ಧರ್ಮೋಪದೇಶಕಾಂಡ 1 : 1 (KNV)
ಮೋಶೆಯು ಎಲ್ಲಾ ಇಸ್ರಾಯೇಲ್ಯರಿಗೆ ಯೊರ್ದನಿನ ಈಚೆಯಲ್ಲಿರುವ ಅರಣ್ಯ ದಲ್ಲಿ, ಕೆಂಪು ಸಮುದ್ರಕ್ಕೆ ಎದುರಾಗಿರುವ ಬೈಲಿನಲ್ಲಿ, ಪಾರಾನ್‌, ತೋಫೆಲ್‌, ಲಾಬಾನ್‌, ಹಚೇರೋತ್‌, ದೀಜಾಹಾಬ್‌ ಎಂಬವುಗಳ ಮಧ್ಯದಲ್ಲಿ ಹೇಳಿದ ಮಾತುಗಳು ಇವೇ.
ಧರ್ಮೋಪದೇಶಕಾಂಡ 1 : 2 (KNV)
(ಹೋರೇಬಿನಿಂದ ಕಾದೇಶ್‌ ಬರ್ನೇಯಕ್ಕೆ ಸೇಯಾರ್‌ ಬೆಟ್ಟದ ಮಾರ್ಗವಾಗಿ ಹನ್ನೊಂದು ದಿವಸ ಪ್ರಯಾಣ).
ಧರ್ಮೋಪದೇಶಕಾಂಡ 1 : 3 (KNV)
ನಾಲ್ವತ್ತನೇ ವರುಷದಲ್ಲಿ ಹನ್ನೊಂದನೇ ತಿಂಗಳಿನ ಮೊದಲನೇ ದಿವಸದಲ್ಲಿ ಆದದ್ದೇನಂದರೆ, ಮೋಶೆಯು ಇಸ್ರಾಯೇಲ್‌ ಮಕ್ಕಳಿಗೆ, ಕರ್ತನು ಅವನಿಗೆ ಅವರ ವಿಷಯ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಮಾತನಾಡಿದನು.
ಧರ್ಮೋಪದೇಶಕಾಂಡ 1 : 4 (KNV)
ಅವನು ಹೆಷ್ಬೋನಿನಲ್ಲಿ ವಾಸಮಾಡಿದ ಅಮೋರಿ ಯರ ಅರಸನಾದ ಸೀಹೋನನನ್ನೂ ಎದ್ರೈಯಲ್ಲಿ ವಾಸಮಾಡಿದ ಬಾಷಾನಿನ ಅರಸನಾದ ಓಗನನ್ನೂ ಅಷ್ಟಾರೋತನಲ್ಲಿ ಕೊಂದನು.
ಧರ್ಮೋಪದೇಶಕಾಂಡ 1 : 5 (KNV)
ಮೋಶೆಯು ಯೊರ್ದ ನಿನ ಈಚೆಯಲ್ಲಿ ಮೋವಾಬಿನ ದೇಶದಲ್ಲಿ ಈ ನ್ಯಾಯ ಪ್ರಮಾಣವನ್ನು ವಿವರಿಸುವದಕ್ಕೆ ಆರಂಭ ಮಾಡಿ
ಧರ್ಮೋಪದೇಶಕಾಂಡ 1 : 6 (KNV)
ನಮ್ಮ ದೇವರಾದ ಕರ್ತನು ಹೋರೇಬಿನಲ್ಲಿ ನಮಗೆ--ನೀವು ಈ ಬೆಟ್ಟದಲ್ಲಿ ವಾಸಮಾಡಿದ್ದು ಸಾಕು;
ಧರ್ಮೋಪದೇಶಕಾಂಡ 1 : 7 (KNV)
ತಿರುಗಿಕೊಂಡು ಹೊರಟು ಅಮೋರಿಯರ ಬೆಟ್ಟಕ್ಕೂ ಅದರ ಸವಿಾಪದ ಬೈಲಿನಲ್ಲಿಯೂ ಗುಡ್ಡದಲ್ಲಿಯೂ ತಗ್ಗಿನಲ್ಲಿಯೂ ದಕ್ಷಿಣದಲ್ಲಿಯೂ ಸಮುದ್ರ ತೀರ ದಲ್ಲಿಯೂ ಇರುವ ಎಲ್ಲಾ ಸ್ಥಳಗಳಿಗೂ ಕಾನಾನ್ಯರ ದೇಶಕ್ಕೂ ಲೆಬನೋನಿಗೂ ಯೂಫ್ರೇಟೀಸ್‌ ಎಂಬ ಮಹಾನದಿಯ ಬಳಿಗೂ ಹೋಗಿರಿ.
ಧರ್ಮೋಪದೇಶಕಾಂಡ 1 : 8 (KNV)
ಇಗೋ, ಆ ದೇಶವನ್ನು ನಿಮ್ಮ ಮುಂದೆ ಇಟ್ಟಿದ್ದೇನೆ; ಹೋಗಿ ಕರ್ತನು ನಿಮ್ಮ ಪಿತೃಗಳಾದ ಅಬ್ರಹಾಮ ಇಸಾಕ ಯಾಕೋಬರಿಗೂ ಅವರ ತರುವಾಯ ಹುಟ್ಟುವ ಅವರ ಸಂತತಿಗೂ ಕೊಡುತ್ತೇನೆಂದು ಪ್ರಮಾಣಮಾಡಿದ ದೇಶವನ್ನು ಸ್ವತಂತ್ರಿಸಿಕೊಳ್ಳಿರಿ ಎಂದು ಹೇಳಿದನು.
ಧರ್ಮೋಪದೇಶಕಾಂಡ 1 : 9 (KNV)
ಆ ಕಾಲದಲ್ಲಿ ನಾನು ನಿಮ್ಮೊಂದಿಗೆ ಮಾತನಾಡಿ-- ನಾನೊಬ್ಬನೇ ನಿಮ್ಮನ್ನು ಹೊರಲಾರೆನಂದೆನು.
ಧರ್ಮೋಪದೇಶಕಾಂಡ 1 : 10 (KNV)
ನಿಮ್ಮ ದೇವರಾದ ಕರ್ತನು ನಿಮ್ಮನ್ನು ಹೆಚ್ಚಿಸಿದ್ದಾನೆ. ಇಗೋ, ನೀವು ಈ ಹೊತ್ತು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಾಗಿದ್ದೀರಿ.
ಧರ್ಮೋಪದೇಶಕಾಂಡ 1 : 11 (KNV)
ನೀವು ಈಗ ಇರುವದಕ್ಕಿಂತಲೂ ನಿಮ್ಮನ್ನು ಸಾವಿರದಷ್ಟು ಹೆಚ್ಚು ಮಾಡಿ ನಿಮಗೆ ಪ್ರಮಾಣ ಮಾಡಿದ ಹಾಗೆ ನಿಮ್ಮ ಪಿತೃಗಳ ದೇವರಾದ ಕರ್ತನು ಆಶೀರ್ವದಿಸಲಿ.
ಧರ್ಮೋಪದೇಶಕಾಂಡ 1 : 12 (KNV)
ನಿಮ್ಮ ಚಿಂತೆಯನ್ನೂ ಭಾರವನ್ನೂ ವ್ಯಾಜ್ಯವನ್ನೂ ನಾನೊಬ್ಬನೇ ಹೇಗೆ ಹೊರಲಿ?
ಧರ್ಮೋಪದೇಶಕಾಂಡ 1 : 13 (KNV)
ನಿಮ್ಮ ಗೋತ್ರಗಳಲ್ಲಿ ಪ್ರಸಿದ್ಧರಾಗಿದ್ದು ಜ್ಞಾನವೂ ಬುದ್ಧಿಯೂಳ್ಳ ಮನುಷ್ಯರನ್ನು ಆರಿಸಿಕೊಳ್ಳಿರಿ; ಆಗ ನಾನು ಅವರನ್ನು ನಿಮಗೆ ಮುಖ್ಯಸ್ಥರನ್ನಾಗಿ ಮಾಡುವೆನು ಅಂದನು.
ಧರ್ಮೋಪದೇಶಕಾಂಡ 1 : 14 (KNV)
ಅದಕ್ಕೆ ನೀವು ನನಗೆ ಉತ್ತರ ಕೊಟ್ಟು ಹೇಳಿದ್ದೇನಂದರೆ--ನಿನ್ನ ಆಲೋ ಚನೆಯಂತೆ ಮಾಡುವದು ನಮಗೆ ಒಳ್ಳೇದು ಅಂದಾಗ
ಧರ್ಮೋಪದೇಶಕಾಂಡ 1 : 15 (KNV)
ನಾನು ನಿಮ್ಮ ಕುಟುಂಬಗಳ ಮುಖ್ಯಸ್ಥರಾಗಿದ್ದ ಜ್ಞಾನಿಗಳಾದ ಪ್ರಸಿದ್ಧ ಮನುಷ್ಯರನ್ನು ತಕ್ಕೊಂಡು ನಿಮ್ಮ ಮೇಲೆ ಮುಖ್ಯಸ್ಥರಾಗಿರುವ ಹಾಗೆ ಸಹಸ್ರಾಧಿ ಪತಿಗಳಾಗಿಯೂ ಶತಾಧಿಪತಿಗಳಾಗಿಯೂ ಪಂಚಶ ತಾಧಿಪತಿಗಳಾಗಿಯೂ ದಶಾಧಿಪತಿಗಳಾಗಿಯೂ
ಧರ್ಮೋಪದೇಶಕಾಂಡ 1 : 16 (KNV)
ನಿಮ್ಮ ಗೋತ್ರಗಳಿಗೆ ಅಧಿಕಾರಿಗಳಾಗಿಯೂ ಮಾಡಿದೆನು. ಆ ಕಾಲದಲ್ಲಿ ನಿಮ್ಮ ನ್ಯಾಯಾಧಿಪತಿಗಳಿಗೆ ಕೊಟ್ಟ ಅಪ್ಪಣೆ ಏನಂದರೆ--ನಿಮ್ಮ ಸಹೋದರರು ತಮ್ಮಲ್ಲಿ ಮಾಡುವ ವ್ಯಾಜ್ಯಗಳನ್ನು ಕೇಳಿ ಒಬ್ಬೊಬ್ಬ ನಿಗೂ ಅವನ ಸಹೋದರನಿಗೂ ಅವನ ಪರವಾ ಸಿಗೂ ನೀತಿಯಾಗಿ ನ್ಯಾಯತೀರಿಸಿರಿ.
ಧರ್ಮೋಪದೇಶಕಾಂಡ 1 : 17 (KNV)
ನ್ಯಾಯದಲ್ಲಿ ನೀವು ಮುಖದಾಕ್ಷಿಣ್ಯ ನೋಡಬೇಡಿರಿ; ಹಿರಿಯನನ್ನು ಹೇಗೋ, ಹಾಗೆಯೇ ಕಿರಿಯನನ್ನು ಕೇಳಬೇಕು; ಮನುಷ್ಯನ ಮುಖವನ್ನು ನೋಡಿ ಹೆದರಬೇಡಿರಿ; ಯಾಕಂದರೆ ನ್ಯಾಯತೀರ್ಪು ದೇವರದೇ; ನಿಮಗೆ ಕಠಿಣವಾದ ವ್ಯಾಜ್ಯಗಳನ್ನು ನನ್ನ ಮುಂದೆ ತನ್ನಿರಿ; ಆಗ ನಾನು ಅದನ್ನು ತೀರಿಸುವೆನು.
ಧರ್ಮೋಪದೇಶಕಾಂಡ 1 : 18 (KNV)
ಆ ಸಮಯದಲ್ಲಿ ನೀವು ಮಾಡತಕ್ಕ ಕಾರ್ಯಗಳನ್ನೆಲ್ಲಾ ನಿಮಗೆ ಆಜ್ಞಾಪಿಸಿದೆನು.
ಧರ್ಮೋಪದೇಶಕಾಂಡ 1 : 19 (KNV)
ಆಗ ನೀವು ಹೋರೇಬಿನಿಂದ ಹೊರಟು ನಮ್ಮ ದೇವರಾದ ಕರ್ತನು ನಮಗೆ ಆಜ್ಞಾಪಿಸಿದ ಪ್ರಕಾರ ನೀವು ಅಮೋರಿಯರ ಬೆಟ್ಟದ ಮಾರ್ಗದಲ್ಲಿ ನೋಡಿದ ಆ ದೊಡ್ಡ ಭಯಂಕರವಾದ ಅರಣ್ಯವನ್ನೆಲ್ಲಾ ದಾಟಿ ಕಾದೇಶ್‌ಬರ್ನೇಯಕ್ಕೆ ಬಂದೆವು.
ಧರ್ಮೋಪದೇಶಕಾಂಡ 1 : 20 (KNV)
ಆಗ ನಾನು ನಿಮಗೆ--ನಮ್ಮ ದೇವರಾದ ಕರ್ತನು ನಮಗೆ ಕೊಡುವ ಅಮೋರಿಯರ ಬೆಟ್ಟಕ್ಕೆ ಬಂದಿರಿ;
ಧರ್ಮೋಪದೇಶಕಾಂಡ 1 : 21 (KNV)
ಇಗೋ, ನಿನ್ನ ದೇವರಾದ ಕರ್ತನು ದೇಶವನ್ನು ನಿನ್ನ ಮುಂದೆ ಇಟ್ಟಿದ್ದಾನೆ; ನಿನ್ನ ಪಿತೃಗಳ ದೇವರಾದ ಕರ್ತನು ನಿನಗೆ ಹೇಳಿದ ಪ್ರಕಾರ ಹೋಗಿ ಅದನ್ನು ಸ್ವಾಧೀನಪಡಿಸಿಕೋ; ಭಯಪಡಬೇಡ, ಧೈರ್ಯಗೆಡಬೇಡ ಅಂದೆನು.
ಧರ್ಮೋಪದೇಶಕಾಂಡ 1 : 22 (KNV)
ಆಗ ನೀವೆಲ್ಲರೂ ನನ್ನ ಬಳಿಗೆ ಬಂದು--ನಮ್ಮ ಮುಂದಾಗಿ ಮನುಷ್ಯರನ್ನು ಕಳುಹಿಸೋಣ, ಅವರು ನಮಗೆ ಆ ದೇಶವನ್ನು ಪರಿಶೀಲಿಸಿ ನೋಡಿ ನಾವು ಮೇಲೆ ಹೋಗತಕ್ಕ ಮಾರ್ಗದ ವಿಷಯದಲ್ಲಿಯೂ ನಾವು ಪ್ರವೇಶಿಸುವ ಪಟ್ಟಣಗಳ ವಿಷಯದಲ್ಲಿಯೂ ನಮಗೆ ಸಮಾಚಾರವನ್ನು ತಿಳಿಸಲಿ ಅಂದಿರಿ.
ಧರ್ಮೋಪದೇಶಕಾಂಡ 1 : 23 (KNV)
ಆ ಮಾತು ನನಗೆ ಒಳ್ಳೇದೆಂದು ತೋಚಿತು; ನಾನು ನಿಮ್ಮಲ್ಲಿ ಕುಲಕ್ಕೆ ಒಬ್ಬನ ಪ್ರಕಾರ ಹನ್ನೆರಡು ಮಂದಿ ಯನ್ನು ತಕ್ಕೊಂಡೆನು.
ಧರ್ಮೋಪದೇಶಕಾಂಡ 1 : 24 (KNV)
ಅವರು ಹೋಗಿ ಬೆಟ್ಟವನ್ನೇರಿ ಎಷ್ಕೋಲೆಂಬ ಹಳ್ಳದ ಬಳಿಗೆ ಬಂದು ಅದನ್ನು ಹೊಂಚಿ ನೋಡಿ
ಧರ್ಮೋಪದೇಶಕಾಂಡ 1 : 25 (KNV)
ದೇಶದ ಫಲದಲ್ಲಿ ಕೆಲವನ್ನು ಕೈಯಲ್ಲಿ ತಕ್ಕೊಂಡು ನಮ್ಮ ಬಳಿಗೆ ತಂದು ನಮಗೆ ಸಮಾಚಾರ ವನ್ನು ತಿಳಿಸಿ--ನಮ್ಮ ದೇವರಾದ ಕರ್ತನು ನಮಗೆ ಕೊಡುವ ದೇಶವು ಒಳ್ಳೇದು ಎಂದು ಹೇಳಿದಿರಿ.
ಧರ್ಮೋಪದೇಶಕಾಂಡ 1 : 26 (KNV)
ಆದರೆ ನೀವು ಮೇಲೆ ಹೋಗುವದಕ್ಕೆ ಮನಸ್ಸಿಲ್ಲದೆ ನಿಮ್ಮ ದೇವರಾದ ಕರ್ತನ ಅಪ್ಪಣೆಗೆ ತಿರುಗಿಬಿದ್ದು
ಧರ್ಮೋಪದೇಶಕಾಂಡ 1 : 27 (KNV)
ನಿಮ್ಮ ಗುಡಾರಗಳಲ್ಲಿ ಗುಣುಗುಟ್ಟಿ--ಕರ್ತನು ನಮ್ಮನ್ನು ಹಗೆಮಾಡಿದ್ದರಿಂದ ನಮ್ಮನ್ನು ಅಮೋರಿಯರ ಕೈಗೆ ಒಪ್ಪಿಸಿ ನಾಶಮಾಡುವದಕ್ಕೆ ಐಗುಪ್ತದೇಶದೊಳ ಗಿಂದ ಹೊರಗೆ ಬರಮಾಡಿದ್ದಾನೆ.
ಧರ್ಮೋಪದೇಶಕಾಂಡ 1 : 28 (KNV)
ನಾವು ಎಲ್ಲಿಗೆ ಹೋಗೋಣ? ನಮ್ಮ ಸಹೋದರರು--ಆ ಜನರು ನಮಗಿಂತ ದೊಡ್ಡವರೂ ಉದ್ದವಾದವರೂ; ಪಟ್ಟಣ ಗಳು ದೊಡ್ಡವುಗಳೂ ಆಕಾಶದ ಎತ್ತರಕ್ಕೂ ಗೋಡೆ ಯುಳ್ಳವುಗಳೂ; ಇದಲ್ಲದೆ ಅನಾಕ್ಯರ ಮಕ್ಕಳನ್ನು ಅಲ್ಲಿ ನೋಡಿದೆವು ಎಂದು ಹೇಳಿ ನಮ್ಮ ಹೃದಯಗಳನ್ನು ಅಧೈರ್ಯಪಡಿಸಿದ್ದಾರೆ ಎಂದು ಹೇಳಿದಿರಿ.
ಧರ್ಮೋಪದೇಶಕಾಂಡ 1 : 29 (KNV)
ಆಗ ನಾನು ನಿಮಗೆ--ಅಂಜಬೇಡಿರಿ; ಅವರಿಗೆ ಭಯಪಡಬೇಡಿರಿ.
ಧರ್ಮೋಪದೇಶಕಾಂಡ 1 : 30 (KNV)
ನಿಮ್ಮ ಮುಂದೆ ಹೋಗುವ ನಿಮ್ಮ ದೇವರಾದ ಕರ್ತನು, ಆತನೇ ಐಗುಪ್ತದಲ್ಲಿ ನಿಮ್ಮ ಕಣ್ಣುಗಳ ಮುಂದೆಯೂ ಅರಣ್ಯದಲ್ಲಿಯೂ ನಿಮಗೆ ಮಾಡಿದ ಎಲ್ಲಾದರ ಪ್ರಕಾರ ನಿಮಗೋಸ್ಕರ ಯುದ್ಧಮಾಡುವನು.
ಧರ್ಮೋಪದೇಶಕಾಂಡ 1 : 31 (KNV)
ಈ ಅರಣ್ಯದಲ್ಲಿ ನಿಮ್ಮ ದೇವ ರಾದ ಕರ್ತನು, ನಿಮ್ಮನ್ನು ತಂದೆ ಮಗನನ್ನು ಹೊತ್ತು ಕೊಳ್ಳುವ ಪ್ರಕಾರ ನೀವು ಹೋದ ಮಾರ್ಗದಲ್ಲೆಲ್ಲಾ ಈ ಸ್ಥಳಕ್ಕೆ ಬರುವ ಪರ್ಯಂತರ ಹೊತ್ತುಕೊಂಡನೆಂದು ನೋಡಿದ್ದೀರಲ್ಲಾ ಅಂದೆನು.
ಧರ್ಮೋಪದೇಶಕಾಂಡ 1 : 32 (KNV)
ಆದರೆ ಈ ಕಾರ್ಯದಲ್ಲಿ ನೀವು ನಿಮ್ಮ ದೇವರಾದ ಕರ್ತನನ್ನು ನಂಬಲಿಲ್ಲ.
ಧರ್ಮೋಪದೇಶಕಾಂಡ 1 : 33 (KNV)
ಇಳುಕೊಳ್ಳುವದಕ್ಕೆ ನಿಮಗೆ ಸ್ಥಳವನ್ನು ವಿಚಾರಿಸಲೂ ನೀವು ಹೋಗತಕ್ಕ ಮಾರ್ಗ ವನ್ನು ನಿಮಗೆ ತೋರಿಸಲೂ ರಾತ್ರಿಹೊತ್ತು ಬೆಂಕಿ ಯಲ್ಲಿಯೂ ಹಗಲುಹೊತ್ತು ಮೇಘದಲ್ಲಿಯೂ ಮಾರ್ಗದಲ್ಲಿ ಆತನೇ ನಿಮ್ಮ ಮುಂದೆ ಹೋದನು.
ಧರ್ಮೋಪದೇಶಕಾಂಡ 1 : 34 (KNV)
ಕರ್ತನು ನಿಮ್ಮ ಮಾತುಗಳ ಧ್ವನಿಯನ್ನು ಕೇಳಿ ಕೋಪಿಸಿಕೊಂಡು ಪ್ರಮಾಣಮಾಡಿ--
ಧರ್ಮೋಪದೇಶಕಾಂಡ 1 : 35 (KNV)
ನಿಶ್ಚಯವಾಗಿ ಕೆಟ್ಟಸಂತತಿಯಾದ ಈ ಮನುಷ್ಯರಲ್ಲಿ ಒಬ್ಬನಾದರೂ ನಾನು ನಿಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ಆ ಒಳ್ಳೇ ದೇಶವನ್ನು ನೋಡುವದಿಲ್ಲ.
ಧರ್ಮೋಪದೇಶಕಾಂಡ 1 : 36 (KNV)
ಯೆಫುನ್ನೆಯ ಮಗನಾದ ಕಾಲೇಬನು ಮಾತ್ರ ಅದನ್ನು ನೋಡುವನು. ಅವನು ಕರ್ತನನ್ನು ಪೂರ್ಣ ವಾಗಿ ಹಿಂಬಾಲಿಸಿದ್ದರಿಂದ ಅವನು ಸಂಚರಿಸಿದ ದೇಶ ವನ್ನು ಅವನಿಗೂ ಅವನ ಮಕ್ಕಳಿಗೂ ಕೊಡುವೆನು.
ಧರ್ಮೋಪದೇಶಕಾಂಡ 1 : 37 (KNV)
ನನ್ನ ಮೇಲೆಯೂ ಕರ್ತನು ನಿಮ್ಮ ದೆಸೆಯಿಂದ ಕೋಪಗೊಂಡು--ನೀನು ಸಹ ಅದರಲ್ಲಿ ಪ್ರವೇಶಿಸು ವದಿಲ್ಲ.
ಧರ್ಮೋಪದೇಶಕಾಂಡ 1 : 38 (KNV)
ಆದರೆ ನಿನ್ನ ಮುಂದೆ ನಿಂತಿರುವ ನೂನನ ಮಗನಾದ ಯೆಹೋಶುವನೇ ಅದರಲ್ಲಿ ಪ್ರವೇಶಿ ಸುವನು; ಅವನಿಗೆ ಧೈರ್ಯಕೊಡು; ಅವನೇ ಅದನ್ನು ಇಸ್ರಾಯೇಲಿಗೆ ಸ್ವಾಸ್ತ್ಯವಾಗಿ ಕೊಡುವನು.
ಧರ್ಮೋಪದೇಶಕಾಂಡ 1 : 39 (KNV)
ಇದಲ್ಲದೆ ಸುಲಿಗೆ ಆಗುವರೆಂದು ನೀವು ಹೇಳಿದ ನಿಮ್ಮ ಚಿಕ್ಕವರೂ ಈಹೊತ್ತು ಮೇಲು ಕೇಡು ಅರಿಯದ ನಿಮ್ಮ ಮಕ್ಕಳೂ ಅವರೇ ಅದರಲ್ಲಿ ಪ್ರವೇಶಿಸುವರು; ಅವರಿಗೆ ಅದನ್ನು ಕೊಡುವೆನು; ಅವರು ಅದನ್ನು ಸ್ವತಂತ್ರಿಸಿಕೊಳ್ಳುವರು.
ಧರ್ಮೋಪದೇಶಕಾಂಡ 1 : 40 (KNV)
ನೀವಾದರೋ ತಿರುಗಿಕೊಂಡು ಕೆಂಪು ಸಮುದ್ರದ ಮಾರ್ಗವಾಗಿ ಅರಣ್ಯಕ್ಕೆ ಹೊರಟುಹೋಗಿರಿ ಎಂದು ಹೇಳಿದನು.
ಧರ್ಮೋಪದೇಶಕಾಂಡ 1 : 41 (KNV)
ನೀವು ಉತ್ತರ ಕೊಟ್ಟು ನನಗೆ--ಕರ್ತನಿಗೆ ಪಾಪ ಮಾಡಿದ್ದೇವೆ; ನಮ್ಮ ದೇವರಾದ ಕರ್ತನು ನಮಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ನಾವು ಹೋಗಿ ಯುದ್ಧ ಮಾಡುತ್ತೇವೆ ಅಂದಿರಿ. ನೀವೆಲ್ಲರು ನಿಮ್ಮ ಯುದ್ಧದ ಆಯುಧಗಳನ್ನು ತೆಗೆದುಕೊಂಡ ಮೇಲೆ ಬೆಟ್ಟಕ್ಕೆ ಹೋಗುವದು ಸಣ್ಣಕೆಲಸವೆಂದು ನೆನಸಿದಿರಿ.
ಧರ್ಮೋಪದೇಶಕಾಂಡ 1 : 42 (KNV)
ಆದರೆ ಕರ್ತನು ನನಗೆ--ಹೋಗಬೇಡಿರಿ; ಯುದ್ಧಮಾಡ ಬೇಡಿರಿ; ಯಾಕಂದರೆ ನಾನು ನಿಮ್ಮ ಮಧ್ಯದಲ್ಲಿ ಇರುವದಿಲ್ಲ; ನೀವು ನಿಮ್ಮ ಶತ್ರುಗಳಿಂದ ಹೊಡೆಯ ಲ್ಪಡುವಿರಿ ಎಂದು ಅವರಿಗೆ ಹೇಳು ಅಂದನು.
ಧರ್ಮೋಪದೇಶಕಾಂಡ 1 : 43 (KNV)
ಇದನ್ನು ನಾನು ನಿಮಗೆ ಹೇಳಲಾಗಿ ನೀವು ಕೇಳದೆ ಕರ್ತನ ಅಪ್ಪಣೆಗೆ ತಿರುಗಿಬಿದ್ದು ವ್ಯರ್ಥ ಧೈರ್ಯಮಾಡಿ ಬೆಟ್ಟವನ್ನೇರಿದಿರಿ.
ಧರ್ಮೋಪದೇಶಕಾಂಡ 1 : 44 (KNV)
ಆಗ ಆ ಬೆಟ್ಟ ದಲ್ಲಿ ವಾಸಮಾಡುವ ಅಮೋರಿಯರು ನಿಮ್ಮೆದುರಿಗೆ ಹೊರಟು ಜೇನು ಹುಳಗಳು ಮುತ್ತಿಕೊಂಡಂತೆ ನಿಮ್ಮ ಬೆನ್ನುಹತ್ತಿ ಸೇಯಾರಿನಲ್ಲಿ ಹೊರ್ಮದ ಪರ್ಯಂತರ ನಿಮ್ಮನ್ನು ಸಂಹಾರಮಾಡಿದರು.
ಧರ್ಮೋಪದೇಶಕಾಂಡ 1 : 45 (KNV)
ಆಗ ನೀವು ತಿರುಗಿಕೊಂಡು ಕರ್ತನ ಮುಂದೆ ಗೋಳಾಡಿದಿರಿ; ಆದರೆ ಕರ್ತನು ನಿಮ್ಮ ಧ್ವನಿಯನ್ನು ಕೇಳಲಿಲ್ಲ, ನಿಮಗೆ ಕಿವಿಗೊಡಲಿಲ್ಲ.ಆ ಮೇಲೆ ನೀವು ಕಾದೇಶಿನಲ್ಲಿ ವಾಸವಾಗಿದ್ದ ಕಾಲದ ಪ್ರಕಾರ ಬಹಳ ದಿವಸ ವಾಸವಾಗಿದ್ದಿರಿ.
ಧರ್ಮೋಪದೇಶಕಾಂಡ 1 : 46 (KNV)
ಆ ಮೇಲೆ ನೀವು ಕಾದೇಶಿನಲ್ಲಿ ವಾಸವಾಗಿದ್ದ ಕಾಲದ ಪ್ರಕಾರ ಬಹಳ ದಿವಸ ವಾಸವಾಗಿದ್ದಿರಿ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46

BG:

Opacity:

Color:


Size:


Font: