡ ಅದೇ ರೀತಿಯಲ್ಲಿ ಅದನ್ನು ತಿನ್ನಲಿ.
ಧರ್ಮೋಪದೇಶಕಾಂಡ 12 : 23 (KNV)
ರಕ್ತವನ್ನು ಮಾತ್ರ ತಿನ್ನದ ಹಾಗೆ ಜಾಗ್ರತೆ ಯಾಗಿರು; ಯಾಕಂದರೆ ರಕ್ತವು ಪ್ರಾಣವೇ, ಮತ್ತು ಪ್ರಾಣವನ್ನು ಮಾಂಸದ ಸಂಗಡ ತಿನ್ನಬೇಡ.
ಧರ್ಮೋಪದೇಶಕಾಂಡ 12 : 24 (KNV)
ಅದನ್ನು ತಿನ್ನದೆ ನೀರಿನಂತೆ ಭೂಮಿಯ ಮೇಲೆ ಹೊಯ್ಯಬೇಕು.
ಧರ್ಮೋಪದೇಶಕಾಂಡ 12 : 25 (KNV)
ನೀನು ಕರ್ತನ ಮುಂದೆ ಸರಿಯಾದದ್ದನ್ನು ಮಾಡುವದರಿಂದ ನಿನಗೂ ನಿನ್ನ ಮುಂದಿರುವ ಮಕ್ಕಳಿಗೂ ಒಳ್ಳೇದಾಗುವ ಹಾಗೆ ಅದನ್ನು ತಿನ್ನಬೇಡ.
ಧರ್ಮೋಪದೇಶಕಾಂಡ 12 : 26 (KNV)
ನಿನಗಿರುವ ಪರಿಶುದ್ಧವಾದವುಗಳನ್ನೂ ನಿನ್ನ ಪ್ರಮಾಣಗಳನ್ನೂ ಮಾತ್ರ ಕರ್ತನು ಆದುಕೊಳ್ಳುವ ಸ್ಥಳಕ್ಕೆ ತೆಗೆದುಕೊಂಡು ಬರಬೇಕು.
ಧರ್ಮೋಪದೇಶಕಾಂಡ 12 : 27 (KNV)
ಆಗ ನಿನ್ನ ದಹನ ಬಲಿಗಳನ್ನೂ ಮಾಂಸವನ್ನೂ ರಕ್ತವನ್ನೂ ನಿನ್ನ ದೇವ ರಾದ ಕರ್ತನ ಬಲಿಪೀಠದ ಮೇಲೆ ಅರ್ಪಿಸಬೇಕು; ಆದರೆ ನಿನ್ನ ಬಲಿಗಳ ರಕ್ತವನ್ನು ನಿನ್ನ ದೇವರಾದ ಕರ್ತನ ಬಲಿಪೀಠದ ಮೇಲೆ ಹೊಯ್ಯಬೇಕು; ಅವುಗಳ ಮಾಂಸವನ್ನು ತಿನ್ನಬೇಕು.
ಧರ್ಮೋಪದೇಶಕಾಂಡ 12 : 28 (KNV)
ನೀನು ನಿನ್ನ ದೇವರಾದ ಕರ್ತನ ಮುಂದೆ ಒಳ್ಳೇದನ್ನೂ ಸರಿಯಾದದ್ದನ್ನೂ ಮಾಡುವದರಿಂದ ನಿನಗೂ ನಿನ್ನ ಮುಂದೆ ಇರುವ ನಿನ್ನ ಮಕ್ಕಳಿಗೂ ಎಂದೆಂದಿಗೂ ಒಳ್ಳೇದಾಗುವ ಹಾಗೆ ನಾನು ನಿನಗೆ ಆಜ್ಞಾಪಿಸುವ ಈ ಮಾತುಗಳನ್ನೆಲ್ಲಾ ಕೇಳಿ ಕಾಪಾಡು.
ಧರ್ಮೋಪದೇಶಕಾಂಡ 12 : 29 (KNV)
ನೀನು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ಆ ಜನಾಂಗಗಳನ್ನು ನಿನ್ನ ದೇವರಾದ ಕರ್ತನು ನಿನ್ನ ಮುಂದೆ ಕಡಿದು ಬಿಡುವಾಗ, ನೀನು ಅವುಗಳನ್ನು ಜಯಿಸಿ ಅವುಗಳ ದೇಶದಲ್ಲಿ ವಾಸಮಾಡುವಾಗ
ಧರ್ಮೋಪದೇಶಕಾಂಡ 12 : 30 (KNV)
ಅವು ನಿನ್ನ ಮುಂದೆ ನಾಶವಾದ ಮೇಲೆ ನೀನು ಅವುಗಳನ್ನು ಅನುಸರಿಸಿ ಬಲೆಯಲ್ಲಿ ಸಿಕ್ಕಿಬೀಳದ ಹಾಗೆಯೂ--ಈ ಜನಾಂಗಗಳು ತಮ್ಮ ದೇವರುಗಳನ್ನು ಹೇಗೆ ಸೇವಿಸಿದವೋ ನಾನೂ ಹಾಗೆ ಮಾಡುತ್ತೇನೆಂದು ಹೇಳಿ ಅವರ ದೇವರುಗಳನ್ನು ಕುರಿತು ವಿಚಾರಿಸದ ಹಾಗೆಯೂ ನೋಡಿಕೋ.
ಧರ್ಮೋಪದೇಶಕಾಂಡ 12 : 31 (KNV)
ನಿನ್ನ ದೇವರಾದ ಕರ್ತ ನಿಗೆ ಹಾಗೆ ಮಾಡಬೇಡ. ಯಾಕಂದರೆ ಕರ್ತನು ಅಸಹ್ಯಿಸಿ ಹಗೆಮಾಡುವದನ್ನೆಲ್ಲಾ ಅವರು ತಮ್ಮ ದೇವರುಗಳಿಗೆ ಮಾಡಿದ್ದಾರೆ; ತಮ್ಮ ಕುಮಾರ ಕುಮಾರ್ತೆ ಯರನ್ನು ಸಹ ತಮ್ಮ ದೇವರುಗಳಿಗೆ ಬೆಂಕಿಯಲ್ಲಿ ಸುಟ್ಟುಬಿಟ್ಟಿದ್ದಾರೆ.
ಧರ್ಮೋಪದೇಶಕಾಂಡ 12 : 32 (KNV)
ನಾನು ನಿನಗೆ ಆಜ್ಞಾಪಿಸುವ ಮಾತುಗಳನ್ನೆಲ್ಲಾ ಲಕ್ಷಿಸಿ ಕೈಕೊಳ್ಳಬೇಕು; ಅದಕ್ಕೆ ಕೂಡಿಸಬೇಡ; ಇಲ್ಲವೆ ಅದರಿಂದ ಕಡಿಮೆಮಾಡಬೇಡ.
❮
❯